Search
  • Follow NativePlanet
Share
» »ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..

ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..

ಸಮುದ್ರದ ನುರೆಯಿಂದ ತಯಾರಾದ ವಿನಾಯಕ ಎಂದು ಹೇಳುವ ವಿನಾಯಕನ ವಿಗ್ರಹವು ಪ್ರಪಂಚದಲ್ಲಿಯೇ ಇದೊಂದೆ ಎಂದೇ ಹೇಳಬಹುದು. ಆ ವಿಗ್ರಹವು ತಮಿಳುನಾಡಿನಲ್ಲಿ "ಶ್ವೇತ ವಿನಾಯಕರ್" ಎಂಬ ಹೆಸರಿನಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇಲ್ಲಿ ವಿಗ್ರಹಕ

By Sowmyabhai

ಸಮುದ್ರದ ನುರೆಯಿಂದ ತಯಾರಾದ ವಿನಾಯಕ ಎಂದು ಹೇಳುವ ವಿನಾಯಕನ ವಿಗ್ರಹವು ಪ್ರಪಂಚದಲ್ಲಿಯೇ ಇದೊಂದೆ ಎಂದೇ ಹೇಳಬಹುದು. ಆ ವಿಗ್ರಹವು ತಮಿಳುನಾಡಿನಲ್ಲಿ "ಶ್ವೇತ ವಿನಾಯಕರ್" ಎಂಬ ಹೆಸರಿನಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇಲ್ಲಿ ವಿಗ್ರಹಕ್ಕೆ ಅಭಿಷೇಕವನ್ನು ಮಾಡುವುದಿಲ್ಲ, ಹೂವು, ಹರಿಶಿಣ-ಕುಂಕುಮದಿಂದ ಪೂಜೆಗಳನ್ನು ಮಾಡುವುದಿಲ್ಲ. ಆಶ್ಚರ್ಯವೆನೆಂದರೆ ಯಾವುದೇ ವಿಧದಲ್ಲಿಯೂ ವಿಗ್ರಹವನ್ನು ಯಾರು ಕೂಡ ಮುಟ್ಟುವುದಿಲ್ಲ. ವಿಗ್ರಹವನ್ನು ಮುಟ್ಟದೆ ಕೇವಲ ಪಚ್ಚ ಕರ್ಪೂರದ ಪುಡಿಯನ್ನು ಮಾತ್ರ ವಿಗ್ರಹದ ಮೇಲೆ ಚೆಲ್ಲುತ್ತಾರೆ.

ಸಮುದ್ರದ ನೊರೆಯಿಂದ ತಯಾರಾದ ಕಾರಣದಿಂದ ಆ ವಿಗ್ರಹವನ್ನು ಯಾರು ಕೂಡ ಮುಟ್ಟುವುದಿಲ್ಲ ಎಂದು ಹೇಳುತ್ತಾರೆ. ಅದೇ ವಿಧವಾಗಿ ಈ ವಿಗ್ರಹವನ್ನು ವಿನಾಯಕ ಚೌತಿಯಂದು ಪೂಜಿಸಿದರೆ ಪ್ರತಿ ದಿನ ವಿನಾಯಕನಿಗೆ ಪೂಜೆ ಮಾಡಿದ ಫಲ ದೊರೆತ್ತದೆ ಎಂಬುದು ಭಕ್ತರ ಪ್ರಗಾಡವಾದ ನಂಬಿಕೆಯಾಗಿದೆ.

ಇನ್ನು ಸ್ವಾಮಿಯ ವಿಷಯಕ್ಕೆ ಬಂದರೆ ವಿವಾಹದಲ್ಲಿ ಬರುವ ಅಡ್ಡಿ-ಆತಂಕವನ್ನು ವಿಘ್ನ ವಿನಾಶಕನು ಪರಿಹಾರ ಮಾಡುವ ಸ್ವಾಮಿ ಎಂದೇ ಪ್ರಸಿದ್ಧಿಯಾಗಿದ್ದಾನೆ. ಇಷ್ಟು ವಿಶೇಷತೆಯನ್ನು ಹೊಂದಿರುವ ಪುಣ್ಯಕ್ಷೇತ್ರದ ಬಗ್ಗೆ ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳೊಣ.

1.ಮೊದಲ ಪೂಜೆ ವಿನಾಯಕನಿಗೆ...

1.ಮೊದಲ ಪೂಜೆ ವಿನಾಯಕನಿಗೆ...

PC:YOUTUBE

ಯಾವುದಾದರು ಕಾರ್ಯವನ್ನು ಪ್ರಾರಂಭ ಮಾಡುವ ಸಮಯದಲ್ಲಿ ಮೊದಲು ವಿಘ್ನವನ್ನು ದೂರ ಮಾಡುವ ವಿನಾಯಕನಿಗೆ ಪೂಜೆ ಮಾಡುವುದು ಪದ್ದತಿ. ಈ ಪದ್ದತಿ ಅನುಸರಿಸದೇ ಇದ್ದರೆ ನಾವು ಮಾಡುವ ಕಾರ್ಯದಲ್ಲಿ ಅಡ್ಡಿಗಳು ಎದುರಾಗುತ್ತವೆ ಎಂಬ ನಂಬಿಕೆ ಜನರದ್ದು. ಹಾಗಾಗಿಯೇ ಗಣೇಶನನ್ನು ವಿಘ್ನೇಶ್ವರ ಎಂದು ಕರೆಯುತ್ತೇವೆ ಎಂದು ಪುರಾಣಗಳು ಹೇಳುತ್ತವೆ.

2.ಅಮೃತ ಬದಲಿಗೆ ಹಾಲಹಾಲ..

2.ಅಮೃತ ಬದಲಿಗೆ ಹಾಲಹಾಲ..

PC:YOUTUBE

ಇದು ಹೀಗೆ ಇದ್ದರೆ ಅಮರತ್ವಕ್ಕಾಗಿ ಅಮೃತವನ್ನು ಸಂಪಾದಿಸಬೇಕು ಎಂದು ದೇವತೆಗಳು ಹಾಗು ರಾಕ್ಷಸರು ಜೊತೆಗೂಡಿ ಸಮುದ್ರದ ಮಧನದ ಘಟನೆಯ ಬಗ್ಗೆ ನಿಮಗೆಲ್ಲಾ ತಿಳಿಸಿರುವ ವಿಷಯವೇ. ಆದರೆ ಪುರಾಣಗಳ ಪ್ರಕಾರ ಮಧನದ ಸಮಯದಲ್ಲಿ ಮೊದಲು ಅಮೃತದ ಬದಲಿಗೆ ವಿಷವು ಬಂದಿತು.

3.ಸಮುದ್ರದ ನೊರೆಯಿಂದ ವಿನಾಯಕನ ವಿಗ್ರಹ

3.ಸಮುದ್ರದ ನೊರೆಯಿಂದ ವಿನಾಯಕನ ವಿಗ್ರಹ

PC:YOUTUBE

ಇದಕ್ಕೆ ಮುಖ್ಯ ಕಾರಣವನ್ನು ಅನ್ವೇಷಿಸಿದರೆ ರಾಕ್ಷಸರ ಜೊತೆ ದೇವತೆಗಳು ಕೂಡ ಮಾಡಿದ ತಪ್ಪು ತಿಳಿದುಕೊಂಡರು. ಇದರಿಂದಾಗಿ ಆ ಪರಮಶಿವನ ಸೂಚನೆಯ ಮೇರೆಗೆ ಸಮುದ್ರ ನೊರೆಯಿಂದ ವಿನಾಯಕನ ವಿಗ್ರಹವನ್ನು ಮಾಡಿ ಅದನ್ನು ಪೂಜಿಸಿ ಎಂದು ಹೇಳುತ್ತಾನೆ.

4.ಸ್ವರ್ಗಕ್ಕೆ ತೆಗೆದುಕೊಂಡು ಹೋದರು..

4.ಸ್ವರ್ಗಕ್ಕೆ ತೆಗೆದುಕೊಂಡು ಹೋದರು..

PC:YOUTUBE

ದೇವತೆಗಳು ವಿಘ್ನ ವಿನಾಶಕನಿಗೆ ಪೂಜಿಸಿದ್ದರಿಂದ ದೇವತೆಗಳ ಕಾರ್ಯದಲ್ಲಿ ಫಲ ದೊರೆಯಿತು. ಅಂದರೆ ಅಮೃತ ದೊರೆಯಿತು. ದೇವೆಂದ್ರನಾದ ಇಂದ್ರನು ಆ ನೊರೆಯಿಂದ ಮಾಡಿದ ವಿನಾಯಕನ ವಿಗ್ರಹವನ್ನು ತನ್ನ ಜೊತೆಯಲ್ಲಿ ಸ್ವರ್ಗಕ್ಕೆ ತೆಗೆದುಕೊಂಡು ಪೂಜಿಸಿದನು.

