» »ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...

ಆಯಾಸವಿಲ್ಲದೆ ಉಲ್ಲಾಸದಿಂದ ನೋಡಿ...

By: Divya

ಬೇಸಿಗೆ ಬಂತೆಂದರೆ ಸಾಕು. ಬಿಸಿಲ ಉರಿ, ಏನೋ ಒಂದು ಬಗೆಯ ಆಯಾಸ, ಎಲ್ಲೂ ಓಡಾಡುವುದೇ ಬೇಡ, ಸುಮ್ಮನೆ ಕುಳಿತು ಬಿಡೋಣ ಎನ್ನುವಂತಹ ಮನಃಸ್ಥಿತಿ ಇರುತ್ತದೆ. ಹೀಗಿರುವಾಗ ಪ್ರವಾಸ ಅಥವಾ ಎಲ್ಲಾದರೂ ಸುತ್ತಾಡುವುದು ಎಂದರೆ ಅದೇನೋ ಉದಾಸೀನ ಭಾವನೆ. ಇಂತಹ ಭಾವಕ್ಕೆ ಹುಮ್ಮಸ್ಸು ನೀಡುವಂತಹ ಪ್ರದೇಶ ನಮ್ಮ ನಾಡಲ್ಲಿದೆ.

ಬೇಸಿಗೆಯ ಬಿಸಿಯಾದರೂ ಸರಿ, ಮಳೆಗಾಲದ ಮಳೆಯಾದರೂ ಸರಿ ಎಂತಹ ಕಾಲದಲ್ಲಾದರೂ ಆಯಾಸವಿಲ್ಲದೆ ಉಲ್ಲಾಸದಿಂದ ನೋಡುವಂತಹ ಸ್ಥಳಗಳಿವೆ. ಒಬ್ಬಂಟಿಯಾಗಿ ಯಾದರೂ, ಸಂಗಾತಿಯೊಡನೆಯಾದರೂ, ಕುಟುಂಬದವರೊಡನೆ, ಸ್ನೇಹಿತರೊಡನೆ ಅಥವಾ ಬಂಧು ಮಿತ್ರರೊಡಗೂಡಿಯಾದರೂ ಹೋಗುವಂತಹ ಸುಂದರ ತಾಣಗಳಿರುವುದು ಒಂದು ಹಿರಿಮೆ. ಬೇಸಿಗೆಯ ರಜೆಯ ಸಾರ್ಥಕಮಾಡಿಕೊಳ್ಳಲು ಇರುವ ಸುಂದರ ತಾಣಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ...

ಸಾವನದುರ್ಗ ಬೆಟ್ಟ

ಸಾವನದುರ್ಗ ಬೆಟ್ಟ

ಬೆಂಗಳೂರಿನಿಂದ 33 ಕಿ.ಮೀ. ದೂರದಲ್ಲಿರುವ ಈ ಬೆಟ್ಟ ಒಂದು ಸುಂದರ ಚಾರಣ ತಾಣ. ಬೇಸಿಗೆಯ ಮುಂಜಾನೆಯಲ್ಲಿ ಇಲ್ಲಿಗೆ ಬಂದರೆ ತಂಪಾದ ವಾತಾವರಣ ಹಾಗೂ ದೇಹಕ್ಕೊಂದು ಉತ್ತಮ ವ್ಯಾಯಾಮವಾಗುತ್ತದೆ. ಬಂಡೆಗಳನ್ನು ಹತ್ತುವುದು, ಹಸಿರು ವನದ ಮಧ್ಯೆ ಓಡಾಡುವುದು, ಸಾಹಸ ಕ್ರೀಡೆಗಳನ್ನು ಆಡುವುದಕ್ಕೆ ಈ ಬೆಟ್ಟ ಉತ್ತಮ ವೇದಿಕೆ.

ಸವನದುರ್ಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: wikimedia.org

ನಂದಿ ಬೆಟ್ಟ

ನಂದಿ ಬೆಟ್ಟ

ಸ್ಥಳೀಯರು ಹಾಗೂ ಪ್ರವಾಸಿಗರು ಯಾರೇ ಆಗಿರಲಿ, ಈ ಬೆಟ್ಟದ ತುದಿಯಲ್ಲಿ ನಿಂತು ಸುತ್ತ ಇರುವ ಪ್ರಕೃತಿಯ ಸೌಂದರ್ಯವನ್ನು ಖುಷಿಯಿಂದ ಸವಿಯಬಹುದು. ಮುಂಜಾವಿನಲ್ಲಿ ಹಾಗೂ ಸಾಯಂಕಾಲದ ಸಮಯದಲ್ಲಿ ಬಂದರೆ ಹಿಮದ ಮೋಡಗಳನ್ನು ನೋಡುತ್ತ ಖುಷಿ ಪಡಬಹುದು. ಇದು ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದೆ.

