Search
  • Follow NativePlanet
Share
» »ದೇವಾಲಗಳ ದ್ವೀಪವೆಂದೇ ಪ್ರಸಿದ್ದವಾಗಿರುವ ಶ್ರೀರಂಗಂ ಗೆ ಭೇಟಿ ಕೊಡಿ

ದೇವಾಲಗಳ ದ್ವೀಪವೆಂದೇ ಪ್ರಸಿದ್ದವಾಗಿರುವ ಶ್ರೀರಂಗಂ ಗೆ ಭೇಟಿ ಕೊಡಿ

ದೇವಾಲಗಳ ದ್ವೀಪವೆನಿಸಿರುವ - ಶ್ರೀರಂಗಮ್

ತಿರುಚಿರಪಲ್ಲಿ (ತ್ರಿಚಿ ಎಂದೂ ಕರೆಯಲ್ಪಡುತ್ತದೆ) ಯಲ್ಲಿ ಶ್ರೀರಂಗಮ್ ಒಂದು ಮನಮೋಹಕ ಮತ್ತು ಮೋಡಿಮಾಡುವ ದ್ವೀಪ ಪಟ್ಟಣವಾಗಿದ್ದು, ಇದು ದಕ್ಷಿಣ ಭಾರತದ ತಮಿಳುನಾಡಿನ ಒಂದು ಭಾಗವಾಗಿದೆ. ಶ್ರೀರಂಗಮ್ ಅನ್ನು ಪ್ರಾಚೀನ ಕಾಲದಲ್ಲಿ ವೆಲ್ಲಿತಿರುಮುತ್ತಗ್ರಾಮಮ್ ಎಂದೂ ಕರೆಯಲಾಗುತ್ತಿತ್ತು. ತಮಿಳುಭಾಷೆಯಲ್ಲಿ ಈ ಪಟ್ಟಣವನ್ನು ತಿರುವರಾಂಗಂ ಎಂದು ಕರೆಯಲಾಗುತ್ತದೆ.

ಶ್ರಿರಂಗಮ್ ಪಟ್ಟಣವು ಕಾವೇರಿ ಮತ್ತು ಕೊಲ್ಲಿಡಮ್ (ಅಥವಾ ಕೊಲರೂನ್, ಕಾವೇರಿ ನದಿಯ ಶಾಖೆ) ನದಿಗಳ ಮಧ್ಯೆ ಸುಂದರವಾಗಿ ನೆಲೆಸಿದೆ. ಶ್ರೀರಂಗಂ ಪಟ್ಟಣದಲ್ಲಿ ಪ್ರಖ್ಯಾತ ಶಿವ ಮತ್ತು ವಿಷ್ಣು ದೇವರುಗಳ ದೇವಾಯಗಳಿರುವುದರಿಂದ ಈ ಸ್ಥಳವು ಹಿಂದು ಯಾತ್ರಿಗಳಲ್ಲಿ ಅತ್ಯಂತ ಹೆಸರುವಾಸಿಯಾಗಿದೆ. ಅಲ್ಲದೆ, ಈ ಶ್ರೀರಂಗಂ ಪಟ್ಟಣದಲ್ಲಿಯೇ ವೈಷ್ಣವರು ಅಥವಾ ವಿಷ್ಣು ದೇವರನ್ನು ಪೂಜಿಸುವ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿದೆ.

srirangam-temple-2

ಈ ಸ್ಥಳದಲ್ಲಿರುವ ಅತ್ಯಂತ ಪ್ರಸಿದ್ದ ದೇವಾಲಯಗಳಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯವು ಪ್ರಮುಖವಾಗಿದೆ. ಪ್ರತಿ ವರ್ಷವೂ ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ದೇವಾಲಯವು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಾಲಯವು ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಹಿಂದೂ ದೇವಾಲಯವಾಗಿದೆ ಎಂದು ನಂಬಲಾಗಿದೆ. ಇದನ್ನು 631,000 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, 4 ಕಿಮೀ ಅಥವಾ 10,710 ಅಡಿಗಳಲ್ಲಿ ನಿರ್ಮಿಸಲಾದ ಪರಿಧಿಯನ್ನು ಹೊಂದಿದೆ.

