Search
  • Follow NativePlanet
Share
» »ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

ನೂತನ ತೆಲಂಗಾಣ ರಾಜ್ಯದ ಪ್ರವಾಸಿ ಸ್ಥಳಗಳು

By Vijay

ಜೂನ್ 2, 2014 ರಲ್ಲಿ ಭಾರತ ದೇಶದ ನೂತನ ಹಾಗೂ 29 ನೇಯ ರಾಜ್ಯವಾಗಿ ತೆಲಂಗಾಣ ರಾಜ್ಯವು ಸ್ಥಾಪನೆಗೊಂಡಿತು. ಒಟ್ಟಾರೆ 114,840 ಚ.ಕಿ.ಮೀ ಗಳಷ್ಟು ವಿಶಾಲವಾಗಿ ಹರಡಿರುವ ಈ ನೂತನ ರಾಜ್ಯವು ಭೌಗೋಳಿಕವಾಗಿ ದೇಶದ 12 ನೇಯ ದೊಡ್ಡ ರಾಜ್ಯವಾಗಿದ್ದು ದಕ್ಷಿಣದ ಮತ್ತೊಂದು ರಾಜ್ಯವಾದ ಆಂಧ್ರ ಪ್ರದೇಶದಿಂದ ವಿಭಜನೆಗೊಂಡು ರೂಪಿತವಾಗಿದೆ.

ಹೈದರಾಬಾದ್ ಪಟ್ಟಣವು 2014 ರಿಂದ ಅನ್ವಯಿಸುವಂತೆ ಮುಂದಿನ ಹತ್ತು ವರ್ಷಗಳ ಕಾಲ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ರಾಜಧಾನಿಯಾಗಿ ಕಾರ್ಯ ನಿರ್ವಹಿಸಲಿದೆ. ಹತ್ತು ಜಿಲ್ಲೆಗಳನ್ನು ಹೊಂದಿರುವ ತೆಲಂಗಾಣ ರಾಜ್ಯವು ಆಗ್ನೇಯಕ್ಕೆ ಆಂಧ್ರ, ಉತ್ತರಕ್ಕೆ ಮಹಾರಾಷ್ಟ್ರ, ವಾಯವ್ಯಕ್ಕೆ ಕರ್ನಾಟಕ ಹಾಗೂ ಈಶಾನ್ಯಕ್ಕೆ ಛತ್ತೀಸಗಡ್ ರಾಜ್ಯಗಳಿಂದ ಸುತ್ತುವರೆದಿದೆ. ತೆಲಂಗಾಣದ ಹಲವು ಪ್ರಮುಖ ಪ್ರದೇಶಗಳಿಗೆ ತೆರಳಲು ಅಕ್ಕ ಪಕ್ಕದ ರಾಜ್ಯಗಳಿಂದ ಬಸ್ಸುಗಳು ಹಾಗೂ ರೈಲಿನ ಉತ್ತಮ ಸಂಪರ್ಕವಿದೆ.

ಪ್ರಸ್ತುತ, ಲೇಖನವು ತೆಲಂಗಾಣ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳ ಹಲವು ಪ್ರವಾಸಿ ಆಕರ್ಷಣೆಗಳ ಕುರಿತು ನೋಟ ಚೆಲ್ಲುತ್ತದೆ.

ವಾರಂಗಲ್:

ವಾರಂಗಲ್:

ತೆಲಂಗಾಣ ರಾಜ್ಯದ ಉತ್ತರ ಭಾಗದಲ್ಲಿ ವಾರಂಗಲ್ ಜಿಲ್ಲೆಯು ಸ್ಥಿತವಿದೆ. ರಾಜ್ಯದ ರಾಜಧಾನಿ ಹೈದರಾಬಾದ್ ನಗರದಿಂದ ಕೇವಲ 80 ಕಿ.ಮೀ ದೂರದಲ್ಲಿದೆ. ವಾರಂಗಲ್ ನಲ್ಲಿ ಹಲವು ಗುರುತರವಾದ ಪ್ರವಾಸಿ ಆಕರ್ಷಣೆಗಳನ್ನು ಗಮನಿಸಬಹುದು. ಅವು ಯಾವುವೆಂದು ಮುಂದಿನ ಸ್ಲೈಡುಗಳಲ್ಲಿ ಒಂದೊಂದಾಗಿ ಓದಿ.

ಚಿತ್ರಕೃಪೆ: Adityamadhav83

ವಾರಂಗಲ್ ಕೋಟೆ, ವಾರಂಗಲ್:

ವಾರಂಗಲ್ ಕೋಟೆ, ವಾರಂಗಲ್:

13 ನೇಯ ಶತಮಾನದಿಂದ ಅಸ್ತಿತ್ವದಲ್ಲಿದ್ದ ವಾರಂಗಲ್ ಕೋಟೆಯು ಇತಿಹಾಸಪ್ರಿಯ ಪ್ರವಾಸಿಗರ ಪಾಲಿಗೆ ಅತಿ ನೆಚ್ಚಿನ ಸ್ಥಳವಾಗಿದೆ. ಪ್ರಸ್ತುತ ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯು ಒಂದು ಜನಪ್ರಿಯ ಪ್ರವಾಸಿ ಕ್ಷೇತ್ರವಾಗಿದೆ.

