Search
  • Follow NativePlanet
Share
» »ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಎಲ್ಲಿದೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಎಲ್ಲಿದೆ ಗೊತ್ತ?

ಶ್ರೀ ರಂಗನ ದೇವಾಲಯ, ತಿರುಚಿನಾಪಲ್ಲಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಕಾವೇರಿ ನದಿಯ ಉಪನದಿಗಳ ಮಧ್ಯೆಯಲ್ಲಿ ನೆಲೆಸಿದೆ. ಈ ಕ್ಷೇತ್ರವು ನಿತ್ಯ ಶ್ರೀರಂಗನಾಥನ ನಾಮಸ್ಮರಣೆಯಿಂದ ಕೂಡಿರುವ ಪುಣ್ಯಕ್ಷೇತ್ರವಾಗಿದೆ. ವಿಷ್ಣು ಭಗವಾನನ 1

ಶ್ರೀ ರಂಗನ ದೇವಾಲಯ, ತಿರುಚಿನಾಪಲ್ಲಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಕಾವೇರಿ ನದಿಯ ಉಪನದಿಗಳ ಮಧ್ಯೆಯಲ್ಲಿ ನೆಲೆಸಿದೆ. ಈ ಕ್ಷೇತ್ರವು ನಿತ್ಯ ಶ್ರೀರಂಗನಾಥನ ನಾಮಸ್ಮರಣೆಯಿಂದ ಕೂಡಿರುವ ಪುಣ್ಯಕ್ಷೇತ್ರವಾಗಿದೆ. ವಿಷ್ಣು ಭಗವಾನನ 108 ದಿವ್ಯ ಕ್ಷೇತ್ರಗಳಲ್ಲಿ ಈ ದೇವಾಲಯ ಮೊದಲನೆಯದು ಮತ್ತು ಸ್ವಯಂ ಭೂ ಕ್ಷೇತ್ರ ಕೂಡ ಇದಾಗಿದೆ.

ಶ್ರೀರಂಗ ಶ್ರೀ ಮಹಾವಿಷ್ಣುವಿನ ದಿವ್ಯಕ್ಷೇತ್ರಗಳಲ್ಲಿ ಮೊದಲನೆಯದು ಮತ್ತು ಮುಖ್ಯವಾದುದು. ವಿಷ್ಣುವು ಹಾಲಿನ ಸಮುದ್ರದ ಮೂಲಕ ಇಲ್ಲಿ ಉದ್ಭವಿಸಿದ ಪುಣ್ಯ ಮೂರ್ತಿಯಾಗಿದ್ದಾನೆ. ಪ್ರಪಂಚದಲ್ಲಿ ಅತ್ಯಂತ ದೊಡ್ಡ ವಿಷ್ಣು ದೇವಾಲಯ ಕೂಡ ಇದೆ. ಭೊಲೋಕದ ವೈಕುಂಟ, ದೇವಾಲಯದಗಳ ದ್ವೀಪ ಎಂದು ಈ ದೇವಾಲಯವನ್ನು ಬಣ್ಣಿಸಲಾಗುತ್ತದೆ. ಶ್ರೀರಂಗ ದೇವಾಲಯವನ್ನು "ಇಂಡಿಯನ್ ವಾಟಿಕನ್" ಎಂದೂ ಸಹ ಕರೆಯುತ್ತಾರೆ.

ಹಾಗಾದರೆ ಈ ದೇವಾಲಯದ ಮತ್ತಷ್ಟು ಮಾಹಿತಿಯನ್ನು ಲೇಖನದ ಮೂಲಕ ತಿಳಿಯೋಣ.

ದೇವಾಲಯ

ದೇವಾಲಯ

ಶ್ರೀ ರಂಗ ದೇವಾಲಯವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ವಿಷ್ಣು ದೇವಾಲಯ ಎಂದು ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಎಲ್ಲರೂ ಕಂಬೋಡಿಯಾದಲ್ಲಿನ ದೇವಾಲಯವೇ ಅತಿ ದೊಡ್ಡ ದೇವಾಲಯ ಎಂದು ಹೇಳುತ್ತಾರೆ. ಆದರೆ ಈ ದೇವಾಲಯವು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದೆ. ಹಾಗಾಗಿಯೇ ನಿತ್ಯ ಪೂಜೆಗಳು ಮಾಡಿಕೊಳ್ಳುತ್ತಿರುವ ವಿಷ್ಣು ದೇವಾಲಯವೇ ಮುಂಚೂಣಿಯಲ್ಲಿದೆ.


