Search
  • Follow NativePlanet
Share
» » ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಏನೆಲ್ಲಾ ಸಂಶೋಧನೆಗಳನ್ನು ವಿಜ್ಞಾನಿಗಳು ನಡೆಸುತ್ತಾರೆ. ಆದರೆ ಅಧ್ಯಯನಕ್ಕಾಗಿ ಪಾತಾಳಕ್ಕೆ ಹೋಗಿರುವವರ ಬಗ್ಗೆ ಕೇಳಿದ್ದೀರಾ? ಇಲ್ಲೊಬ್ಬ ಕ್ರೈಸ್ತ ಪಾದ್ರಿಯೊಬ್ಬರು ಪಾತಾಳಕ್ಕೆ ತೆರಳಿದ್ದರು. ಯಾಕೆ ಅನ್ನೋದನ್ನು ಇಲ್ಲಿ ನೋಡೋಣ.

ಕೇರಳದಲ್ಲಿ ಒಂದು ವಿಶೇಷವಾದ ಚರ್ಚ್ ಇದೆ. ಅಲ್ಲಿ ಒಂದು ವಿಶೇಷ ಗುಹಾ ಬಾವಿ ಇದೆ. ಆ ಬಾವಿಯ ಮೂಲಕ ಪಾದ್ರಿಯೊಬ್ಬರು ಮ್ಯಾಜಿಕ್, ಪವಾಡಗಳ ಅಧ್ಯಯನ ಮಾಡಲು ಪಾತಾಳಕ್ಕೆ ತೆರಳಿದ್ದರಂತೆ. ಆ ಬಾವಿಯನ್ನು ಈಗಲೂ ಕಾಣಬಹುದು. ಈ ಚರ್ಚ್‌ನ ಹಿಂದಿದೆ ಒಂದು ಪವಾಡ ಕಥೆ.

ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ಎಲ್ಲಿದೆ ಈ ವಿಶೇಷ ಚರ್ಚ್

ಎಲ್ಲಿದೆ ಈ ವಿಶೇಷ ಚರ್ಚ್

PC:Eldho

ಸೆಂಟ್‌ ಜಾರ್ಜ್‌ ಚರ್ಚ್‌ ಕಡಮಟ್ಟಂ ಎನ್ನುವಲ್ಲಿದೆ. ಈ ಕಡಮಟ್ಟಂ ಎನ್ನುವ ಸ್ಥಳವು ಕೊಚ್ಚಿನ್-ಮಧುರೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಲಂಚೇರಿ ಮತ್ತು ಮೂವತ್ತುಪುಳ ನಡುವೆ ನೆಲೆಗೊಂಡಿದೆ. ಈ ಸ್ಥಳದ ಪ್ರಮುಖ ಆಕರ್ಷಣೆ ಕದಾಮಾಟ್ಟಂ ಕಥನಾರ್. ಈ ಚರ್ಚ್‌ಗೂ ಕಡಮಾಟ್ಟಂ ಕಥನಾರ್ ಗೂ ನಿಕಟ ಸಂಬಂಧವಿದೆ.

ಮಾರ್ ಸ್ಯಾಬೋರ್

ಮಾರ್ ಸ್ಯಾಬೋರ್

PC: Challiyan

9 ನೇ ಶತಮಾನದಲ್ಲಿ ಈ ಚರ್ಚ್‌ನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ಈ ಚರ್ಚಿನ ಅಸ್ತಿತ್ವದ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಕ್ರಿಸ್ತನ ಸಂದೇಶದೊಂದಿಗೆ ಬಂದ ಕ್ರೈಸ್ತ ಪಾದ್ರಿ ಮಾರ್ ಸ್ಯಾಬೋರ್ ರಿಂದ ಈ ಚರ್ಚ್ ಅನ್ನು ಸ್ಥಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಅದರ ಹಿಂದೆ ಒಂದು ದಂತಕಥೆ ಇದೆ.

ಕರ್ನಾಟಕದ ಈ ಐದು ಎತ್ತರದ ಬೆಟ್ಟಗಳಿಗೆ ಹತ್ತಿದ್ದೀರಾ?ಕರ್ನಾಟಕದ ಈ ಐದು ಎತ್ತರದ ಬೆಟ್ಟಗಳಿಗೆ ಹತ್ತಿದ್ದೀರಾ?