ಚಿತ್ರಕೃಪೆ: randhir

ಸಾವಿರ ಖಂಬಗಳ ದೇವಾಲಯ, ವಾರಂಗಲ್:

ಸಾವಿರ ಖಂಬಗಳ ದೇವಾಲಯ, ವಾರಂಗಲ್:

ವಾರಂಗಲ್ ಜಿಲ್ಲೆಯ ಹನಮಕೊಂಡ ಎಂಬ ಪಟ್ಟಣದಲ್ಲಿ ಹೆಸರುವಾಸಿಯಾದ ಸಾವಿರ ಖಂಬಗಳ ದೇವಾಲಯವನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ಕಂಡುಬರುವ ಅತಿ ಪುರಾತನ ದೇವಾಲಯಗಳಲ್ಲಿ ಇದೊಂದಾಗಿದ್ದು, ಕಾಕತಿಯರ ಶಿಲ್ಪಕಲೆಗೆ ಅತ್ಯಂತ ಹೆಸರುವಾಸಿಯಾಗಿದೆ. ಈ ದೇವಾಲಯವು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ.

ಚಿತ್ರಕೃಪೆ: Gopal Veeranala

ಭದ್ರಕಾಳಿ ದೇವಸ್ಥಾನ, ವಾರಂಗಲ್:

ಭದ್ರಕಾಳಿ ದೇವಸ್ಥಾನ, ವಾರಂಗಲ್:

ಭಾರತದಲ್ಲಿ ಕಂಡುಬರುವ ಕಾಳಿ ದೇವಿಗೆ ಸಮರ್ಪಿತವಾಗಿರುವ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ ವಾರಂಗಲ್ಲಿನ ಭದ್ರಕಾಳಿ ದೇವಸ್ಥಾನ.

ಚಿತ್ರಕೃಪೆ: Srisez

ಭದ್ರಕಾಳಿ ದೇವಸ್ಥಾನ, ವಾರಂಗಲ್:

ಭದ್ರಕಾಳಿ ದೇವಸ್ಥಾನ, ವಾರಂಗಲ್:

ಭದ್ರಕಾಳಿ ಕೆರೆಯ ದಡದಲ್ಲಿ ನೆಲೆಸಿರುವ ಈ ದೇವಸ್ಥಾನ ಸುಂದರವಾದ ಸೂರ್ಯಾಸ್ತದ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Adityamadhav83

ರಾಮಪ್ಪಾ ಗುಡಿ, ವಾರಂಗಲ್:

ರಾಮಪ್ಪಾ ಗುಡಿ, ವಾರಂಗಲ್:

ರಾಮಲಿಂಗೇಶ್ವರ ದೇವಸ್ಥಾನ ಎಂತಲೂ ಕರೆಯಲ್ಪಡುವ ರಾಮಪಾ ಗುಡಿಯು ವಾರಂಗಲ್ ಜಿಲ್ಲೆಯ ವೆಂಕಟಪುರ ತಾಲೂಕಿನಲ್ಲಿದೆ. ಶಿವನಿಗೆ ಮುಡಿಪಾದ ಈ ದೇವಸ್ಥಾನದ ಶಿಲ್ಪಿಯು ರಾಮಪ್ಪ ಎಂಬುವವನಾಗಿದ್ದರಿಂದ ನಂತರ ಇದು ರಾಮಪ್ಪ ಗುಡಿ ಎಮ್ದೆ ಪ್ರಸಿದ್ಧಿ ಪಡೆಯಿತು. ಹದಿಮೂರನೇಯ ಶತಮಾನದ ಈ ದೇವಸ್ಥಾನವು ಕಾಕತೀಯರ ಕಾಲದಲ್ಲಿ ನಿರ್ಮಾಣಗೊಂಡಿದೆ.

