Search
  • Follow NativePlanet
Share
» »ಶಿವನು ಭೇಟೆಗಾರನಾಗಿರುವ ಪ್ರಪಂಚದ ವಿಭಿನ್ನವಾದ ಶಿವಾಲಯ ಎಲ್ಲಿದೆ ಗೊತ್ತ?

ಶಿವನು ಭೇಟೆಗಾರನಾಗಿರುವ ಪ್ರಪಂಚದ ವಿಭಿನ್ನವಾದ ಶಿವಾಲಯ ಎಲ್ಲಿದೆ ಗೊತ್ತ?

ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬ ವಿಷಯ ಶಾಸನದ ಮೂಲಕ ನಮಗೆ ತಿಳಿಯುತ್ತದೆ ಆದರೆ ದೇವಾಲಯದ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಯಾರು ನಿರ್ಮಾಣ ಮಾಡಿದರು ಎಂಬುದರ ಬಗ್ಗೆ ಮಾತ್ರ ತಿಳಿಯುವುದಿಲ್ಲ. ಆದರೆ ದೇವಾಲಯಕ್ಕೆ ಸಂಬಂಧಿಸಿದ ಮೂರ್ತಿಯು

ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬ ವಿಷಯ ಶಾಸನದ ಮೂಲಕ ನಮಗೆ ತಿಳಿಯುತ್ತದೆ ಆದರೆ ದೇವಾಲಯದ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಯಾರು ನಿರ್ಮಾಣ ಮಾಡಿದರು ಎಂಬುದರ ಬಗ್ಗೆ ಮಾತ್ರ ತಿಳಿಯುವುದಿಲ್ಲ. ಆದರೆ ದೇವಾಲಯಕ್ಕೆ ಸಂಬಂಧಿಸಿದ ಮೂರ್ತಿಯು ಉತ್ತರ ಪ್ರದೇಶದಲ್ಲಿನ ಮಥುರ ಮ್ಯೂಸಿಯಂನಲ್ಲಿ ಅದರಲ್ಲೂ ಉಜ್ಜೈನಿ ರಾಜ್ಯ ಕಾಲದಲ್ಲಿ ಬಳಸಿದ ನಾಣ್ಯದ ಮೇಲೆ ಕಾಣಿಸಿತು.

ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ವಿಭಿನ್ನವಾದ ಶಿವಲಿಂಗ ಒಂದು ನಮ್ಮ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಗುಡಿಮಲ್ಲ ಗ್ರಾಮದಲ್ಲಿ ಇದೆ. ಈ ದೇವಾಲಯವನ್ನು ಶಾತವಾಹನರು ನಿರ್ಮಾಣ ಮಾಡಿರುವುದು ಎಂದು ಗುರುತಿಸಲಾಗಿದೆ. ಇದೊಂದು ಪುರಾತನವಾದ ಶಿವಾಲಯವಾಗಿದೆ. ಇದನ್ನು ಕ್ರಿ.ಪೂ 1 ರಿಂದ 3 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ದೇವಾಲಯದ ಬಗ್ಗೆ ಪೂರ್ತಿಯಾಗಿ ವಿವರ ತಿಳಿದುಕೊಳ್ಳಬೇಕಾದರೆ ಒಮ್ಮೆ ಚಂದ್ರಗಿರಿ ಮ್ಯೂಸಿಯಂಗೆ ತೆರಳಿ ಕಾಣಬಹುದಾಗಿದೆ.

ಇದು ಪ್ರಪಂಚದಲ್ಲಿಯೇ ಎಲ್ಲಿಯೂ ಕಾಣಲಾಗದ ಶಿವಲಿಂಗವಾಗಿದೆ. ಈ ಶಿವಲಿಂಗದ ಬಗ್ಗೆ ವಿಸ್ತಾರವಾಗಿ ಲೇಖನದ ಮೂಲಕ ತಿಳಿಯೋಣ.

ಪ್ರಪಂಚದ ವಿಭಿನ್ನವಾದ ಶಿವಾಲಯ

ಪ್ರಪಂಚದ ವಿಭಿನ್ನವಾದ ಶಿವಾಲಯ

ಈ ದೇವಾಲಯದಲ್ಲಿನ ಶಿವನ್ನು ಪರಶುರಾಮೇಶ್ವರನ ಅವತಾರದಲ್ಲಿ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಶಿವನು ಲಿಂಗ ರೂಪಿಯಾಗಿರುತ್ತಾನೆ. ಆದರೆ ಈ ದೇವಾಲಯದಲ್ಲಿ ಭೇಟೆಗಾರನಾಗಿ ದರ್ಶನ ನೀಡುತ್ತಾನೆ. ದೇವಾಲಯದ ಗರ್ಭಗುಡಿಯ ಮುಖಮಂಟಪ ಸ್ವಲ್ಪ ಒಳಭಾಗದಲ್ಲಿ ಇರುತ್ತದೆ.

