Search
  • Follow NativePlanet
Share
» »ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಇಡ್ಲಿ ಅಂದ್ರೆ ಸಾಕು ಸೌತ್‌ ಇಂಡಿಯನ್ ಜನರಿಗೆ ಬಹಳ ಇಷ್ಟವಾದಂತಹ ಒಂದು ತಿಂಡಿಯಾಗಿದೆ. ಬೆಳಗ್ಗಿನ ಉಪಹಾರಕ್ಕೆ ಹೆಚ್ಚಿನವರು ಇಡ್ಲಿ ತಿನ್ನಲು ಬಯಸುತ್ತಾರೆ. ದಕ್ಷಿಣ ಭಾರತದಲ್ಲಿ ಯಾವುದೇ ಹೋಟೇಲ್‌ಗೆ ಹೋದರೂ ನೀವು ಇಡ್ಲಿಯನ್ನು ಕಾಣಬಹುದು. ಇಡ್ಲಿಯಲ್ಲೂ ತಟ್ಟೆ ಇಡ್ಲಿ ಎಂದರೆ ಬಹಳಷ್ಟು ಜನರ ಫೇವರೆಟ್‌ ಆಗಿರುತ್ತದೆ.

ಕರ್ನಾಟಕದ ಜನಪ್ರಿಯ ಇಡ್ಲಿ ವಿಧಗಳಲ್ಲಿ ತಟ್ಟೆ ಇಡ್ಲಿ ಕೂಡಾ ಒಂದಾಗಿದೆ, ರಾಜ್ಯದಾದ್ಯಂತ ಲಭ್ಯವಿರುವ ಇತರ ಇಡ್ಲಿ ಪ್ರಭೇದಗಳಲ್ಲದೆ. ಹೆಸರೇ ಸೂಚಿಸುವಂತೆ, ಇದು ಸಾಮಾನ್ಯ ಇಡ್ಲಿಗಿಂತಲೂ ದೊಡ್ಡದಾಗಿರುತ್ತದೆ. ಇದರ ಗಾತ್ರವು 4 - 5 ಇಂಚುಗಳಷ್ಟು ವೃತ್ತಾಕಾರದಲ್ಲಿರುತ್ತದೆ.

ಫೇಮಸ್ ತಟ್ಟೆ ಇಡ್ಲಿ

ಫೇಮಸ್ ತಟ್ಟೆ ಇಡ್ಲಿ

ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಸ್ಥಳಗಳಲ್ಲಿ ತಟ್ಟೆ ಇಡ್ಲಿ ಸಿಗುತ್ತದೆ. ಆದರೆ ತಟ್ಟೆ ಇಡ್ಲಿ ಎಂದ ತಕ್ಷಣ ನೆನಪಿಗೆ ಬರೋದು ತುಮಕೂರು ಹಾಗೂ ಬಿಡದಿ. ಯಾಕೆಂದರೆ ಈ ಎರಡು ಸ್ಥಳಗಳಲ್ಲ ತಟ್ಟೆ ಇಡ್ಲಿ ಸಖತ್ ಫೇಮಸ್. ಇಂದು ನಾವು ಬಿಡದಿಯಲ್ಲಿನ ತಟ್ಟೆ ಇಡ್ಲಿ ತಾಣದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ಬಿಡದಿ

ಎಲ್ಲಿದೆ ಈ ಬಿಡದಿ

ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ಈ ಬಿಡದಿ ಸಿಗುತ್ತದೆ. ಇದೊಂದು ಸಣ್ಣ ಪಟ್ಟಣವಾಗಿದೆ. ಬಿಡದಿಯಲ್ಲಿ ತಟ್ಟೆ ಇಡ್ಲಿ ಎಂದರೆ ಬಹಳ ಫೇಮಸ್‌. ಕೇವಲ ತಟ್ಟೆ ಇಡ್ಲಿಯನ್ನು ಸವಿಯೋದಕ್ಕಾಗಿ ಅನೇಕರು ಇಲ್ಲಿಗೆ ಬರುತ್ತಾರೆ. ನಿಜವಾದ ತಟ್ಟೆ ಇಡ್ಲಿಯನ್ನು ಸವಿಯಬೇಕಾರೆ ನೀವು ಇಲ್ಲಿಗೆ ಹೋಗಲೇ ಬೇಕು.

