Search
  • Follow NativePlanet
Share
» »ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ಬೆಂಗಳೂರಿನ ಸಮೀಪದಲ್ಲಿದೆ ಮುಕ್ತಿನಾಗ ಕ್ಷೇತ್ರ!

ನಾಗಸರ್ಪಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ಅಪಾರವಾದ ಭಕ್ತಿ ಹಾಗು ನಂಬಿಕೆಗಳಿರುವುದನ್ನು ಕಾಣಬಹುದಾಗಿದೆ. ಪೌರಾಣಿಕ ಗ್ರಂಥಗಳ ಪ್ರಕಾರ ನಾಗಗಳು ಮನುಷ್ಯನ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತದೆ. ನಾಗದೋಷವಿದ್ದವರಿಗೆ ಸಾಮಾನ್ಯವಾಗಿ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಅನುಭವಿಸುತ್ತಾರೆ. ಆ ಕಾರಣದಿಂದಾಗಿಯೇ ನಾಗ ದೇವತೆಗಳ ನೆಲೆಸಿರುವ ಪುಣ್ಯಕ್ಷೇತ್ರಕ್ಕೆ ತೆರಳಿ ಪೂಜೆಗಳು, ಶಾಂತಿಗಳನ್ನು ಮಾಡುತ್ತಾರೆ.

ಈ ಗ್ರಾಮದಲ್ಲಿ ಹಾವುಗಳು ಕಚ್ಚಿದರೂ ಪ್ರಾಣ ಮಾತ್ರ ಹೋಗಲ್ಲ.... ಇದು ಸೈನ್ಸ್‍ಗೆ ಸಾವಲ್!

ಭಾರತ ದೇಶದಲ್ಲಿ ನಾಗದೋಷದಿಂದ ಮುಕ್ತಿ ಪಡೆಯಲು ಕೆಲವು ಪ್ರಸಿದ್ಧವಾದ ಕ್ಷೇತ್ರಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಸಮೀಪದ ನಾಗ ಕ್ಷೇತ್ರಗಳೆಂದರೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಮತ್ತು ದೊಡ್ಡಬಳ್ಳಾಪುರದಲ್ಲಿನ ಘಾಟಿ ಪುಣ್ಯ ಕ್ಷೇತ್ರ. ಈ ದೇವಾಲಯಗಳಲ್ಲಿ ಹೆಚ್ಚಾಗಿ ಭಾನುವಾರ ಹಾಗು ಮಂಗಳವಾರದ ದಿನ ಹೆಚ್ಚಾಗಿ ಭಕ್ತರು ಭೇಟಿ ನೀಡುತ್ತಾರೆ.

ಬೆಂಗಳೂರಿನಲ್ಲಿದೆ ಸುಮಾರು 300 ಕೋಟಿ ವರ್ಷದ ಪ್ರಾಚೀನ ಬಂಡೆ!!!

ಪ್ರಸ್ತುತ ಲೇಖನದಲ್ಲಿ ಬೆಂಗಳೂರಿಗೆ ಸಮೀಪವಿರುವ ಇತ್ತೀಚಿಗೆ ಸಾಕಷ್ಟು ಪ್ರಸಿದ್ಧಿಗಳಿಸುತ್ತಿರುವ ಸರ್ಪಕ್ಷೇತ್ರವೊಂದರ ಕುರಿತು ಮಾಹಿತಿಯನ್ನು ಪಡೆಯಿರಿ. ಇದು ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕಿಂತಲೂ ಸಮೀಪದ ಕ್ಷೇತ್ರ ಇದಾಗಿದೆ. ಒಮ್ಮೆ ಸ್ಥಳ ತಿಳಿದು ಭೇಟಿ ನೀಡಿ ಬನ್ನಿ.

