Search
  • Follow NativePlanet
Share
» »ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ

ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ

By Manjula Balaraj Tantry

ನಯನ ಮನೋಹರ ಪ್ರಕೃತಿ ದೃಶ್ಯವನ್ನು ಹೊಂದಿರುವ ಹಿಮಾಚಲಪ್ರದೇಶದ ಪಟ್ಟಣವಾದ ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ , ನೀವು ದೆಹಲಿಯಲ್ಲಿರುವವರಾದಲ್ಲಿ, ಇಲ್ಲಿಯ ಕೆಲವು ಸ್ಥಳಗಳು ನಿಮ್ಮನ್ನು ತಾಜಾಗೊಳಿಸುತ್ತವೆ ಆದುದರಿಂದ ಇಲ್ಲಿರುವವರಿಗೆ ಭಯವಿಲ್ಲ. ಹೌದು ದೆಹಲಿಯಲ್ಲಿ ನಿಮ್ಮನ್ನು ಪುನಶ್ಚೇತನಗೊಳಿಸುವ ಕೆಲವು ರಜಾದಿನಗಳನ್ನು ಕಳೆಯುವ ತಾಣಗಳಿಂದ ಸುತ್ತುವರೆದಿದೆ.

ಅಂತಹದೇ ಒಂದು ಪರಿಶುದ್ದವಾದ ಪಟ್ಟಣಗಳ ಸಾಲಿನಲ್ಲಿ ಹಿಮಾಚಲ ಪ್ರದೇಶದ ಸುಂದರ ರಾಜ್ಯದಲ್ಲಿರುವ ರೋಹರು ಕೂಡಾ ಒಂದಾಗಿದ್ದು ಇಲ್ಲಿಗೆ ಯಾವುದೇ ವಾಣಿಜ್ಯೀಕರಣದ ಗಾಳಿಯೂ ಇಲ್ಲಿಗೆ ಇನ್ನೂ ಸೋಕಿಲ್ಲ.

1. ಎಲ್ಲಿದೆ ರೋಹರು?

1. ಎಲ್ಲಿದೆ ರೋಹರು?

PC: Vivekdewanta

ಪಬ್ಬಾರ್ ನದಿಯ ದಡದಲ್ಲಿ ನೆಲೆಸಿರುವ ರೋಹರು ದೆಹಲಿಯಿಂದ 438 ಕಿಮೀ ದೂರದಲ್ಲಿದೆ ಮತ್ತು ಶಿಮ್ಲಾದಿಂದ 115 ಕಿಮೀ ದೂರದಲ್ಲಿದೆ. ರೋಹರೂ ಗೆ ಪ್ರವಾಸ ಮಾಡುವುದರ ಮೂಲಕ ಒಂದು ಹೊಸ ಪ್ರಯತ್ನವನ್ನು ಕೈಗೊಳ್ಳಿ. ಈ ನಗರವು ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕೆಲವು ಮೀನುಗಳನ್ನು ಹಿಡಿಯುವುದಲ್ಲದೆ ಈ ಸುಂದರ ನಗರದ ಪ್ರಕೃತಿಯ ಸೌಂದರ್ಯವನ್ನು ಆನಂದಿಸಿ.

2. ರೋಹರೂಗೆ ಭೇಟಿ ಕೊಡಲು ಸೂಕ್ತವಾದ ಸಮಯ

2. ರೋಹರೂಗೆ ಭೇಟಿ ಕೊಡಲು ಸೂಕ್ತವಾದ ಸಮಯ

PC: Bureau of Land Management

ಮಾರ್ಚ್ ನಿಂದ ಜೂನ್ ವರೆಗಿನ ತಿಂಗಳುಗಳು ರೋಹರು ಗೆ ಭೇಟಿ ಕೊಡಲು ಉತ್ತಮವಾದ ಸಮಯವಾಗಿದೆ. ಈ ಸಮಯದಲ್ಲಿ ಬೇಸಿಗೆಯ ತಾಪಮಾನದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮರಗಟ್ಟಿಸುವ ಚಳಿಯುಕ್ತವಾದ ವಾತಾವರಣವನ್ನು ಮೆಚ್ಚುವವರಾದ ನೀವು ರೋಹರೂವನ್ನು ನವಂಬರ್ ತಿಂಗಳಿನಿಂದ ಜನವರಿಗೆ ಚಳಿಗಾಲದಲ್ಲಿ ಭೇಟಿ ಕೊಡುವುದು ಸೂಕ್ತ.