ಚಿತ್ರಕೃಪೆ: Ravichandrae

ಪಾಖಾಲ್ ಕೆರೆ, ವಾರಂಗಲ್:

ಪಾಖಾಲ್ ಕೆರೆ, ವಾರಂಗಲ್:

ವಾರಂಗಲ್ ಜಿಲ್ಲೆಯಲ್ಲಿರುವ ಪಾಖಾಲ್ ವನ್ಯಜೀವಿ ಅಭಯಾರಣ್ಯದಲ್ಲಿ ಈ ಸುಂದರವಾದ ಪಾಖಾಲ್ ಕೆರೆಯಿದೆ. ಇದೊಂದು ವಿಶಾಲವಾಗಿ ಹರಡಿರುವ ಕೃತಕ ಕೆರೆಯಾಗಿದ್ದು ಕಾಕತೀಯರ ದೊರೆಯಾಗಿದ್ದ ಗಣಪತಿ ದೇವನಿಂದ ಸುಮಾರು 1213 ರಲ್ಲಿ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Alosh Bennett

ಹೈದರಾಬಾದ್:

ಹೈದರಾಬಾದ್:

ತೆಲಂಗಾಣದ ರಾಜಧಾನಿ ಹಾಗೂ ರಾಜ್ಯದ ಮಾಹಿತಿ ತಂತ್ರಜ್ಞಾನದ ಪ್ರಮುಖ ಕ್ಷೇತ್ರ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿ ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: La Priz

ಚಾರ್ಮಿನಾರ್, ಹೈದರಾಬಾದ್:

ಚಾರ್ಮಿನಾರ್, ಹೈದರಾಬಾದ್:

ಚಾರ್ಮಿನಾರ್ ಹೈದ್ರಾಬಾದ್ ನ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ. ಸಾಮಾನ್ಯವಾಗಿ ಟೂರಿಸ್ಟ್ ಸ್ಪಾಟ್ ಗಳಲ್ಲಿ ವಸ್ತುಗಳ ಬೆಲೆ ದುಬಾರಿಯಾಗಿರುತ್ತದೆ. ಆದರೆ ಈ ಸ್ಥಳದಲ್ಲಿ ಮಾರುವ ವಸ್ತುಗಳ ಬೆಲೆಯೂ ಕೂಡ ನಿಮ್ಮನ್ನು ಆಕರ್ಷಿಸುವಂತಿರುವುದು ಇದರ ಮತ್ತೊಂದು ವಿಶೇಷ.

ಚಿತ್ರಕೃಪೆ: Arvind.vindhu

ಗೊಲ್ಕೊಂಡಾ ಕೋಟೆ, ಹೈದರಾಬಾದ್:

ಗೊಲ್ಕೊಂಡಾ ಕೋಟೆ, ಹೈದರಾಬಾದ್:

ಗೊಲ್ಕೊಂಡಾ ಕೋಟೆಯು ಭಾರತದ ಅತ್ಯಂತ ಮಹತ್ವದ ಕೋಟೆ ಸಂಕೀರ್ಣಗಳಲ್ಲಿ ಒಂದು. ಈ ಕೋಟೆ ತನ್ನ ಪ್ರಾಚೀನ ಸೌಂದರ್ಯದಿಂದ ಪ್ರೇಕ್ಷಕರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಬೆಟ್ಟದ ಒಂದು ಕಡೆಯಲ್ಲಿ ನೆಲೆಗೊಂಡಿದೆ ಮತ್ತು ಇತರ ಕಡೆಗಳಲ್ಲಿ ಕೋಟೆ ಸುರುಳಿಯಾಕಾರದಲ್ಲಿದೆ. ಇದರ ಸ್ಥಳ ಮತ್ತು ಆಂತರಿಕ ವಿನ್ಯಾಸದಿಂದ ಇದನ್ನು ವಿಶ್ವದ ಬೃಹತ್ ಕೋಟೆಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Shantanu86

ಬಿರ್ಲಾ ಮಂದಿರ, ಹೈದರಾಬಾದ್:

ಬಿರ್ಲಾ ಮಂದಿರ, ಹೈದರಾಬಾದ್:

ನಗರದ ಕಾಲಾ ಪಹಾಡ್ ಎಂಬಲ್ಲಿ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಲಾದ ಈ ಭವ್ಯ ದೇವಾಲಯವಿದೆ. ತಿರುಪತಿ ತಿರುಮಲ ದೇವಸ್ಥಾನದ ವೆಂಕಟೇಶ್ವರನ ವಿಗ್ರಹದ ತದ್ರೂಪ ವಿಗ್ರಹವು ಈ ಮಂದಿರದಲ್ಲಿದೆ. ಇದೊಂದು ನಗರದ ಜನಪ್ರಿಯವಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Rahul563

ಹೈಟೆಕ್ ಸಿಟಿ, ಹೈದರಾಬಾದ್:

ಹೈಟೆಕ್ ಸಿಟಿ, ಹೈದರಾಬಾದ್:

ಹೈದ್ರಾಬಾದ್ ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಸಿಟಿಯು ನಗರದ ಹೃದಯವೆಂದೆ ಹೇಳಬಹುದು. ತಾಂತ್ರಿಕತೆಯ ಹಾಗು ವಾಣಿಜ್ಯದ ಪ್ರತೀಕವಾಗಿರುವ ಈ ಪ್ರದೇಶವು ನಗರದ ವಿನೂತನ ಪ್ರತಿಷ್ಠೆಗೆ ಕಾರಣವಾಗಿದೆ.