ವಿಶೇಷತೆ

ವಿಶೇಷತೆ

ಗರ್ಭಗುಡಿಯಲ್ಲಿ ಸ್ವಾಮಿಯು ಲಿಂಗ ರೂಪಿಯಲ್ಲದೇ ಮಾನವನ ರೂಪದಲ್ಲಿ ದರ್ಶನ ನೀಡುತ್ತಾನೆ. ಈ ಮೂರ್ತಿಯು ಕಾಪಿ ವರ್ಣದಲ್ಲಿದ್ದು ಸುಮಾರು 5 ಅಡಿ ಎತ್ತರದಲ್ಲಿದೆ.

ಪ್ರಪಂಚದ ವಿಭಿನ್ನವಾದ ದೇವಾಲಯ

ಪ್ರಪಂಚದ ವಿಭಿನ್ನವಾದ ದೇವಾಲಯ

ಪ್ರಪಂಚದಲ್ಲಿ ಎಲ್ಲಿಯೂ ಕೇಳಿರದ, ನೋಡಿರದ ಪುರುಷ ಅಂಗವನ್ನು ಹೋಲಿಕೆಯಾಗುವ ಸುಮಾರು 5 ರಿಂದ 7 ಅಡಿ ಎತ್ತರದ ಶಿವಲಿಂಗವನ್ನು ನಾವು ಕಂಡಿರಲು ಸಾಧ್ಯವಿಲ್ಲ. ಮೂರ್ತಿಯು ಬಲಗೈನಲ್ಲಿ ಕುರಿ ಮರಿಯನ್ನು ಮತ್ತು ಎಡಗೈನಲ್ಲಿ ಮಾರಣ ಹೋಮ ಶಸ್ತ್ರಗಳನ್ನು ಹೊಂದಿದ್ದಾನೆ. ಹೆಗಲ ಮೇಲೆ ವಸ್ತುವನ್ನು ಹೊಂದಿರುವ ರುದ್ರನ ಪ್ರತಿ ರೂಪವನ್ನು ಇಲ್ಲಿ ಕಾಣಬಹುದಾಗಿದೆ.

ಪ್ರಪಂಚದ ವಿಭಿನ್ನವಾದ ದೇವಾಲಯ

ಪ್ರಪಂಚದ ವಿಭಿನ್ನವಾದ ದೇವಾಲಯ

ಸ್ವಾಮಿಯ ಜಟಾಜೂಟ ತಲೆಯ ಮೇಲೆ ಇದ್ದು, ಕಿವಿಗೆ ಆನೇಕ ರಿಂಗ್‍ಗಳಂತೆ ಕಾಣುವ ಆಭರಣಗಳು, ಸೊಂಟದಿಂದ ಕಾಲಿನವರೆಗೆ ಇರುವ ವಸ್ತ್ರ ಧಾರಣವನ್ನು ಕಾಣಬಹುದಾಗಿದೆ. ರುದ್ರನ ವಸ್ತ್ರಧಾರಣವು ಗಮನಿಸಿ ಋಗ್ವೇಧ ಕಾಲದ್ದು ಎಂದು ಪುರಾತತ್ವ ಶಾಸ್ತ್ರಕಾರರು ಲೆಕ್ಕ ಹಾಕಿದ್ದಾರೆ.

ಪ್ರಪಂಚದ ವಿಭಿನ್ನವಾದ ದೇವಾಲಯ

ಪ್ರಪಂಚದ ವಿಭಿನ್ನವಾದ ದೇವಾಲಯ

ಆದರೆ ಇಂತಹ ವಿಭಿನ್ನ ಶಿಲ್ಪಗಳನ್ನು ಕೆತ್ತಿರುವ ಕಲ್ಲಿನ ಬಗ್ಗೆ ಮಾತ್ರ ಯಾವುದೇ ಸಮಾಚರಗಳು ತಿಳಿದಿಲ್ಲ. 8 ವರ್ಷಗಳಿಂದ ಪುರಾತತ್ವ ಇಲಾಖೆಯವರ ಅದೀನದಲ್ಲಿ ಈ ದೇವಾಲಯವಿದ್ದದ್ದರಿಂದ ಯಾವುದೇ ರೀತಿಯ ಪೂಜೆ ಪುನಸ್ಕಾರ ಮಾಡಲಾಗಲಿಲ್ಲ.

