Search
  • Follow NativePlanet
Share
» »ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯವಿರುವುದು ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯಲ್ಲಿ. ಈ ಪಟ್ಟಣವು ಭಾರತಕ್ಕೆ ದಕ್ಷಿಣ ಭೂಭಾಗದಲ್ಲಿದೆ. ಕನ್ಯಾಕುಮಾರಿ ಪ್ರದೇಶದಲ್ಲಿ ಅರೇಬಿಯಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕೂಡ ಸೇರುತ್ತದೆ. ಕೇ

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯವಿರುವುದು ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯಲ್ಲಿ. ಈ ಪಟ್ಟಣವು ಭಾರತಕ್ಕೆ ದಕ್ಷಿಣ ಭೂಭಾಗದಲ್ಲಿದೆ. ಕನ್ಯಾಕುಮಾರಿ ಪ್ರದೇಶದಲ್ಲಿ ಅರೇಬಿಯಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕೂಡ ಸೇರುತ್ತದೆ. ಕೇರಳದ ರಾಜಧಾನಿಯಾದ ತಿರುವನಂತಪುರಂ ಇಲ್ಲಿಂದ ಸುಮಾರು 85 ಕಿ.ಮೀ ದೂರದಲ್ಲಿದೆ. ಕನ್ಯಾಕುಮಾರಿ ಪಟ್ಟಣವು ಸೂರ್ಯೋದಯಕ್ಕೆ ಮತ್ತು ಸೂರ್ಯಾಸ್ತಕ್ಕೆ ಪ್ರಸಿದ್ಧಿ ಹೊಂದಿದ ಪ್ರವಾಸಿ ಸ್ಥಳವಾಗಿದೆ. ಪ್ರತ್ಯೇಕವಾಗಿ ಹುಣ್ಣಿಮೆಯ ದಿನಗಳಲ್ಲಿ ಈ ಪ್ರದೇಶವು ಅತ್ಯಂತ ಸುಂದರವಾಗಿರುತ್ತದೆ.

ಇಲ್ಲಿ ಅನೇಕ ದೇವಾಲಯಗಳು ಮತ್ತು ಬೀಚ್‍ಗಳು ಕನ್ಯಾಕುಮಾರಿಯ ವಿಶೇಷವಾದ ಆಕರ್ಷಣೆಗಳೇ ಆಗಿವೆ. ತನ್ನದೇ ಆದ ಸಂಸ್ಕøತಿಯನ್ನು ಹೊಂದಿರುವ ಈ ಅದ್ಭುತವಾದ ಪಟ್ಟಣವು ಯಾತ್ರಿಕರಿಗೆ ಹಾಗು ಪ್ರವಾಸಿಗರಿಗೆ ಅತ್ಯುತ್ತಮವಾದ ಅನುಭವವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಅನೇಕ ಪ್ರಸಿದ್ಧವಾದ ದೇವಾಲಯಗಳನ್ನು ಕಾಣಬಹುದು. ಒಂದೊಂದು ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಅವುಗಳ ಸಾಲಿನಲ್ಲಿ ಸ್ತ್ರೀ ರೂಪವನ್ನು ಹೊಂದಿರುವ ಗಣೇಶನ ದೇವಾಲಯವು ಒಂದಾಗಿದೆ. ಇಂಥಹ ವಿಚಿತ್ರವನ್ನು ನೀವು ಬಹುಶಃ ಕೇಳಿರುವುದಿಲ್ಲ ಎಂದು ಭಾವಿಸುತ್ತೇನೆ. ಹಾಗಾದರೆ ಆ ದೇವಾಲಯ ಯಾವುದು? ಆ ದೇವಾಲಯದ ಮಹತ್ವವೇನು? ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಪಡೆಯೋಣ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ನಗರದಲ್ಲಿನ ಪ್ರಸಿದ್ಧವಾದ ಪ್ರದೇಶಗಳಲ್ಲಿ ಕನ್ಯಾಕುಮಾರಿ ದೇವಾಲಯ, ಚಿತರಾಲ್ ಹಿಲ್ ದೇವಾಲಯ ಮತ್ತು ಜೈನ್ ಸ್ಮಾರಕಗಳು, ನಾಗರಾಜ ದೇವಾಲಯ, ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಮತ್ತು ತಿರುನಂದಿಕರಾಯ ಗುಹಾ ದೇವಾಲಯಗಳಿವೆ. ತಮ್ಮ ಕುಟುಂಬ ಸಭ್ಯರ ಜೊತೆಗೆ, ಸ್ನೇಹಿತರ ಜೊತೆಗೆ ಏಂಜಾಯ್ ಮಾಡಲು ಕನ್ಯಾಕುಮಾರಿ ಬೀಚ್ ಕೂಡ ಇಲ್ಲಿನ ಪ್ರಧಾನವಾದ ಆಕರ್ಷಣೆಗಳೇ ಆಗಿವೆ. ಈ ಬೀಚ್‍ಗಳಲ್ಲಿ ಸಂಗುತುರಾಯಿ ಬೀಚ್, ತೆನ್ಗಾಪಟ್ಟಿನಂ ಬೀಚ್ ಮತ್ತು ಸೌತ್ ವಿಲಿ ಬೀಚ್‍ಗಳು ಪ್ರಸಿದ್ಧವಾದುದು.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಕಾಲ ಗಮನದಲ್ಲಿ ಸ್ತ್ರೀಸ್ವರೂಪಿಣಿ ವಿನಾಯಕನನ್ನು ಪೂರ್ತಿಯಾಗಿ ಮರೆಯುತ್ತಿದ್ದಾರೆ. ವಿನಾಯಕನ ಸ್ತ್ರೀರೂಪವಿದೆ ಎಂದು ಕೂಡ ತಿಳಿಯದೇ ಇರುವವರು ಎಷ್ಟು ಮಂದಿ ಇದ್ದಾರೆ ಎಂದರೆ ಆಶ್ಚರ್ಯವೇನಿಲ್ಲ. ನಮ್ಮ ಹಿಂದೂ ಪುರಾಣದಲ್ಲಿ ವಿನಾಯಕನ ಬಗ್ಗೆ ಪ್ರಸ್ತಾವನೆ ಕಡಿಮೆ ಇರುವುದರಿಂದಲೇ ವಿನಾಯಕನ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಗಣಪತಿಗೆ ಸ್ತ್ರೀ ರೂಪಕ್ಕೆ ಅನೇಕ ಹೆಸರುಗಳು ಕೂಡ ಇವೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಪ್ರಮುಖ ಪರಿಶೋಧನೆಕಾರನಾದ ಬಾಲಾಜ್ ಮುಂಡಕರ್ ಅವರು ಬರೆದ ಪುಸ್ತಕದ ಪ್ರಕಾರ ವಿನಾಯಕನಿಗೆ ವೈನಾಯಕಿ, ಗಣೇಶುನಿ, ಗಜಾನುನಿ, ವಿಜ್ಞೇಶುನಿ, ಗಜರೂಪ ಎಂಬ ಅನೇಕ ಹೆಸರುಗಳು ಇವೆಯಂತೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಭಾದ್ರಪದ ತಿಂಗಳಿನಲ್ಲಿ ವಿನಾಯಕನು ಹುಟ್ಟಿದ ದಿನ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸಹಜವಾಗಿ ಆಗಸ್ಟ್ ತಿಂಗಳಿನಲ್ಲಿ ಬಂದ ವಿನಾಯಕನ ಹುಟ್ಟಿದ ದಿನದಂದು ಆತನಿಗೆ ವಿಜೃಂಬಣೆಯಿಂದ ಪೂಜೆಗಳನ್ನು ದೇಶದಲ್ಲೆಡೆ ಮಾಡುತ್ತಾರೆ. ಇತನನ್ನು ಆರಾಧಿಸಿದರೆ ಜೀವನದಲ್ಲಿ ನಡೆಯುವ ಸಕಲ ವಿಘ್ನಗಳು ದೂರವಾಗುತ್ತದೆ ಎಂಬುದು ಹಿಂದೂಗಳ ಪ್ರಬಲವಾದ ವಿಶ್ವಾಸವೇ ಆಗಿದೆ. ವಿಘ್ನಗಳು ತೊಲಗಲು ಸ್ತ್ರೀರೂಪದಲ್ಲಿ ಪೂಜಿಸಿದ ಹಾಗೆ ಪುರಾಣಗಳಲ್ಲಿ ಯಾವುದೇ ಆಧಾರವಿಲ್ಲದೇ ಇದ್ದರು ಕೂಡ ತಿಂಗಳಲ್ಲಿ ವಿನಾಯಕ ಚರ್ತುಥಿಯ ಹೆಸರಿನ ಮೇಲೆ ಮಹಿಳೆಯರು ಪ್ರತ್ಯೇಕವಾದ ಪೂಜೆಗಳನ್ನು ಮಾಡುತ್ತಿದ್ದರು ಎಂಬುದಕ್ಕೆ ಮಾತ್ರ ಅನೇಕ ಆಧಾರಗಳು ಇವೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ತನುಮಲಯನ್ ಎಂಬ ದೇವಾಲಯದಲ್ಲಿ ವಿನಾಯಕನ ವಿಗ್ರಹಗಳು ಇಂದಿಗೂ ಸ್ಪಷ್ಟವಾಗಿದೆ. ಇದರಲ್ಲಿ ಒಂದು ವಿಗ್ರಹವು ಸುಖಾಸನದಲ್ಲಿ ಕುಳಿತುಕೊಂಡಿದೆ. 