Search
  • Follow NativePlanet
Share
» »ನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿ

ನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿ

ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ಆಹಾರದ ವಿಶೇಷತೆಗಳಿರುತ್ತವೆ. ಹಾಗೆಯೇ ಥಾಲಿಯೂ ಫೇಮಸ್ ಆಗಿರುತ್ತದೆ. ನೀವು ಸಾಮಾನ್ಯವಾಗಿ ಯಾವುದಾದರೂ ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿ ನಾರ್ಥ್ ಇಂಡಿಯನ್ ಥಾಲಿ ಹಾಗೂ ಸೌತ್ ಇಂಡಿಯನ್ ಥಾಲಿ ಬಗ್ಗೆ ಕೇಳಿರುವಿರಿ. ಒಂದೊಂದು ರಾಜ್ಯಕ್ಕೆ ಸಂಬಂಧಿಸಿದ ಥಾಲಿಯು ವಿಭಿನ್ನವಾಗಿರುತ್ತದೆ. ಎಲ್ಲದಕ್ಕೂ ಅದರದ್ದೇ ಆದ ವಿಶಿಷ್ಟ ರುಚಿ ಇರುತ್ತದೆ. ಇಂದು ನಾವು ಭಾರತದ ಕೆಲವು ರಾಜ್ಯಗಳ ಫೇಮಸ್ ಥಾಲಿಯ ಬಗ್ಗೆ ತಿಳಿಸಲಿದ್ದೇವೆ. ಇದನ್ನು ನೋಡಿದರೆ ನಿಮಗೆ ತಿನ್ನಬೇಕು ಎಂದೆನಿಸದೇ ಇರದು.

 ಹರಿಯಾಣ ಥಾಲಿ

ಹರಿಯಾಣ ಥಾಲಿ

PC: The Komeo

ಸರಳ ಹಳ್ಳಿಗಾಡಿನ ಸುವಾಸನೆಯು ಹರ್ಯಾಣದ ಊಟದಲ್ಲಿರುವತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ತುಪ್ಪ, ತಾಜಾ ಬೆಣ್ಣೆ ಮತ್ತು ಲಸ್ಸಿಗಳು ಪ್ರಮುಖವಾಗಿವೆ ಮತ್ತು ಪೌಷ್ಠಿಕಾಂಶದಿಂದ ಕೂಡಿರುವ ಮುತ್ತು ರಾಗಿ ಅಥವಾ ಬಾಜ್ರದಿಂದ ರೋಟಿ ತಯಾರಿಸುತ್ತಾರೆ. ಇಲ್ಲಿನ ಊಟವು ಪ್ರಧಾನವಾಗಿ ಸಸ್ಯಾಹಾರಿಯಾಗಿದ್ದು, ಆಲೂ ಪಾಲಾಕ್, ಹಳದಿ ಕುಂಬಳಕಾಯಿ , ಹರಿಯಾಣ ಮಿಕ್ಸ್‌ಡ್‌ ದಾಲ್‌ನ್ನು ಒಳಗೊಂಡಿರುತ್ತದೆ.
ಗೇಟ್‌ವೇ ರೆಸಾರ್ಟ್ ದಮಾಧಮ್ ಲೇಕ್, ಗುರ್‌ಗಾಂವ್‌ನಲ್ಲಿ ನೀವು ಈ ಹರಿಯಾಣ ಥಾಲಿಯನ್ನು ಸವಿಯಬಹುದು.

ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ಕಾಶ್ಮೀರಿ ಪಂಡಿತ್ ಥಾಲಿ

ಕಾಶ್ಮೀರಿ ಪಂಡಿತ್ ಥಾಲಿ

PC: Rain Rabbit

ಬ್ರಾಹ್ಮಿನಿಕ್ ಸಂಹಿತೆಗಳಿಗೆ ಅನುಗುಣವಾಗಿ, ಆದರೆ ಕಾಶ್ಮೀರಿ ಪಂಡಿತರು ಮಾಂಸವನ್ನು ಮತ್ತು ಮೀನನ್ನು ಅಪರೂಪಕ್ಕೆ ಸೇವಿಸುತ್ತಾರೆ. ಆದರೆ ಇವರು ಪದಾರ್ಥಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಆದರೆ ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಅವುಗಳಲ್ಲಿ ಮುಖ್ಯವಾಗಿ ಹಿಂಗ್, ಒಣಶುಂಠೀ , ಸೋಂಫ್‌ ಅನ್ನು ಬಳಸುತ್ತಾರೆ.
ಬೆಸ್ಟ್‌ ಕಾಶ್ಮೀರಿ ಥಾಲಿ ಸವಿಯಬೆಕಾದರೆ ಗುರ್‌ಗಾಂವ್ ನ ಮಟಮಾಲ್ ಗೆ ಹೋಗಿ