Giridhar Appaji Nag Y

ದೇವಾಲಯದ ಪ್ರಾಂಗಣ

ದೇವಾಲಯದ ಪ್ರಾಂಗಣ

ಸುಮಾರು 157 ಎಕರೆಗಳ ವಿಸ್ತರವಿರುವ ಈ ಬೃಹತ್ ದೇವಾಲಯ ಪ್ರಪಂಚದಲ್ಲಿಯೇ ಅತಿ ದೊಡ್ಡ ಶ್ರೀ ರಂಗ ಮೂರ್ತಿಯ ವಿಗ್ರಹವನ್ನು ನೀವು ಇಲ್ಲಿ ಕಾಣಬಹುದಾಗಿದೆ. ದೇವಾಲಯವು 4 ಕಿ.ಮೀ ದೂರ ಮೆಟ್ಟಲುಗಳನ್ನು ಹೊಂದಿದೆ. ದೇವಾಲಯದ ಪ್ರಾಂಗಣದಲ್ಲಿ 50 ದೇವತಾ ಮೂರ್ತಿಗಳ ಶಿಲ್ಪಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ವಿಶ್ರಾಂತಿ ಕೊಠಡಿ, ವಾಣಿಜ್ಯ ಸಮುದಾಯಗಳು ಇವೆ.

Ssriram mt

ಏಶಿಯಾ ಖಂಡ

ಏಶಿಯಾ ಖಂಡ

ಶ್ರೀರಂಗ ದೇವಾಲಯವು 7 ಪ್ರಾಕಾರಗಳನ್ನು ಹೊಂದಿದೆ. ಇದು ಒಟ್ಟು 21 ಗೋಪುರಗಳಿಂದ ಕಂಗೊಳಿಸುತ್ತಿದೆ. ಭಕ್ತರು ಮುಖ್ಯ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ 21 ಗೋಪುರಗಳನ್ನು ಕೂಡ ಕಾಣುತ್ತಾ ಹೊರಡುತ್ತಾರೆ.

ಇದರಲ್ಲಿನ ಅತ್ಯಂತ ದೊಡ್ಡ ಗೋಪುರವನ್ನು ರಾಜ ಗೋಪುರ ಎಂದು ಕರೆಯುತ್ತಾರೆ. ಇದರ ಎತ್ತರ ಸುಮಾರು 236 ಅಡಿ ಅಥವಾ 72 ಮೀಟರ್. ಏಶಿಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ಗೋಪುರ ಇದಾಗಿದೆ.


Gsnewid

ಗರುಡಾಳ್ವಾರ್

ಗರುಡಾಳ್ವಾರ್

ಶ್ರೀರಂಗ ದೇವಾಲಯದಲ್ಲಿ ಗರುಡಾಳ್ವಾರ್ ವಿಗ್ರಹ 25 ಅಡಿ ಎತ್ತರದಲ್ಲಿದೆ. ಈ ವಿಗ್ರಹಕ್ಕೆ ವಸ್ತ್ರಾಲಂಕಾರವನ್ನು 30 ಮೀಟರ್ ದೊಡ್ಡ ವಸ್ತ್ರ ಅವಶ್ಯಕವಾದುದು. ಗರುಡಾಳ್ವಾರ್‍ಗೆ ಸುಂದರವಾದ ಶಿಲ್ಪಕಲೆಗಳಿಂದ ಕೂಡಿದ ಮಂಟಪ ಕೂಡ ಇದೆ.


G41rn8

ಧನ್ವಂತರಿ ದೇವಾಲಯ

ಧನ್ವಂತರಿ ದೇವಾಲಯ

ಶ್ರೀರಂಗ ದೇವಾಲಯದಲ್ಲಿ ಮಾತ್ರವೇ ಸಾಗರ ಮಥನದಿಂದ ಉದ್ಭವಿಸಿದ ದೇವತಾ ವೈದ್ಯುನಿದ್ದಾನೆ. ಈತ ಆರೋಗ್ಯವನ್ನು ಪ್ರಸಾಧಿಸುವ ದೇವನೂ ಕೂಡ ಇಲ್ಲಿದೆ. ಹೌದು, ಈ ದೇವಾಲಯದಲ್ಲಿ ಸ್ವಾಮಿ ರಾಮಾನುಜಚಾರ್ಯರ ಪಾರ್ಥಿವ ಶರೀರವನ್ನು ಕ್ರಿ.ಶ 8 ನೇ ಶತಮಾನದಿಂದ ಭದ್ರಗೊಳಿಸಿದ್ದಾರೆ.


Todayindian

ಉತ್ಸವಗಳು

ಉತ್ಸವಗಳು

ಈ ದೇವಾಲಯಕ್ಕೆ ವರ್ಷಕ್ಕೆ 365 ದಿನವೂ ಇಲ್ಲಿ ಉತ್ಸವಗಳೇ ನಡೆಯುತ್ತಿರುತ್ತದೆ. ಇಲ್ಲಿ ಆಳ್ವಾರ್‍ಗೆ ಮಾತ್ರ ಹೆಚ್ಚಾಗಿ ಉತ್ಸವ ಮಾಡಲಾಗುತ್ತದೆ.

sowrirajan s

ಹಿಂದೂ

ಹಿಂದೂ

ಹಿಂದೂಗಳಿಗೆ ಮಾತ್ರವೇ ದೇವಾಲಯದ 2 ನೇ ಪ್ರಾಕಾರದವರೆಗೆ ಮಾತ್ರವೇ ಅನುಮತಿ ನೀಡುತ್ತಾರೆ. ರಂಗನಾಥ ಸ್ವಾಮಿ ನೆಲೆಸಿರುವ ಗರ್ಭಗುಡಿಯಲ್ಲಿ ವಿಮಾನ ಆಕೃತಿಯಲ್ಲಿ ಬಂಗಾರದ ದೃಶ್ಯವನ್ನು ಕಾಣಬಹುದು. ಗರ್ಭಗುಡಿಯಲ್ಲಿ ಆದಿ ಶೇಷನ ಮೇಲೆ ಪವಳಿಸಿದ ಶ್ರೀ ಮಹಾ ವಿಷ್ಣುವನ್ನು ಕಾಣಬಹುದಾಗಿದೆ.


