Search
  • Follow NativePlanet
Share
» »ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ಬೀಚ್‌ಗಳನ್ನು ಹೊರತುಪಡಿಸಿ ಕರಾವಳಿ ಕರ್ನಾಟಕದಲ್ಲಿ ಬೇಕಾದಷ್ಟು ಪ್ರಾಚೀನ ಪ್ರಸಿದ್ಧ ದೇವಾಲಯಗಳಿವೆ . ಅವುಗಳಲ್ಲಿ ಕೆಲವು ಸಣ್ಣ ದೇವಾಲಯಗಳಾಗಿದ್ದರೆ ಇನ್ನೂ ಕೆಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯಗಳಾಗಿವೆ. ಉಡುಪಿ, ಮಂಗಳೂರಿನಲ್ಲಿ ಕೆಲವು ದೇವಾಲಯಗಳಿದ್ದರೆ ಇನ್ನೂ ಕೆಲವು ಪಶ್ಚಿಮಘಟ್ಟಗಳಲ್ಲಿವೆ. ಹಾಗಾದ್ರೆ ಬನ್ನಿ ಕರಾವಳಿ ಕರ್ನಾಟಕದಲ್ಲಿ ಯಾವೆಲ್ಲಾ ದೇವಾಲಯಗಳಿವೆ ಅನ್ನೋದನ್ನು ನೋಡೋಣ...

ಕೊಲ್ಲೂರು ಮೂಕಾಂಬಿಕೆ

ಕೊಲ್ಲೂರು ಮೂಕಾಂಬಿಕೆ

PC: Ashok Prabhakaran

ಮೂಕಾಂಬಿಕೆ ದೇವಿಗಾಗಿ ಸಮರ್ಪಿತವಾಗಿರುವ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನವು ಮಂಗಳೂರಿನಿಂದ 130ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ 440 ಕಿ.ಮೀ ದೂರದಲ್ಲಿದೆ. ಇದೊಂದು ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿ ಕೇಂದ್ರವೂ ಆಗಿದೆ.

ಉಡುಪಿ ಶ್ರೀಕೃಷ್ಣ ಮಠ

ಉಡುಪಿ ಶ್ರೀಕೃಷ್ಣ ಮಠ

PC: Ashok Prabhakaran

ಉಡುಪಿಯು ಶ್ರೀಕೃಷ್ಣನ ಮಠಕ್ಕೆ ಫೇಮಸ್ ಆಗಿದೆ. ಈ ಶ್ರೀಕೃಷ್ಣ ಮಠವನ್ನು 13 ನೇ ಶತಮಾನದಲ್ಲಿ ಮಧ್ವಾಚಾರ್ಯರು ನಿರ್ಮಿಸಿದರು ಎನ್ನಲಾಗುತ್ತದೆ. ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನನ್ನು ನೋಡಬಹುದು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ

PC: Premnath Kudva

ಇದು ಮಂಗಳೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ಕಟೀಲಿನಲ್ಲಿರುವ ಈ ದೇವಸ್ಥಾನವು ದುರ್ಗಾಪರಮೇಶ್ವರಿಗೆ ಸಮರ್ಪಿತವಾಗಿರುವುದು.

ಶೃಂಗೇರಿ ಶಾರದಾ ದೇವಾಲಯ

ಶೃಂಗೇರಿ ಶಾರದಾ ದೇವಾಲಯ

PC:Ashok Prabhakaran

ಮಂಗಳೂರಿನಿಂದ 100 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರಿನಿಂದ 330 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಶಾರದಾ ದೇವಿಗೆ ಸಮರ್ಪಿತವಾಗಿದೆ. ಇದನ್ನು ಶೃಂಗೇರಿ ಶಾರದಾಂಬೆ ಎಂದು ಕರೆಯುತ್ತಾರೆ.

ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಹೊರನಾಡು ಅನ್ನಪೂರ್ಣೇಶ್ವರಿ

ಹೊರನಾಡು ಅನ್ನಪೂರ್ಣೇಶ್ವರಿ

PC: Kgpramod2

ಅನ್ನಪೂರ್ಣೇಗೆ ಸಮರ್ಪಿತವಾಗಿರುವ ಈ ದೇವಾಲಯವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಮೀಪದಲ್ಲಿದೆ. ಚಿಕ್ಕಮಗಳೂರಿನಿಂದ 100 ಕಿ.ಮೀ ದೂರದಲ್ಲಿದೆ.

ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವುಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ಇಡಗುಂಜಿ ಗಣಪತಿ

ಇಡಗುಂಜಿ ಗಣಪತಿ

ಇಡಗುಂಜಿ ದೇವಸ್ಥಾನವು ಗಣೇಶನಿಗೆ ಸಮರ್ಪೀತವಾದ ದೇವಾಲಯವಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ಎನ್ನುವಲ್ಲಿದೆ. ಬಹಳ ಪ್ರಸಿದ್ಧವಾದ ದೇವಾಲಯವಾಗಿದ್ದು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುತ್ತದೆ. ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಗಣೇಶನ ದೇವಾಲಯ ಇದಾಗಿದೆ. ಇದು ಹೊನ್ನಾವರದಿಂದ 14 ಕಿ.ಮೀ ದೂರದಲ್ಲಿದೆ.

ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ! ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ಗೋಕರ್ಣ

ಗೋಕರ್ಣ

PC: Nvvchar

ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಕುಮಟಾ ತಾಲುಕು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದು, ಶಿವನನ್ನು ಮಹಾಬಲೇಶ್ವರ ಎಂದು ಸಂಬೋದಿಸಲಾಗುತ್ತದೆ.

ಹಟ್ಟಿಯಂಗಡಿ ಗಣಪತಿ

ಹಟ್ಟಿಯಂಗಡಿ ಗಣಪತಿ

PC:Arjun Prabhu

ಕರಾವಳಿಯ ಪ್ರಸಿದ್ಧ ಗಣಪತಿ ದೇವಸ್ಥಾನಗಳಲ್ಲಿ ಒಂದಾದ ಹಟ್ಟಿಯಂಗಡಿ ಗಣಪತಿ ದೇವಸ್ಥಾನವು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿದೆ. ಗರ್ಭಗುಡಿಯಲ್ಲಿರುವ ಶ್ರೀ ವಿನಾಯಕನ ವಿಗ್ರಹವು ಪೂರ್ವಾಭಿಮುಖವಾಗಿ ಪ್ರತಿಷ್ಠೆಗೊಂಡಿದೆ. ಕುಂದಾಪುರದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ.

ಮುರುಡೇಶ್ವರ

ಮುರುಡೇಶ್ವರ

PC:Thejas Panarkandy

ಮುರುಡೇಶ್ವರದಲ್ಲಿರುವ ಶಿವನ ವಿಗ್ರಹವು ವಿಶ್ವದಲ್ಲಿ ಎರಡನೇ ಅತ್ಯಂತ ದೊಡ್ಡ ಶಿವನ ವಿಗ್ರಹವಾಗಿದೆ. ಎಷ್ಟೇ ದೂರದಿಂದಲೂ ಈ ವಿಗ್ರಹವನ್ನು ಕಾಣಬಹುದು. ಶಿವನ ಈ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಬಟ್ಕಳ ತಾಲೂಕಿನಲ್ಲಿದೆ. ಇಲ್ಲಿ ದೇವಸ್ಥಾನದ ಜೊತೆಗೆ ಬೀಚ್‌ನ ಆನಂದವನ್ನೂ ಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X