Search
  • Follow NativePlanet
Share
» »ಸೂರ್ಯೋದಯದ ಮೊದಲ ಕಿರಣ ಈ ಸೂರ್ಯ ದೇವಾಲಯದ ಗರ್ಭಗುಡಿಯಲ್ಲಿ

ಸೂರ್ಯೋದಯದ ಮೊದಲ ಕಿರಣ ಈ ಸೂರ್ಯ ದೇವಾಲಯದ ಗರ್ಭಗುಡಿಯಲ್ಲಿ

ಸೂರ್ಯನು ನಮ್ಮ ಹಿಂದೂ ಪುರಾಣಗಳಲ್ಲಿ ಅತ್ಯಂತ ಬಲಶಾಲಿ ದೇವತೆ. ದಿನ ಬೆಳಗಾದರೆ ಸೂರ್ಯ ನಮಸ್ಕರದ ಮೂಲಕ ದಿನವನ್ನು ಆರಂಭಿಸುವ ನಾವು ದಿನನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸುತ್ತೆವೆ. ಸೂರ್ಯನಿಗೆ ಮುಡಿಪಾದ ಹಲವು ದೇವಾಲಯಗಳಿವೆ ಅವುಗಳಲ್ಲಿ ಪ್ರಸಿದ್ದವಾದುದು, ಗುಜರಾತ್ ರಾಜ್ಯದ ಮೆಹ್ಸನ ಜಿಲ್ಲೆಯ ಮೊಢೆರಾ ಎಂಬ ಹಳ್ಳಿಯಲ್ಲಿ ಸೂರ್ಯ ದೇವಾಲಯವಿದೆ. ಈ ಸೂರ್ಯ ದೇವಾಲಯವನ್ನು ಭಾರತದ ಪುರಾತತ್ವ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಸೂರ್ಯ ದೇವಾಲಯವು ಅಹಮದಾಬಾದ್ ನಿಂದ 100 ಕಿ,ಮೀನ ಬಳಿ ಇರುವ ಪುಷ್ಪವತಿ ನದಿ ಹತ್ತಿರ ಈ ದೇವಾಲಯವಿದೆ. ಕ್ರಿ.ಪೂ 1025 ರಿಂದ 1026ತ ಅವಧಿಯ ಮಧ್ಯೆಯಲ್ಲಿ ಸೋಲಂಕಿ ರಾಜ ಮನೆತನದವರು ನಿರ್ಮಿಸಿರುವುದಾಗಿದೆ. ವಿದೇಶಿ ಆಕ್ರಮಣಗಾರ ಮಹಮದ್ ಖಜ್ನಿ ತನ್ನ ಆಧೀನಕ್ಕೆ ತೆಗೆದುಕೊಂಡು ಸೋಮನಾಥ ಮತ್ತು ಸುತ್ತಮುತ್ತಲ ಪ್ರದೇಶದ ವೈಭವವನ್ನು ನಾಶಪಡಿಸಿದನು ಎಂದು ಸೂರ್ಯ ದೇವಾಲಯದ ಒಂದು ಗೋಡೆಯ ಮೇಲೆ ಕೆತ್ತಲಾಗಿದೆ. ಪ್ರಸುತ್ತದ ಲೇಖನದಲ್ಲಿ ಮೊಢೆರಾದ ಸೂರ್ಯ ದೇವನ ದೇವಾಲಯದ ಬಗ್ಗೆ ತಿಳಿಯೋಣ.

1.ಅಹಿಲ್ ವಾಡ್ ಪಟ್ಟಣ

1.ಅಹಿಲ್ ವಾಡ್ ಪಟ್ಟಣ

ಸೋಲಂಕಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಿಲ್ ವಾಟ್ ತನ್ನ ಗತ ವೈಭವವನ್ನು ಸಂಪೂರ್ಣವಾಗಿ ನಾಶ ಹೊಂದಿತು.

PC:Kinjalps

2.ಸೋಲಂಕಿ

2.ಸೋಲಂಕಿ

ಸೋಲಂಕಿಯರು ತಮ್ಮ ಪೂರ್ವ ವೈಭವವನ್ನು ಮತ್ತೆ ಹೊಂದಲು ಒಂದು ಸುಂದರವಾದ ದೇವಾಲಯವನ್ನು ನಿರ್ಮಿಸಲು ನಾಂದಿ ಹಾಡಿದರು.

PC:Bernard Gagnon

3.ಕುಲದೇವತ

3.ಕುಲದೇವತ

ಸೋಲಂಕಿಯ ವಂಶಸ್ಥರು ಸೂರ್ಯ ದೇವನನ್ನು ಆರಾಧಿಸುತ್ತಿದ್ದರು. ಹಾಗಾಗಿ ಈ ದೇವನ್ನು ತಮ್ಮ ಆರಾಧ್ಯ ದೈವವಾಗಿತ್ತು

PC:photo

4.ಮೊಢೆರಾ ಸೂರ್ಯ ದೇವನ ದೇವಾಲಯ

4.ಮೊಢೆರಾ ಸೂರ್ಯ ದೇವನ ದೇವಾಲಯ

ಆದ್ದರಿಂದ ಸೋಲಂಕಿಯವರ ಆರಾಧ್ಯ ದೈವನ ದೇವಾಲಯವನ್ನು ಮೊಢೆರಾದಲ್ಲಿ ಅತ್ಯಂತ ಸುಂದರವಾಗಿ ನಿರ್ಮಿಸಿದರು. ಈ ರೀತಿ ಸೂರ್ಯದೇವನ ದೇವಾಲಯ ನಿರ್ಮಾಣವಾಯಿತು.