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಈ ದೇವಾಲಯ ಎಲ್ಲಿದೆ? ಎಂಬ ಮಾಹಿತಿಗಿಂತ ಮೊದಲು ನಾಗಗಳ ಬಗ್ಗೆ ತಿಳಿಯೋಣ. ಮಹಾಭಾರತದ ಆದಿ ಪರ್ವದಲ್ಲಿ ನಾಗಗಳ ಕುರಿತು ಉಲ್ಲೇಖವಿದ್ದು, ನಾಗಗಳನ್ನು ಉತ್ತಮವೂ ಅಲ್ಲದ ಹಾಗೆಯೇ ಅಪಾಯಕಾರಿಯೂ ಅಲ್ಲದ ಒಂದು ರೀತಿಯ ಮಧ್ಯದಲ್ಲಿರುವ ಜೀವಿಗಳು ಎಂದು ಕರೆಯಲಾಗಿದೆ.


Suraj Belbase

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ನಾಗ ಸರ್ಪಗಳು ಅಪರವಾದ ಶಕ್ತಿಗಳನ್ನು ಹೊಂದಿದೆ. ಹಾಗೆಯೇ ಇವರನ್ನು ಮಾಯಾ ಶಕ್ತಿಧಾರವನ್ನು ಹೊಂದಿದ್ದಾರೆ ಎನ್ನಲಾಗಿದೆ. ಜನರ ಜೀವನವನ್ನು ನಿಯಂತ್ರಿಸುವ ಶಕ್ತಿಯನ್ನು ಇವರು ಹೊಂದಿದ್ದಾರೆ.

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ದಂತಕಥೆಯ ಪ್ರಕಾರ ಕಶ್ಯಪ ಮಹರ್ಷಿಗಳ ಪುತ್ರರೇ ಈ ನಾಗಗಳು. ಅಷೇ ಅಲ್ಲದೇ ನಾಗಗಳ ಶತ್ರುವಾದ ಗರುಡ ಕೂಡ ಈ ಮಹರ್ಷಿಯ ಸಂತನವೇ. ಅಲ್ಲದೇ ನಾಗ ಹಾಗು ಗರುಡ ಮಲ ಸಹೋದರರು. ಕಶ್ಯಪ ಮಹರ್ಷಿಯು ದಕ್ಷ ಪ್ರಜಾಪತಿಯ ಪುತ್ರಿಯಾದ ವಿನತಾ ಹಾಗು ಕದ್ರುರನ್ನು ವಿವಾಹವಾಗುತ್ತಾನೆ.


Charles Haynes

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಸಹೋದರಿಯರಾದ ವಿನತಾ ಹಾಗು ಕದ್ರು ಇಬ್ಬರು ಕಶ್ಯಪರ ಸೇವೆಯಲ್ಲಿಯೇ ಪ್ರಸನ್ನರಾಗುತ್ತಾರೆ. ಅದಕ್ಕೆ ಬದಲಾಗಿ ಕಶ್ಯಪರು ಅವರ ಬಯಕೆಯನ್ನು ಕೇಳುತ್ತಾರೆ. ಕುತಂತ್ರಿಯಾಗಿದ್ದ ಕದ್ರು ತನಗೆ ಶೂರರಾದ ಸಾವಿರ ಸಂತಾನ ಬೇಕು ಎಂದು ಕೇಳಿಕೊಳ್ಳುತ್ತಾಳೆ. ಆದರೆ ವಿನತಾ ತನಗೆ ಕದ್ರುವಿನ 1000 ಮಕ್ಕಳಿಗಿಂತ ವೀರರಾದ ಇಬ್ಬರು ಸಂತಾನವೇ ಸಾಕು ಎಂದು ಹೇಳುತ್ತಾಳೆ.

