Search
  • Follow NativePlanet
Share
» »ಲಕ್ಷಿನರಸಿಂಹಸ್ವಾಮಿಯನ್ನು ಹನುಮಂತನು ದಿಗ್ಭಂದನವನ್ನು ಮಾಡಿರುವ ಕ್ಷೇತ್ರವಿದು...

ಲಕ್ಷಿನರಸಿಂಹಸ್ವಾಮಿಯನ್ನು ಹನುಮಂತನು ದಿಗ್ಭಂದನವನ್ನು ಮಾಡಿರುವ ಕ್ಷೇತ್ರವಿದು...

ತೆಲಂಗಾಣ ರಾಜ್ಯದಲ್ಲಿನ ಕರೀಂನಗರ ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಧರ್ಮಪುರಿ ಅನೇಕ ಅದ್ಭುತಗಳಿಗೆ ನಿಲಯ ವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಪ್ರಧಾನ ದೈವವಾದ ನರಸಿಂಹನನ್ನು ಕ್ಷೇತ್ರಪಾಲಕನಾದ ಆಂಜನೇಯನು ಅಷ್ಟದಿಗ್ಭಂ

ತೆಲಂಗಾಣ ರಾಜ್ಯದಲ್ಲಿನ ಕರೀಂನಗರ ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಧರ್ಮಪುರಿ ಅನೇಕ ಅದ್ಭುತಗಳಿಗೆ ನಿಲಯ ವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಪ್ರಧಾನ ದೈವವಾದ ನರಸಿಂಹನನ್ನು ಕ್ಷೇತ್ರಪಾಲಕನಾದ ಆಂಜನೇಯನು ಅಷ್ಟದಿಗ್ಭಂಧನ ಮಾಡಿದ್ದಾನಂತೆ. ಆದ್ದರಿಂದಲೇ ಈ ಕ್ಷೇತ್ರವು ಭೂತ, ಪ್ರೇತ, ಪಿಶಾಚಿಗಳಿಂದ ಬಾಧೆ ಪಡುತ್ತಿರುವವರಿಗೆ ಉಪಶಮನವನ್ನು ಇಲ್ಲಿನ ಸ್ವಾಮಿಯು ಮಾಡುತ್ತಾನೆ ಎಂದು ಭಕ್ತರ ವಿಶ್ವಾಸ.

ಈ ಕಾರಣದಿಂದಲೇ ಈ ಕ್ಷೇತ್ರದ ದರ್ಶನಕ್ಕೆ ಅನೇಕ ಪ್ರದೇಶಗಳಿಂದ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ವಿಶಿಷ್ಟವೆಂಬಂತೆ ಈ ದೇವಾಲಯದಲ್ಲಿ ಬ್ರಹ್ಮದೇವ ಹಾಗೂ ಯಮಧರ್ಮರಾಜನಿಗು ಕೂಡ ಉಪ ದೇವಾಲಯಗಳಿವೆ. ಅದೇ ವಿಧವಾಗಿ ಧರ್ಮಪುರಿ ಪುಣ್ಯಕ್ಷೇತ್ರದಲ್ಲಿನ ತೀರ್ಥದಲ್ಲಿ ಸ್ನಾನವನ್ನು ಆಚರಿಸಲು ಭಕ್ತರ ದಂಡೆ ಭೇಟಿ ನೀಡುತ್ತದೆ. ಲೇಖನದ ಮೂಲಕ ಈ ಪುಣ್ಯ ಕ್ಷೇತ್ರದ ಬಗ್ಗೆ ಸಂಕ್ಷಿಪ್ತ ವಾದ ವಿವರವನ್ನು ತಿಳಿದುಕೊಳ್ಳಿ.