5.ಭೂಮಿಯ ಮೇಲೆ ತೆಗೆದುಕೊಂಡು ಬಂದು..

5.ಭೂಮಿಯ ಮೇಲೆ ತೆಗೆದುಕೊಂಡು ಬಂದು..

PC:YOUTUBE

ಹೀಗೆ ಕೆಲವು ವರ್ಷಗಳ ಕಾಲ ಕಳೆದ ನಂತರ ಅಹಲ್ಯಯಿಂದಾಗಿ ತನಗೆ ಉಂಟಾದ ಶಾಪದಿಂದ ವಿಮುಕ್ತಿ ಹೊಂದುವ ಸಲುವಾಗಿ ಸಮುದ್ರದ ನೊರೆಯಿಂದ ತಯಾರು ಮಾಡಿದ ವಿಗ್ರಹವನ್ನು ಭೂಮಿಗೆ ತೆಗೆದುಕೊಂಡು ಪವಿತ್ರವಾದ ಪ್ರದೇಶದಲ್ಲಿ ಇಟ್ಟು ಪೂಜೆಯನ್ನು ಮಾಡಿದನು.

6.ಆ ಶ್ವೇತ ವಿನಾಯಕ

6.ಆ ಶ್ವೇತ ವಿನಾಯಕ

PC:YOUTUBE

ಈ ಕ್ರಮವಾಗಿಯೇ ಒಮ್ಮೆ ಪ್ರಸ್ತುತವಿರುವ ಕುಂಭಕೋಣಕ್ಕೆ ಇಂದ್ರನು ಆ ನೊರೆಯಿಂದ ಮಾಡಿದ ಆ ಶ್ವೇತ ವಿನಾಯಕನ ವಿಗ್ರಹವನ್ನು ತೆಗೆದುಕೊಂಡು ಬಂದನು. ಇಲ್ಲಿನ ಪವಿತ್ರತೆಗೆ, ವಾತಾವರಣಕ್ಕೆ ಮಂತ್ರ ಮುಗ್ಧನಾದ ವಿನಾಯಕನು ಇಲ್ಲಿಯೇ ನೆಲೆಸಬೇಕು ಎಂದು ಅಂದಿಕೊಂಡನಂತೆ.

7.ಶಿವಾರ್ಚನೆಗೆ ಸಮಯ

7.ಶಿವಾರ್ಚನೆಗೆ ಸಮಯ

PC:YOUTUBE

ಆ ಸುಂದರವಾದ ಸ್ಥಳದಲ್ಲಿ ನೆಲೆಸಲು ತನ್ನ ತಂದೆ ಪರಮಶಿವನು ಸಹಾಯವನ್ನು ವಿನಾಯಕನು ಕೋರಿಕೊಳ್ಳುತ್ತಾನೆ. ಇದರಿಂದ ಶಿವನು ಒಬ್ಬ ಚಿಕ್ಕ ಮಗುವಿನ ರೂಪದಲ್ಲಿ ಅಲ್ಲಿಗೆ ಭೇಟಿ ನೀಡುತ್ತಾನೆ. ಅದೇ ಸಮಯದಲ್ಲಿ ಇಂದ್ರನಿಗೆ ಶಿವಾರ್ಚನೆಗೆ ಸಮಯವಾಗಿರುತ್ತದೆ.

8.ಭೂಮಿಗೆ ತಾಕಿಸಬಾರದು..

8.ಭೂಮಿಗೆ ತಾಕಿಸಬಾರದು..

PC:YOUTUBE

ಇದರಿಂದಾಗಿ ಆ ಮಗುವಿನ ಕೈಗೆ ಆ ಶ್ವೇತ ವಿನಾಯಕನ ವಿಗ್ರಹವನ್ನು ನೀಡಿ ಶಿವಾರ್ಚನೆಗೆ ಇಂದ್ರನು ತೆರೆಳುತ್ತಾನೆ. ತಾನು ಬರುವವರೆವಿಗೂ ಆ ವಿಗ್ರಹವನ್ನು ಕೆಳಗೆ ಇಡಬಾರದು ಎಂದು ಆಜ್ಷೆ ಮಾಡುತ್ತಾನೆ. ಆದರೆ ಆ ಬಾಲಕ..

