Search
  • Follow NativePlanet
Share
» »ಫ್ಯಾಮಿಲಿ ಜೊತೆ ಸುತ್ತಾಡೋದಾದ್ರೆ ಈ ತಾಣಗಳಿಗೆ ಹೋಗೋದು ಬೆಸ್ಟ್

ಫ್ಯಾಮಿಲಿ ಜೊತೆ ಸುತ್ತಾಡೋದಾದ್ರೆ ಈ ತಾಣಗಳಿಗೆ ಹೋಗೋದು ಬೆಸ್ಟ್

ದೇಶದ ಅನೇಕ ನಗರಗಳಲ್ಲಿ ತಾಪಮಾನ 45ಡಿಗ್ರಿಗೆ ತಲುಪಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಳೆ ಬೀಳಲಾರಂಭಿಸಿದೆ. ಕರ್ನಾಟಕದಲ್ಲಂತೂ ಬೇಸಿಗೆಯ ರಜಾ ಮುಗಿದು ಶಾಲೆ ಆರಂಭವಾಗಿದೆ. ಈ ಮಳೆಗಾಲದಲ್ಲಿ ಅನೇಕರು ಫ್ಯಾಮಿಲಿ ಜೊತೆ ತಂಪಾದ ಜಾಗಕ್ಕೆ ತೆರಳುತ್ತಾರೆ. ಮಳೆಗಾಲದಲ್ಲಿ ಹಚ್ಹ ಹಸಿರಿನ ಪ್ರದೇಶಕ್ಕೆ ಪ್ರಯಾಣ ಬೆಳೆಸುವುದರ ಮಜಾನೇ ಬೇರೆ. ನೀವೂ ಕೂಡಾ ಈ ಮಳೆಗಾಲದಲ್ಲಿ ಯಾವುದಾದರೂ ತಂಪಾದ ಜಾಗಕ್ಕೆ ಸುತ್ತಾಡಬೇಕೆಂದಿದ್ದರೆ ಇಲ್ಲಿದೆ ಭಾರತದ ಆರು ತಂಪಾದ ಜಾಗಗಳು.

ಕೂರ್ಗ್

ಕೂರ್ಗ್

ಕರ್ನಾಟಕದಲ್ಲಿರುವ ಕೂರ್ಗನ್ನು ಭಾರತದ ಸ್ಕಾರ್ಟ್‌ಲ್ಯಾಂಡ್ ಎಂದು ಕರೆಯಲಾಗುತ್ತದೆ. ಇಲ್ಲಿ ನಿಮಗೆ ಬೇಸಿಗೆಯಿಂದ ಮುಕ್ತಿ ಸಿಗುತ್ತದೆ. ಹಾಗೆಯೇ ಮಳೆಗಾಲದಲ್ಲೂ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ನಗರವು ಪ್ರಾಕೃತಿಕ ಸೌಂದರ್ಯ ಹಾಗೂ ತಂಪಾದ ವಾತಾವರಣಕ್ಕಾಗಿಯೇ ಪ್ರಸಿದ್ಧಿ ಹೊಂದಿದೆ. ಭಾರತದಲ್ಲಿನ ಬೆಸ್ಟ್‌ ಹಿಲ್‌ಸ್ಟೇಶನ್‌ಗಳಲ್ಲಿ ಕೂರ್ಗ್ ಕೂಡಾ ಒಂದು. ಇಡೀ ಫ್ಯಾಮಿಲಿ ಜೊತೆ ಹೋಗುವುದಾದರೆ ಕೂರ್ಗ್ ಬೆಸ್ಟ್ ತಾಣವಾಗಿದೆ.