೧. ಲಕ್ಷ್ಮೀನರಸಿಂಹಸ್ವಾಮಿ

೧. ಲಕ್ಷ್ಮೀನರಸಿಂಹಸ್ವಾಮಿ

PC:YOUTUBE

ಈ ಪುಣ್ಯಕ್ಷೇತ್ರವು ತೆಲಂಗಾಣ ರಾಜ್ಯದ ಕರೀಂನಗರದಲ್ಲಿದೆ. ಪೂರ್ವದಲ್ಲಿ ಧರ್ಮ ವರ್ಮ ಎಂಬ ಮಹಾರಾಜ ಈ ಧರ್ಮಪುರಿ ಕ್ಷೇತ್ರದಲ್ಲಿ ಆ ನರಸಿಂಹನನ್ನು ಕುರಿತು ತಪಸ್ಸನ್ನು ಮಾಡಿದನಂತೆ. ರಾಜನ ತಪಸ್ಸಿಗೆ ಮೆಚ್ಚಿದ ಲಕ್ಷ್ಮೀನರಸಿಂಹಸ್ವಾಮಿಯು ಆ ಧರ್ಮ ವರ್ಮಕೋರಿಕೆಯ ಮೇರೆಗೆ ಲಕ್ಷ್ಮಿ ಸಮೇತನಾಗಿ ಯೋಗ ನರಸಿಂಹನ ರೂಪದಲ್ಲಿ ಈ ಧರ್ಮಪುರಿಯಲ್ಲಿ ನೆಲೆಸಿದ್ದಾನೆ. ಈ ಧರ್ಮಪುರಿ ಪುಣ್ಯಕ್ಷೇತ್ರಕ್ಕೆ ಆಂಜನೇಯನೇ ಕ್ಷೇತ್ರಪಾಲಕನು.

೨. ಅಷ್ಟದಿಗ್ಬಂಧನ

೨. ಅಷ್ಟದಿಗ್ಬಂಧನ

PC:YOUTUBE

ಮೂಲ ವಿಗ್ರಹಕ್ಕೆ ಅಷ್ಟ ದಿಗ್ಬಂಧನವನ್ನು ಮಾಡುತ್ತಾ, 8 ದಿಕ್ಕಿನಲ್ಲಿಯು 8 ಆಂಜನೇಯ ವಿಗ್ರಹಗಳನ್ನು ನಾವು ಕಾಣಬಹುದು. ಇಂತಹ ವಿಭಿನ್ನವಾದ ನಿರ್ಮಾಣವೂ ನಮಗೆ ಯಾವ ಪುಣ್ಯ ಕ್ಷೇತ್ರ ದಲ್ಲೂ ಕೂಡ ಕಾಣಿಸುವುದಿಲ್ಲ ಈ ಕ್ಷೇತ್ರದ ದರ್ಶನದಿಂದ ಯಾವುದೇ ಭೂತ ಪ್ರೇತ ಪಿಶಾಚಿಗಳ ಬಾಧೆ ಇರುವುದಿಲ್ಲ ಎಂದು ಭಕ್ತರು ಪ್ರಬಲವಾಗಿ ನಂಬುತ್ತಾರೆ.

೩. ಶ್ರೀರಾಮನು ಪ್ರತಿಷ್ಠಾಪಿಸಿದ ಶಿವಲಿಂಗ

೩. ಶ್ರೀರಾಮನು ಪ್ರತಿಷ್ಠಾಪಿಸಿದ ಶಿವಲಿಂಗ

PC:YOUTUBE

ಆದ್ದರಿಂದಲೇ ನಿತ್ಯವೂ ಈ ಕ್ಷೇತ್ರಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಶ್ರೀರಾಮಚಂದ್ರನು ವನವಾಸದ ಸಮಯದಲ್ಲಿ ಈ ಧರ್ಮಪುರಿ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದನು ಎಂದು ಹೇಳುತ್ತಾರೆ. ಇಲ್ಲಿ ಶ್ರೀರಾಮಚಂದ್ರನು ಪ್ರತಿಷ್ಠಾಪಿಸಿರುವ ಶಿವಲಿಂಗವನ್ನು ಕೂಡ ದರ್ಶಿಸಿ ಕೊಳ್ಳಬಹುದು.