9.ಬಲಿಪೀಠದ ಮೇಲೆ

9.ಬಲಿಪೀಠದ ಮೇಲೆ

PC:YOUTUBE

ಆದರೆ ಇಂದ್ರನು ಹಾಗೆ ತೆರಳಿದ ತಕ್ಷಣವೇ ಮಗುವಿನ ರೂಪದಲ್ಲಿರುವ ಪರಮೇಶ್ವರನು ತನ್ನ ಕೈಯಲ್ಲಿದ್ದ ಶ್ವೇತ ವಿನಾಯಕನನ್ನು ಅಲ್ಲಿರುವ ಒಂದು ಬಲಿಪೀಠದ ಕೆಳಗೆ ಇಟ್ಟು ಹೊರಟು ಹೋಗುತ್ತಾನೆ.

10.ಎಷ್ಟೇ ಪ್ರಯತ್ನವನ್ನು ಮಾಡಿದರೂ...

10.ಎಷ್ಟೇ ಪ್ರಯತ್ನವನ್ನು ಮಾಡಿದರೂ...

PC:YOUTUBE

ಹಿಂದಿರುಗಿ ಬಂದ ಇಂದ್ರನು ಎಷ್ಟೇ ಪ್ರಯತ್ನವನ್ನು ಮಾಡಿದರೂ ಕೂಡ ಆ ವಿಗ್ರಹವನ್ನು ಅಲ್ಲಿಂದ ಒಂದು ಇಂಚು ಕೂಡ ಕದಲಿಸಲು ಸಾಧ್ಯವಾಗುವುದಿಲ್ಲವಂತೆ. ದೈವ ಶಿಲ್ಪಿಯನ್ನು ಕರೆಯಿಸಿ ರಥವನ್ನು ತಯಾರು ಮಾಡಿಸುತ್ತಾನೆ. ಆ ರಥದ ಮೇಲೆ ವಿನಾಯಕನು ಇರುವ ಪ್ರದೇಶವು ಸಹ ಸ್ವರ್ಗಲ್ಲೆ ತೆಗೆದುಕೊಂಡು ಹೋಗಬೇಕು ಎಂದು ಪ್ರಯತ್ನಿಸಿ ವಿಫಲನಾಗುತ್ತಾನೆ.

11.ಅಶರೀರ ವಾಣಿ

11.ಅಶರೀರ ವಾಣಿ

PC:YOUTUBE

ಅದೇ ಸಮಯದಲ್ಲಿ ಅಶರೀರ ವಾಣಿಯು ಶ್ವೇತ ವಿನಾಯಕನು ಇಲ್ಲಿಯೇ ನೆಲೆಸಬೇಕು ಎಂದು ಭಾವಿಸುತ್ತಿದ್ದಾನೆ ಎಂದು ಹೇಳುತ್ತದೆ. ಇದರಿಂದಾಗಿ ಇಂದ್ರನು ತನ್ನ ಪ್ರಯತ್ನವನ್ನು ಕೈಬಿಡುತ್ತಾನೆ.

12.ಪ್ರತಿ ವಿನಾಯಕ ಚೌತಿ

12.ಪ್ರತಿ ವಿನಾಯಕ ಚೌತಿ

PC:YOUTUBE

ಅಷ್ಟೇ ಅಲ್ಲ ಪ್ರತಿ ವಿನಾಯಕ ಚೌತಿಗೆ ಇಲ್ಲಿಗೆ ಬಂದು ವಿನಾಯಕನನ್ನು ಪೂಜಿಸು ಎಂದು ಇಂದ್ರನಿಗೆ ಅಶರೀರ ವಾಣಿಯು ಹೇಳುತ್ತದೆ. ಹೀಗೆ ಪೂಜಿಸದವರಿಗೆ ಪ್ರತಿ ನಿತ್ಯ ಪೂಜಿಸಿದ ಫಲ ದೊರೆಯುತ್ತದೆ ಎಂದು ಆ ವಾಣಿಯು ಇಂದ್ರನಿಗೆ ತಿಳಿಸುತ್ತದೆ. ಹಾಗಾಗಿಯೇ ಪ್ರತಿ ವಿನಾಯಕ ಚೌತಿಗೆ ಇಂದ್ರನು ಇಲ್ಲಿಗೆ ಬಂದು ವಿನಾಯಕನಿಗೆ ಪೂಜಿಸುತ್ತಾನೆ ಎಂದು ಭಕ್ತರ ಪ್ರಗಾಢವಾದ ನಂಬಿಕೆಯಾಗಿದೆ.

