Search
  • Follow NativePlanet
Share
» »ಶನಿಯ ಸಾಡೇಸಾತಿಯನ್ನು ಹೋಗಲಾಡಿಸುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ಶನಿಯ ಸಾಡೇಸಾತಿಯನ್ನು ಹೋಗಲಾಡಿಸುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ತಮಿಳುನಾಡಿನ ಕುಂಭಕೋಣಂನ ಸುತ್ತಮುತ್ತ ನವಗ್ರಹಗಳಿಗೆ ಎಂದೇ ಪ್ರತ್ಯೇಕವಾದ 9 ದೇವಾಲಯಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ. ಅವುಗಳಲ್ಲಿ ಒಂದು ಈ ಸೂರ್ಯ ದೇವಾಲಯ. ಉಳಿದ ಎಲ್ಲಾ ನವಗ್ರಹಗಳ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ ಶಿವನನ್ನು ಆ

By Sowmyabhai

ತಮಿಳುನಾಡಿನ ಕುಂಭಕೋಣಂನ ಸುತ್ತಮುತ್ತ ನವಗ್ರಹಗಳಿಗೆ ಎಂದೇ ಪ್ರತ್ಯೇಕವಾದ 9 ದೇವಾಲಯಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ. ಅವುಗಳಲ್ಲಿ ಒಂದು ಈ ಸೂರ್ಯ ದೇವಾಲಯ. ಉಳಿದ ಎಲ್ಲಾ ನವಗ್ರಹಗಳ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ ಶಿವನನ್ನು ಆರಾಧಿಸಿದರೆ, ಈ ಸೂರ್ಯ ದೇವಾಲಯದಲ್ಲಿ ಮಾತ್ರ ಪ್ರಧಾನವಾದ ದೈವ ಸೂರ್ಯನೇ. ಇಲ್ಲಿ ಸೂರ್ಯಭಗವಾನನ ತಾಪವನ್ನು ತಗ್ಗಿಸುವ ಸಲುವಾಗಿ ನವಗ್ರಹದಲ್ಲಿ ಒಂದಾದ ಗುರುವು ಆ ಸೂರ್ಯ ದೇವನ ಎದುರಲ್ಲಿ ಇರುತ್ತಾನೆ.

ಶಿವಾಲಯದಲ್ಲಿ ಅಥವಾ ಶಿವಲಿಂಗದ ಎದುರು ನಂದಿಯು ಇದ್ದ ಹಾಗೆ ಇಲ್ಲೂ ಕೂಡ ಸೂರ್ಯ ಭಗವಾನನ ಎದುರು ಕುದುರೆ ಇರುತ್ತದೆ. ರಥಸಪ್ತಮಿಯ ಸಮಯದಲ್ಲಿ 10 ದಿನಗಳ ಕಾಲ ಅತ್ಯಂತ ವಿಜೃಂಬಣೆಯಿಂದ ಉತ್ಸವವನ್ನು ನಡೆಸುತ್ತಾರೆ. ಸೂರ್ಯ ಭಗವಾನನಿಗೆ ಸಕ್ಕರೆ ಪುಂಗಲ್ ಅನ್ನು ಪ್ರಸಾದವಾಗಿ ಸಮರ್ಪಿಸುತ್ತಾರೆ. ಅದೇ ವಿಧವಾಗಿ ಭಕ್ತರು ಕೂಡ ಭಕ್ತರು ಕೂಡ ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚುತ್ತಾರೆ. ಕುಂಭಕೋಣಂ ನಗರಕ್ಕೆ ಸುಮಾರು 15 ಕಿ.ಮೀ ದೂರದಲ್ಲಿದ್ದು, ಈ ದೇವಾಲಯದ ವಿಶೇಷತೆಯ ಬಗ್ಗೆ ತಿಳಿಯೋಣ.

1.ಕಲವ ಮಹರ್ಷಿ

1.ಕಲವ ಮಹರ್ಷಿ

PC:YOUTUBE

ಪೂರ್ವದಲ್ಲಿ ಒಬ್ಬ ಕಲವ ಮಹರ್ಷಿ ಎಂಬವವನು ಇದ್ದನು. ಆತನಿಗೆ ಬ್ರಹ್ಮನ ಶಾಪದಿಂದಾಗಿ ಕುಷ್ಟರೋಗದಿಂದ ನರಳುತ್ತಿರುತ್ತಾನೆ. ನಾರದನ ಸೂಚನೆಯ ಮೇರೆಗೆ ಆ ಕಲವ ಮಹರ್ಷಿಯು ನವಗ್ರಹವನ್ನು ಪ್ರಾರ್ಥನೆ ಮಾಡಿ ತನ್ನ ವ್ಯಾಧಿಯಿಂದ ವಿಮುಕ್ತಿಯನ್ನು ಹೊಂದುತ್ತಾನೆ ಇದರಿಂದಾಗಿ ಬ್ರಹ್ಮನಿಗೆ ಆ ನವಗ್ರಹಗಳ ಮೇಲೆ ತೀವ್ರವಾದ ಕೋಪವು ಬರುತ್ತದೆ.

