» »ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

Written By:

ತೆಲಂಗಾಣದಲ್ಲಿರುವ ಆದಿಲಾಬಾದ್ ಪಟ್ಟಣದಲ್ಲಿ ಈ ವಿಚಿತ್ರವನ್ನು ಕಾಣಬಹುದಾಗಿದೆ. ಇದು ಒಂದು ಸುಂದರವಾದ ಪಟ್ಟಣ. ಆದಿಲಾಬಾದ್ ಜಿಲ್ಲೆಯಲ್ಲಿ ಪ್ರಧಾನವಾದ ಪ್ರವಾಸಿ ತಾಣಗಳು ಇವೆ. ಆದಿಲಾಬಾದ್ ಜಿಲ್ಲೆ ತೆಲಂಗಾಣದಲ್ಲಿನ ದಕ್ಷಿಣ ಭಾರತ ರಾಷ್ಟ್ರ ಭಾಗ. ಸ್ಥಳೀಯರ ಕಥೆಯ ಪ್ರಕಾರ ಪಟ್ಟಣಕ್ಕೆ ಬಿಜಾಪುರ್ ಆಳ್ವಿಕೆಗಾರನಾದ ಮೊಹಮ್ಮದ್ ಆದಿಲ್ ಷಾನಿಂದ ಈ ಹೆಸರು ಬಂದಿತು ಎಂದು ಹೇಳುತ್ತಾರೆ. ಆದಿಲಾಬಾದ್ ಮೊಘಲ್ ಆಳ್ವಿಕೆಯ ಸಮಯದಲ್ಲಿ ಅಧಿಕ ಪ್ರಾಮುಖ್ಯತೆ ಪಡೆಯಿತು. ಈ ಸುಂದರವಾದ ವಾತಾವರಣದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಅದೆನೆಂದರೆ....ಚಪ್ಪಾಳೆ ಹೊಡೆದರೆ ನೀರು ಸುರಿಯುವುದು. ಆಶ್ಚರ್ಯ ಅನ್ನಿಸುತ್ತಿದೆಯೇ?

ಅಲ್ಲಿನ ಸುತ್ತ ದಟ್ಟವಾದ ಅರಣ್ಯದಲ್ಲಿ ಹೋಗುತ್ತಿದ್ದರೆ ಎತ್ತರವಾದ ಗುಡ್ಡಗಳು ನಿಮ್ಮನ್ನು ಸ್ವಾಗತಿಸುತ್ತದೆ. ಹಾಗಾದರೆ ಚಪ್ಪಾಳೆ ಹೊಡೆದರೆ ತಂಪಾಗಿರುವ ನೀರು ಬರುವ ಪ್ರದೇಶದ ಎಲ್ಲಿದೆ? ಅದರ ರಹಸ್ಯವೇನು ಗೊತ್ತ?. ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಸ್ಪಷ್ಟವಾಗಿ ತಿಳಿಯೋಣ ಬನ್ನಿ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಆದಿಲಾಬಾದ್ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದಲ್ಲಿನ ದಂಡೆಪಲ್ಲಿ ಮಂಡಲದಲ್ಲಿ, ಪೆದ್ದಯ್ಯ ದೇವರ ಗುಡ್ಡ, ಲಕ್ಸಿದ್ಧಿ ಪೇಟ ಮಂಡಲದಲ್ಲಿ ಇರುವ ಚೆನ್ನಯ್ಯ ಗುಡ್ಡಗಳು ಇವೆ. ಈ ಚೆನ್ನಯ್ಯ, ಪೆದ್ದಯ್ಯ ಗುಟ್ಟಗಳು ಗಿರಿಜನರಿಗೆ ಆರಾಧ್ಯ ದೈವವಾಗಿ ನೆಲೆಸಿದ್ದಾರೆ. ಇಲ್ಲಿನ ಪ್ರಜೆಗಳು ಅತ್ಯಂತ ಆಹ್ಲಾದವನ್ನು ಹಂಚುತ್ತಾ, ಆಧ್ಯಾತ್ಮಿಕವಾಗಿ ಭಕ್ತರ ಕೋರಿಕೆಗಳನ್ನು ನೇರವೇರಿಸುತ್ತಿದ್ದಾರೆ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಪೆದ್ದಯ್ಯ ದೇವರನ್ನು ಗುಡ್ಡದ ದಂಡೆಪಲ್ಲಿ ಮಂಡಲ ಕೇಂದ್ರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ದಟ್ಟವಾದ ಅರಣ್ಯ ಪ್ರದೇಶದ್ಲಲಿರುತ್ತದೆ. ಗುಡ್ಡ ನೋಡುವುದಕ್ಕೆ ಒಂದು ನಿರ್ಜನ ಸ್ಥಳವಾಗಿ ಕಾಣುತ್ತದೆ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಗುಡ್ಡದ ಸುತ್ತ ಅಷ್ಟೇ ಎತ್ತರವಾದ ಬೆಟ್ಟಗಳು ಅದ್ಭುತವಾಗಿ ಕಾಣುತ್ತದೆ. ಆ ಪ್ರಕೃತಿಯ ಸೌಂದರ್ಯವನ್ನೆಲ್ಲಾ ಸವಿಯುತ್ತಾ ತೆರಳುವ ದಾರಿಯಲ್ಲಿ ಪೆದ್ದಯ್ಯ ಗುಡ್ಡ ಕಾಣಿಸುತ್ತೆ. ಅಸಲಿಗೆ ಈ ಪೆದ್ದಯ್ಯ, ಚಿನ್ನಯ್ಯ ಯಾರು ಎಂದು ಯೋಚಿಸುತ್ತಿದ್ದೀರಾ? ಅವರ ಬಗ್ಗೆ ಹೇಳಬೇಕಾದರೆ ಒಂದು ಕಥೆ ನೀವು ತಿಳಿದುಕೊಳ್ಳಲೇಬೇಕು. ಅದೆನೆಂದರೆ ..

