Search
  • Follow NativePlanet
Share
» » ತಾರಂಗಂಬಾಡಿ ಬೀಚ್‌ನಲ್ಲಿ ಸುತ್ತಾಡಿದ್ದೀರಾ ?

ತಾರಂಗಂಬಾಡಿ ಬೀಚ್‌ನಲ್ಲಿ ಸುತ್ತಾಡಿದ್ದೀರಾ ?

ಟ್ರಾನ್ಕ್ವಿಬಾರ್ ಇದನ್ನು ಸ್ಥಳೀಯವಾಗಿ ತಾರಂಗಂಬಾಡಿ ಎಂದು ಕರೆಯಲಾಗುತ್ತದೆ. ತಾರಂಗಂಬಾಡಿ ಎಂದರೆ 'ತೂಗಾಡುವ ಅಲೆಗಳ ಭೂಮಿ'ಎಂದರ್ಥ. ತಮಿಳುನಾಡಿನಲ್ಲಿರುವ ಈ ಕರಾವಳಿ ಪಟ್ಟಣವು ಕೊರೊಮಂಡಲ್ ತೀರದಲ್ಲಿದೆ, ಬಂಗಾಳ ಕೊಲ್ಲಿಯ ಅಂಚಿನಲ್ಲಿದೆ.

ಜನಪ್ರಿಯ ತಾಣವಲ್ಲ

ಜನಪ್ರಿಯ ತಾಣವಲ್ಲ

PC: rajaraman sundaram
ಪಾಂಡಿಚೇರಿಯು ಫ್ರೆಂಚ್‌ನ ಪರಂಪರೆಯನ್ನು ಹೊಂದಿದ್ದರೆ, ತಾರಂಗಬಾಡಿಗೆ ಅದು ಡ್ಯಾನಿಶ್ ಸ್ಟ್ರೈಕ್ ಅನ್ನು ಹೊಂದಿದೆ. ಮತ್ತು ಅದರ ಸುಂದರವಾದ ಭೂದೃಶ್ಯವು ಅದು ಪ್ರಣಯ ವರ್ಣವನ್ನು ನೀಡುತ್ತದೆ. ಆಶ್ಚರ್ಯಕರವಾಗಿ, ಇದು ಒಂದು ಜನಪ್ರಿಯ ತಾಣವಲ್ಲ, ಆದರೆ ನೀವು ಪಾಂಡಿಚೇರಿಯ ಸುತ್ತಲೂ ಪ್ರವಾಸ ಕೈಗೊಂಡಿದ್ದರೆ ನೀವು ಈ ಸ್ಥಳಕ್ಕೆ ಒಂದು ದಿನದ ಪ್ರವಾಸವನ್ನು ಸುಲಭವಾಗಿ ಮಾಡಬಹುದು.

ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?

ಉತ್ತಮ ಕಾಲಕಳೆಯಬಹುದು

ಉತ್ತಮ ಕಾಲಕಳೆಯಬಹುದು

PC: Ssriram mt

ತಮಿಳುನಾಡಿನಲ್ಲಿ ಟ್ರಾನ್ಕ್ವಿಬಾರ್ ಒಂದು ಕಡಿಮೆ ಅನ್ವೇಷಿತ ತಾಣವಾಗಿದೆ. ಇಲ್ಲಿ, ನೀವು ಕಡಲ ಮತ್ತು ಮೀನುಗಾರಿಕೆ ದೋಣಿಗಳನ್ನು ನೋಡುತ್ತಾ ಕಾಲ ಕಳೆಯಬಹುದು. ಕಡಲ ತೀರದಲ್ಲಿ ಯಾವಾಗಲೂ ವಾಕ್ ಮಾಡಬಹುದಾದ ಅತ್ಯುತ್ತಮ ತಾಣ ಇದಾಗಿದೆ.

ಇತರ ಆಕರ್ಷಣೆಗಳು

ಇತರ ಆಕರ್ಷಣೆಗಳು

PC: Ankit Kumar Verma

ನೀವು ವ್ಯಾನ್ ಥಿಲಿಂಗ್ನ್ ಹೌಸ್, ಮೆರಿಟೈಮ್ ಮ್ಯೂಸಿಯಂಗೆ ಭೇಟಿ ನೀಡಬಹುದು. ಜಿಯಾನ್ ಚರ್ಚ್ ಮತ್ತು ನ್ಯೂ ಜೆರುಸಲೆಮ್ ಚರ್ಚ್‌ಗೆ ಭೇಟಿ ನೀಡಬಹುದು. ಟ್ರಾನ್ಕ್ವಿಬಾರ್ನಲ್ಲಿನ ಇತರ ಪ್ರವಾಸಿ ಸ್ಥಳಗಳೆಂದರೆ ಫೋರ್ಟ್ ಡ್ಯಾನ್ಸ್ಬೋರ್ಗ್, ಮಸೀಲಾಮಣಿ ನಾಥರ್ ಟೆಂಪಲ್, ಡ್ಯಾನಿಷ್ ಸ್ಮಶಾನ.

ಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಫೋರ್ಟ್ ಡ್ಯಾನ್ಸ್ಬೋರ್ಗ್

ಫೋರ್ಟ್ ಡ್ಯಾನ್ಸ್ಬೋರ್ಗ್

PC: Eagersnap

ಈ ಭವ್ಯವಾದ ಕೋಟೆಯ ಕಡಲತೀರದ ಪಕ್ಕದಲ್ಲೇ ಇದೆ. ಇಲ್ಲಿನ ಡ್ಯಾನಿಷ್ ವಲಸಿಗರಿಗೆ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು 1620 ರಲ್ಲಿ ನಿರ್ಮಿಸಲಾಯಿತು. ಡ್ಯಾನಿಷ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲ್ಪಟ್ಟ ಈ ಕೋಟೆ ನಂತರ ಬ್ರಿಟೀಷರಿಗೆ 1845 ರಲ್ಲಿ ಮಾರಾಟವಾಯಿತು.