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

 ಶಿವ ದರ್ಶನ ಶಶಿ ತಟ್ಟೆ ಇಡ್ಲಿ

ಶಿವ ದರ್ಶನ ಶಶಿ ತಟ್ಟೆ ಇಡ್ಲಿ

PC: Radha sekar

ಬಿಡದಿಯಲ್ಲಿ ಶ್ರೀ ಶಿವ ದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್ ಇದೆ. ಇದು ತಟ್ಟೆ ಇಡ್ಲಿಗಾಗಿಯೇ ಫೇಮಸ್‌. ಇಲ್ಲಿ ರುಚಿಕರವಾದ ತಟ್ಟೆ ಇಡ್ಲಿ ಅದರ ಜೊತೆ ವಡವನ್ನು ನೀಡುತ್ತಾರೆ. ತಟ್ಟೆ ಇಡ್ಲಿ ಎಷ್ಟು ಮೃದುವಾಗಿದೆಯೆಂದರೆ ಬಾಯೋಳಗೆ ಹಾಕುತ್ತಿದ್ದಂತೆ ಕರಗುತ್ತದೆ. ಇಡ್ಲಿಯ ಮೇಲೆ ಬೆಣ್ಣೆಯನ್ನು ಸುರಿಯುತ್ತಾರೆ, ಇದು ನಿಮ್ಮ ಇಡ್ಲಿಗೆ ಇನ್ನಷ್ಟು ರುಚಿಯನ್ನು ನೀಡುತ್ತದೆ. ಇಡ್ಲಿ ಸಾಂಬಾರ್, ಚಟ್ನಿ ಸವಿಯ ಬೇಕಾದರೆ ಇದು ನಿಮಗೆ ಸೂಕ್ತವಾದ ಸ್ಥಳವಾಗಿದೆ. ಇಲ್ಲಿನ ತಟ್ಟೆ ಇಡ್ಲಿ ಸವಿದರೆ ನಿಜವಾದ ತಟ್ಟೆ ಇಡ್ಲಿಯ ರುಚಿ ಏನು ಎನ್ನುವುದು ನಿಮಗೆ ತಿಳಿಯುತ್ತದೆ.

 ರೇಣುಕಾಂಬ ತಟ್ಟೆ ಇಡ್ಲಿ ಹೋಟೆಲ್

ರೇಣುಕಾಂಬ ತಟ್ಟೆ ಇಡ್ಲಿ ಹೋಟೆಲ್

PC:solarisgirl

ಬಿಡದಿಯಲ್ಲಿರುವ ಇನ್ನೊಂದು ಫೇಮಸ್ ತಟ್ಟೆ ಇಡ್ಲಿ ಹೋಟೆಲ್ ಎಂದರೆ ಅದು ಬಿಡದಿ ಬಸ್‌ ಸ್ಟಾಪ್ ಬಳಿ ಇರುವ ರೇಣುಕಾಂಬ ತಟ್ಟೆ ಇಡ್ಲಿ ಹೋಟೆಲ್. ಬೆಂಗಳೂರಿನಿಂದ ಮೈಸೂರು ಕಡೆ ಹೋಗುವಾಗ ಇಲ್ಲಿ ಬ್ರೇಕ್‌ಫಾಸ್ಟ್ ಮಾಡಲೇ ಬೇಕು. ಬೆಳಗ್ಗಿನ ಜಾವ ತುಂಬಾನೇ ರಶ್‌ ಇರುತ್ತದೆ. ಹಾಗಾಗಿ ಬೆಳಗ್ಗೆ ಬೇಗನೇ ಹೋದರೆ ಬೇಗನೆ ಬ್ರೇಕ್‌ಫಾಸ್ಟ್‌ ಮುಗಿಸಿ ಹೊರ ಬರಬಹುದು.

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

40 ರೂ.ಗೆ ಇಡ್ಲಿ

40 ರೂ.ಗೆ ಇಡ್ಲಿ

ಇಲ್ಲಿನ ತಟ್ಟೆ ಇಟ್ಟಿಯನ್ನು ನೋಡುವಾಗ ಬಾಯಲ್ಲಿ ನೀರೂರದೇ ಇರಲಾರದು. ಅಷ್ಟೊಂದು ರುಚಿಕರ ಹಾಗೂ ಫ್ರೆಶ್‌ ಆಗಿರುತ್ತದೆ.

ಶಿವ ಸಾಗರ ತಟ್ಟೆ ಇಡ್ಲಿ ಹೋಟೇಲ್ ಕೂಡಾ ಅಲ್ಲಿ ಇದೆ. ಇಲ್ಲಿ 40 ರೂ. ಗೆ ತಟ್ಟೆ ಇಡ್ಲಿ ಸಿಗುತ್ತದೆ. ತಟ್ಟೆ ಇಡ್ಲಿ ಜೊತೆ ಮೆದು ವಡ, ತೆಂಗಿನ ಕಾಯಿ ಚಟ್ನಿ, ಉಡುಪಿ ಶೈಲಿಯ ಸಾಂಬಾರ್ ನೀಡಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X