೪. ಹರಿಹರ ಕ್ಷೇತ್ರ

೪. ಹರಿಹರ ಕ್ಷೇತ್ರ

PC:YOUTUBE

ಶ್ರೀರಾಮಚಂದ್ರನು ಪ್ರತಿಷ್ಠಾಪಿಸಿರುವ ಲಿಂಗವಾದ್ದರಿಂದ ಈ ಧರ್ಮಪುರಿಯಲ್ಲಿನ ಶಿವನನ್ನು ರಾಮಲಿಂಗೇಶ್ವರ ಎಂದು ಆರಾಧಿಸುತ್ತಾರೆ. ಇದೊಂದು ಅದ್ಭುತವಾದ ಶಿಲ್ಪವಾಗಿರುವುದು ವಿಶೇಷ. ಇದರಿಂದಾಗಿ ಈ ಧರ್ಮಪುರಿ ಹರಿಹರ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಬ್ರಹ್ಮ ದೇವನು ತನ್ನ ಬ್ರಹ್ಮ ದಂಡದಿಂದ ಭೂಮಿಯನ್ನು ಹಗೆದು ಒಂದು ತೀರ್ಥವನ್ನು ಸೃಷ್ಟಿಸುತ್ತಾನೆ.

 ೫. ತ್ರಿಮೂರ್ತಿಗಳ ಕ್ಷೇತ್ರ

೫. ತ್ರಿಮೂರ್ತಿಗಳ ಕ್ಷೇತ್ರ

PC:YOUTUBE

ಬ್ರಹ್ಮದೇವನು ತಾನು ಸೃಷ್ಟಿಸಿದ ಆ ತೀರ್ಥದಲ್ಲಿ ಸ್ನಾನವನ್ನು ಆಚರಿಸಿ ನರಸಿಂಹ ಸ್ವಾಮಿಯನ್ನು ದರ್ಶಿಸಿ ಕೊಳ್ಳುತ್ತಿದ್ದನು. ತದನಂತರ ಇಲ್ಲಿಯೇ ನೆಲೆಸಿದನು. ಆದುದರಿಂದಲೇ ಇಲ್ಲಿ ಬ್ರಹ್ಮದೇವನಿಗೆ ಉಪ ದೇವಾಲಯವನ್ನು ಕೂಡ ಕಾಣಬಹುದು. ಹಾಗಾಗಿ ಈ ಕ್ಷೇತ್ರವು ತ್ರಿಮೂರ್ತಿಗಳ ಕ್ಷೇತ್ರ ಎಂದು ಕೂಡ ಹೆಸರುವಾಸಿಯಾಗಿದೆ.

೬. ಯಮಧರ್ಮರಾಜ

೬. ಯಮಧರ್ಮರಾಜ

PC:YOUTUBE

ದಿನನಿತ್ಯವೂ ಪಾಪಿಗಳನ್ನು ಕಂಡು ಅವರಿಗೆ ಶಿಕ್ಷೆಗಳನ್ನು ವಿಧಿಸಿ ಯಮಧರ್ಮ ರಾಜನಿಗೂ ಕೂಡ ಪಾಪವು ಅಂಟಿಕೊಳ್ಳುತ್ತದೆ. ಇದರಿಂದಾಗಿ ನೊಂದ ಯಮಧರ್ಮರಾಜನು ನಾರದನ ಸೂಚನೆಯ ಮೇರೆಗೆ ಗೋದಾವರಿಯಲ್ಲಿ ಸ್ನಾನ ಮಾಡಿ ನರಸಿಂಹನನ್ನು ಪೂಜಿಸಿದನಂತೆ.