2.ಶಿವನ ಅನುಮತಿಯ ಮೇರೆಗೆ

2.ಶಿವನ ಅನುಮತಿಯ ಮೇರೆಗೆ

PC:YOUTUBE

ಇದರಿಂದಾಗಿ ಬ್ರಹ್ಮ ದೇವನು ಶಿವನ ಅನುಮತಿಯನ್ನು ತೆಗೆದುಕೊಂಡು ಬ್ರಹ್ಮದೇವನು ಆ ನವಗ್ರಹಗಳು ಇನ್ನು ಮೇಲೆ ಭೂಲೋಕದಲ್ಲಿ ಇರಬೇಕು ಎಂದೂ, ಅಷ್ಟೇ ಅಲ್ಲ ಅವರಿಗೆಲ್ಲಾ ವರವನ್ನು ನೀಡುವ ಅಧಿಕಾರ ಇರಬಾರದು ಎಂದು ಹೇಳುತ್ತಾನೆ. ಮುಖ್ಯವಾಗಿ ಕುಷ್ಟರೋಗದಿಂದ ನರಳಬೇಕು ಎಂದು ಶಪಿಸುತ್ತಾನೆ.

3.ವೆಲ್ಲುರುಕ್ಕವನದಲ್ಲಿ

3.ವೆಲ್ಲುರುಕ್ಕವನದಲ್ಲಿ

PC:YOUTUBE

ಬ್ರಹ್ಮ ಶಾಪದ ಪ್ರಕಾರ ನವಗ್ರಹಗಳು ಭೂಮಿಯ ಮೇಲೆ ವೆಲ್ಲುರುಕ್ಕವನದಲ್ಲಿ ಎಂದರೆ ಬಿಳಿಯ ಅರಣ್ಯ ಪ್ರದೇಶದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಇರಬೇಕಾಗುತ್ತದೆ. ಆ ವೆಲ್ಲುರುಕ್ಕವನವು ತಮಿಳುನಾಡಿನಲ್ಲಿನ ಕುಂಭಕೋಣಂನ ಸುತ್ತಮುತ್ತಲ ಪ್ರದೇಶದಲ್ಲಿದೆ.

4.1000 ವರ್ಷಗಳು

4.1000 ವರ್ಷಗಳು

PC:YOUTUBE

ಇನ್ನು ಭೂಮಿಯ ಮೇಲೆ ಬಂದ ನವಗ್ರಹಗಳು ಶಿವನನ್ನು ಪ್ರಾರ್ಥನೆ ಮಾಡಿದರು. ಇದರಿಂದಾಗಿ ಆ ದೇವಾಲಯಗಳಲ್ಲಿಯೂ ಪ್ರಧಾನವಾದ ದೈವ ಶಿವನೇ ಆಗಿರಬೇಕು ಎಂದು ಕೋರಿಕೊಳ್ಳುತ್ತಾರೆ. ಹೀಗೆ ತಾವು ಆರಾಧಿಸುತ್ತಿರುವ ಶಿವನನ್ನು 1000 ವರ್ಷಗಳು ಪೂಜಿಸಿ ತಮ್ಮ ಕುಷ್ಟರೋಗವನ್ನು ಗುಣಪಡಿಸಿಕೊಳ್ಳುತ್ತಾರೆ.

5.ಎಲ್ಲಾ ಸ್ಥಳಗಳಲ್ಲಿಯೂ ಪರಮಶಿವನು

5.ಎಲ್ಲಾ ಸ್ಥಳಗಳಲ್ಲಿಯೂ ಪರಮಶಿವನು

PC:YOUTUBE

ಅಷ್ಟೇ ಅಲ್ಲ, ತನ್ನ ಹತ್ತಿರ ಬಂದವರ ಸಾಡೇಸಾತಿ ಶನಿಯನ್ನು ಕೂಡ ಹೋಗಲಾಡಿಸಬೇಕು ಎಂದು ವರವನ್ನು ಕೂಡ ಪಡೆಯುತ್ತಾರೆ. ಹಾಗಾಗಿಯೇ ಕುಂಭಕೋಣಂನ ಸುತ್ತ-ಮುತ್ತಲಿರುವ 9 ನವ ಗ್ರಹಗಳ ದೇವಾಲಯದಲ್ಲಿ ಪ್ರಧಾನವಾದ ದೈವನೇ ಶಿವ.