3. ದೆಹಲಿಯಿಂದ ರೋಹರೂವಿಗೆ ಮಾರ್ಗ

3. ದೆಹಲಿಯಿಂದ ರೋಹರೂವಿಗೆ ಮಾರ್ಗ

ಮಾರ್ಗ 1: ಡಾ ಎನ್ ಎಸ್ ಹಾರ್ದಿಕಾರ್ ಮಾರ್ಗ-ರಾ.ಹೆ9- ರಾ.ಹೆ 44- ಕುರುಕ್ಷೇತ್ರ - ಅಂಬಾಲ- ಚಂಡೀಗಢ ಎಕ್ಸ್ ಪ್ರೆಸ್ ವೇ- ರಾ.ಹೆ5- ಚಂಡೀಗಢ- ರಾಜ್ಯಹೆದ್ದಾರಿ H2, ರಾಜ್ಯಹೆದ್ದಾರಿH6- ತಿಯಾಗ್- ಹಟ್ಕೋಟಿ- ರೊಹರೂ ರಸ್ತೆ- ಮಾಲ್ ರಸ್ತೆ- ರೋಹರೂ( 10ಗಂ 51 ನಿಮಿಷ- 438 ಕಿ,ಮೀ)

ಮಾರ್ಗ 2: ಡಾ ಎನ್ ಎಸ್ ಹಾರ್ದಿಕಾರ್- ರಾ.ಹೆ9- ರಾ.ಹೆ44- ರಾಜ್ಯಹೆದ್ದಾರಿ12- ಸಹಾರನ್ಪುರ್- ದೆಹಲಿ ರಸ್ತೆ- ತಿಯೋಗ್- ಹಾಟ್ಕೋಟಿ- ರೋಹರೂ ರಸ್ತೆ- ರೋಹ್ರಿ-ಸುಂಗ್ರಿ-ರಾಂಪುರ್ ರಸ್ತೆ- ಮಾಲ್ ರಸ್ತೆ- ರೋಹರೂ(12 ಗಂ 32ನಿಮಿಷ- 426 ಕಿ.ಮೀ)

ಮಾರ್ಗ 3: ಡಾ. ಎನ್.ಎಸ್. ಹಾರ್ಡಿಕರ್ ಆರ್ ಡಿ - ರಾ.ಹೆ 9 - ಎನ್ ಎಚ್ 34 - ಉತ್ತರ ಪ್ರದೇಶ - ಅಪ್ಪರ್ ಗಂಗಾ ಕೆನಾಲ್ ರಸ್ತೆ - ರಾ.ಹೆ 709ಎ - ರಾ.ಹೆ 44 - ಅಂಬಾಲಾ-ಚಂಡೀಗಢ ಎಕ್ಸ್ಪ್ರೆಸ್ ವೇ - ರಾ.ಹೆ 5 - ರಾಜ್ಯ ಹೆ. 2 - ರಾಜ್ಯ ಹೆ. 6 - ಮಾಲ್ - ರೋಹ್ರು (13 ಎಚ್ - 501 ಕಿಮೀ)