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಒಂದು ಪುರಾಣದ ಪ್ರಕಾರ, ಕುಂತಿದೇವಿಯು ಸಂತಾನಕ್ಕಾಗಿ ಮಹಾಶಿವನನನ್ನು ಕುರಿತು ತಪಸ್ಸನ್ನು ಮಾಡಿ ಒಂದು ಕೋರಿಕೆಯನ್ನು ಕೋರಿಕೊಳ್ಳುತ್ತಾಳೆ. ತನಗೆ ಸಂತಾನ ಬೇಕು ಎಂದು ಶಿವನನ್ನು ಕೇಳಿಕೊಳ್ಳುತ್ತಾಳೆ. ಆದರೆ ಆಕೆಯನ್ನು ಶಿವನು ಪರಿಕ್ಷೀಸಬೇಕು ಎಂಬ ಸಲುವಾಗಿ ಕಪ್ಪೆಗಳು, ಮೀನುಗಳು ಮುಟ್ಟದೇ ಇರುವ ನೀರನ್ನು, ಬೆಟ್ಟದ ಮೇಲೆ ಬೆತ್ತನೆ ಮಾಡಿದ ಆಹಾರವನ್ನು ನೈವೇದ್ಯವಾಗಿ ನೀಡಿದರೆ ವರವನ್ನು ನೀಡುತ್ತೇನೆ ಎಂದು ಹೇಳುತ್ತಾನೆ. ಶಿವನು ಬೇಡಿದ ನೈವೇದ್ಯವನ್ನು ಎಷ್ಟೇ ಹುಡುಕಾಡಿದರು ಅವಳಿಗೆ ಸಿಗುವುದಿಲ್ಲ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಆಕೆಯ ಸತ್ಯನಿಷ್ಠೆಗೆ ಮೆಚ್ಚಿದ ಪರಮಶಿವನು ಆ ಬೆಟ್ಟದ ಮೇಲೆ ನೀರನ್ನು ಸುರಿಸುತ್ತಾನೆ. ಆಗ ಆ ನೀರಿನಿಂದ ಸ್ವಾಮಿಗೆ ನೈವೇದ್ಯವನ್ನು ಬಡಿಸಿದಳಂತೆ. ಆಗ ಮಹಾಶಿವನು ಆಕೆಗೆ 5 ಸಂತಾನವನ್ನು ಅನುಗ್ರಹಸಿದನಂತೆ. ಅವರೇ ಪಂಚ ಪಾಂಡವರು.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಅದರಲ್ಲಿ ಧರ್ಮರಾಜನು ಪೆದ್ದಯ್ಯನಾಗಿ, ಭೀಮನು ಚಿನ್ನಯ್ಯನಾಗಿ ಈ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಆ ಕಾಲದಿಂದಲೂ ಚಿನ್ನಯ್ಯ ದೇವರ ಸಮೀಪದಲ್ಲಿರುವ ಬೆಟ್ಟವನ್ನು ಅಲ್ಲಿನ ಸ್ಥಳೀಯರು ಮಂಚುಕೊಂಡ ಎಂದು ಕರೆಯುತ್ತಾರೆ. ಚಿನ್ನಯ್ಯ ದೇವರ ಸಮೀಪದಿಂದ 2 ಕಿ.ಮೀ ದೂರದಲ್ಲಿ ಈ ಬೆಟ್ಟಗಳಿವೆ. ಆ ಬೆಟ್ಟದ ಮಧ್ಯೆ ತೆರಳುತ್ತಾ ಭಕ್ತರು ಚಪ್ಪಳೆಯನ್ನು ಹೊಡೆದರೆ ಮೇಲಿನಿಂದ ನೀರು ಬೀಳುತ್ತದೆ ಎಂತೆ. ನಿಮಗಿದು ಆಶ್ಚರ್ಯವೆನಿಸಿದರು ಇದು ಸತ್ಯ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಆ ಪವಿತ್ರವಾದ ನೀರು ಅತ್ಯಂತ ತಂಪಾಗಿ ಇರುತ್ತದೆ ಎಂತೆ. ಎಷ್ಟೋ ಮಂದಿ ಭಕ್ತರು ಈ ದಾರಿಯಲ್ಲಿ ತೆರಳುವಾಗ ಪರೀಕ್ಷೆ ಮಾಡದೇ ಇರಲಾರರು. ಎಷ್ಟು ಮಂದಿ ಚಪ್ಪಳೆಯನ್ನು ಹೊಡೆಯುತ್ತಾರೆಯೋ ಅಷ್ಟು ಧಾರಾಕಾರವಾಗಿ ಭೂಮಿಗೆ ನೀರು ಬೀಳುತ್ತದೆ ಎಂತೆ. ಆ ಪವಿತ್ರವಾದ ನೀರನ್ನು ತೆಗೆದುಕೊಂಡು ಅದಕ್ಕೆ ಹರಿಶಿಣ ಮತ್ತು ಕುಂಕುಮವನ್ನು ಕಲಿಸಿ ಬೆಳೆಗಳಿಗೆ ಚಿಮ್ಮಿಸಿದರೆ ಉತ್ತಮವಾದ ಫಸಲಾಗುತ್ತದೆ ಎಂದು ಸ್ಥಳೀಯರ ವಿಶ್ವಾಸ. ಅದೇ ವಿಧವಾಗಿ ಚಿನ್ನಯ್ಯ ಗುಹೆಗಳು ಅತ್ಯಂತ ಸಮೀಪದಲ್ಲಿಯೇ ಇದೆ. ಇಲ್ಲಿ ಬೇಸಿಗೆ ಕಾಲದಲ್ಲಿಯೂ ಕೂಡ ನೀರು ಸುರಿಯುತ್ತದೆ ಎಂತೆ.