Srikar Kashyap


ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಹೀಗೆ ಕದ್ರುವಿಗೆ ಹುಟ್ಟಿದ ಸಾವಿರಾ ಸಂತಾನಗಳೇ ನಾಗಗಳು. ನಾಗಗಳಲ್ಲಿ ಪ್ರಮುಖವಾಗಿ ಶೇಷ, ವಾಸುಕಿ ಹಾಗು ತಕ್ಷಕನೆಂದು ಹೇಳಲಾಗುತ್ತದೆ. ಇವರೇ ಸರ್ಪಗಳ ಮೊದಲ ತಲೆ ಮಾರುಗಳು. ಹಾಗೆಯೇ ವಿನತಾಳಿಗೆ ಜನಿಸಿದ ಪುತ್ರರೇ ಗರುಡ ಹಾಗು ಅರುಣ. ಈ ಮಲ ಸಹೋದರರ ಮಧ್ಯೆ ಮೊದಲಿನಿಂದ ಕಚ್ಚಾಟಗಳು ಇತ್ತು ಎಂದು ಹೇಳಲಾಗುತ್ತದೆ.


Lionel Allorge

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಈ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧಿಗಳಿಸುತ್ತಿದ್ದು, ಆ ಕ್ಷೇತ್ರವನ್ನು ಮುಕ್ತಿನಾಗ ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ಪುಣ್ಯಕ್ಷೇತ್ರ ಇರುವುದು ಬೆಂಗಳೂರಿನ ಕೆಂಗೇರಿಯ ರಾಮೋಹಳ್ಳಿಯಲ್ಲಿ. ಇಲ್ಲಿ ಮುಖ್ಯವಾಗಿ ನಾಗಕಲ್ಲುಗಳ ಮಂಟಪ, 16 ಅಡಿ ಎತ್ತರದ 7 ಹೆಡೆಗಳನ್ನು ಹೊಂದಿರುವ ಮುಖ್ಯ ನಾಗ ಪ್ರತಿಮೆಯ ಜೊತೆ ಜೊತೆಗೆ ದೇವಿಯ ದೇವಾಲಯವನ್ನು ಕೂಡ ದರ್ಶನ ಮಾಡಬಹುದಾಗಿದೆ.


Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಇನ್ನೂ ಇಲ್ಲಿ 16 ಅಡಿಗಳಷ್ಟು ಎತ್ತರದಲ್ಲಿರುವ ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ನಾಗ ಸ್ವಾಮಿಯು ಅತ್ಯಂತ ಆಕರ್ಷಕವಾಗಿದ್ದಾನೆ. ವಿಶೇಷ ಏನೆಂದರೆ ಈ ನಾಗನ ಪ್ರತಿಮೆ ಅತ್ಯಂತ ಎತ್ತರವಾಗಿರುವುದು ಹಾಗೆಯೇ ಇಷ್ಟು ಎತ್ತರ ಪ್ರಪಂಚದಲ್ಲಿಯೇ ಎಲ್ಲಿಯೂ ಕಂಡು ಬಾರದೇ ಇರುವುದು.

Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ತಮಿಳುನಾಡಿನ ಕಾಂಚೀಪುರಂನ ಪದ್ಮ ಶ್ರೀ ಗಣಪತಿ ನಿಗ್ರಾಣಿಯಲ್ಲಿ 11 ಕಲಾವಿದರು ಸೇರಿ ಹಗಲು ರಾತ್ರಿ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಶಿಲ್ಪ ಶಾಸ್ತ್ರಕ್ಕೆ ಅನುಗುಣವಾಗಿ ಈ 7 ಹೆಡೆ ಸರ್ಪವನ್ನು ಕೆತ್ತಿದ್ದಾರೆ ಎನ್ನಲಾಗಿದೆ.

Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಶಾಸ್ತ್ರದ ಪ್ರಕಾರ ಸುಬ್ರಹ್ಮಣ್ಯ ಸ್ವಾಮಿಯು ನಾಗರಾಜನ ಅವತಾರವೇ ಆಗಿದ್ದು, ಅದರ ನಾಲ್ಕು ರೂಪಗಳು ಮಹತ್ತರವಾಗಿವೆ. ಮೊದಲನೇಯ ರೂಪ ಬಾಲ್ಯಾವಸ್ಥೆಯದಾಗಿದ್ದು, ಇದನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಬಹುದಾಗಿದೆ. ಎರಡನೇಯದು ಯವ್ವನಾವಸ್ಥೆ, ಇದನ್ನು ಪ್ರಸ್ತುತ ಘಾಟಿ ಸುಬ್ರಹ್ಮಣ್ಯದಲ್ಲಿ ಕಾಣಬಹುದಾಗಿದೆ.

Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಮೂರನೇಯ ರೂಪ ಗೃಹಸ್ಥಾಶ್ರಮವಾಗಿದ್ದು, ಈ ರೂಪದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಯನ್ನು ತಮಿಳುನಾಡಿನ ಮುರುಗನ್ ದೇವಾಲಯದಲ್ಲಿ ಹಾಗು ತಿರುವಣ್ಣಾಮಲೈನ ದೇವಾಲಯದಲ್ಲಿ ಕಾಣಬಹುದಾಗಿದೆ.

Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಇಲ್ಲಿ ಸರ್ವದೋಷ ಪರಿಹಾರ ಪೂಜೆ, ಆಶ್ಲೇಷಬಲಿ ಪೂಜೆ ಹಾಗು ನಾಗ ಪ್ರತಿಷ್ಠಾಪನೆಗಳಂತಹ ಹಲವಾರು ಪೂಜೆಗಳನ್ನು ಈ ಕ್ಷೇತ್ರದಲ್ಲಿ ಮಾಡಲಾಗುತ್ತದೆ.

Akshatha Vinayak

ಮುಕ್ತಿನಾಗ ಕ್ಷೇತ್ರ

ಮುಕ್ತಿನಾಗ ಕ್ಷೇತ್ರ

ಈ ದೇವಾಲಯದಲ್ಲಿ ಕೇವಲ ನಾಗಗಳೇ ಅಲ್ಲದೇ ಆದಿ ಮುಕ್ತಿನಾಗ, ನೀಲಾಂಬಿಕೆ, ಲಕ್ಷ್ಮಿ ನರಸಿಂಹಸ್ವಾಮಿ, ರೇಣುಕ ಎಲ್ಲಮ್ಮ, ಮೈಲಾರ ಲಿಂಗೇಶ್ವರ ಸ್ವಾಮಿ, ಪಟಾಲಮ್ಮ ದೇವತೆಗಳನ್ನು ಕೂಡ ದರ್ಶನ ಭಾಗ್ಯ ಪಡೆಯಬಹುದಾಗಿದೆ.

Akshatha Vinayak

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಮುಕ್ತಿನಾಗ ಕ್ಷೇತ್ರವು ಬೆಂಗಳೂರು-ಮೈಸೂರು ರಸ್ತೆಯಲ್ಲಿ ದೊಡ್ಡ ಆಲದಮರಕ್ಕೆ ಹೋಗುವ ಮಾರ್ಗದಲ್ಲಿ ಕೆಂಗೇರಿಯಿಂದ ಸಮಾರು 6 ಕಿ.ಮೀಗಳಷ್ಟು ದೂರದಲ್ಲಿದೆ. ಕೆ.ಆರ್ ಮಾರುಕಟ್ಟೆಯಿಂದ ರಾಮೋಹಳ್ಳಿಗೆ ಬಿ.ಎಂ.ಟಿ.ಸಿ ಬಸ್ಸುಗಳ ಲಭ್ಯವಿದೆ. ರಾಮೋಹಳ್ಳಿಯಿಂದ ಆಟೋದ ಮೂಲಕ ಮುಕ್ತಿನಾಗ ಕ್ಷೇತ್ರಕ್ಕೆ ತಲುಪಬಹುದಾಗಿದೆ.


Akshatha Vinayak

ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more