ಪ್ರಪಂಚದ ವಿಭಿನ್ನವಾದ ದೇವಾಲಯ

ಪ್ರಪಂಚದ ವಿಭಿನ್ನವಾದ ದೇವಾಲಯ

ಇಲ್ಲಿ ಒಬ್ಬ ಪುರಾತತ್ವ ಇಲಾಖೆಯ ಉದ್ಯೋಗಿ ಗೈಡ್ ಆಗಿ ಈ ಸ್ಥಳಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗರಿಗೆ ವಿವರವಾಗಿ ದೇವಾಲಯದ ಬಗ್ಗೆ ತಿಳಿಸುತ್ತಾನೆ.

ಚಂದ್ರಗಿರಿ ಕೋಟೆ

ಚಂದ್ರಗಿರಿ ಕೋಟೆ

ಅಷ್ಟು ದೂರ ತೆರಳಿ ಈ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಅಂದುಕೊಂಡಿರುವವರು ದೇವಾಲಯದ ಮೂಲ ವಿರಾಟನನ್ನು ಎಲ್ಲಾ ವಿಧದಲ್ಲಿಯೂ ಹೋಲುವ ಪ್ರತಿರೂಪವನ್ನು ಚಂದ್ರಗಿರಿ ಕೋಟೆಯ ಮ್ಯೂಸಿಯಂನಲ್ಲಿದೆ. ಅಲ್ಲಿಗೆ ತೆರಳಿ ನೋಡಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಗುಡಿಮಲ್ಲಂ ಸೇರಿಕೊಳ್ಳಲು ರಸ್ತೆ ಮಾರ್ಗವು ಸುಲಭವಾಗಿರುತ್ತದೆ. ಆದರೂ ಕೂಡ ಸಮೀಪದ ರೈಲ್ವೆ ಮಾರ್ಗ ಹಾಗು ವಿಮಾನ ಮಾರ್ಗದ ವ್ಯವಸ್ಥೆ ಕೂಡ ಇಲ್ಲಿ ಇದೆ.

ವಿಮಾನ ಮಾರ್ಗ

ವಿಮಾನ ಮಾರ್ಗ

ಗುಡಿಮಲ್ಲ ಸಮೀಪದಲ್ಲಿ ರೆಣಿಗುಂಟ ದೇಶಿಯ ವಿಮಾನ ನಿಲ್ದಾಣವಿದೆ. ಇಲ್ಲಿಂದ ದೇವಾಲಯಕ್ಕೆ ಸುಮಾರು 11 ಕಿ.ಮೀ ದೂರದಲ್ಲಿದೆ. ಸರ್ಕಾರಿ ಬಸ್ಸುಗಳು ಅಥವಾ ಖಾಸಗಿ ವಾಹನಗಳ ಮೂಲಕ ಸುಲಭವಾಗಿ ಗುಡಿಮಲ್ಲಗೆ ಸೇರಿಕೊಳ್ಳಬಹುದಾಗಿದೆ.

ರೈಲು ಮಾರ್ಗ

ರೈಲು ಮಾರ್ಗ

ಗುಡಿಮಲ್ಲ ಸಮೀಪದಲ್ಲಿ ರೆಣಿಗುಂಟ (11 ಕಿ.ಮೀ) ಮತ್ತು ತಿರುಪತಿ (22 ಕಿ.ಮೀ) ರೈಲ್ವೆ ಸ್ಟೇಷನ್‍ಗಳು ಇವೆ. ಈ ಊರುಗಳಿಂದ ಗುಡಿಮಲ್ಲಂ ಗ್ರಾಮಕ್ಕೆ ಸರ್ಕಾರಿ ಮತ್ತು ಖಾಸಗಿ ವಾಹಾನಗಳ ಸೌಕರ್ಯವಿದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ರೆಣಿಗುಂಟ (11 ಕಿ.ಮೀ), ತಿರುಪತಿ (22 ಕಿ.ಮೀ), ಚಿತ್ತೂರು (85 ಕಿ.ಮೀ), ಚಂದ್ರಗಿರಿ (38 ಕಿ.ಮೀ) ದಿಂದ ಗುಡಿಮಲ್ಲ ಗ್ರಾಮಕ್ಕೆ ಬಸ್ಸುಗಳ ಸೌಕರ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X