Search
  • Follow NativePlanet
Share
» »ಈ ಬೇಸಿಗೆಯ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

ಈ ಬೇಸಿಗೆಯ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಸ್ಥಳಗಳು ಯಾವುವು ಗೊತ್ತ?

By Sowmyabhai

ಬೇಸಿಗೆಯ ತಾಪ ಈಗಾಗಲೇ ಮೊದಲಾಯಿತು. ಇನ್ನು ಸ್ಲಲ್ಪದಿನಗಳಲ್ಲೇ ಮಕ್ಕಳಿಗೆ ರಜೆ ಪ್ರಾರಂಭವಾಗುತ್ತದೆ. ಇದರಿಂದ ಈ ಬೇಸಿಗೆಯನ್ನು ಎದುರಿಸಲು ಯಾವಾಗಲೂ ಈ ವಿಷಯದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುವುದು ಸಾಮಾನ್ಯ. ಇನ್ನು ಮಕ್ಕಳೇನೂ ಪ್ರತಿ ವರ್ಷವು ಈ 2 ಪ್ರದೇಶದಲ್ಲಿ ಒಂದು ಪ್ರದೇಶಕ್ಕೆ ಭೇಟಿ ನೀಡಿದೆವು ಎಂದು ಸಂಭ್ರಮಿಸುತ್ತಿರುತ್ತಾರೆ. ಈ ಮೂಲಕ ಪ್ರತಿ ಮನೆಯಲ್ಲಿ ಮಕ್ಕಳು ಹಟ ಮಾಡುವುದು ಸಾಮಾನ್ಯವೇ. ಹೀಗಾಗಿಯೇ ನಿಮ್ಮ ನೇಟಿವ್ ಪ್ಲಾನೆಟ್‍ನಲ್ಲಿ ದೇಶದಲ್ಲಿ ಬೇಸಿಗೆಯ ಅತ್ಯಂತ ಅನುಕೂಲಕರವಾದ ಕೆಲವು ಪ್ರವಾಸಿ ಪ್ರದೇಶಗಳ ಬಗ್ಗೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿದುಕೊಳ್ಳೊಣ.

ಅವುಗಳಲ್ಲಿ ಮೂಖ್ಯವಾದುದು ಹಾಗು ಸಮೀಪವಾದುದು ಕೆಲವು ಪ್ರದೇಶಗಳ ಬಗ್ಗೆ ತಿಳಿದುಕೊಳ್ಳೊಣ.

1.ಲಡಖ್

1.ಲಡಖ್

Image source

ಕಲ್ಲು ಕೂಡ ಕರಗುವ ಬೇಸಿಗೆಯಲ್ಲಿಯೂ ಕೂಡ ತಂಪಾದ ವಾತಾವರಣವು ಅಸ್ವಾಧಿಸಬೇಕು ಎಂದರೆ ಲಡಖ್ ಅತ್ಯುತ್ತಮವಾದ ಪ್ರದೇಶವಾಗಿದೆ. ಈ ಪ್ರವಾಸಿ ಪ್ರದೇಶದಲ್ಲಿ ಸುತ್ತ-ಮುತ್ತ ಅತ್ಯಂತ ಹಚ್ಚ ಹಸಿರಿನ ಪರ್ವತ ಪ್ರದೇಶದ ಜೊತೆ ಸ್ವಚ್ಛತೆಗೂ ಕೂಡ ಪ್ರಸಿದ್ಧವಾದ ಸ್ಥಳವೇ ಆಗಿದೆ. ಇಲ್ಲಿ ಅನೇಕ ನದಿಗಳು ಕೂಡ ಇವೆ. ವರ್ಷದಲ್ಲಿ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಅಷ್ಟೆ ಅಲ್ಲ ಅನೇಕ ಪ್ರವಾಸಿಗರು ಕೂಡ ಭೇಟಿ ನೀಡುತ್ತಿರುತ್ತಾರೆ.

