Search
  • Follow NativePlanet
Share
» »ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಇಲ್ಲಿ ತಮ್ಮ ಕೋರಿಕೆ ಈಡೇರಿದರೆ ಮಣ್ಣಿನ ಗೊಂಬೆಯನ್ನು ಹರಕೆ ಸಲ್ಲಿಸುತ್ತಾರೆ ಭಕ್ತರು

ಒಂದೊಂದು ದೇವಾಲಯದಲ್ಲಿ ಒಂದೊಂದು ವಿಶೇಷವಿರುತ್ತದೆ. ಭಕ್ತರು ಹರಕೆ ಹೊತ್ತರೆ ಅದು ಈಡೇರಿದ ನಂತರ ಬೇರೆ ಬೇರೆ ರೀತಿಯಲ್ಲಿ ಹರಕೆ ಸಲ್ಲಿಸಲಾಗುವುದು. ಕೆಲವು ದೇವಾಲಯದಲ್ಲಿ ಪಟ್ಟೆ ಸೀರೆ ನೀಡುವ ಆಚರಣೆ ಇದ್ದರೆ ಇನ್ನೂ ಕೆಲವು ದೇವಾಲಯದಲ್ಲಿ ಬೆಲೆಬಾಳುವ ವಸ್ತುಗಳು, ಗಂಟೆ ಹೀಗೆ ಇನ್ನಿತರ ವಸ್ತುಗಳನ್ನು ಸಲ್ಲಿಸಬೇಕಾಗುತ್ತದೆ. ಹಾಗೆ ಸಲ್ಲಿಸಿದರೆ ಮಾತ್ರ ಅವರ ಹರಕೆ ಈಡೇರುತ್ತದೆ. ಇಂದು ನಾವು ಹೇಳ ಹೊರಟಿರುವ ದೇವಾಲಯದಲ್ಲಿ ನಿಮ್ಮ ಹರಕೆ ಈಡೇರಿದರೆ ಮಣ್ಣಿನ ಗೊಂಬೆ ಕೊಡುತ್ತಾರಂತೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

ಇಲ್ಲಿನ ದೇವರಿಗೆ ಮಣ್ಣಿನ ಗೊಂಬೆಗಳನ್ನು ಹರಕೆಯಾಗಿ ನೀಡುತ್ತಾರೆ. ಭಕ್ತರು ಏನಾದರೂ ಬೇಡಿಕೆಯನ್ನು ದೇವರ ಮುಂದಿಟ್ಟು ಅದು ಈಡೇರಿದಲ್ಲಿ ಮಣ್ಣಿನ ಗೊಂಬೆಗಳನ್ನು ಹರಕೆಯಾಗಿ ನೀಡುತ್ತಾರೆ.

ಸದಾಶಿವ ರುದ್ರ

ಸದಾಶಿವ ರುದ್ರ

PC: youtube
ಈ ಸದಾಶಿವ ರುದ್ರ ದೇವಸ್ಥಾನವು ಸೂರ್ಯ ಎಂಬ ಹಳ್ಳಿಯಲ್ಲಿರುವುದರಿಂದ ಇದನ್ನು ಸೂರ್ಯ ದೇವಸ್ಥಾನ ಎನ್ನಲಾಗುತ್ತದೆ. ಮಾಧ್ವ ಸಂಪ್ರದಾಯದ ಶಿವನ ಪ್ರಮುಖ ದೇವಾಲಯ ಇದಾಗಿದೆ. ಶಿವನನ್ನು ರುದ್ರನೆಂದು ಸಂಭೋಧಿಸಿ ಪೂಜಿಸಲಾಗುತ್ತದೆ

ಹರಕೆ ಸಲ್ಲಿಕೆ

ಹರಕೆ ಸಲ್ಲಿಕೆ

PC: youtube

ಹರಕೆ ಈಡೇರಿದ ನಂತರ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ ಹಾಗೂ ಐದು ರೂ. ಕಾಣಿಕೆ ಜೊತೆ ಈ ಮಣ್ಣಿನ ಗೊಂಬೆಯನ್ನು ಅರ್ಪಿಸಬೇಕು. ನೀವು ಯಾವ ರೀತಿಯ ಹರಕೆ ಹೇಳುತ್ತೀರೋ ಯಾವ ಕೋರಿಕೆಯನ್ನು ಕೋರುತ್ತೀರೋ ಅದೇ ರೀತಿಯ ಹರಕೆಯನ್ನು ಮಣ್ಣಿನ ಗೊಂಬೆಗಳ ರೂಪದಲ್ಲಿ ತೀರಿಸಬೇಕು.

