Search
  • Follow NativePlanet
Share
» »ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!

ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಮಂದಿರವಿದೆ. ಆದರೆ ಪಾಕಿಸ್ತಾನ ಹೆದರುವಂತಹ ಮಂದಿರವೊಂದು ನಮ್ಮ ದೇಶದಲ್ಲಿದೆ ಎನ್ನುವುದು ನಿಮಗೆ ಗೊತ್ತಾ? 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ನಂತರವಂತೂ ಈ ಮಂದಿರವು ದೇಶ ವಿದೇಶಗಳಲ್ಲಿ ತನ್ನ ಚಮತ್ಕಾರದಿಂದಾಗಿ ಪ್ರಸಿದ್ದಿ ಹೊಂದಿದೆ. ಪಾಕಿಸ್ತಾನ ಇಂದಿಗೂ ಈ ಮಂದಿರದ ಹೆಸರನ್ನು ಕೇಳಿದ್ರೆ ಹೆದರುತ್ತಂತೆ. ಹಾಗಾದ್ರೆ ಆ ಮಂದಿರ ಯಾವುದು? ಅದು ಎಲ್ಲಿದೆ ಅನ್ನೋದನ್ನು ತಿಳಿಯೋಣ.

ಎಲ್ಲಿದೆ ಈ ಮಂದಿರ?

ಎಲ್ಲಿದೆ ಈ ಮಂದಿರ?

PC:Suresh Godara

ಈ ವಿಶೇಷ ಮಂದಿರ ಇರುವುದು ರಾಜಸ್ತಾನದಲ್ಲಿ. ರಾಜಸ್ತಾನದ ಜೈಸಲ್ಮರ್‌ನಿಂದ 130 ಕಿ.ಮೀ ದೂರದಲ್ಲಿರುವ ತಾನೋಟ್ ಮಾತ ಮಂದಿರವು 1200 ವರ್ಷ ಹಳೆಯದು ಎನ್ನಲಾಗುತ್ತದೆ.

ಈ ದೇವಾಲಯದ ಬಾಗಿಲು ತೆರೆದ ಮೇಲೆ ಇಲ್ಲಿನ ಊರಿನ ಜನರು ಒಗ್ಗರಣೆ ಹಾಕುವಂತಿಲ್ಲ !

ಭಾರತ-ಪಾಕಿಸ್ತಾನ ಯುದ್ಧ

ಭಾರತ-ಪಾಕಿಸ್ತಾನ ಯುದ್ಧ

PC: Abhinayrathore

ಪಾಕಿಸ್ತಾನಿ ಸೇನೆಯು ಎಸೆದ 3000 ಬಾಂಬ್‌ಗಳೂ ಈ ದೇವಾಲಯವನ್ನು ಏನು ಮಾಡಲು ಆಗಲಿಲ್ಲ. 450 ಬಾಂಬ್‌ಗಳು ಒಡೆದೇ ಇಲ್ಲ. ಈ ಬಾಂಬ್‌ ಈಗಲೂ ಆ ದೇವಸ್ಥಾನದ ಬಳಿಯ ಸಂಗ್ರಹಾಲಯದಲ್ಲಿ ಪ್ರವಾಸಿಗರಿಗೆ ಕಾಣಸಿಗುತ್ತದೆ.

 ಸೀಮಾ ಸುರಕ್ಷಾ ಬಲ

ಸೀಮಾ ಸುರಕ್ಷಾ ಬಲ

PC: Suresh Godara

1965ರ ಯುದ್ಧದ ನಂತರ ಈ ಯುದ್ಧದ ನಂತರ ಮಂದಿರದ ಜವಾಬ್ದಾರಿಯನ್ನು ಸೀಮಾ ಸುರಕ್ಷಾ ಪಡೆ ವಹಿಸಿಕೊಂಡಿತು. ತನೋಟ್ ಮಾತಾ ಮಂದಿರದಲ್ಲಿ ಪ್ರತಿವರ್ಷ ನವರಾತ್ರಿಯಂದು ಎರಡು ಬಾರಿ ಉತ್ಸವ ನಡೆಯುತ್ತದೆ. ಪ್ರತಿದಿನನ ಬೆಳಗ್ಗೆ ಹಾಗೂ ಸಂಜೆ ಪೂಜೆ ನಡೆಯುತ್ತದೆ.

ಚಿಕ್ಕಮಗಳೂರಿನಲ್ಲಿದ್ದಾಳೆ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ

ಆವಾಡ್ ಮಾತಾ

ಆವಾಡ್ ಮಾತಾ

PC: Suresh Godara

ತನೋಟ್‌ ಮಾತಾವನ್ನು ಆವಾಡ್ ಮಾತಾ ಎನ್ನಲಾಗುತ್ತದೆ. ಹಿಂಗ್ಲಾಜ್ ಮಾತೆಯ ರೂಪವಾಗಿದ್ದಾಳೆ. ಇದು ಬಹಳ ಶಕ್ತಿ ಶಾಲಿ ದೇವಿ, ಬೇಡಿಕೆಯನ್ನು ಈಡೇರಿಸುತ್ತಾಳೆ. ಆಕೆಯ ಆಶಿರ್ವಾದ ಯಾವಾಗಲೂ ನಮ್ಮ ತಲೆ ಮೇಲೆ ಇದೆ. ಒಂದು ವಿಶೇಷ ಶಕ್ತಿ ವೈರಿಗಳಲ್ಲಿ ಸೆಣಸಾಡಲು ಶಕ್ತಿ ನೀಡುತ್ತದೆ ಎನ್ನುವುದು ಸೀಮಾ ಸುರಕ್ಷಾ ಬಲದ ಸೈನಿಕರ ಅಭಿಪ್ರಾಯ.

ವಿಶ್ರಾಮ ಗೃಹ

ವಿಶ್ರಾಮ ಗೃಹ

PC:Nagarjun Kandukuru

ಈ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರವಾಸಿಗರಿಗೆ ಊಟ ಹಾಗೂ ವಿಶ್ರಾಮ ಗೃಹ ಕೂಡಾ ಇದೆ. ವಿಶ್ರಾಮ ಗೃಹದಲ್ಲಿ ತಂಗಲು ಬರುವವರಲ್ಲಿ ಸರಿಯಾದ ಐಡಿ ಪ್ರೂಫ್ ಇದ್ದರಷ್ಟೇ ರಾತ್ರಿ ತಂಗಲು ಅವಕಾಶ ನೀಡಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X