ಬೋಹರಿ ಥಾಲಿ

ಬೋಹರಿ ಥಾಲಿ

PC:Manisha Dhingra

ಬೋಹರಿ ಎನ್ನುವುದು ಶಿಯಾ ಮುಸ್ಲಿಂ ಸಮುದಾಯದ ಒಂದು ಸಣ್ಣ ಉಪ-ಪಂಗಡವಾಗಿದ್ದು ಯೆಮೆನ್ನಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಮಧ್ಯಪ್ರಾಚ್ಯದ ಕಾಲದಲ್ಲಿ ಭಾರತಕ್ಕೆ ಬಂದವರಾಗಿದ್ದಾರೆ. ಇವರು ಒಂದು ದೊಡ್ಡ ತಟ್ಟೆಯಲ್ಲಿ ಭೋಜನ ಮಾಡುತ್ತಾರೆ ಇದನ್ನು ತಾಲ್ ಎನ್ನಲಾಗುತ್ತದೆ. ಈ ತಟ್ಟೆಯಲ್ಲಿ ವಿವಿಧ ಭಕ್ಷ್ಯಗಳನ್ನು ಇಡಲಾಗುತ್ತದೆ. ಖಾರ, ಸಿಹಿ, ಮುಖ್ಯ ವ್ಯಂಜನವನ್ನು ಒಡಲಾಗುತ್ತದೆ. ಖಾರಾದಲ್ಲಿ ಮಟನ್ ಖೀಮಾ ಸಮೋಸಾಸ್, ಹೊಗೆಯಾಡಿಸಿದ ಮೃದುವಾದ ಕುರಿಮರಿ ಮತ್ತು ಸ್ಪ್ರಿಂಗ್ ಈರುಳ್ಳಿ, ಚಿಕನ್ ಶಮ್ಮಿ ಮತ್ತು ಕೆಂಪು ಮಸಾಲಾದಲ್ಲಿ ಬಹಳ ನಿಧಾನವಾಗಿ ಬೇಯಿಸಿದ ರಾನ್ ತಯಾರಿಸಲಾಗುತ್ತದೆ. ಇನ್ನು ಸಿಹಿಯಲ್ಲಿ ಮಲೈ ಖಜಾ, ಬಾಹಿರಿ ಪಫ್ ಪೇಸ್ಟ್ರಿ ತಾಜಾ ಕ್ರೀಮ್ ಮತ್ತು ತುಪ್ಪ ಮತ್ತು ಮಾವಾ ಲಾಡೆನ್ ಗಾಜರ್ ಕಾ ಹಲ್ವಾ ಸೇರಿರುತ್ತದೆ.
ಮುಂಬೈನಲ್ಲಿರುವ ಬೋಹರಿ ಕಿಚನ್‌ನಲ್ಲಿ ಇದನ್ನು ತಿನ್ನಬೇಕು.

ಕೇರಳ ಥಾಲಿ

ಕೇರಳ ಥಾಲಿ

PC: shreenathmuralidharan

ದೇವರ ಸ್ವಂತ ದೇಶದಲ್ಲಿ ವಿಶಿಷ್ಟವಾದ ಊಟ ಅಕ್ಕಿ, ತಾಜಾ ತರಕಾರಿಗಳು ಮತ್ತು ಬಹಳಷ್ಟು ತೆಂಗಿನಕಾಯಿ ಹಾಕಿ ಮಾಡಲಾಗಿರುವ ಕರಿ ಹಾಗೂ ತೆಂಗಿನ ಎಣ್ಣೆ ಬಳಸಿ ಮಾಡಿರುವ ಅಡುಗೆ ಕಾಣಸಿಗುತ್ತದೆ. ಇಲ್ಲಿನ ಅಕ್ಕಿ ವಿಶಿಷ್ಟವಾಗಿದೆ. ಸ್ಥಳೀಯ ಕೆಂಪು ಅಕ್ಕಿ ಅಥವಾ ಮಠ ಅಕ್ಕಿಯನ್ನು ಇಲ್ಲಿ ಬಳಸಲಾಗುತ್ತದೆ. ಪಚಡಿ, ಮೆಣಸಿನ ರಸಮ್ ಮತ್ತು ಉತ್ತಮ ಕುರುಕುಲಾದ ಪ್ಯಾಪಡಮ್ ಅನ್ನು ಒಳಗೊಂಡಿರುತ್ತದೆ. ಕೆಲವು ಮಸಾಲೆಯುಕ್ತ ಮಜ್ಜಿಗೆ ಅಥವಾ ಮೊಸರಿನೊಂದಿಗೆ ಊಟ ಮಾಡಬಹುದು. ಕೊನೆಗೆ ಪಾಯಸವನ್ನು ಸವಿಯಬಹುದು.