ಮಾರ್ಗ 1 ರಲ್ಲಿ ಪ್ರಯಾಣ ಮಾಡಿದರೆ ಅತ್ಯಂತ ವೇಗವಾಗವಾಗಿ ಮತ್ತು ಕಡಿಮೆ ಕಾಲಾವಕಾಶವನ್ನು ತೆಗೆದುಕೊಳ್ಳುವುದರಿಂದ ಇದರಲ್ಲಿ ಪ್ರಯಾಣ ಮಾಡುವುದು ಹೆಚ್ಚು ಸೂಕ್ತ ವಾದುದಾಗಿದೆ ಮಾರ್ಗ 1 ರಲ್ಲಿ ಪ್ರಯಾಣ ಮಾಡುವಾಗ ಈ ಕೆಲವು ಸ್ಥಳಗಳಲ್ಲಿ ನೀವು ವಿರಾಮ ಪಡೆಯಬಹುದಾಗಿದೆ.

4. ಕುರುಕ್ಷೇತ್ರ

4. ಕುರುಕ್ಷೇತ್ರ

PC: OjAg

ಕುರುಕ್ಷೇತ್ರ ದೆಹಲಿಯಿಂದ 154 ಕಿ.ಮೀ ಅಂತರದಲ್ಲಿದೆ, ಪಾಂಡವರು ಮತ್ತು ಕೌರವರ ಯುದ್ದ ಈ ಸ್ಥಳದಲ್ಲಿ ನಡೆದ ಕಾರಣದಿಂದಾಗಿ ಈ ಸ್ಥಳವು ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಈ ಸ್ಥಳದಲ್ಲಿಯೇ ಭಗವಾನ್ ಕೃಷ್ಣನು ಅರ್ಜುನನನ್ನು ಸಂಧಿಗ್ದತೆಯ ಸಮಯದಲ್ಲಿ ಯುದ್ದವನ್ನು ಮುನ್ನಡೆಸಿಕೊಂಡು ಹೋಗಲು ಉಪದೇಶಿಸಿರುವ ಸ್ಥಳವೂ ಆಗಿದೆ. ಕುರುಕ್ಷೇತ್ರದಲ್ಲಿ ಒಮ್ಮೆ ವಿರಾಮ ಪಡೆದು ಇಲ್ಲಿಯ ಕೆಲವು ದೇವಾಲಯಗಳಾದ ಭದ್ರಕಾಳಿ ದೇವಾಲಯ, ಸ್ಥಾನೇಶ್ವರ್ ಮಹಾದೇವ ದೇವಾಲಯ ಮುಂತಾದ ದೇವಾಲಯಗಳಿಗೆ ಭೇಟಿ ಕೊಡಿ ಅಥವಾ ಸುಂದರವಾದ ಬ್ರಹ್ಮ ಸರೋವರದಲ್ಲಿ ಸ್ವಲ್ಪ ಸಮಯ ಕಳೆಯಿರಿ.

5. ಚಂಡೀಗಢ

5. ಚಂಡೀಗಢ

PC: Rod Waddington

ಚಂಡೀಗಢವು ನಮ್ಮ ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ಲೆ ಕಾರ್ಬಸಿಯರ್ ವಿನ್ಯಾಸಗೊಳಿಸಿದ ಒಂದು ಸುಂದರ ನಗರವಾಗಿದೆ. ಇದು ಕುರುಕ್ಷೇತ್ರದಿಂದ 93 ಕಿಮಿ ದೂರದಲ್ಲಿದೆ ಮತ್ತು ದೆಹಲಿಯಿಂದ 260 ಕಿ.ಮೀ ದೂರದಲ್ಲಿದೆ. ಇದರಿಂದಾಗಿ ನೀವು ಈ ನಗರದಲ್ಲಿ ಮನೋರಂಜನೆಯ ಹಲವಾರು ಯೋಜಿತ ಹಾಗೂ ಸುಸಜ್ಜಿತವಾಗಿ ರೂಪುಗೊಂಡ ಸ್ಥಳಗಳನ್ನು ಕಾಣಬಹುದಾಗಿದೆ. ಇಲ್ಲಿ ನೀವು ಸುಖಾನಾ ಕೊಳದ ಹತ್ತಿರ ವಿರಾಮ ಪಡೆಯಬಹುದು ಶಿವಾಲಿಕ ಬೆಟ್ಟದ ತಪ್ಪಲಿಗೆ ಒಂದು ಭೇಟಿ ಕೊಡಿ, ಲೀಶರ್ ಕಣಿವೆ ಮತ್ತು ಇನ್ನೂ ಚಂಢೀಗಡದ ಅನೇಕ ಸುಂದರವಾದ ಉದ್ಯಾನವನಗಳಿಗೆ ಭೇಟಿ ಕೊಡಬಹುದು ಇದರಿಂದ ನಿಮ್ಮ ಇಲ್ಲಿಯ ಭೇಟಿ ಅಪೂರ್ಣವೆನಿಸಲಾರದು. ರೋಹರೂ ನಲ್ಲಿ ನೀವು ಮಾಡಬೇಕಾದ ಮತ್ತು ಭೇಟಿ ಕೊಡಬೇಕಾದ ವಿಷಯಗಳು ಹಲವಾರಿವೆ. ರೋಹರೂ ಚಂಡಿಗಢದಿಂದ 209 ಕಿ.ಮೀ ಅಂತರದಲ್ಲಿದೆ.