ಮಸಿಲಾಮಣಿ ನಾಥರ್ ದೇವಾಲಯ

ಮಸಿಲಾಮಣಿ ನಾಥರ್ ದೇವಾಲಯ

PC:Ssriram mt

13 ನೇ ಶತಮಾನದಲ್ಲಿ ನಿರ್ಮಿಸಲಾದ ಮಸಿಲಾಮಣಿ ನಾಥರ್ ದೇವಾಲಯವು ಪಾಂಡಿಯನ್ ಯುಗಕ್ಕೆ ಸಂಭಂದಿಸಿದ್ದು, ಮತ್ತು ಇಂದು ಇದು ಬಹುಪಾಲು ಅವಶೇಷಗಳಲ್ಲಿ ನಿಂತಿದೆ. ಈ ಸುಂದರ ದೇವಸ್ಥಾನವು ಶಿವನಿಗೆ ಸಮರ್ಪಿತವಾಗಿದೆ ಮತ್ತು ಬ್ರಿಟಿಷ್ ಕಲೆಕ್ಟರ್ಸ್ ಬಂಗಲೆಗೆ ಸಮೀಪದಲ್ಲಿದೆ. 1306 ರಲ್ಲಿ ಮರವವರ್ನ್ ಕುಲಶೇಖರ ಪಾಂಡ್ಯಾನ್ ಅವರು ನಿರ್ಮಿಸಿದರು. ಇದು ಚೀನೀ ಮತ್ತು ದಕ್ಷಿಣ ಭಾರತೀಯ ವಾಸ್ತುಶೈಲಿಯ ಮಿಶ್ರಣವಾಗಿದೆ.

ಸೋಮನಾಥಪುರದ ಚೆನ್ನಕೇಶವ ದೇವಸ್ಥಾನದ ದರ್ಶನ ಪಡೆದಿದ್ದೀರಾ?ಸೋಮನಾಥಪುರದ ಚೆನ್ನಕೇಶವ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ನ್ಯೂ ಜೆರುಸಲೆಮ್ ಚರ್ಚ್

ನ್ಯೂ ಜೆರುಸಲೆಮ್ ಚರ್ಚ್

PC: Chenthil https

ಮತ್ತೊಂದು ಹಳೆಯ ಧಾರ್ಮಿಕ ರಚನೆಯಾದ ನ್ಯೂ ಜೆರುಸಲೆಮ್ ಚರ್ಚ್ ಅನ್ನು 1718 ರಲ್ಲಿ ನಿರ್ಮಿಸಲಾಯಿತು. ಇದು ಭಾರತೀಯ ಮತ್ತು ಯುರೋಪಿಯನ್ ಶೈಲಿಯ ವಾಸ್ತುಶಿಲ್ಪದ ಸುಂದರ ಮಿಶ್ರಣವಾಗಿದೆ. ಈ ಚರ್ಚ್ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ಬಾಥೊಲೋಮಸ್ ಜಿಗೆನ್ಬಾಲ್‌ಗ್‌ನ ಸಮಾಧಿಯನ್ನು ಹೊಂದಿದೆ. ಬಾಥೊಲೋಮಸ್ ಜಿಗೆನ್ಬಾಲ್‌ಗ್‌ ದಕ್ಷಿಣ ಭಾರತದಲ್ಲಿ ಇಲ್ಲಿಗೆ ಆಗಮಿಸಿದ ಮೊದಲ ಲುಥೆರನ್ ಮಿಷನರಿ. ಅವರು ಹೊಸ ಒಡಂಬಡಿಕೆಯ ಮೊದಲ ಭಾಷಾಂತರಕಾರರಾಗಿದ್ದರು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Ssriram

ವಿಮಾನ ನಿಲ್ದಾಣ: ಹತ್ತಿರದ ವಿಮಾನನಿಲ್ದಾಣವು ಚೆನ್ನೈನಲ್ಲಿದೆ ಮತ್ತು ಸ್ಥಳೀಯ ಟ್ಯಾಕ್ಸಿಗಳು ಮತ್ತು ಬಸ್ಸುಗಳ ಮೂಲಕ ಟ್ರಾನ್ಕ್ವಿಬರ್‌ಗರ ತಲುಪಬಹುದು.
ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣಗಳು ನಾಗಪಟ್ಟಿನಂ (35 ಕಿಮೀ) ಮತ್ತು ಚಿದಂಬರಂ (40 ಕಿ.ಮೀ). ಚೆನ್ನೈ ನಗರದಿಂದ ನೀವು ರಾತ್ರಿಯ ನಾಗೂರ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸಬಹುದು.
ರಸ್ತೆ: ರಸ್ತೆಯ ಮೂಲಕ, ಟ್ರಾನ್ಕ್ವಿಬಾರ್ ಚೆನ್ನೈನಿಂದ 280 ಕಿ.ಮೀ ದೂರದಲ್ಲಿದೆ. ಪ್ರಯಾಣಕ್ಕೆ 5 ರಿಂದ 6 ಗಂಟೆಗಳ ಸಮಯ ತೆಗೆದುಕೊಳ್ಳಬಹುದು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿಯಮಿತವಾಗಿ ಚೆನ್ನೈ ಮೋಫಾಸೈಲ್ ಬಸ್ ಟರ್ಮಿನಲ್‌ನಿಂದ ಹೊರಡುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X