ದೇವತೆಗಳ ವಾಸಸ್ಥಳ

ಶ್ರೀರಂಗಂ ವಿಷ್ಣುವಿನ ಪ್ರಮುಖ ಎಂಟು ದೇವಾಲಯಗಳಲ್ಲಿ ಮೊದಲನೆಯದನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ. ಈ ಸ್ವಯಂ-ವ್ಯಕ್ತವಾದ ದೇವಾಲಯಗಳನ್ನು ಹಿಂದೂ ಪುರಾಣಗಳಲ್ಲಿ ಸ್ವಯಂ ವ್ಯಕ್ತ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ. ಶ್ರೀರಂಗಂನಲ್ಲಿರುವ ವಿಷ್ಣುವಿನ ಈ ದೇವಾಲಯವು ಮೊದಲನೆಯದು ಮಾತ್ರವಲ್ಲದೆ ವಿಷ್ಣುವಿಗೆ ಸಮರ್ಪಿತವಾಗಿರುವ ಎಲ್ಲಾ 108 ದೇವಾಲಯಗಳಲ್ಲಿ ಮುಖ್ಯ ದೇವಾಲಯವೆಂದು ಪರಿಗಣಿಸಲಾಗಿದೆ. ಈ ವಿಷ್ಣು ದೇಗುಲವು ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು 156 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ದೇವಾಲಯದ ನೋಟವು ವಿಭಿನ್ನವಾಗಿದೆ ಹಾಗೂ ದೇವಾಲಯವನ್ನು ಕಾವೇರಿ ಮತ್ತು ಕೊಲೆರೂನ್ ನದಿಗಳ ದ್ವೀಪದಲ್ಲಿ ನಿರ್ಮಿಸಲಾಗಿದ್ದು, ಈ ದೇವಾಲಯದಲ್ಲಿ ಏಳು ಆವರಣಗಳಿವೆ ಮತ್ತು ಭಕ್ತರು ಸ್ಥಳೀಯ ಭಾಷೆಯಲ್ಲಿ ಪ್ರಾಕಾರಗಳು ಎಂದು ಕರೆಯಲ್ಪಡುವ ಎಲ್ಲಾ ಆವರಣಗಳ ಮೂಲಕ ನಡೆದುಕೊಂಡು ಹೋಗುತ್ತಾರೆ. ಆವರಣಗಳು ಗರ್ಭಗುಡಿಯ ಸುತ್ತಲೂ ವೃತ್ತಾಕಾರದ ಮಾದರಿಯಲ್ಲಿ ಸಾಗುವ ದಪ್ಪ ಮತ್ತು ಅಗಾಧವಾದ ಗೋಡೆಗಳನ್ನು ಒಳಗೊಂಡಿರುತ್ತವೆ. ಆವರಣಗಳು 21 ಗೋಪುರಗಳನ್ನು ಹೊಂದಿದ್ದು ಅವು ಭವ್ಯವಾಗಿ ಎದ್ದು ಕಾಣುತ್ತವೆ. ಆವರಣದ ಸಂಪೂರ್ಣ ರಚನೆಯು ವಾಸ್ತುಶಿಲ್ಪದ ಅದ್ಭುತವಾಗಿದೆ.

srirangam-temple-2

ನಿಸ್ಸಂದೇಹವಾಗಿ ಇದೊಂದು ದೇವಾಲಯಗಳ ಪಟ್ಟಣವಾಗಿದೆ - ಈ ಪಟ್ಟಣದ ಮತ್ತು ಸುತ್ತಮುತ್ತಲಿನ ಪ್ರವಾಸಿ ಆಕರ್ಷಣೆಗಳು

ಶ್ರೀರಂಗಂ ವಿಷ್ಣು ದೇವಾಲಯವು ಕಾವೇರಿ ನದಿ ದಡದಲ್ಲಿರುವ ನೈಸರ್ಗಿಕವಾಗಿ ರೂಪುಗೊಂಡಿರುವ ದ್ವೀಪದಲ್ಲಿ ನೆಲೆಗೊಂಡಿರುವ ಅನೇಕ ದೇವಾಲಯಗಳಲ್ಲಿ ಒಂದಾಗಿದೆ. ಕಾವೇರಿ ನದಿ ದಡದಲ್ಲಿ ನೆಲೆಸಿರುವ ಮೂರು ದೇವಾಲಯಗಳೆಂದರೆ ಆದಿ ರಂಗ ದೇವಾಲಯ (ಇದು ಶ್ರೀರಂಗ ಪಟ್ಟಣದಲ್ಲಿದೆ), ಮಧ್ಯರಂಗ ದೇವಾಲಯ( ಶಿವನ ಸಮುದ್ರದಲ್ಲಿದೆ) ಮತ್ತು ಅಂತ್ಯರಂಗ ದೇವಾಲಯ ( ಇದು ಶ್ರೀರಂಗಂ ನಲ್ಲಿದೆ. ಈ ಮೂರೂ ದೇವಾಲಯಗಳು ಅತ್ಯಂತ ಪ್ರಸಿದ್ದವಾದ ರಂಗನಾಥ ದೇವಾಲಯಗಳೆಂದು ಪರಿಗಣಿಸಲಾಗಿದೆ.