ಹರಕೆಯ ಪ್ರಕಾರ ಗೊಂಬೆ

ಹರಕೆಯ ಪ್ರಕಾರ ಗೊಂಬೆ

PC: youtube
ಉದಾ: ಮನೆ ನಿರ್ಮಾಣಕ್ಕೆ ಹರಕೆ ಹೊತ್ತರೆ ಮಣ್ಣಿನ ಮನೆಯ ಆಕೃತಿಯನ್ನು ಅರ್ಪಿಸಬೇಕು. ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿದರೆ ಮಗು ಜನಿಸಿದ ನಂರ ಮಣ್ಣಿನ ತೊಟ್ಟಿಲನ್ನು ಅರ್ಪಿಸಬೇಕು.

ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ

ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ

PC: youtube
ಈ ಗೊಂಬೆಗಳನ್ನು ಆವೆ ಮಣ್ಣಿನಲ್ಲಿ ಮಾಡಲಾಗುತ್ತದೆ. ದೂರದೂರದ ಊರಿಗಳಿಂದ ಬರುವ ಭಕ್ತರಿಗೆ ಸಹಾಯವಾಗುವಂತೆ ಮಣ್ಣಿನ ಗೊಂಬೆಗಳನ್ನು ಕುಂಬಾರರದಿಂದ ಮಾಡಿಸಿ ದೇವಸ್ಥಾನದ ಆವರಣದಲ್ಲೇ ಲಭ್ಯವಿರುವಂತೆ ಮಾಡಲಾಗಿದೆ. ೫೦ ರೂ.ಯಿಂದ ೨೦೦ ವರೆಗೆ ಮಣ್ಣಿನ ಗೊಂಬೆಗಳನ್ನು ಇಲ್ಲಿ ಕಾಣಬಹುದು.

ಹರಕೆ ಬನ

ಹರಕೆ ಬನ

PC: youtube

ದೇವಸ್ಥಾನದಿಂದ ಉತ್ತರಕ್ಕೆ ೧೦೦ ಮೀ. ದೂರದಲ್ಲಿ ಒಂದು ಹರಕೆ ಬನವಿದೆ. ಅರ್ಚಕರು ಹರಕೆಯ ಗೊಂಬೆಗಳನ್ನು ಆ ಬನದಲ್ಲಿ ಇಡುತ್ತಾರೆ. ಭಕ್ತರು ಅರ್ಪಿಸಿದ ಗೊಂಬೆಗಳನ್ನು ಅಕ್ಕಿಯನ್ನು ಮಧ್ಯಾಹ್ನದ ಪೂಜೆಗೂ ಮೊದಲು ಸಲ್ಲಿಸಬೇಕು . ಅದನ್ನು ಹರಕೆ ಬನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ಗೊಂಬೆಗಳನ್ನು ಜೋಡಿಸುತ್ತಾರೆ.

ಪುರಾಣ ಕಥೆ

ಪುರಾಣ ಕಥೆ

PC: youtube
ಭೃಗು ಮಹರ್ಷಿಯ ಶಿಷ್ಯರೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು. ಅವರ ಭಕ್ತಿಗೆ ಮೆಚ್ಚಿ ಶಿವ ಪಾರ್ವತಿ ಪ್ರತ್ಯಕ್ಷರಾಗಿ ಲಿಂಗರೂಪದಲ್ಲಿ ಈ ಕ್ಷೇತ್ರದಲ್ಲಿ ನೆಲೆಯಾದರು ಎನ್ನಲಾಗುತ್ತದೆ.

ಕೆರೆಕಟ್ಟೆ

ಕೆರೆಕಟ್ಟೆ

ಮಂದಿರದಲ್ಲೊಂದು ಕೊಳವಿದೆ. ಪ್ರತಿವರ್ಷ ವಾರ್ಷಿಕ ಮಹೋತ್ಸವದಂದು ಈ ಕೆರೆಕಟ್ಟೆ ಮಹೋತ್ಸವ ನಡೆಸಲಾಗುವುದು.ಆಗ ಈ ಕೆರೆಗೆ ಪೂಜೆ ನಡೆಸಲಾಗುವುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X