ಗೋವಬ್ ಕ್ಯಾಥೋಲಿಕ್ ಥಾಲಿ

ಗೋವಬ್ ಕ್ಯಾಥೋಲಿಕ್ ಥಾಲಿ

ಗೋವಬ್ ಕ್ಯಾಥೋಲಿಕ್ ಥಾಲಿಯು ಭಾರತೀಯ ಮತ್ತು ಪೋರ್ಚುಗೀಸ್ ಅಡುಗೆ ಶೈಲಿಗಳು ಮತ್ತು ಸುವಾಸನೆಗಳ ಮಿಶ್ರಣವಾಗಿದ್ದು, ಈ ಊಟವು ಮಾಂಸ ಮತ್ತು ಸೀ ಫುಡ್‌ನ್ನು ಹೊಂದಿದೆ. ಕಳ್ಳಿನಿಂದ ತಯಾರಿಸಲಾದ ಲೋಕಲ್ ವಿನೇಗರ್‌ನ್ನು ಆಹಾರಕ್ಕೆ ಬಳಸಲಾಗುತ್ತದೆ. ಸ್ಟಾಟರ್ಸ್‌ ರೂಪದಲ್ಲಿ ಆಂಗ್ಲೊ-ಶೈಲಿಯ ಮಸಾಲೆಯುಕ್ತ ಮಟನ್ ಚಾಪ್ಸ್ ನೀಡಲಾಗುತ್ತದೆ. ಸ್ಟೀಮ್ಡ್‌ ರೈಸ್ ಜೊತೆ ಕೋಳಿ, ಮಾಂಸ, ಮೀನಿನ ಪದಾರ್ಥ, ಹಂದಿ ಕರಿಯನ್ನೂ ನೀಡಲಾಗುತ್ತದೆ.

ಇದನ್ನು ಗೋವಾದ ಪಣಜಿಯ ಪಂಜಿಮ್‌ನಲ್ಲಿ ತಿನ್ನಬೇಕು.

ಯಾವ್ಯಾವ ರಾಜ್ಯದಲ್ಲಿ ಯಾವೆಲ್ಲಾ ಆಭರಣ ಫೇಮಸ್ ಅನ್ನೋದು ಗೊತ್ತಾ?ಯಾವ್ಯಾವ ರಾಜ್ಯದಲ್ಲಿ ಯಾವೆಲ್ಲಾ ಆಭರಣ ಫೇಮಸ್ ಅನ್ನೋದು ಗೊತ್ತಾ?

ತಮಿಳು ಸಾಥ್ವಿಕ ಥಾಲಿ

ತಮಿಳು ಸಾಥ್ವಿಕ ಥಾಲಿ

PC: leliebloem

ಸಾತ್ವಿಕ ಥಾಲಿಯು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಕೊಬ್ಬಿನಾಂಶವನ್ನು ಹೊಂದಿಲ್ಲದ ಆಹಾರವಾಗಿದೆ. ಸರಳ ಆಹಾರವನ್ನು ಹೊಂದಿದ್ದು ಆರೋಗ್ಯದ ದೃಷ್ಠಿಯಿಂದ ಉತ್ತಮವಾಗಿದೆ. ಸಲಾಡ್ , ಉಸುಲಿ, ಕ್ಯಾಬೆಜ್ ಫ್ರೈ, ಲೆಮೆನ್‌ ರೈಸ್‌ನ್ನು ಒಳಗೊಂಡಿದೆ.

ಪಂಜಾಬಿ ಥಾಲಿ

ಪಂಜಾಬಿ ಥಾಲಿ

PC:kellyv27

ಪರಾಟ ಹಾಗೂ ತುಪ್ಪವಿಲ್ಲದೆ ಪಂಜಾಬಿ ಥಾಲಿ ಸಂಪೂರ್ಣವಾಗೋದೇ ಇಲ್ಲ. ಸಾಕಷ್ಟು ತಾಜಾ ಹಸಿರು ತರಕಾರಿಗಳು, ಉಪ್ಪಿನಕಾಯಿ ಮತ್ತು ವಿವಿಧ ಬಗೆಯ ಡೈರಿ ಉತ್ಪನ್ನಗಳು ಪಂಜಾಬಿ ಥಾಲಿಯಲ್ಲಿ ಇದ್ದೇ ಇರುತ್ತದೆ. ಪಂಜಾಬಿ ಥಾಲಿಯಲ್ಲಿ ಪ್ರೀತಿಪಾತ್ರ ಕಡೈ ಪನೀರ್ ಬಹಳ ಫೇಮಸ್ ಆಗಿದೆ. ರೊಟ್ಟಿ ಜೊತೆಗೆ ಪಾಲಕ್ ದಾಲ್‌ ಕಾಂಬಿನೇಶನ್ ಉತ್ತಮವಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X