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಚಪ್ಪಾಳೆ ಹೊಡೆದರೆ ನೀರು ಬರುವ ವಿಚಿತ್ರ ಪ್ರದೇಶವಿದು..!

ಭಯಂಕರವಾದ ಬರಗಾಲದ ಕಾಲದಲ್ಲಿಯೂ ಕೂಡ ಈ ನೀರಿನ ಬುಗ್ಗೆ ಬತ್ತಿ ಹೋಗಿಲ್ಲ ಎಂದು ಸ್ಥಳೀಯರು ಹಾಗು ಗಿರಿಜನರು ಹೇಳುತ್ತಾರೆ. ಈ ದೇವರ ಸಮೀಪದಲ್ಲಿರುವ ಒಂದು ಬಂಡೆ ಕೂಡ ಎಷ್ಟೋ ಪ್ರಸಿದ್ಧಿಯನ್ನು ಹೊಂದಿದೆ. ಮನಸ್ಸಿನಲ್ಲಿ ತಮ್ಮ ಕೋರಿಕೆಗಳನ್ನು ಕೋರಿಕೊಂಡು ಅಲ್ಲಿನ ಕಲ್ಲಿನ ಬಂಡೆಯನ್ನು ಸುಲಭವಾಗಿ ಎತ್ತಿದರೆ ಆ ಕೆಲಸವು ಆಗುತ್ತದೆ ಎಂದು, ಆ ಬಂಡೆ ಕಲ್ಲು ಎಷ್ಟೇ ಪ್ರಯತ್ನ ಮಾಡಿದರು ಬಾರದೇ ಹೋದರೆ ಆ ಕೆಲಸ ಆಗುವುದಿಲ್ಲವೆಂದೂ ನಂಬಲಾಗಿದೆ.

ಆತನು ಹೇಳಿದ ಬೆಳೆಗಳನ್ನೇ ಅಲ್ಲಿನ ಪ್ರಜೆಗಳು ಬೆಳೆಸುತ್ತಾರೆ. ಈ ವಿಚಿತ್ರವಾದ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ ಎಂದರೆ ಅದು ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗೆ. ಈ ಕಾಲಾವಧಿಯಲ್ಲಿ ಭೇಟಿ ಹಾಗು ಪ್ರಯಾಣ ಮಾಡುವುದು ಕೂಡ ಸುಲಭ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಆದಿಲಾಬಾದ್‍ಗೆ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಸೇರಿಕೊಳ್ಳಬಹುದು. ಆದಿಲಾಬಾದ್‍ನ ರೈಲ್ವೆ ನಿಲ್ದಾಣಕ್ಕೆ ನಾಂದೆಡ್, ನೆಲ್ಲೂರು, ವಿಜಯವಾಡ, ಹೈದ್ರಾಬಾದ್, ನೆಲ್ಲೂರು, ವಿಜಯವಾಡ, ಹೈದ್ರಾಬಾದ್, ಪಾಟ್ನಾ, ನಾಗ್ಪೂರ್ ಮತ್ತು ಮುಂಬೈ ಪಟ್ಟಣಗಳಿಂದ ನೇರವಾಗಿ ರೈಲ್ವೆ ಸಂಪರ್ಕವಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಹೈದ್ರಾಬಾದ್ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಸುಲಭವಾಗಿ ಟ್ಯಾಕ್ಸಿಯ ಮೂಲಕ ಈ ಗುಡ್ಡಗಳಿಗೆ ತಲುಪಬಹುದಾಗಿದೆ.