6.ಸೂರ್ಯನೇ ಪ್ರಧಾನವಾದ ದೈವ

6.ಸೂರ್ಯನೇ ಪ್ರಧಾನವಾದ ದೈವ

PC:YOUTUBE

ಆದರೆ ಸೂರ್ಯನ ದೇವಾಲಯದಲ್ಲಿ ಮಾತ್ರ ಪರಮಶಿವನಲ್ಲದೆ ಸೂರ್ಯನೇ ಪ್ರಧಾನವಾದ ದೈವನಾಗಿದ್ದಾನೆ. ಹಾಗಾಗಿಯೇ ಈ ದೇವಾಲಯದಲ್ಲಿ ಸೂರ್ಯನ ಜೊತೆ-ಜೊತೆಗೆ ಗುರುವನ್ನು ಕೂಡ 12 ಭಾನುವಾರ ದೇವಾಲಯದಲ್ಲಿಯೇ ಇದ್ದು, ಸ್ವಾಮಿಯನ್ನು ಆರಾಧಿಸಿದರೆ ಸಾಡೇಸಾತಿ ಶನಿ ಬಿಟ್ಟುಹೋಗುತ್ತದೆ ಎಂಬುದು ಭಕ್ತರ ಪ್ರಗಾಡವಾದ ನಂಬಿಕೆ.

7.ಸ್ಥಳವಾಸ

7.ಸ್ಥಳವಾಸ

PC:YOUTUBE

ದೇವಾಲಯದಲ್ಲಿ ಭಕ್ತರು ಇರುವುದಕ್ಕೆ ಏರ್ಪಾಟುಗಳಿವೆ. ಹೀಗೆ ದೇವಾಲಯದಲ್ಲಿಯೇ ಇದ್ದು, ಪೂಜೆಗಳು ಮಾಡಿದನು ಎಂದು ಸ್ಥಳ ಪುರಾಣವು ಹೇಳುತ್ತದೆ. ಈ ಸ್ಥಳವಾಸ ಮಾಡುವುದಕ್ಕೆ ದೇಶದ ಮೂಲೆ-ಮೂಲೆಗಳಿಮದ ಎಷ್ಟೊ ಮಂದಿ ಭಕ್ತರು ದಿನನಿತ್ಯ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

8.ಕುಲೊತ್ತುಂಗ ಚೋಳ

8.ಕುಲೊತ್ತುಂಗ ಚೋಳ

PC:YOUTUBE

ಇನ್ನು ಈ ದೇವಾಲಯವು ಅತ್ಯಂತ ಪ್ರಾಚೀನವಾದುದು. ಪ್ರಸ್ತುತವಿರುವ ದೇವಾಲಯವನ್ನು ಕುಲೋತ್ತುಂಗ ಚೋಳನು ನಿರ್ಮಾಣ ಮಾಡಿದನು. ಇನ್ನು ಈ ದೇವಾಲಯವು ವಿಜಯನಗರ ಕಾಲದಲ್ಲಿ ಅಭಿವೃದ್ಧಿ ಹೊಂದಿತು. 5 ಅಂತಸ್ತಿನ ರಾಜ ಗೋಪುರ, ಗ್ರಾನೈಟ್‍ನಿಂದ ನಿರ್ಮಾಣ ಮಾಡಿದ ಪ್ರಹರಿಗೋಡೆಯನ್ನು ಇಲ್ಲಿ ಕಾಣಬಹುದು.

9.ಉಷಾ ಹಾಗು ಛಾಯ ದೇವತೆಗಳು

9.ಉಷಾ ಹಾಗು ಛಾಯ ದೇವತೆಗಳು

PC:YOUTUBE

ಇನ್ನು ದೇವಾಲಯದ ಗರ್ಭಗುಡಿಯ ಮಧ್ಯದಲ್ಲಿ ಸೂರ್ಯಭಗವಾನನು ನೆಲೆಸಿದ್ದರೆ, ಇನ್ನು ಸುತ್ತಮುತ್ತ ಉಷಾ ಹಾಗು ಛಾಯ ದೇವತೆಗಳು ಇರುತ್ತಾರೆ. ಸೂರ್ಯನು ಬಿಸಿಗೆ ಸಂಕೇತ. ಆತನಿರುವ ಪ್ರದೇಶವೆಲ್ಲಾ ಅತ್ಯಂತ ಬಿಸಿಯಾಗಿರುತ್ತದೆ.