6. ಪಬ್ಬಾರ್ ಕಣಿವೆ

6. ಪಬ್ಬಾರ್ ಕಣಿವೆ

PC: Sunil Sharma

ಪಬ್ಬಾರ್ ಕಣಿವೆಯು ಪಬ್ಬಾರ್ ನದಿಯಿಂದ ನಿರ್ಮಿತವಾಗಿದೆ ಇದನ್ನು ರೋಹರೂ ವಿನಿಂದ ಮತ್ತು ಥಿಯಾಗ್ ಮಾತ್ರ ಸಂಪರ್ಕಿಸಬಹುದಾಗಿದೆ. ಈ ಕಣಿವೆಯು ಮುಖ್ಯವಾಗಿ ಟ್ರೌಟ್ ಮೀನುಗಾರಿಕೆಗೆ ಬೇಕಾದ ತಾಣವಾಗಿದೆ. ಇಲ್ಲಿ ನೀವು ಕೇವಲ ವಿರಾಮ ಪಡೆಯಬಹುದು ಮತ್ತು ಈ ಸುಂದರ ಕಣಿವೆಯ ಮನಮೋಹಕ ದೃಶ್ಯವನ್ನು ಸವಿಯ ಬಹುದು ಮತ್ತು ಪಬ್ಬಾರ್ ನದಿಯಲ್ಲಿ ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬಹುದು. ಈ ಸ್ಥಳವು ವಾಣಿಜ್ಯೀಕರಣದಿಂದ ಇನ್ನೂ ಸ್ಪರ್ಶಿತವಾಗಿಲ್ಲ. ನೀವು ಪಬ್ಬಾರ್ ಕಣಿವೆಯ ಕಡೆಗೆ ಹೋಗುವುದಾದಲ್ಲಿ ಇಲ್ಲಿ ಮೀನಿನ ಆಹಾರವನ್ನು ಸವಿಯಬಹುದಾಗಿದೆ.

