Search
  • Follow NativePlanet
Share
» »ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..ಯಾಕೆ?

ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..ಯಾಕೆ?

ಕೇರಳದಲ್ಲಿರುವ ಈ ಶಿವನ ದೇವಸ್ಥಾನದಲ್ಲಿ ಮಹಿಳೆಯರಿಗೆ ಕೇವಲ ರಾತ್ರಿಯ ಹೊತ್ತು ಮಾತ್ರ ಪ್ರವೇಶವಂತೆ. ಅದೂ ಕೂಡಾ ಸಾಯಂಕಾಲ 7.15 ರ ಪೂಜೆಯ ನಂತರವೇ ಮಹಿಳೆಯರು ದೇವಸ್ಥಾನದ ಒಳಗೆ ಹೋಗಬಹುದು. ಈ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದೂ ಆಗಿದೆ. ಜೊತೆಗೆ ಜ್ಯೋತಿರ್ಲಿಂಗಗಳಲ್ಲಿಯೂ ಒಂದಾಗಿದೆ.

ಎಲ್ಲಿದೆ ಈ ದೇವಸ್ಥಾನ?

ಎಲ್ಲಿದೆ ಈ ದೇವಸ್ಥಾನ?

ಕೇರಳದ ಕಣ್ಣೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿ ತಾಲಿಪರಂಬದ ಶ್ರೀ ರಾಜರಾಜೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನವು ಶಿವನಿಗೆ ಮೀಸಲಾಗಿರುವ ದೇವಾಲಯ ಎನ್ನಲಾಗಿದೆ. ಈ ದೇವಸ್ಥಾನವನ್ನು ನಂತರ ಪರಶುರಾಮ ನವೀಕರಿಸಿದನು ಎನ್ನಲಾಗುತ್ತದೆ.

ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!

ರಾಜರಾಜೇಶ್ವರ ಎಂದು ಕರೆಯುತ್ತಾರೆ

ರಾಜರಾಜೇಶ್ವರ ಎಂದು ಕರೆಯುತ್ತಾರೆ

108 ಶಿವ ಕ್ಷೇತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತದೆ. ಇದು ಶಕ್ತಪೀಠಗಳಲ್ಲಿ ಒಂದಾಗಿದೆ. ಸತಿಯ ತಲೆ ಈ ಜಾಗದಲ್ಲಿ ಬಿದ್ದಿರುವುದು ಎನ್ನಲಾಗುತ್ತದೆ. ಇಲ್ಲಿ ಶಿವನನ್ನು ರಾಜರಾಜೇಶ್ವರ ಎಂದು ಕರೆಯುತ್ತಾರೆ. ಅಂದರೆ ರಾಜರುಗಳ ರಾಜ. ಚಕ್ರವರ್ತಿಗಳು ಪೆರುಂಚೆಲ್ಲೂರಪ್ಪನ್ ಅಥವಾ ತಂಪುರಾನ್ ಎನ್ನುತ್ತಾರೆ. ಇಲ್ಲಿರುವ ಶಿವಲಿಂಗವನ್ನು ಜ್ಯೋತಿರ್ಲಿಂಗಗಳಲ್ಲಿ ಒಂದು ಎನ್ನಲಾಗುತ್ತದೆ. ಈ ದೇವಾಲಯವು ತನ್ನ ವಿಶಿಷ್ಠ ಆಚರಣೆಯಿಂದಾಗಿ ಪ್ರಸಿದ್ಧಿ ಹೊಂದಿದೆ.

ಶ್ರೀರಾಮ ಶಿವನನ್ನು ಪೂಜಿಸಿದ್ದು ಇಲ್ಲೆ

ಶ್ರೀರಾಮ ಶಿವನನ್ನು ಪೂಜಿಸಿದ್ದು ಇಲ್ಲೆ

ಶ್ರೀರಾಮ ಲಂಕೆಯಿಂದ ಹಿಂದಿರುಗುವಾಗ ಇಲ್ಲಿ ನಿಂತು ಶಿವನನ್ನು ಪೂಜಿಸಿದ್ದ ಎನ್ನಲಾಗುತ್ತದೆ. ಹಾಗಾಗಿ ಇಂದಿಗೂ ನಮಸ್ಕಾರ ಮಂಟಪದ ಬಳಿ ಭಕ್ತರಿಗೆ ಹೋಗಲು ಅವಕಾಶ ನೀಡಲಾಗುವುದಿಲ್ಲ. ಈ ದೇವಾಲಯವು ಹೆಚ್ಚಿನ ಸಂಪ್ರದಾಯವನ್ನು ಹೊಂದಿದೆ. ಇಲ್ಲಿ ಹಗಲಿನಲ್ಲಿ ಮಹಿಳೆಯರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಪುರುಷರು ಹಗಲು ಹೊತ್ತಿನಲ್ಲೂ ದೇವಸ್ಥಾನಕ್ಕೆ ಪ್ರವೇಶಿಸಬಹುದು. ಆದರೆ ಮಹಿಳೆಯರು ಸಾಯಂಕಾಲದ ಪೂಜೆಯ ನಂತರವೇ ದೇವಸ್ಥಾನದ ಒಳಗೆ ಪ್ರವೇಶಿಸಬಹುದು.

