Search
  • Follow NativePlanet
Share
» »ಸುಲ್ಲಮಲೆಯಲ್ಲಿ ತೀರ್ಥ ಸ್ನಾನ ಮಾಡಿದ್ರೆ ಚರ್ಮವ್ಯಾದಿ ನಿವಾರಣೆಯಾಗುತ್ತಂತೆ...

ಸುಲ್ಲಮಲೆಯಲ್ಲಿ ತೀರ್ಥ ಸ್ನಾನ ಮಾಡಿದ್ರೆ ಚರ್ಮವ್ಯಾದಿ ನಿವಾರಣೆಯಾಗುತ್ತಂತೆ...

ಸುಲ್ಲಮಲೆ ತೀರ್ಥದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಿನ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಿದರೆ ರೋಗರುಜಿನಗಳು ವಾಸಿಯಾಗುತ್ತವಂತೆ. ಇಲ್ಲಿನ ದಾರಿಯೂ ಅಷ್ಟೇ ದುರ್ಗಮವಾಗಿದೆ. ಹರಸಾಹಸ ಮಾಡಿ ಈ ತೀರ್ಥವನ್ನು ತಲುಪಬೇಕಾಗುತ್ತದೆ.

ಶಿವನ ಕಾಲಿನ ಹೆಬ್ಬರಳನ್ನು ಪೂಜಿಸಲಾಗುತ್ತದೆ ಇಲ್ಲಿ !

 ಎಲ್ಲಿದೆ ಈ ಸುಲ್ಲಮಲೆ ತೀರ್ಥ?

ಎಲ್ಲಿದೆ ಈ ಸುಲ್ಲಮಲೆ ತೀರ್ಥ?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅನಂತಾಡಿಯ ಸಮೀಪ ಸುಲ್ಲಮಲೆ -ಬಲ್ಲಮಲೆ ಎನ್ನುವ ಅರಣ್ಯದ ಕಾಲುದಾರಿಯಲ್ಲಿ ಸ್ವಲ್ಪ ದೂರ ನಡೆದಾಗ ಗುಹೆಯ ಒಳಗೆ ಪವಿತ್ರ ತೀರ್ಥ ಹರಿಯುವ ಕ್ಷೇತ್ರ ಸಿಗುತ್ತದೆ. ಅದುವೇ ಸುಲ್ಲಮಲೆ ಪುಣ್ಯ ತೀರ್ಥ . ಈ ತೀರ್ಥಸ್ನಾನ ಮಾಡುವುದೆಂದರೆ ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ನೀವು ತುಸು ಧೈರ್ಯವಂತರೂ ಆಗಿರಬೇಕು.

ಗುಹೆಯ ಒಳಗೆ ಹೋಗಬೇಕು

ಗುಹೆಯ ಒಳಗೆ ಹೋಗಬೇಕು

ಈ ತೀರ್ಥವು ಗುಹೆಯ ಒಳಗೆ ಇರುವುದರಿಂದ ಅದರೊಳಗೆ ಬಗ್ಗಿಕೊಂಡೇ ಹೋಗಬೇಕು. ಗುಹೆಯು ಕತ್ತಲೆಯಿಂದ ಕೂಡಿರುತ್ತದೆ. ಬಿದಿರಿನ ಏಣಿಯಲ್ಲಿ 10ಫೀಟ್ ಕೆಳಕ್ಕೆ ಇಳಿದು 10ಮೀಟರ್ ಉದ್ದದ ಕಿರಿದಾದ ಗುಹೆಯೊಳಗೆ ಕತ್ತಲೆಯಲ್ಲೇ ಸಾಗಬೇಕು . ಎರಡು ಬಂಡೆಗಳ ಮದ್ಯೆ ಇರುವ ಕಿರಿದಾದ ಜಾಗದಲ್ಲಿ ನಡೆಯುವಾಗ ಎದೆ ಹಾಗೂ ಹೊಟ್ಟೆಗೆ ಬಂಡೆ ಸ್ಪರ್ಶಿಸುತ್ತದೆ. ಅಷ್ಟೊಂದು ಕಿರಿದಾದ ಜಾಗ ಇದಾಗಿದೆ. ಮುಂದುಗಡೆ ಹಿಂದುಗಡೆ ಬಂಡೆಗಳಿಂದಲೇ ಆವೃತ್ತವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೀಗೆ ಆ ಬಂಡೆಗಳ ನಡುವೆ ಸಾಗುವಾಗ ಬಂಡೆಗಳ ಮೇಲಿನಿಂದ ನೀರು ರಭಸದಿಂದ ಹರಿಯುತ್ತದೆ. ಅದುವೇ ಪುಣ್ಯ ತೀರ್ಥ. ಈ ತೀರ್ಥ ಸ್ನಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಚರ್ಮರೋಗಗಳು ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಈ ತೀರ್ಥಸ್ನಾನವು ವರ್ಷದ ಎಲ್ಲಾ ದಿನ ಲಭ್ಯವಿರುವುದಿಲ್ಲ.

 ವರ್ಷದಲ್ಲಿ ನಾಲ್ಕು ದಿನ ಮಾತ್ರ ಪ್ರವೇಶ

ವರ್ಷದಲ್ಲಿ ನಾಲ್ಕು ದಿನ ಮಾತ್ರ ಪ್ರವೇಶ

ವರ್ಷದಲ್ಲಿ ನಾಲ್ಕು ದಿನ ಮಾತ್ರ ಈ ಗುಹಾಲಯವಿರುವ ಪ್ರದೇಶಕ್ಕೆ ಪ್ರವೇಶ . ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂಬ ಇತಿಹಾಸವೂ ಇದೆ. ಶ್ರಾವಣ ಅಮಾವಾಸ್ಯೆಯಿಂದ ಭಾದ್ರಪದ ಚೌತಿಯವರೆಗಿನ ಸಮಯದಲ್ಲಿ ಇಲ್ಲಿ ತೀರ್ಥಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎನ್ನುವ ನಂಬಿಕೆ ಇದೆ.

Read more about: india karnataka temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X