ಚಿತ್ರಕೃಪೆ: Ranvesh

ಸಲಾರ್ ಜಂಗ್ ವಸ್ತು ಸಂಗ್ರಹಾಲಯ, ಹೈದರಾಬಾದ್:

ಸಲಾರ್ ಜಂಗ್ ವಸ್ತು ಸಂಗ್ರಹಾಲಯ, ಹೈದರಾಬಾದ್:

ಈ ವಸ್ತುಸಂಗ್ರಹಾಲಯ ವಿಶ್ವದ ಅತಿ ದೊಡ್ಡ ಪುರಾತನ ಅವಶೇಷಗಳ ಏಕ-ವ್ಯಕ್ತಿ ಸಂಗ್ರಹವಾಗಿದೆ. ಈ ಸಂಗ್ರಹಾಲಯದಲ್ಲಿ ರವಿವರ್ಮನ ಪೇಯಿಂಟಿಂಗ್ ಇದ್ದು, ಈ ಸಂಗ್ರಹಾಲಯವನ್ನು ಸಂಪೂರ್ಣವಾಗಿ ಸುತ್ತಿ ನೋಡಲು ಸಂಪೂರ್ಣವಾಗಿ ಒಂದು ದಿನ ಮೀಸಲಿಡಬೇಕಾಗುತ್ತದೆ.

ಚಿತ್ರಕೃಪೆ: Neeresh.kr

ಹುಸೈನ್ ಸಾಗರ್ ಜಲಾಶಯ, ಹೈದರಾಬಾದ್:

ಹುಸೈನ್ ಸಾಗರ್ ಜಲಾಶಯ, ಹೈದರಾಬಾದ್:

ಹಜ್ರತ್ ಹುಸೈನ್ ಷಾ ವಾಲಿ ಎಂಬುವರು ಇದನ್ನು ನಿರ್ಮಿಸಿದರು. ಇದು ನಗರದ ಹೃದಯಭಾಗದಲ್ಲಿದ್ದು , ಕೆರೆಯ ಮಧ್ಯದಲ್ಲಿರುವ ರಾಕ್ ಆಫ್ ಗಿಬ್ರಲ್ಟರ್ ಎಂದು ಕರೆಯುವ ದ್ವೀಪ ದಿಬ್ಬದಲ್ಲಿರುವ 19-ಮೀಟರ್ ಉದ್ದದ ಬುದ್ಧನ ಪ್ರತಿಮೆ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರಕೃಪೆ: Cephas 405

ಫಾಲಕ್ನುಮಾ ಅರಮನೆ, ಹೈದರಾಬಾದ್:

ಫಾಲಕ್ನುಮಾ ಅರಮನೆ, ಹೈದರಾಬಾದ್:

ಇಟಾಲಿಯನ್ ವಾಸ್ತುಶಿಲ್ಪ ನವಾಬ್ ವಿಕ್ವಾರ್ ಆಲ್-ಉಮ್ರಾರವರ ಕಲೆಯಲ್ಲಿ ಅರಳಿದ ಅರಮನೆಯಿದು. ಈ ಅರಮನೆಯನ್ನು ಇಟಾಲಿಯ ಅಮೃತ ಶಿಲೆಯಿಂದ ಕಟ್ಟಲಾಗಿದೆ. ಚಾರ್ಮಿನಾರ್ ನಿಂದ 5 ಕಿ. ಮೀ ದೂರದಲ್ಲಿ ಈ ಅರಮನೆಯಿದೆ.

ಚಿತ್ರಕೃಪೆ: Rachna 13

ಅದಿಲಾಬಾದ್:

ಅದಿಲಾಬಾದ್:

ತೆಲಂಗಾಣ ರಾಜ್ಯಕ್ಕೆ ಸೇರಿರುವ ಅದಿಲಾಬಾದ್ ಒಂದು ಪ್ರಮುಖ ಜಿಲ್ಲೆಯಾಗಿದೆ. ಪುರಾತನ ಬೌದ್ಧ ಹಾಗೂ ಜೈನ ಧರ್ಮದ ಹಲವು ಕುರುಹುಗಳನ್ನುರಾಜ್ಯದ ಉತ್ತರದ ತುದಿಯಲ್ಲಿರುವ ಈ ಜಿಲ್ಲೆಯಲ್ಲಿ ಕಾಣಬಹುದಾಗಿದ್ದು ಇತಿಹಾಸಪ್ರಿಯ ಪ್ರವಾಸಿಗರ ಪಾಲಿಗೆ ನೆಚ್ಚಿನ ತಾಣವಾಗಿದೆ.