ಶ್ರೀರಂಗಂ ದೇವಾಲಯ ಮತ್ತು ಅದರ ಸುತ್ತಮುತ್ತಲಿರುವ ಸ್ಥಳಗಳಲ್ಲಿ ರಾಕ್ ಪೋರ್ಟ್ ದೇವಾಲಯ, ತಿರುವನೈಕೊಯಿಲ್ ದೇವಾಲಯ, ಉರೈಯುರ್ ವೆಕ್ಕಲಿ ಅಮ್ಮನ್ ದೇವಾಲಯ, ಸಮಯಪುರಮ್ ಮಾರಿಯಮ್ಮನ್ ದೇವಾಲಯ, ಕುಮಾರ ವಯಲೂರ್ ದೇವಾಲಯ ಮತ್ತು ಕಾಟ್ಟು ಆಜ್ ಹಾಗಿಯ ಸಿಂಗಾರ್ ದೇವಾಲಯ ಇತ್ಯಾದಿಗಳನ್ನು ಪ್ರಮುಖವಾಗಿ ಹೆಸರಿಸಬಹುದಾಗಿದೆ.

ಈ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾದ ವಿಷ್ಣು ದೇವಾಲಯವೆಂದರೆ ಶ್ರೀ ವಡಿವಳಗಿಯ ನಂಬಿ ಪೆರುಮಾಳ್ ದೇವಾಲಯವು ಅಪ್ಪಾಳ ರಂಗನಾಥರನ್ನು ಪ್ರಧಾನ ದೇವತೆಯಾಗಿ ಹೊಂದಿದೆ ಆದ್ದರಿಂದ ಈ ದೇವಾಲಯದ ಇನ್ನೊಂದು ಹೆಸರು ಅಪ್ಪಕುದತನ್ ದೇವಾಲಯವೆಂದಾಗಿದೆ. ಈ ದೇವಾಲಯವು ಶ್ರೀರಂಗಂ ಪಟ್ಟಣಕ್ಕೆ ಸಮೀಪವಿರುವ ಕೋವಿಲಡಿ ಎಂಬ ಹಳ್ಳಿಯಲ್ಲಿದೆ. ಶ್ರೀರಂಗಂ ಗೆ ಹತ್ತಿರದಲ್ಲಿರುವ ಮತ್ತೊಂದು ಪ್ರಸಿದ್ದ ವಿಷ್ಣು ದೇವಾಲಯವೆಂದರೆ ಅದು ತ್ರಿಚಿಯಲ್ಲಿ. ಇದು ಇದು ಅಝಗಿಯ ನಂಬಿ ದೇವಸ್ಥಾನ ಮತ್ತು ಇದು ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಉಪವಿಭಾಗವಾಗಿದೆ.

ಶೀರಂಗಂ ಪಟ್ಟಣದಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಅನೇಕ ದೇವಾಲಯಗಳನ್ನು ಹೊಂದಿರುವ ಕಾರಣದಿಂದಾಗಿ ಈ ಸ್ಥಳವನ್ನು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವೆಂದು ಪರಿಗಣಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಶ್ರೀರಂಗಂನಲ್ಲಿರುವ ಇತರ ಪ್ರಮುಖ ದೇವಾಲಯಗಳೆಂದರೆ ಶ್ರೀ ರಂಗನಾಥಸ್ವಾಮಿ ದೇವಾಲಯ, ಸಮಯಪುರಂ ಮಾರಿಯಮ್ಮನ್ ದೇವಾಲಯ, ಜಂಬು ಲಿಂಗೇಶ್ವರರ್ ಮತ್ತು ಅಖಿಲಾಂಡೇಶ್ವರಿ ದೇವಾಲಯ.

srirangam

ಶ್ರೀರಂಗಂ ನಲ್ಲಿಯ ಹವಾಮಾನ

ಈ ಪ್ರದೇಶವು ಬೇಸಿಗೆಯಲ್ಲಿ ತಾಪಮಾನವು ಹೆಚ್ಚಾಗಿದ್ದು, ಸಾಧಾರಣ ಮಳೆಯನ್ನು ಪಡೆಯುತ್ತದೆ, ಮತ್ತು ಚಳಿಗಾಲವು ಸಾಮಾನ್ಯ ಅಥವಾ ಹೆಚ್ಚು ಚಳಿಯಿದ್ದು ಆಹ್ಲಾದಕರವಾಗಿರುತ್ತದೆ.

ಶ್ರೀರಂಗಂ ತಲುಪುವುದು ಹೇಗೆ

ಶ್ರೀರಂಗಂನಲ್ಲಿ ರೈಲ್ವೇ ನಿಲ್ದಾಣವಿದೆ ಮತ್ತು ರಸ್ತೆಯ ಮೂಲಕ ಸ್ಥಳಕ್ಕೆ ತಲುಪಲು ತಿರುಚ್ಚಿಗೆ ಹೋಗುವ ಯಾವುದೇ ಬಸ್‌ನಲ್ಲಿ ಪ್ರಯಾಣಿಸಬಹುದು. ಹತ್ತಿರದ ವಿಮಾನ ನಿಲ್ದಾಣವು ತಿರುಚ್ಚಿಯಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X