ಸಂಜೆಯ ಪೂಜೆಯ ಬಳಿಕವೇ ಮಹಿಳೆಯರಿಗೆ ಪ್ರವೇಶ

ಸಂಜೆಯ ಪೂಜೆಯ ಬಳಿಕವೇ ಮಹಿಳೆಯರಿಗೆ ಪ್ರವೇಶ

ಸಂಜೆ 7.15ರ ಪೂಜೆಯ ನಂತರವೇ ಮಹಿಳೆಯರಿಗೆ ಇಲ್ಲಿ ಪ್ರವೇಶ. ಸಂಜೆಯ ಪೂಜೆಯ ಬಳಿಕ ಶಿವನು ಪಾರ್ವತಿ ಜೊತೆಗಿರುತ್ತಾನೆ. ಮಹಿಳೆಯರು ದೇವಾಲಯದೊಳಕ್ಕೆ ಪ್ರವೇಶಿಸಲು ಇದೇ ಸರಿಯಾದ ಸಮಯ. ಹಾಗೂ ಈ ಸಂದರ್ಭ ಶಿವನ ಜೊತೆಗೆ ಪಾರ್ವತಿಯನ್ನೂ ಪೂಜಿಸಬಹುದು ಎನ್ನಲಾಗುತ್ತದೆ.

ಬಿಲ್ವಪತ್ರೆ ಅರ್ಪಿಸುವುದಿಲ್ಲ

ಬಿಲ್ವಪತ್ರೆ ಅರ್ಪಿಸುವುದಿಲ್ಲ

ಉಳಿದ ಶಿವನ ದೇವಾಲಯದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ಆದರೆ ಈ ದೇವಸ್ಥಾನದಲ್ಲಿ ತುಳಸಿ ಎಲೆಯನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಸಾಮಾನ್ಯವಾಗಿ ಶಿವನನ್ನು ಪೂಜಿಸಲು ಸೋಮವಾರ ಉತ್ತಮವಾದ ದಿನ ಎನ್ನಲಾಗುತ್ತದೆ. ಆದರೆ ಇಲ್ಲಿ ಮಾತ್ರ ಬುಧವಾರ ಶಿವನನ್ನು ಪೂಜಿಸಿದರೆ ಒಳ್ಳೆಯದು ಎನ್ನಲಾಗುತ್ತದೆ. ಇತರ ದೇವಸ್ಥಾನಗಳಲ್ಲಿ ಇರುವಂತೆ ಇಲ್ಲಿ ಕೊಡಿಮರ ಅಥವಾ ಧ್ವಜ ಇಲ್ಲ. ವಾರ್ಷಿಕ ಉತ್ಸವ ನಡೆಯುವುದಿಲ್ಲ.

ದರ್ಶನ ಸಮಯ

ದರ್ಶನ ಸಮಯ

ಈ ದೇವಸ್ಥಾನವು ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8.30ರ ವರೆಗೆ ದರ್ಶನಕ್ಕಾಗಿ ತೆರೆದಿರುತ್ತದೆ. 5 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಈ ದೇವಸ್ಥಾನದೊಳಗೆ ಪ್ರವೇಶವಿಲ್ಲ.

ಪ್ಯಾಂಟ್ ಶರ್ಟ್ ಧರಿಸುವಂತಿಲ್ಲ

ಪ್ಯಾಂಟ್ ಶರ್ಟ್ ಧರಿಸುವಂತಿಲ್ಲ

ದೇವಸ್ಥಾನದ ಒಳಗೆ ಪ್ರವೇಶಿಸಲು ವಸ್ತ್ರ ಸಂಹಿತೆಯನ್ನು ಅಳವಡಿಸಲಾಗಿದೆ. ಇಲ್ಲಿ ಪುರುಷರು ಕೇವಲ ಧೋತಿ ಧರಿಸಬೇಕು. ಶರ್ಟ್ ಪ್ಯಾಂಟ್ ಧರಿಸುವಂತಿಲ್ಲ. ಮಹಿಳೆಯರು ಕೇವಲ ಸೀರೆ ಅಥವಾ ಚೂಡಿದಾರ ಧರಿಸಿ ದೇವಸ್ಥಾನದ ಒಳಗೆ ಪ್ರವೇಶಿಸಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X