ಚಿತ್ರಕೃಪೆ: Adityamadhav83

ಕಾವಲ್ ವನ್ಯಜೀವಿ ಅಭಯಾರಣ್ಯ, ಅದಿಲಾಬಾದ್:

ಕಾವಲ್ ವನ್ಯಜೀವಿ ಅಭಯಾರಣ್ಯ, ಅದಿಲಾಬಾದ್:

ಅದಿಲಾಬಾದ್ ಜಿಲ್ಲೆಯ ಜನ್ನಾರಾಮ ಮಂಡಲ (ತಾಲೂಕು) ದಲ್ಲಿ ಕಾವಲ್ ವನ್ಯಜೀವಿ ಅಭಯಾರಣ್ಯವು ಸ್ಥಿತವಿದೆ. ತೇಗದ ಮರಗಳಿಂದ ಶ್ರೀಮಂತವಾಗಿರುವ ಈ ಅರಣ್ಯದಲ್ಲಿ ಹುಲಿ, ಚಿರತೆ, ಬೊಗಳುವ ಜಿಂಕೆ, ವಿವಿಧ ಪಕ್ಷಿಗಳು, ಚಿಟ್ಟೆಗಳು ಹೀಗೆ ಹಲವು ವನ್ಯಜೀವ ಸಂಪತ್ತನ್ನು ಕಾಣಬಹುದು.

ಚಿತ್ರಕೃಪೆ: J.M.Garg

ಬಾಸರ ಸರಸ್ವತಿ ದೇವಾಲಯ, ಅದಿಲಾಬಾದ್:

ಬಾಸರ ಸರಸ್ವತಿ ದೇವಾಲಯ, ಅದಿಲಾಬಾದ್:

ಅದಿಲಾಬಾದ್ ಜಿಲ್ಲೆಯ ಬಾಸರ ಪಟ್ಟಣದಲ್ಲಿರುವ ಸರಸ್ವತಿ ದೇವಾಲಯವು ದೇಶದಲ್ಲೆ ಹೆಸರುವಾಸಿಯಾಗಿದೆ. ಏಕೆಂದರೆ ಈ ರೀತಿಯ ಸರಸ್ವತಿ ದೇವಿಗೆ ಮುಡಿಪಾಗಿರುವ ಏಕೈಕ ದೇವಾಲಯ ಇದಾಗಿದೆ.

ಚಿತ್ರಕೃಪೆ: Bhaskaranaidu

ನಿರ್ಮಲ, ಅದಿಲಾಬಾದ್:

ನಿರ್ಮಲ, ಅದಿಲಾಬಾದ್:

ಅದಿಲಾಬಾದ್ ಜಿಲ್ಲೆಯಲ್ಲಿರುವ ನಿರ್ಮಲ ಪಟ್ಟಣವು ಅದರ ವಿಶಿಷ್ಟವಾದ ವರ್ಣ ಕಲೆ ಹಾಗೂ ಕಟ್ಟಿಗೆಯ ಆಟಿಕೆಗಳಿಗಾಗಿ ವಿಶ್ವ ಪ್ರಖ್ಯಾತಿಯನ್ನೆ ಪಡೆದಿದೆ. ನೀವೇನಾದರೂ ಅದಿಲಾಬಾದ್ ಜಿಲ್ಲೆಗೆ ತೆರಳಿದರೆ ಅಲ್ಲಿಂದ ನಿರ್ಮಲ ಪಟ್ಟಣಕ್ಕೆ ಹೋಗಿ ಆಟಿಕೆಗಳನ್ನು ಕೊಳ್ಳಲು ಮರೆಯದಿರಿ.

ಚಿತ್ರಕೃಪೆ: Adityamadhav83

ಖಮ್ಮಂ:

ಖಮ್ಮಂ:

ತೆಲಂಗಾಣ ರಾಜ್ಯದ ಮತ್ತೊಂದು ಜಿಲ್ಲೆ ಖಮ್ಮಂ. ಖಮ್ಮಂ ಕೋಟೆ, ಭದ್ರಾಚಲಂ, ಇರವೆಂಡಿ ಹಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯ ಮುಂತಾದ ಹಲವು ಆಕರ್ಷಣೆಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Adityamadhav83

ಭದ್ರಾಚಲಂ, ಖಮ್ಮಂ

ಭದ್ರಾಚಲಂ, ಖಮ್ಮಂ

ಖಮ್ಮಂ ಜಿಲ್ಲೆಯಲ್ಲಿರುವ ಭದ್ರಾಚಲಂ ಒಂದು ಪುಣ್ಯ ಕ್ಷೇತ್ರವಾಗಿದ್ದು, ರಾಮನಿಗೆ ಮುಡಿಪಾದ ದೇವಾಲಯದಿಂದಾಗಿ ಪ್ರಖ್ಯಾತವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸ್ಥಳಕ್ಕೆ ವರ್ಷ ಪೂರ್ತಿ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Adityamadhav83

ಖಮ್ಮಂ ಕೋಟೆ, ಖಮ್ಮಂ:

ಖಮ್ಮಂ ಕೋಟೆ, ಖಮ್ಮಂ:

ಕಾಕತೀಯರು 950 ರಲ್ಲಿ ಖಮ್ಮಂ ನ ಈ ಕೋಟೆಯನ್ನು ನಿರ್ಮಿಸಿದ್ದಾರೆ. ವಿವಿಧ ರಾಜ ವಂಶಗಳ ಹಲವಾರು ದೊರೆಗಳನ್ನು ಈ ಕೋಟೆ ಕಂಡಿದೆ. ಈ ಕೋಟೆಯಲ್ಲಿ ಹಿಂದೂ ಹಾಗೂ ಮುಸ್ಲಿಮ್ ಧರ್ಮಗಳ ವಾಸ್ತುಶಿಲ್ಪದ ಪ್ರಭಾವವನ್ನು ಕಾಣಬಹುದು.

ಚಿತ್ರಕೃಪೆ: Pavithrans

ಕರೀಮ್ ನಗರ:

ಕರೀಮ್ ನಗರ:

ಹಿಂದೆ ವೇದಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದ ಹಾಗೂ ಶಾತವಾಹನರ ಪ್ರಮುಖ ಪ್ರದೇಶವಾಗಿದ್ದ ಕರೀಮ್ ನಗರ ಪ್ರಸ್ತುತ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ. ಕೆಲ ಪುಣ್ಯ ಕ್ಷೇತ್ರಗಳಿಂದಾಗಿ ಈ ಜಿಲ್ಲೆಯು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Adityamadhav83

ವೇಮುಲವಾಡಾ, ಕರೀಮ್ ನಗರ:

ವೇಮುಲವಾಡಾ, ಕರೀಮ್ ನಗರ:

ಕರೀಮ್ ನಗರ ಜಿಲ್ಲೆಯಲ್ಲಿರುವ ವೇಮುಲವಾಡಾ ತನ್ನಲ್ಲಿರುವ ರಾಜ ರಾಜೇಶ್ವರ ಸ್ವಾಮಿ ದೇವಾಲಯ ಸಂಕೀರ್ಣದಿಂದಾಗಿ ಪ್ರಖ್ಯಾತವಾಗಿದೆ. ದೇವಸ್ಥಾನದ ದೇವರು ರಾಜಣ್ಣ ಎಂತಲೆ ಪ್ರಸಿದ್ಧನಾಗಿದ್ದು ಉತ್ತರ ತೆಲಂಗಾಣ ರಾಜ್ಯದ ಅತಿ ಪ್ರಮುಖ ಧಾರ್ಮಿಕ ಕ್ಷೇತ್ರ ಇದಾಗಿದೆ.

ಚಿತ್ರಕೃಪೆ: Thakur Ajay Pal Singh

ಕಾಲೇಶ್ವರಂ, ಕರೀಮ್ ನಗರ:

ಕಾಲೇಶ್ವರಂ, ಕರೀಮ್ ನಗರ:

ಕರೀಮ್ ನಗರ ಜಿಲ್ಲೆಯ, ಮಹಾದೇವಪುರ ಮಂಡಲ (ತಾಲೂಕು) ದಲ್ಲಿರುವ ಕಾಲೇಶ್ವರಂ ಹಳ್ಳಿಯು ಕಾಲೇಶ್ವರ ಮುಕ್ತೇಶ್ವರ ದೇವಾಲಯದಿಂದಾಗಿ ಪ್ರಸಿದ್ಧಿ ಪಡೆದಿದೆ. ದೇವಾಲಯದ ವಿಶೇಷವೆಂದರೆ ಒಂದೆ ಸ್ಥಳದಲ್ಲಿ ಎರಡು ಲಿಂಗಗಳನ್ನು ಕಾಣಬಹುದಾಗಿದ್ದು ಒಂದು ಕಾಲೇಶ್ವರ ಶಿವನಾಗಿದ್ದರೆ ಇನ್ನೊಂದು ಮುಕ್ತೇಶ್ವರ ಯಮಧರ್ಮರಾಯನಾಗಿದ್ದಾನೆ.

ಚಿತ್ರಕೃಪೆ: Tallamma

ಮೆಹ್ಬೂಬ್ ನಗರ:

ಮೆಹ್ಬೂಬ್ ನಗರ:

ಹಿಂದೆ ಪಾಲಮೂರು ಎಂದು ಕರೆಯಲ್ಪಡುತ್ತಿದ್ದ ಮೆಹ್ಬೂಬ್ ನಗರ ಜಿಲ್ಲೆಯು ಪ್ರಸ್ತುತ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ. ಹಲವು ಗುರುತರವಾದ ಪ್ರವಾಸಿ ತಾಣಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Adityamadhav83

ಅಲಂಪೂರ, ಮೆಹ್ಬೂಬ್ ನಗರ:

ಅಲಂಪೂರ, ಮೆಹ್ಬೂಬ್ ನಗರ:

ಮೆಹ್ಬೂಬ್ ನಗರ ಜಿಲ್ಲೆಯಲ್ಲಿರುವ ಅಲಂಪೂರ ಪಟ್ಟಣವು ಸಂಗಮೇಶ್ವರ ದೇವಾಲಯಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Suman Amarnath

ಉಮಾಮಹೇಶ್ವರಂ ಆಚಂಪೇಟ್, ಮೆಹ್ಬೂಬ್ ನಗರ:

ಉಮಾಮಹೇಶ್ವರಂ ಆಚಂಪೇಟ್, ಮೆಹ್ಬೂಬ್ ನಗರ:

ಆಚಂಪೇಟ್ ನ ಉಮಾಮಹೇಶ್ವರಂ ಶಿವನ ದೇವಸ್ಥಾನವು ಬಹು ಪ್ರಖ್ಯಾತವಾಗಿದೆ. ಇದು ಶ್ರೀಶೈಲಂನ ಉತ್ತರದ ದ್ವಾರ ಎಂದೆ ಪ್ರಸಿದ್ಧವಾಗಿದೆ. ಉಮಾಮಹೇಶ್ವರಂಗೆ ಭೇಟಿ ನೀಡದೆ ಕೇವಲ ಶ್ರೀಶೈಲಂಗೆ ಭೇಟಿ ನೀಡಿದ್ದಲ್ಲಿ ಆ ಪ್ರವಾಸ ಅಪೂರ್ಣ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Mahesh thipparthi

ನಲ್ಗೊಂಡಾ:

ನಲ್ಗೊಂಡಾ:

ನಲ್ಲಾ (ಕಪ್ಪು), ಕೊಂಡಾ (ಬೆಟ್ಟ) ಎಂಬ ಎರಡು ಪದಗಳಿಂದ ರೂಪಗೊಂಡ ನಲ್ಗೋಂಡ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ.

ಚಿತ್ರಕೃಪೆ: Adityamadhav83

ನಾಗಾರ್ಜುನ ಸಾಗರ ಆಣೆಕಟ್ಟು, ನಲ್ಗೊಂಡಾ:

ನಾಗಾರ್ಜುನ ಸಾಗರ ಆಣೆಕಟ್ಟು, ನಲ್ಗೊಂಡಾ:

ನಲ್ಗೊಂಡಾ ಜಿಲ್ಲೆಗೆ ಅಂಟಿಕೊಂಡಿರುವಂತೆ ನಾಗಾರ್ಜುನ ಸಾಗರ ಆಣೆಕಟ್ಟು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಅಷ್ಟೆ ಅಲ್ಲ, ಮೇಸನ್ರಿಯಿಂದ ನಿರ್ಮಿಸಲಾದ ಜಗತ್ತಿನ ಅತಿ ದೊಡ್ಡ ಆಣೆಕಟ್ಟು ಇದಾಗಿದೆ. ಇದರ ನಿರ್ಮಾಣದಲ್ಲಿ ಪ್ರಮುಖವಾಗಿ ಕಲ್ಲು ಹಾಗೂ ಇಟ್ಟಿಗೆಗಳನ್ನು ಬಳಸಲಾಗಿದೆ.

ಚಿತ್ರಕೃಪೆ: Sumanthk

ಪನಗಲ್, ನಲ್ಗೊಂಡಾ:

ಪನಗಲ್, ನಲ್ಗೊಂಡಾ:

ನಲ್ಗೊಂಡಾ ಪಟ್ಟಣದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಪನಗಲ್ ಒಂದು ಕಾಕತೀಯ, ರೆಡ್ಡಿ ಹಾಗೂ ವೇಲಮ ದೊರೆಗಳ ಸಮಯದಲ್ಲಿ ನಿರ್ಮಿಸಲಾದ ಹಲವು ಪುರಾತನ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿರುವುದು ಪನಗಲ್ ನ ಛಾಯಾ ಸೋಮೇಶ್ವರ ದೇವಾಲಯ.

ಚಿತ್ರಕೃಪೆ: Adityamadhav83

ಮೇಡಕ್:

ಮೇಡಕ್:

ಹಲವು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ಮೇಡಕ್ ನೂತನ ತೆಲಂಗಾಣ ರಾಜ್ಯದ ಒಂದು ಜಿಲ್ಲಾ ಪ್ರದೇಶವಾಗಿದೆ.