೭. ನರಸಿಂಹನ ಅಭಯ

೭. ನರಸಿಂಹನ ಅಭಯ

PC:YOUTUBE

ಇದರಿಂದಾಗಿ ಯಮಧರ್ಮರಾಜನಿಗೆ ದರ್ಶನ ಭಾಗ್ಯವನ್ನು ಕಲ್ಪಿಸಿದ ನರಸಿಂಹಸ್ವಾಮಿಯು, ಇನ್ನು ಮುಂದೆ ಪಾಪಾತ್ಮರನ್ನು ನೀನು ಶಿಕ್ಷಿಸಿದರೂ ಕೂಡ ಯಾವುದೇ ಪಾಪವು ನಿನಗೆ ಅಂಟುವುದಿಲ್ಲ ಎಂದು ವರವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ತನ್ನ ಕ್ಷೇತ್ರದಲ್ಲಿ ಧರ್ಮ ರಾಜನಿಗೂ ಕೂಡ ಸ್ಥಾನವನ್ನು ಕಲ್ಪಿಸುತ್ತಾನೆ.

೮. ಅಪಮೃತ್ಯು ದೋಷ

೮. ಅಪಮೃತ್ಯು ದೋಷ

PC:YOUTUBE

ಆದ್ದರಿಂದಲೇ ಈ ಧರ್ಮಪುರಿ ಕ್ಷೇತ್ರದಲ್ಲಿ ನಾವು ಯಮಧರ್ಮರಾಜನಿಗೂ ಒಂದು ಉಪ ದೇವಾಲಯವನ್ನು ಕೂಡ ಕಾಣಬಹುದು. ಇನ್ನೂ ಯಮನ ಉಪ ದೇವಾಲಯದ ಸಮೀಪದಲ್ಲಿರುವ ಗಂಡ ದೀಪಕ್ಕೆ ಎಣ್ಣೆಯನ್ನು ಸಮರ್ಪಿಸಿದವರಿಗೆ ಅಪಮೃತ್ಯು ದೋಷ ಇರುವುದಿಲ್ಲ ಎಂದು ಹಾಗೂ ಮೃತ್ಯು ಭಯ ತೊಲಗುತ್ತದೆ ಎಂದು ಪ್ರತೀತಿ.

೯. ಯಮ ಕುಂಡ

೯. ಯಮ ಕುಂಡ

PC:YOUTUBE

ಯಮಧರ್ಮರಾಜ ಸ್ನಾನವನ್ನು ಆಚರಿಸಿದ ಪ್ರದೇಶಕ್ಕೆ "ಯಮ ಕುಂಡ" ಎಂದು ಕರೆಯುತ್ತಾರೆ. ಇನ್ನು ತನ್ನ ಪ್ರಾತಿವ್ರತ್ಯವನ್ನು ನಿರೂಪಿಸುವುದಕ್ಕೋಸ್ಕರ ಮೂರು ಹಿಡಿ ಮರಳಿನಲ್ಲಿ ಸತ್ಯವತಿ ಎಂಬ ಮಹಿಳೆ ನಿರ್ಮಿಸಿದ ಮರಳಿನ ಸ್ತಂಭವನ್ನು ನಾವು ಕಾಣಬಹುದು.

 ೧೦.ಮರಳಿನ ಸ್ತಂಭ

೧೦.ಮರಳಿನ ಸ್ತಂಭ

PC:YOUTUBE

ಇದು ನೂರಾರು ವರ್ಷಗಳಷ್ಟು ಹಳೆಯದು ಎಂದು ಹೇಳುತ್ತಾರೆ. ಆ ಸತ್ಯವತಿ ಸ್ನಾನವನ್ನು ಮಾಡಿದ ಕುಂಡವನ್ನು" ಸತ್ಯವತಿ ಕುಂಡ "ಎಂದು ಕರೆಯುತ್ತಾರೆ. ದಂಪತಿಗಳು ಈ ಕುಂಡದಲ್ಲಿ ಸ್ನಾನವನ್ನು ಆಚರಿಸಿ ನರಸಿಂಹನನ್ನು ದರ್ಶಿಸಿದರೆ ಅತ್ಯಂತ ಫಲಪ್ರದ ಎಂದು ಭಕ್ತರ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X