4 ಕೈಗಳನ್ನು ಹೊಂದಿರುವ ಈ ವಿಗ್ರಹವನ್ನು ಇಲ್ಲಿ ಕಾಣಬಹುದು.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಒಂದು ಕೈನಲ್ಲಿ ಶಂಖ, ಕಳಶ, ಹೂವನ್ನು ಹಿಡಿದುಕೊಂಡಿರುವ ಆ ವಿಗ್ರಹ ಅತ್ಯಂತ ಸುಂದರವಾಗಿದೆ. ಆ ಪಕ್ಕದಲ್ಲಿಯೇ ಮತ್ತೊಂದು ವಿಗ್ರಹವು ಕೂಡ ಇದೆ. ವಿನಾಯಕ ವಿಗ್ರಹವು ಇಲ್ಲಿ ನಿಂತಿರುವ ಭಂಗಿಯಲ್ಲಿದೆ. 13000 ವರ್ಷದ ಹಿಂದಿನದು ಈ ದೇವಾಲಯದಲ್ಲಿ ವಿನಾಯಕನ ವಿಗ್ರಹಕ್ಕೆ ವಿಶೇಷತೆ ಕೂಡ ಇದೆ ಎಂದು ಪುರಾತತ್ವ ಶಾಸ್ತ್ರಕಾರರು ಹೇಳುತ್ತಾರೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡುವಾಗ ಈಶಾನ್ಯದಲ್ಲಿ ಈ ವಿನಾಯಕನ ವಿಗ್ರಹಗಳು ಕಾಣಿಸುತ್ತದೆ ಎಂದೂ ಮತ್ತೊಂದು ದೇವಾಲಯದ ಈಶಾನ್ಯದಿಕ್ಕಿಗೆ ಇಂಥಹದೇ ವಿಗ್ರಹಗಳು ಇರುತ್ತಿತ್ತು ಎಂದು ವಿವರಿಸಿದ್ದಾರೆ. ಕ್ರಿ.ಶ 550 ರಲ್ಲಿ ಬರೆದ ಮತ್ಸ್ಯ ಪುರಾಣದಲ್ಲಿಯೂ ಕೂಡ ವಿನಾಯಕನ ಬಗ್ಗೆ ಪ್ರಸ್ತಾವನೆ ಇದೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಶಿವನ ಅವತಾರವಾಗಿ ಹೆಸರುವಾಸಿಯಾಗಿರುವ 200 ಮಂದಿ ದೇವತೆಗಳ ಹೆಸರುಗಳಲ್ಲಿ ವಿನಾಯಕನ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಹಿಂದೂಪುರಾಣಗಳ ಪ್ರಕಾರ ಬರೆದ ದೇವದತ್ ಪಟ್ನಾಯಕ್ ಕೂಡ ವಿನಾಯಕನ ಪ್ರಸ್ತಾವನೆ ಮಾಡಿದ್ದಾರೆ. ಆತನ ಕಥನದ ಪ್ರಕಾರ ಅಂಧಕನೆಂಬ ರಾಕ್ಷಸನು ಪಾರ್ವತಿಯನ್ನು ಮೋಹಿಸಿ ವಿವಾಹ ಮಾಡಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾನೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಈ ವಿಷಯವನ್ನು ಪಾರ್ವತಿ ಶಂಕರನಿಗೆ ತಿಳಿಸುತ್ತಾಳೆ. ಇದರಿಂದ ಮಹಾಶಿವನು ಆ ರಾಕ್ಷನನ್ನು ಸಂಹಾರ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ ಆ ರಾಕ್ಷಸನ ಒಂದು ತುಟ್ಟು ರಕ್ತವು ನೆಲದ ಮೇಲೆ ಬೀಳಬಾರದು. ಹಾಗೆ ಬಿದ್ದ ಹಾನಿಗಳಿಂದ ಮತ್ತೇ ಹಲವಾರು ರಾಕ್ಷಸರು ಜನ್ಮ ತಾಳುತ್ತಾರೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಹಾಗಾಗಿಯೇ ಪಾರ್ವತಿ, ವಿಷ್ಣುಮೂರ್ತಿ ಶಕ್ತಿಯಾದ ವೈಷ್ಣವಿ, ಬ್ರಹ್ಮಶಕ್ತಿಯಾದ ಬ್ರಾಹ್ಮಣಿ, ಇಂದ್ರನ ಶಕ್ತಿಯಾದ ಇಂದ್ರಾಣಿಯ ಜೊತೆಗೆ ವಿನಾಯಕನ ಸಹಾಯ ಮಾಡಬೇಕು ಎಂದು ಪ್ರಾರ್ಥಿಸಿದರು. ಆಗ ಇವರೆಲ್ಲಾ ಆ ರಾಕ್ಷಸನು ನೆಲದ ಮೇಲೆ ಬೀಳದೇ ಇರುವ ಹಾಗೆ ಹಾಗು ಗಾಳಿಯಲ್ಲಿ ಇರುವ ಸಮಯದಲ್ಲಿಯೇ ರಕ್ತವನ್ನು ಕುಡಿಯುತ್ತಿರುತ್ತಾರೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಬಸ್ಸು ಮಾರ್ಗದ ಮೂಲಕ
ಈ ದೇವಾಲಯಕ್ಕೆ ತೆರಳು ಅನೇಕ ಸಾರಿಗೆ ವ್ಯವಸ್ಥೆ ಕೂಡ ಇದೆ. ದೇಶದ ಅನೇಕ ಪ್ರಧಾನವಾದ ನಗರಗಳಿಂದ ಬಸ್ಸುಗಳು ಕನ್ಯಾಕುಮಾರಿಗೆ ದೊರೆಯುತ್ತವೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ರೈಲು ಮಾರ್ಗದ ಮೂಲಕ
ಪ್ರವಾಸಿಗರು ಕನ್ಯಾಕುಮಾರಿಗೆ ರೈಲಿನ ಮೂಖಂತರ ಕೂಡ ಸೇರಿಕೊಳ್ಳಬಹುದು. ಇಲ್ಲಿಗೆ ಸೂಪರ್ ಫಾಸ್ಟ್ ಮತ್ತು ಎಕ್ಸಪ್ರೆಸ್ಸ್ ಟ್ರೈನ್‍ಗಳು ವಿವಿಧ ಪ್ರದೇಶಗಳಿಂದ ಸೇರುತ್ತವೆ

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ವಿಮಾನ ಮಾರ್ಗ
ಕನ್ಯಾಕುಮಾರಿಗೆ ವಿಮಾನ ಮಾರ್ಗದ ಮೂಲಕ ಸೇರಿಕೊಳ್ಳಬೇಕಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ತಿರುವನಂತಪುರ. ಇಲ್ಲಿಂದ ಸುಮಾರು 89 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಕನ್ಯಾಕುಮಾರಿಗೆ ಇಂಟರ್‍ನ್ಯಾಷನಲ್ ಮತ್ತು ಸ್ಥಳೀಯ ವಿಮಾನಗಳು ಇಲ್ಲಿ ದೊರೆಯುತ್ತವೆ.

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಸ್ರೀ ರೂಪದಲ್ಲಿ ಇರುವ ವಿನಾಯಕನ ದೇವಾಲಯದ ಬಗ್ಗೆ ನಿಮಗೆ ಗೊತ್ತ?

ಉತ್ತಮ ಸಮಯ
ವರ್ಷದಾದ್ಯಂತ ಈ ನಗರದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆದ್ದರಿಂದ ಪ್ರವಾಸಿಗರು ಯಾವ ಕಾಲದಲ್ಲಿಯಾದರೂ ಭೇಟಿ ನೀಡಬಹುದು. ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳಲ್ಲಿ ಭೇಟಿ ನೀಡುವುದು ಅತ್ಯುತ್ತಮವಾದ ಕಾಲಾವಧಿ ಎಂದು ಕೂಡ ಹೇಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X