7. ದೊಡ್ರಾ ಮತ್ತು ಕ್ವಾರ್ ನ ಹಳ್ಳಿಗಳು

7. ದೊಡ್ರಾ ಮತ್ತು ಕ್ವಾರ್ ನ ಹಳ್ಳಿಗಳು

PC: James Pett

ರೋಹರ್ ನಲ್ಲಿ ನೆಲೆಸಿರುವ ಈ ಹಳ್ಳಿಗಳು ಅಸಂಖ್ಯಾತ ಔಷಧೀಯ ಗಿಡಮೂಲಿಕೆಗಳಿಗೆ , ಸುಂದರ ವೈಲ್ಡ್ಪ್ಲವರ್ಸ್ ಮತ್ತು ರೋಡೋಡೆನ್ಡ್ರನ್ ಹೂಬಿಡುವ ಮರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಪಿಕ್ನಿಕ್ ಹೋಗುವುದು ಅಥವಾ ಇಂತಹ ಮನಮೋಹಕ ಪ್ರಕೃತಿಯ ದೃಶ್ಯವಳಿಗಳಿರುವ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದಕ್ಕೆ ಸೂಕ್ತವಾದ ಸ್ಥಳವೆನಿಸಿದೆ. ಶರಾಂಗ್ ಚಾ ಶಿಖರವು ಹಳ್ಳಿಗಳ ಹಿಂಬಾಗದಲ್ಲಿ ಬರುವುದರಿಂದ ಈ ಹಳ್ಳಿಯ ಸೌಂದರ್ಯವನ್ನು ಇಮ್ಮಡಿಸುವುದರಲ್ಲಿ ಸಹಕಾರಿಯಾಗಿದೆ.

8. ಚನ್ಶಾಲ್ ಪೀಕ್

8. ಚನ್ಶಾಲ್ ಪೀಕ್

PC: Prithvijeet Singh Thakur

ಸಿಂಗ್ ಠಾಕೂರ್ ಚಾನ್ಷಾಲ್ ಪಾಸ್ ದಾದ್ರ ಮತ್ತು ಕ್ವಾರ್ ಎರಡು ಗ್ರಾಮಗಳ ನಡುವಿನ ಸಂಪರ್ಕವಾಗಿದೆ. ಇದು ಭಯಂಕರವಾದ 14,380 ಅಡಿ ಎತ್ತರದಲ್ಲಿದಲ್ಲಿರುವ ಚಾನ್ಶಾಲ್ ಪೀಕ್ ಮೇಲೆ ಇದೆ. ಇದು ಶಿಮ್ಲಾ ಜಿಲ್ಲೆಯ ಒಂದು ಅತ್ಯಂತ ಎತ್ತರವಾದ ಸ್ಥಳವಾಗಿದೆ. ಈ ಪಾಸ್ ಹೆಚ್ಚಿನ ಭಾಗವು ಮಂಜಿನಿಂದ ಆವೃತ್ತವಾಗಿದ್ದು, ಇದು ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ತೆರೆದಿರುತ್ತದೆ. ಚನ್ಶಾಲ್ ಶಿಖರವು ಪಟ್ಟಣದ ಪರಿಶುದ್ಧವಾದ ನೋಟವನ್ನು ನೆನಪಿಸುವಂತೆ ಮಾಡುತ್ತದೆ.

9. ಹಟ್ಕೋಟಿ

9. ಹಟ್ಕೋಟಿ

PC: Varun Shiv Kapur

ಹಟ್ಕೋಟಿ ರೋಹರೂವಿನ ಹತ್ತಿರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದ್ದು ಇದೂ ಕೂಡಾ ಪಬ್ಬಾರ್ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿ ಬಿಷುಕುಲ್ಟಿ ಮತ್ತು ರಾನ್ವ್ಟಿ ಎಂಬ ಎರಡು ತೊರೆಗಳು ಪರ್ವತದಿಂದ ಹರಿಯುತ್ತವೆ ಮತ್ತು ಈ ಪಟ್ಟಣದಲ್ಲಿ ಪಬ್ಬಾರ್ ನದಿಯಲ್ಲಿ ಸಂಗಮವಾಗುತ್ತದೆ. ಹಟ್ಕೋತಿಯಲ್ಲಿ ಮಹಿಷಾಸುರಮರ್ಧಿನಿ ದೇವಿಗೆ ಅರ್ಪಿತವಾಗಿರುವ ಹಟ್ಕೋಟಿ ದುರ್ಗಾ ದೇವಾಲಯಕ್ಕೆ ಭೇಟಿ ಕೊಡಿ. ಅಲ್ಲದೆ ಈ ಸಂಕೀರ್ಣವು ಶಿವ ದೇವರಿಗೆ ಅರ್ಪಿತವಾದ ದೇವಾಲಯವನ್ನೂ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X