10.ನವಗ್ರಹಗಳಲ್ಲಿ ಒಂದಾದ ಗುರು

10.ನವಗ್ರಹಗಳಲ್ಲಿ ಒಂದಾದ ಗುರು

PC:YOUTUBE

ಆ ತಾಪದ ವಾತಾವರಣವನ್ನು ತಂಪು ಮಾಡುವ ಹಾಗೆ ಗರ್ಭಗುಡಿಯಲ್ಲಿಯೇ ಸೂರ್ಯ ಭಗವಾನನ ಎದುರಲ್ಲಿ ನವಗ್ರಹದಲ್ಲಿ ಒಂದಾದ ಗುರುವು ಇರುತ್ತಾನೆ. ಹಾಗಾದ್ದರಿಂದ ಸೂರ್ಯನ ತಾಪ ಸ್ವಲ್ಪವಾದರು ಕಡಿಮೆ ಇರುತ್ತದೆ ಎಂದು ಭಕ್ತರ ನಂಬಿಕೆಯಾಗಿದೆ. ಸೂರ್ಯನ ರಥವೆಂದರೆ ಅದು ಕುದುರೆಗಳು.

11.ಸೂರ್ಯನ ಎದುರಿನಲ್ಲಿ ಕುದುರೆ

11.ಸೂರ್ಯನ ಎದುರಿನಲ್ಲಿ ಕುದುರೆ

PC:YOUTUBE

ಶಿವಾಲಯದಲ್ಲಿ ಅಥವಾ ಶಿವಲಿಂಗದ ಎದುರು ನಂದಿಯು ಇದ್ದ ಹಾಗೆ ಇಲ್ಲೂ ಕೂಡ ಸೂರ್ಯ ಭಗವಾನನ ಎದುರು ಕುದುರೆ ಇರುತ್ತದೆ. ದೇವಾಲಯದಲ್ಲಿ ಸೂರ್ಯನು ಪಶ್ಚಿಮ ಮುಖವಾಗಿರುತ್ತಾನೆ. ಸೂರ್ಯ ದೇವನು ಪ್ರಸನ್ನ ವದನದಿಂದ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ.

12.ರಥ ಸ್ತಪಮಿಯ ದಿನ

12.ರಥ ಸ್ತಪಮಿಯ ದಿನ

PC:YOUTUBE

ರಥಸಪ್ತಮಿಯ ಸಮಯದಲ್ಲಿ 10 ದಿನಗಳ ಕಾಲ ಅತ್ಯಂತ ವಿಜೃಂಬಣೆಯಿಂದ ಉತ್ಸವವನ್ನು ನಡೆಸುತ್ತಾರೆ. ತಮಿಳಿನ ಜನಕ್ಕೆ ಹೊಸ ವರ್ಷದ ಸಂಭ್ರಮ ಆಚರಣೆಯ ದಿನದಂದು ಕೂಡ ಈ ದೇವಾಲಯದಲ್ಲಿ ಮುಖ್ಯವಾಗಿ ಉತ್ಸವಗಳು ನಡೆಯುತ್ತವೆ. ಇದನ್ನೇ ಮಹಾಭಿಷೇಕ ಎಂದು ಕರೆಯುತ್ತಾರೆ.

13.ಸಕ್ಕರೆ ಪುಂಗಲ್ ನೈವೇದ್ಯ

13.ಸಕ್ಕರೆ ಪುಂಗಲ್ ನೈವೇದ್ಯ

PC:YOUTUBE

ಅದೇ ವಿಧವಾಗಿ ಶನಿ ಹಾಗು ಗುರುವಾದಂದು ಹಾಗು ಗ್ರಹವು ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಮಾರ್ಪಟಾಗುವಾಗ ಕೂಡ ಇಲ್ಲಿ ಪ್ರತ್ಯೇಕವಾದ ಪೂಜೆಗಳು ನಿರ್ವಹಿಸುತ್ತಾರೆ. ಇನ್ನು ಸೂರ್ಯ ಭಗವಾನನಿಗೆ ಸಕ್ಕರೆ ಪುಂಗಲ್ ಅನ್ನು ಪ್ರಸಾದವಾಗಿ ಸಮರ್ಪಿಸುತ್ತಾರೆ. ಅದೇ ವಿಧವಾಗಿ ಭಕ್ತರು ಕೂಡ ಭಕ್ತರು ಕೂಡ ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚುತ್ತಾರೆ.

14.ಎಲ್ಲಿದೆ?

14.ಎಲ್ಲಿದೆ?

PC:YOUTUBE

ಈ ಮಹಿಮಾನ್ವಿತವಾದ ದೇವಾಲಯವು ಕುಂಭಕೋಣಂ ಪಟ್ಟಣದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸರ್ಕಾರಿ, ಖಾಸಗಿ ಬಸ್ಸುಗಳು ಪ್ರತಿನಿತ್ಯ ಸಂಚಾರವಿರುವುದರಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದು. ಈ ಸೂರ್ಯನ್ ಕೋಯಿಲ್ ಕ್ಷೇತ್ರದ ಸಮೀಪದಲ್ಲಿ ತಿರುಮಂಗಳಕುಡಿ, ಕಂಜನೂರ್ ಎಂಬ ಕ್ಷೇತ್ರಗಳು ಕೂಡ ಇವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X