ನಂದಿಬೆಟ್ಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: wikimedia.org

ಬಂಡೀಪುರ ಅರಣ್ಯ

ಬಂಡೀಪುರ ಅರಣ್ಯ

ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿರುವ ಬಂಡೀಪುರ ಚಾರಣಕ್ಕೊಂದು ಸೂಕ್ತ ಜಾಗ. ಬೇಸಿಗೆಯಾದರೂ ಮುಂಜಾನೆ ಬೇಗ ಈ ಅರಣ್ಯದಲ್ಲಿ ನಡೆದರೆ, ಶುದ್ಧವಾದ ಗಾಳಿ, ತಂಪಾದ ವಾತಾವರಣದ ಜೊತೆಗೆ ಜಿಂಕೆ, ಆನೆ, ನವಿಲುಗಳಂತಹ ಪ್ರಾಣಿ ಪಕ್ಷಿಗಳನ್ನು ಬಹಳ ಹತ್ತಿರದಿಂದ ನೋಡಬಹುದು.

ಬಂಡೀಪುರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಳಿಬೋರೆ

ಗಾಳಿಬೋರೆ

ಕಾವೇರಿ ನದಿತೀರದಲ್ಲಿರುವ ಹಲವಾರು ವಿಹಾರ ತಾಣಗಳಲ್ಲಿ ಗಾಳಿಬೋರೆಯು ಒಂದು. ಬೆಂಗಳೂರಿನಿಂದ 102 ಕಿ.ಮೀ. ದೂರದಲ್ಲಿರುವ ಈ ತಾಣ ರಾಫ್ಟಿಂಗ್ ಹಾಗೂ ಮೀನು ಹಿಡಿಯಲು ಪ್ರಸಿದ್ಧ ಸ್ಥಳ. ಇಲ್ಲಿ ಸುಂದರವಾದ ಪ್ರಕೃತಿ ವೀಕ್ಷಣೆಯನ್ನು ಮಾಡಬಹುದು.

ತಡಿಯಾಂಡಮೋಲ್

ತಡಿಯಾಂಡಮೋಲ್

ಬಹಳ ಎತ್ತರದ ಗಿರಿಧಾಮಗಳಲ್ಲಿ ಒಂದಾದ ತಡಿಯಾಂಡಮೋಲ್ ಬೇಸಿಗೆಯಲ್ಲಿ ನೋಡಬಹುದಾದಂತಹ ಒಂದು ಸುಂದರ ತಾಣ. ಕೊಡಗು ಜಿಲ್ಲೆಯಲ್ಲಿರುವ ಈ ತಾಣ ಹೆಚ್ಚು ತಂಪಾದ ವಾತಾವರಣವನ್ನು ಹೊಂದಿರುತ್ತದೆ. ಸಾಹಸ ಕ್ರೀಡೆಯನ್ನು ಇಲ್ಲಿ ಆಡಬಹುದು. ಚಾರಣ ಪ್ರಿಯರಿಗೆ ಹೆಚ್ಚು ಖುಷಿಯನ್ನು ನೀಡಬಲ್ಲದು.

ತಡಿಯಾಂಡಮೋಲ್ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: wikimedia.org

ಕುದರೆಮುಖ

ಕುದರೆಮುಖ

ಇಲ್ಲಿ ಚಾರಣ ಮಾಡುವುದು ಒಂದು ಸಂಭ್ರಮ. 13 ಚಾರಣ ತಾಣವಿದೆ. ಸದಾ ಹಸಿರಾಗಿರುವ ಈ ತಾಣ ಬೆಂಗಳೂರಿನಿಂದ 338 ಕಿ.ಮೀ. ದೂರದಲ್ಲಿದೆ.

ಕುದ್ರೆಮುಖದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: wikimedia.org

ಕೊಡಗು

ಕೊಡಗು

ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣ ಕೊಡಗು. ಬೇಸಿಗೆಯಲ್ಲೂ ತನ್ನ ಮಡಿಲಲ್ಲಿ ಹಸಿರು ಸಿರಿಯನ್ನು ಜೋಪಾನ ಮಾಡಿ ಪ್ರವಾಸಿಗರಿಗೊಂದು ಖುಷಿ ನೀಡಬಲ್ಲದು. ಇಲ್ಲಿರುವ ಟಿಬೇಟ್ ಕಾಲೋನಿಯನ್ನು ಭೇಟಿ ನೀಡುವುದು ಒಂದು ಅದ್ಭುತ ಅನುಭವ ನೀಡುತ್ತದೆ.

ಕೊಡಗಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

PC: wikimedia.org

ನಾಗರಹೊಳೆ

ನಾಗರಹೊಳೆ

ಕೊಡಗಿನ ಆವೃತ್ತಿಯಲ್ಲಿ ಬರುವ ನಾಗರಹೊಳೆ ಬೇಸಿಗೆಯ ಪ್ರವಾಸಕ್ಕೊಂದು ಸೂಕ್ತ ತಾಣ. ಇಲ್ಲಿರುವ ಅಭಯಾರಣ್ಯದಲ್ಲಿ ವನ್ಯ ಜೀವಿಗಳ ವೀಕ್ಷಣೆಗೆ ಹೋಗಬಹುದು. ಕಬಿನಿ ಜಲಾಶಯದಲ್ಲಿ ಜಲಕ್ರೀಡೆ ಹಾಗೂ ಬೋಟಿಂಗ್ ಹೋಗಲು ಅವಕಾಶವಿದೆ.

ನಾಗರಹೊಳೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about: coorg, bangalore
Please Wait while comments are loading...