ಪಾತಾಳದ ಬಾವಿ

ಪಾತಾಳದ ಬಾವಿ

PC: Vssun

ಈ ಚರ್ಚ್ ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಬಾವಿ ಇದೆ. ಈ ಬಾವಿಯ ಮೂಲಕ ಕದಾಮಾಟ್ಟಂ ಕಥನಾರ್ ಮುಟ್ರಾ ಬಾವಿ ಮಾರ್ಗವಾಗಿ ಪಾತಾಳಕ್ಕೆ ಹೋಗಿ ಮ್ಯಾಜಿಕ್‌ನ ಅಧ್ಯಯನ ಮಾಡಿದ್ದರು ಎನ್ನಲಾಗುತ್ತದೆ.

ಪವಾಡ

ಪವಾಡ

PC: Challiyil Eswaramangalath Vipin

ಮಾರ್ ಸ್ಯಾಬೋರ್ ಎನ್ನುವ ಪಾದ್ರಿಯು ಹಸಿವಿನಿಂದ ಓರ್ವ ವೃದ್ಧೆಯ ಮನೆಗೆ ಹೋಗುತ್ತಾರೆ. ಅದು ಬಡವ ಮಹಿಳೆಯ ಮನೆಯಾಗಿತ್ತು. ಆಕೆಯ ಮನೆಯಲ್ಲಿ ತಿನ್ನಲೂ ಏನು ಇರುವುದಿಲ್ಲ. ಕೇವಲ ಅಕ್ಕಿಯ ಒಂದು ಅಗಳು ಮಾತ್ರ ಇರುತ್ತದೆ. ಆಕೆ ಅದನ್ನೇ ಬೇಯಲು ಇಡುತ್ತಾಳೆ. ಆಶ್ಚರ್ಯವೆಂದರೆ ಆ ಒಂದು ಅಕ್ಕಿಯಿಂದಾಗಿ ಪಾತ್ರೆ ತುಂಬಾ ಅನ್ನವಾಗುತ್ತದೆ. ಅದನ್ನೇ ಉಣ ಬಡಿಸುತ್ತಾಳೆ.

ಪಾದ್ರಿಯನ್ನು ಉಪಚರಿಸಿದ ವ್ಯಕ್ತಿ

ಪಾದ್ರಿಯನ್ನು ಉಪಚರಿಸಿದ ವ್ಯಕ್ತಿ

ಪಾದ್ರಿ ಹೊರಟುಹೋದ ನಂತರ ಈ ವಿಷ್ಯವನ್ನೆಲ್ಲಾ ಆಕೆ ಊರಿನ ಓರ್ವ ಮನೆಯೊಡೆಯನಿಗೆ ಹೇಳುತ್ತಾಳೆ. ಆತನ ಮಗಳು ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ. ಆ ಮನೆಯೊಡೆಯ ಪಾದ್ರಿಯನ್ನು ತನ್ನ ಮನೆಗೆ ಆಮಂತ್ರಿಸಿ ಉಪಚರಿಸುತ್ತಾನೆ. ಪಾದ್ರಿ ಮನೆಯಿಂದ ಹೊರಟುಹೋದಂತೆ ಆತನ ಮಗಳು ಗುಣಮುಖಳಾಗುತ್ತಾಳೆ.

ಜಮೀನು ನೀಡಿದ ಮನೆಯೊಡೆಯ

ಜಮೀನು ನೀಡಿದ ಮನೆಯೊಡೆಯ

PC: Alias

ಇದರಿಂದ ಸಂತೋಷಗೊಂಡ ಮನೆಯೊಡೆಯ ಪಾದ್ರಿಗೆ ಚರ್ಚ್ ಕಟ್ಟಲು ಸ್ವಲ್ಪ ಭೂಮಿಯನ್ನು ನೀಡುತ್ತಾನೆ. ಹಾಗಾಗಿ ಮಾರ್ ಸ್ಯಾಬೋರ್ ಆ ಜಾಗದಲ್ಲಿ ಚರ್ಚ್ ಸ್ಥಾಪಿಸುತ್ತಾರೆ. ಕದಾಮಾಟ್ಟಂ ಕಥನಾರ್‌ ಓರ್ವ ಅನಾಥನಾಗಿದ್ದ ಸಾಬೋ ಪಾದ್ರಿಯು ಆತನನನ್ನು ದತ್ತು ಪಡೆಯುತ್ತಾರೆ.

ಸಮಾಧಿ

ಸಮಾಧಿ

PC: Kokkarani

ಕಾಮರೊತ್ ಕದಾಮಟ್ಟಂ ಸೇಂಟ್ ಜಾರ್ಜ್ ಚರ್ಚ್ ನ ಒಳಭಾಗದಲ್ಲಿ ಸಮಾಧಿಯಿದೆ. ಇದು ಮಾರ್ ಥೋಮ 9 ರ ಸಮಾಧಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X