ಕಾಶ್ಮೀರ

ಕಾಶ್ಮೀರ

ಕಾಶ್ಮೀರಕ್ಕೆ ಹೋಗಲು ಬೇಸಿಗೆಗಾಲ ಬೆಸ್ಟ್ ಆಗಿದೆ. ಇದನ್ನು ಭೂಮಿಯಲ್ಲಿನ ಸ್ವರ್ಗ ಎಂದೂ ಕರೆಯಲಾಗುತ್ತದೆ. ಬೃಹತ್ ಸಂಖ್ಯೆಯಲ್ಲಿ ಜನರು ಇಲ್ಲಿ ಆಗಮಿಸುತ್ತಾರೆ. ಕಾಶ್ಮೀರದ ಸುಂದರ ಬೆಟ್ಟ ಗುಡ್ಡಗಳು ಕಣ್ಣಿಗೆ ಕಂಪನ್ನು ನೀಡುತ್ತದೆ.

ಮನಾಲಿ

ಮನಾಲಿ

ಹಿಮಾಚಲ ಪ್ರದೇಶದ ಮನಾಲಿಯು ತನ್ನ ಸೌಂದರ್ಯ ಹಾಗೂ ತಂಪಾದ ವಾತಾವರಣಕ್ಕೆ ಪ್ರಸಿದ್ಧಿ ಹೊಂದಿದೆ. ಮನಾಲಿಯ ಹಚ್ಚ ಹಸಿರು ಇಲ್ಲಿ ಬರುವ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಮನಾಲಿ ದೆಹಲಿಯಿಂದ ಸುಮಾರು ೫೫೦ ಕಿ.ಮೀ ದೂರದಲ್ಲಿದೆ. ಇಲ್ಲಿ ಬಣ್ಣ ಬಣ್ಣದ ಹೂವುಗಳು ಕಾಣಲು ಸಿಗುತ್ತದೆ.

ನೈನಿತಾಲ್

ನೈನಿತಾಲ್

ನೈನಿತಾಲ್ ಉತ್ತರಖಂಡದಲ್ಲಿರುವ ಒಂದು ನಗರವಾಗಿದೆ. ಈ ನಗರವು ಪ್ರವಾಸಿಗರ ಮಧ್ಯೆ ಬಹಳ ಪ್ರಸಿದ್ಧಿ ಹೊಂದಿದೆ. ಈ ನಗರವು ಉತ್ತರಖಂಡದ ಶಿವಾಲಿಕಾ ಪರ್ವತ ಶ್ರೇಣಿಯಲ್ಲಿದೆ. ಇಲ್ಲಿಗೆ ಕೇವಲ ಭಾರತದಿಂದ ಮಾತ್ರವಲ್ಲ ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ.

ಡೆಹ್ರಾಡೂನ್

ಡೆಹ್ರಾಡೂನ್

ಡೆಹ್ರಾಡೂನ್ ಉತ್ತರಖಂಡದ ರಾಜಧಾನಿಯಾಗಿದೆ. ಇಲ್ಲಿ ಸುತ್ತಾಡಲು ಸಾಕಷ್ಟು ಸ್ಥಳವಿದೆ. ಈ ನಗರವು ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಬೆಟ್ಟ ಗುಡ್ಡಗಳಿಂದಾಗಿ ಪ್ರಸಿದ್ಧಿ ಹೊಂದಿದೆ. ರಜಾದಿನಗಳನ್ನು ಕಳೆಯಲು ಬೆಸ್ಟ್ ತಾಣವಾಗಿದೆ. ಇಲ್ಲಿ ರಿವರ್ ರಾಫ್ಟಿಂಗ್, ಟ್ರಕ್ಕಿಂಗ್‌ನ ಮಜಾವನ್ನೂ ಪಡೆಯಬಹುದು.

ಊಟಿ

ಊಟಿ

ಇದು ತಮಿಳುನಾಡು ರಾಜ್ಯದಲ್ಲಿದೆ. ಇದೂ ಕೂಡಾ ಒಂದು ಹಿಲ್‌ಸ್ಟೇಶನ್ ಆಗಿದೆ. ಊಟಿಯಲ್ಲಿ ಸುಂದರವಾದ ಕಾಟೇಜ್, ಪ್ಲವರ್ ಗಾರ್ಡನ್, ಚರ್ಚ್, ಬೊಟಾನಿಕಲ್ ಗಾರ್ಡನ್ ಕೂಡಾ ಇದೆ. ಬೇಸಿಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X