2.ಶ್ರೀನಗರ

2.ಶ್ರೀನಗರ

Image source

ಸುತ್ತಲೂ ಎತ್ತರವಾದ ಮಂಜಿನ ಬೆಟ್ಟಗಳು, ಸ್ವಚ್ಛವಾದ ನೀರನ್ನು ಹೊಂದಿರುವ ನದಿಗಳು ಪ್ರಕೃತಿಯಲ್ಲಿನ ಸೌಂದರ್ಯವನ್ನೆಲ್ಲಾ ತನ್ನಲ್ಲಿಯೇ ಹೊಂದಿರುವ ಈ ಶ್ರೀನಗರವು ಪ್ರವಾಸಿಗರಿಗೆ ಬೇಸಿಗೆಯ ಸಮಯದಲ್ಲಿ ಬಾ..ಬಾ... ಎಂದು ಆಹ್ವಾನಿಸುತ್ತದೆ. ಚಳಿಗಾಲಕ್ಕಿಂತ ಬೇಸಿಗೆಯ ಕಾಲದಲ್ಲಿ ಇಲ್ಲಿ ವಿಹಾರಿಸಲು ಅನುಕೂಲಕರವಾದುದು. ಶ್ರೀನಗರದ ನದಿಯಲ್ಲಿ ಬೋಟ್‍ನಲ್ಲಿ ವಿಹಾರಿಸುತ್ತಾ ಪ್ರಕೃತಿಯನ್ನು ಅಸ್ವಾಧಿಸಬಹುದು. ಜೀವನದಲ್ಲಿ ಎಂದೂ ಮರೆಯಲಾಗದದಂತಹ ಅನುಭವವನ್ನು ಉಂಟು ಮಾಡುತ್ತದೆ. ಅಲ್ಲಿನ ಸೌಂದರ್ಯವನ್ನು ಮಾತಿನಲ್ಲಿಯೇ ವರ್ಣಿಸಲಾಗದಂಹುದು.

ಇಲ್ಲಿ ದಾಲ್ ಲೇಕ್, ನಿಷಾಂತ್ ಭಾಗ್, ಷಾಪಿಮರ್ ಭಾಗ್, ಜಿಲ್ ಉಲ್ ಅಭಿದ್ಧಿನ್ ಸಮಾಧಿ, ಜಾಮಾ ಮಸೀದಿ, ಹಜ್ರತ್ ಮಸೀದಿ, ಶಂಕರಾಚಾರ್ಯ ಹಿಲ್ಸ್ ಮುಂತಾದ ಪ್ರದೇಶಗಳು ಇಲ್ಲಿ ಕಾಣಬಹುದು. ಶ್ರೀನಗರಕ್ಕೆ ದೇಶದಲ್ಲಿನ ವಿವಿಧ ಪ್ರದೇಶಗಳಿಂದ ವಿಮಾನಯಾನಗಳು ಸಂಪರ್ಕ ಸಾಧಿಸುತ್ತವೆ.

3.ಮನಾಲಿ

3.ಮನಾಲಿ

Image source

ಭಾರತ ದೇಶದಲ್ಲಿ ಅನೇಕ ಮಂದಿಗೆ ಮನಾಲಿ ಅತ್ಯಂತ ಪ್ರಿಯವಾದ ಪ್ರವಾಸಿ ಪ್ರದೇಶ ಎಂದು ಹೇಳಬಹುದು. ಮುಖ್ಯವಾಗಿ ಇಲ್ಲಿಗೆ ಹನಿಮೂನ್ ಜೋಡಿಗಳು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ. ಅದೇ ವಿಧವಾಗಿ ಬೇಸಿಗೆಯಲ್ಲಿ ಈ ಪ್ರದೇಶವು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತಿರುತ್ತದೆ. ಇಲ್ಲಿ ಆಶ್ರಯಕ್ಕೂ ಕೂಡ ಉತ್ತಮವಾದ ಅನುಕೂಲ ಕೂಡ ಇವೆ. ಇದು ಹೀಗೆ ಇದ್ದರೆ ಬೇಸಿಗೆಯ ಕಾಲದಲ್ಲಿ ಸಾಹಸಮಯವಾದ ಸ್ಥಳಕ್ಕಾಗಿ ಮನಾಲಿಗೆ ಭೇಟಿ ನೀಡುವವರ ಸಂಖ್ಯೆ ಕೂಡ ಹೆಚ್ಚಾಗಿ ಇರುತ್ತದೆ.

ಮನಾಲಿಯಲ್ಲಿ ಜಾದಿಂಬಾ ದೇವಾಲಯ, ಕ್ಲಬ್ ಹೌಸ್, ಸೊಲಾಂಗ್ ಕಣಿವೆ, ಜೋಗಿ ವಾಟರ್ ಫಾಲ್ಸ್, ಅರ್ಜುನ್ ಗುಹೆ ಇನ್ನು ಹಲವಾರು.