Jean-Pierre Dalbéra

ಬಂಗಾರದ ಸ್ತಂಭಗಳು

ಬಂಗಾರದ ಸ್ತಂಭಗಳು

ಗರ್ಭಗುಡಿಯ ಮುಂಭಾಗದಲ್ಲಿರುವ ಸ್ತಂಭವನ್ನು "ತಿರುಮನೈ ತ್ತೂನ್" ಎಂದು ಕರೆಯುತ್ತಾರೆ. ಸ್ವಾಮಿಯ ಪ್ರಸಾದವನ್ನು ನೀಡುವ ಸ್ಥಳವನ್ನು "ಗಾಯತ್ರಿ ಮಂಟಪ" ಎಂದು ಕರೆಯುತ್ತಾರೆ.


sowrirajan s

ಮೊದಲನೆದು, ಎರಡನೇದು

ಮೊದಲನೆದು, ಎರಡನೇದು

ಮೊದಲನೇ ಪ್ರಾಕಾರದಲ್ಲಿ ಗಿಳಿಗಳ ಮಂಟಪ, ಯಾಗಶಾಲೆ, ವಿರಾಜುಬಾವಿ ಮೊದಲು ಕಾಣಬಹುದು. ಎರಡನೇ ಪ್ರಾಕಾರದಲ್ಲಿ ಪವಿತ್ರೋತ್ಸವ ಮಂಟಪ, ಹಾಯಗ್ರೀವ, ಸರಸ್ವತಿ ದೇವಿಯ ದೇವಾಲಯವನ್ನು ಕಾಣಬಹುದಾಗಿದೆ.

Jayashree B

ಭೇಟಿ ನೀಡಲು ಸಮಯ

ಭೇಟಿ ನೀಡಲು ಸಮಯ

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗು ಮಧ್ಯಾಹ್ನ 1:15 ರಿಂದ 6 ಗಂಟೆಯವರೆಗೆ. ಹಾಗೆಯೇ 6 :45 ರಿಂದ ರಾತ್ರಿ 9 ಗಂಟೆಯವರೆಗೆ. ಶೀಘ್ರವಾದ ದರ್ಶನಕ್ಕೆ ಒಬ್ಬರಿಗೆ 250 ರೂಪಾಯಿಗಳು.


Redtigerxyz

ಭಾರತೀಯ ಸಂಸ್ಕøತಿ

ಭಾರತೀಯ ಸಂಸ್ಕøತಿ

ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಭಾರತೀಯ ಸಂಸ್ಕøತಿಯ ಉಡುಪುಗಳನ್ನೇ ಧರಿಸಿ ಬರಬೇಕು. ಪಂಚೆ, ಕುರ್ತ ಧರಿಸಿ ಒಳ ಪ್ರವೇಶ ಮಾಡಬೇಕು. ಸಾಧರಣ ಭಕ್ತರು ಪ್ರಧಾನ ದೇವತಾ ಮೂರ್ತಿಯನ್ನು ಮುಟ್ಟಿಕೊಳ್ಳುವ ಹಾಗೆ ಇಲ್ಲ.

Todayindian

ರೈಲ್ವೆ ಮಾರ್ಗ

ರೈಲ್ವೆ ಮಾರ್ಗ

ಶ್ರೀರಂಗಕ್ಕೆ ನೇರವಾದ ರೈಲ್ವೆ ನಿಲ್ದಾಣವಿದೆ. 9 ಕಿ.ಮೀ ದೂರದಲ್ಲಿ ತಿರುಚಿನಾಪಲ್ಲಿ ರೈಲ್ವೆ ನಿಲ್ದಾಣವಿದೆ. ಇದು ಹೈದ್ರಾಬಾದ್, ಬೆಂಗಳೂರು, ಚೆನ್ನೈ, ವಿಯಜವಾಡ, ಕನ್ಯಾಕುಮಾರಿ ಹಲವಾರು ಪ್ರಧಾನ ನಗರದ ಮಾರ್ಗದಲ್ಲಿ ಬರುತ್ತದೆ.

ವಿಮಾನ ಮಾರ್ಗ

ವಿಮಾನ ಮಾರ್ಗ

10 ಕಿ.ಮೀ ದೂರದಲ್ಲಿ ಟ್ರಿಚಿ ದೇಶಿಯ ವಿಮಾನ ನಿಲ್ದಾಣವಿದೆ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ವಿಮಾನಗಳು ಬರುತ್ತಿರುತ್ತವೆ. ಟ್ಯಾಕ್ಸಿಯ ಮೂಲಕ ನೇರವಾಗಿ ದೇವಾಲಯಕ್ಕೆ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X