ಚಿತ್ರಕೃಪೆ: Adityamadhav83

ಮಂಜಿರಾ ವನ್ಯಜೀವಿ ಅಭಯಾರಣ್ಯ, ಮೇಡಕ್:

ಮಂಜಿರಾ ವನ್ಯಜೀವಿ ಅಭಯಾರಣ್ಯ, ಮೇಡಕ್:

ಮೇಡಕ್ ಜಿಲ್ಲೆಯಲ್ಲಿರುವ ಮಂಜಿರಾ ಅಭಯಾರಣ್ಯ ಹಾಗೂ ಜಲಾಶಯಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಮೂಲತಃ ಮೊಸಳೆಗಳ ಧಾಮವಾಗಿದ್ದ ಈ ತಾಣದಲ್ಲಿ ಇಂದು 70 ಕ್ಕೂ ಅಧಿಕ ಬಗೆಯ ಪಕ್ಷಿಗಳನ್ನು ಕಾಣಬಹುದು. ಅಲ್ಲದೆ, ಅಳಿವಿನಂಚಿನಲ್ಲಿರುವ ಮಗ್ಗರ್ ಎಂಬ ಮೊಸಳೆಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Ravinder Thakur

ಎಡುಪಾಳ್ಯ ವನ ದುರ್ಗಾ ಭವಾನಿ ದೇವಾಲಯ, ಮೇಡಕ್:

ಎಡುಪಾಳ್ಯ ವನ ದುರ್ಗಾ ಭವಾನಿ ದೇವಾಲಯ, ಮೇಡಕ್:

ಮೇಡಕ್ ಜಿಲ್ಲೆಯ ಪಾಪಣ್ಣಪೇಟ್ ತಾಲೂಕಿನಲ್ಲಿರುವ ಎಡುಪಾಳ್ಯ ವನ ದುರ್ಗಾ ಭವಾನಿ ದೇವಾಲಯ ಒಂದು ಸುಂದರ ಧಾರ್ಮಿಕ ಆಕರ್ಷಣೆಯಾಗಿದೆ.

ಚಿತ್ರಕೃಪೆ: Msurender

ನಿಜಾಮಾಬಾದ್:

ನಿಜಾಮಾಬಾದ್:

ನಿಜಾಮಾಬಾದ್ ನೂತನ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ. ರಾಜ್ಯದ ವಾಯವ್ಯ ಭಾಗದಲ್ಲಿ ಸ್ಥಿತವಿರುವ ಈ ಜಿಲ್ಲೆಯು 2011 ರ ಸರ್ವೇಕ್ಷಣಾ ಪ್ರಕಾರ, 7956 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ.

ಚಿತ್ರಕೃಪೆ: Adityamadhav83

ರಂಗಾರೆಡ್ಡಿ:

ರಂಗಾರೆಡ್ಡಿ:

7493 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ರಂಗಾರೆಡ್ಡಿ ಜಿಲ್ಲೆಯು ನೂತನ ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಾಗಿದೆ. ಕೆಲವು ಪ್ರವಾಸಿ ಅಕ್ಕರ್ಷಣೆಗಳಿಗೆ ಈ ಜಿಲ್ಲೆಯು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Adityamadhav83

ಅನಂತಗಿರಿ ಬೆಟ್ಟಗಳು, ರಂಗಾರೆಡ್ಡಿ:

ಅನಂತಗಿರಿ ಬೆಟ್ಟಗಳು, ರಂಗಾರೆಡ್ಡಿ:

ರಂಗಾರೆಡ್ಡಿ ಜಿಲ್ಲೆಯ ವಿಕಾರಾಬಾದ್ ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿ ಅನಂತಗಿರಿ ಬೆಟ್ಟಗಳಿರುವ ಅನಂತಗಿರಿ ಅರಣ್ಯ ಪ್ರದೇಶವನ್ನು ಕಾಣಬಹುದು. ಇದು ರಂಗಾರೆಡ್ಡಿ ಜಿಲ್ಲೆಯ ದೊಡ್ಡದಾದ ಅರಣ್ಯ ಪ್ರದೇಶವಾಗಿದೆ. ಈ ಪ್ರದೇಶದಲ್ಲಿರುವ ಅನಂತಗಿರಿ ಪದ್ಮನಾಭ ಸ್ವಾಮಿ ದೇವಾಲಯವು ಪ್ರಸಿದ್ಧವಾಗಿದೆ.

ಚಿತ್ರಕೃಪೆ: Nagaraju raveender

ಕೀಸರಗುಟ್ಟಾ, ರಂಗಾರೆಡ್ಡಿ:

ಕೀಸರಗುಟ್ಟಾ, ರಂಗಾರೆಡ್ಡಿ:

ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಕೀಸರಗುಟ್ಟದಲ್ಲಿರುವ ಶಿವ ಹಾಗೂ ಆತನ ಪತ್ನಿ ಭವಾನಿಯ ದೇವಾಲಯಕ್ಕಾಗಿ ಹೆಸರುವಾಸಿಯಾಗಿದೆ. ಹೈದರಾಬಾದ್ ಪಟ್ಟಣದಿಂದ ಸುಮಾರು 40 ಕಿ.ಮೀ ದೂರದಲ್ಲಿ ಈ ತಾಣವಿದೆ.

ಚಿತ್ರಕೃಪೆ: J.M.Garg

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more