4.ನೈನಿತಾಲ್

4.ನೈನಿತಾಲ್

Image source

ಸಮುದ್ರ ಮಟ್ಟಕ್ಕೆ 1.938 ಅಡಿ ಎತ್ತರದಲ್ಲಿ ಉತ್ತರಖಂಡ್‍ನ ನೈನಿತಾಲ್ ಒಂದು ಉತ್ತಮ ಪ್ರವಾಸಿ ಪ್ರದೇಶವಾಗಿದೆ. ಭಾರತ ದೇಶದಲ್ಲಿ ಪ್ರವಾಸಿಗರು ಹೆಚ್ಚಾಗಿ ಇಷ್ಟ ಪಡುವ ನಗರದಲ್ಲಿ ಇದು ಕೂಡ ಒಂದು. ಇಲ್ಲಿರುವ ಪರ್ವತ ಪ್ರದೇಶಗಳು, ಕಣಿವೆಗಳು, ನದಿಗಳು ಹೀಗೆ ಪ್ರತಿಯೊಂದು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುತ್ತಿರುತ್ತದೆ. ಇಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇಲ್ಲಿ ರಾಜ್ ಭವನ್, ನೈನಿ ನದಿ, ಭೀಮ್ ಥಾಲ್, ನೈನಾದೇವಿ ದೇವಾಲಯ, ನೈನಿತಾಲ್ ಜೂ ತದಿತರ ಪ್ರದೇಶಗಳು ಇಲ್ಲಿ ನೋಡಬೇಕಾಗಿರುವ ಪ್ರದೇಶಗಳು.

5.ಮುನ್ನಾರ್

5.ಮುನ್ನಾರ್

Image source

ದಕ್ಷಿಣ ಭಾರತ ದೇಶದಲ್ಲಿ ಬೇಸಿಗೆ ಪ್ರವಾಸಿ ಪ್ರದೇಶದ ಜಾಬಿತಾಲ್‍ನಲ್ಲಿ ಮುನ್ನಾರ್‍ನ ಮೊದಲ ಸ್ಥಾನದಲ್ಲಿ ಇರುತ್ತದೆ. ಕೇರಳದಲ್ಲಿನ ಈ ಪ್ರವಾಸಿ ಪ್ರದೇಶದಲ್ಲಿ ಟೀ ತೋಟಗಳಿಗೂ ಕೂಡ ಪ್ರಸಿದ್ಧಿ ಹೊಂದಿದೆ. ಪರ್ವತ ಶಿಖರಗಳ ಮೇಲೆ ತೆರಳಿ ಹಚ್ಚ-ಹಸಿರಿನ ಸೌಂದರ್ಯವನ್ನು ಕಾಣಬೇಕು ಎಂದು ಅಂದುಕೊಳ್ಳುವವರು ಮುನ್ನಾರ್ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುತ್ತದೆ.

ಇನ್ನು ಮುನ್ನಾರ್‍ನಲ್ಲಿ ಆನೆಯ ಸಫಾರಿ, ಎಲಿಫೆಂಟ್ ನದಿ, ಅನ್ನಾಮುಡಿ ಪರ್ವತ ಶಿಖರ, ಟಾಟಾ ಟೀ ಮ್ಯೂಸಿಯಂ, ಚಿತ್ತಿರಾಪುರ, ದೇವಿ ಕುಲಂ ತದಿತರ ಪ್ರದೇಶಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಆನೆಯ ಸಫಾರಿ ಅತ್ಯಂತ ಹೆಸರುವಾಸಿ ಹೊಂದಿದೆ.

6.ಕೊಡೈಕೇನಾಲ್

6.ಕೊಡೈಕೇನಾಲ್

Image source

ತಮಿಳುನಾಡಿನಲ್ಲಿನ ಕೊಡೈಕೇನಾಲ್ ದಕ್ಷಿಣ ಭಾರತ ದೇಶದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಪರ್ವತ ಶಿಖರಗಳು, ಕೆಲವು ಕಣಿವೆ, ಜಲಪಾತಗಳು ಮೊದಲಾದ ನದಿಗಳರೆವಿಗೂ ಪ್ರತಿಯೊಂದು ನೋಡುವುದಕ್ಕೆ ಅತ್ಯಂತ ಅನುಕೂಲಕರವಾದ ಪ್ರದೇಶಗಳಾಗಿದೆ.

ಕೊಡೈಕೇನಾಲ್ ನದಿ, ಪಿಲ್ಲರ್ ರಾಕ್, ಡಾಲ್ಫಿನೊಸ್ ರಾಕ್, ನ್ಯಾಷನಲ್ ಮ್ಯೂಸಿಯಂ, ಷೋಲಾ ವಾಟರ್ ಫಾಲ್ಸ್ ಇಲ್ಲಿ ಮುಖ್ಯವಾಗಿ ನೋಡಬೇಕಾಗಿರುವ ಪ್ರದೇಶಗಳೇ ಆಗಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more