13.ಅಭಿಷೇಕವನ್ನು ಮಾಡುವುದಿಲ್ಲ

13.ಅಭಿಷೇಕವನ್ನು ಮಾಡುವುದಿಲ್ಲ

PC:YOUTUBE

ಇನ್ನು ಈ ವಿಗ್ರಹಕ್ಕೆ ಅಭಿಷೇಕವನ್ನು ಮಾಡುವುದಿಲ್ಲ, ಹೂವು, ಹರಿಶಿಣ, ಕುಂಕುಮದಿಂದ ಅರ್ಚನೆಯನ್ನು ಮಾಡುವುದಿಲ್ಲ. ವಸ್ತ್ರವನ್ನು ಕೂಡ ಅರ್ಪಿಸುವುದಿಲ್ಲ. ಹೀಗೆ ಯಾವ ವಿಧದಲ್ಲಿಯೂ ವಿಗ್ರಹವನ್ನು ಮುಟ್ಟರು. ವಿಗ್ರಹವನ್ನು ಮುಟ್ಟದೆ ಕೇವಲ ಪಚ್ಚ ಕರ್ಪೂರದ ಪುಡಿಯನ್ನು ಮಾತ್ರ ವಿಗ್ರಹದ ಮೇಲೆ ಚೆಲ್ಲುತ್ತಾರೆ. ಸಮುದ್ರದ ನೊರೆಯಿಂದ ತಯಾರಾದ ವಿಗ್ರಹವಾದ್ದರಿಂದ ವಿಗ್ರಹವನ್ನು ತಾಕುವುದಿಲ್ಲ ಎಂದು ಹೇಳುತ್ತಾರೆ.

14.ಶೀಘ್ರವಾಗಿ ವಿವಾಹ

14.ಶೀಘ್ರವಾಗಿ ವಿವಾಹ

PC:YOUTUBE

ಇನ್ನು ಇಲ್ಲಿ ಒಂದು ಪುರಾಣದ ಪ್ರಕಾರ, ಮಹಾವಿಷ್ಣುವಿನ ಕಣ್ಣಿನಿಂದ ಹುಟ್ಟಿದ ಇಂದ್ರದೇವಿಯಾದ ಕಮಲಾಂಬಲ್ ಹಾಗು ಬ್ರಹ್ಮನ ಕಮಲದಿಂದ ಹುಟ್ಟಿದ ಬುದ್ಧಿ ದೇವಿಯನ್ನು ಗಣಪತಿಯು ವಿವಾಹ ಮಾಡಿಕೊಂಡನೆಂದು ಹೇಳುತ್ತದೆ. ಹಾಗಾಗಿಯೇ ಇಲ್ಲಿಯ ಸ್ವಾಮಿಯನ್ನು ಪೂಜಿಸಿದರೆ ವಿವಾಹದ ಸಮಯದಲ್ಲಿ ಯಾವುದೇ ಅಡ್ಡಿ-ಆತಂಕಗಳು ಎದುರಾಗುವುದಿಲ್ಲ, ಬದಲಾಗಿ ಶೀಘ್ರವಾಗಿ ವಿವಾಹವಾಗುತ್ತದೆ ಎಂದು ನಂಬಲಾಗಿದೆ.

15.ಎಲ್ಲಿದೆ?

15.ಎಲ್ಲಿದೆ?

PC:YOUTUBE

ಈ ಮಹಿಮಾನ್ವಿತವಾದ ಶ್ವೇತ ವಿನಾಯಕನ ದೇವಾಲಯವು ಕುಂಭಕೋಣಂ ಬಸ್ ನಿಲ್ದಾಣದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಕುಂಭಕೋಣಂನಲ್ಲಿ ಆನೇಕ ಪುಣ್ಯಕ್ಷೇತ್ರಗಳಿವೆ. ಸಿಟಿ ಬಸ್ಸಿನಲ್ಲಿ ಪ್ರಯಾಣಿಸಿದರೆ ಖರ್ಚು ಕಡಿಮೆ. ಆದರೆ ಅನೇಕ ಮಂದಿ ಸಿಟಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X