PC Parmar uday


5. ಸೂರ್ಯದೇವನ ದೇವಾಲಯ

5. ಸೂರ್ಯದೇವನ ದೇವಾಲಯ

ಭಾರತದಲ್ಲಿ 3 ಸೂರ್ಯದೇವನ ದೇವಾಲಯಗಳಿವೆ. ಇದರಲ್ಲಿ ಮೊದಲನೆಯದು ಒರಿಸ್ಸಾದಲ್ಲಿನ ಕೋಣಾರ್ಕ ದೇವಾಲಯ, ಎರಡನೇಯದು ಜಮ್ಮುದಲ್ಲಿನ ಮಾರ್ತಾಂಡ ದೇವಾಲಯ, ಮೂರನೇಯದು ಆಂಧ್ರ ಪ್ರದೇಶದ ಅರಸಪಲ್ಲಿಯಲ್ಲಿನ ದೇವಾಲಯ.

PC:Unmesh Dinda

6.ನಿರ್ಮಾಣದ ಶೈಲಿ

6.ನಿರ್ಮಾಣದ ಶೈಲಿ

ಪ್ರತಿಯೊಂದು ದೇವಲಯದಲ್ಲೂ ತನ್ನದೇ ಆದ ನಿರ್ಮಾಣ ಶೈಲಿ ಇರುತ್ತದೆ. ಆದರೆ ಈ ದೇವಾಲಯದಲ್ಲಿ ಸುಣ್ಣವನ್ನು ಕೂಡ ಬಳಸದೇ ನಿರ್ಮಾಣ ಮಾಡಿರುವುದು ದೇವಾಲಯದ ವಿಶೇಷತೆಯಾಗಿದೆ.

PC :Simon.kumar2906

7.ಭಿಂದೆವ್

7.ಭಿಂದೆವ್

ಇರಾನಿ ಶಿಲ್ಪಕಲಾ ಶೈಲಿಯಲ್ಲಿ 2 ಭಾಗಗಳಾಗಿ ಈ ದೇವಾಲಯವನ್ನು ಭಿಂದೆವ್ ನಿರ್ಮಿಸಿದರು.

PC:Unmesh Dinda


9. ಅತ್ಯಂತ ಸುಂದರವಾದ ಮೇಲ್ಛಾವಣಿ

9. ಅತ್ಯಂತ ಸುಂದರವಾದ ಮೇಲ್ಛಾವಣಿ

ಈ ದೇವಾಲಯದ ಒಳಭಾಗದಲ್ಲಿ ಅತ್ಯಂತ ಸುಂದರವಾದ ಮೇಲ್ಚಾವಣಿ ಹೊಂದಿದ್ದು, ದೇವಾಲಯದ ಸಭಾ ಮಂಟಪದಲ್ಲಿ ಸುಮಾರು 52 ಸ್ತಂಭಗಳಿವೆ. ಈ ಸ್ತಂಭಗಳ ಮೇಲೆ ಅದ್ಭುತವಾದ ದೇವತೆಗಳ ವಿಗ್ರಹಗಳನ್ನು ಕಾಣಬಹುದಾಗಿದೆ.

PC:Riddhi janki

10 ಪ್ರಧಾನ ವಿಷಯ

10 ಪ್ರಧಾನ ವಿಷಯ

ಈ ದೇವಾಲಯದ ಪ್ರಧಾನವಾದ ವಿಷಯವೆನೆಂದರೆ ಇಲ್ಲಿ ರಾಮಾಯಾಣ ಹಾಗೂ ಮಹಾಭಾರತದಲ್ಲಿನ ಪ್ರಧಾನ ವಿಷಯವನ್ನು ಕೂಡ ಕೆತ್ತಲಾಗಿದೆ.

PC :Kaushik Patel

12.ಮೊದಲ ಸೂರ್ಯ ಕಿರಣ

12.ಮೊದಲ ಸೂರ್ಯ ಕಿರಣ

ಸೂರ್ಯೋದಯವಾದ ತಕ್ಷಣ ಮೊದಲ ಸೂರ್ಯಕಿರಣ ದೇವಾಲಯದ ಗರ್ಭಗುಡಿಯನ್ನು ಸ್ಪರ್ಶಿಸುವ ಹಾಗೆ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

PC: Bernard Gagnon

13.ರಾಮ ಕೊಳ

13.ರಾಮ ಕೊಳ

ಈ ದೇವಾಲಯದ ಸಭಾ ಮಂಟಪದ ಎದುರು ವಿಶಾಲವಾದ ಕೊಳವಿದ್ದು, ಇದನ್ನು ಸೂರ್ಯ ಕೊಳ ಅಥವಾ ರಾಮ ಕೊಳ ಎಂದು ಕರೆಯುತ್ತಾರೆ.

PC :Bernard Gagnon

14.ಸೂರ್ಯ ದೇವಾಲಯ

14.ಸೂರ್ಯ ದೇವಾಲಯ

ಅಲ್ಲಾವುದ್ದಿನ್ ಖಿಲ್ಜಿ ಸೂರ್ಯ ದೇವಾಲಯದ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ ಸಮಯದಲ್ಲಿ ಸೂರ್ಯ ದೇವಾಲಯವನ್ನು ಸಂಪೂರ್ಣವಾಗಿ ನಾಶಪಡಿಸಿದನು.

PC :Parmar uday


15.ಭಾರತೀಯ ಪುರಾತತ್ವ ಶಾಖೆ

15.ಭಾರತೀಯ ಪುರಾತತ್ವ ಶಾಖೆ

ಈ ದೇವಾಲಯವನ್ನು ಪ್ರಸುತ್ತ ಭಾರತೀಯ ಪುರಾತತ್ವ ಶಾಖೆಯು ತನ್ನ ಅಧೀನದಲ್ಲಿ ಇಟ್ಟು ಕೊಂಡಿದೆ.

PC :Umang

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X