Search
  • Follow NativePlanet
Share
» »ಶ್ರೀ ಚಕ್ರ ಮಹಾಯಂತ್ರ ದೇವಾಲಯ- ದೇವಿಪುರ

ಶ್ರೀ ಚಕ್ರ ಮಹಾಯಂತ್ರ ದೇವಾಲಯ- ದೇವಿಪುರ

ಆಂಧ್ರ ಪ್ರದೇಶದ ವೈಜಾಕ್ ನಗರಕ್ಕೆ ಸರಿಯಾಗಿ 30 ಕಿ.ಮೀ ದೂರದಲ್ಲಿ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ "ದೇವಿಪುರ" ಎಂಬ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ಒಂದು ಮಾಹಿಮಾನ್ವಿತವಾದ ದೇವಿಯ ದೇವಾಲಯವಿದೆ. ಆ ದೇವಾಲಯವು ಶ್ರೀ ಚಕ್ರ ಮಹಾಯಂತ್ರ ದೇವ

ಆಂಧ್ರ ಪ್ರದೇಶದ ವೈಜಾಕ್ ನಗರಕ್ಕೆ ಸರಿಯಾಗಿ 30 ಕಿ.ಮೀ ದೂರದಲ್ಲಿ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ "ದೇವಿಪುರ" ಎಂಬ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ಒಂದು ಮಾಹಿಮಾನ್ವಿತವಾದ ದೇವಿಯ ದೇವಾಲಯವಿದೆ. ಆ ದೇವಾಲಯವು ಶ್ರೀ ಚಕ್ರ ಮಹಾಯಂತ್ರ ದೇವಾಲಯವಾಗಿ ಖ್ಯಾತಿ ಪಡೆದಿರುವ ಹಿಂದೂ ದೇವಾಲಯವಾಗಿದೆ. ಶಕ್ತಿ ಪೀಠಗಳಿಗೆ ಸಂಬಂಧಿಸಿದೆ ಈ ದೇವಾಲಯ.

ಇಲ್ಲಿ ನೆಲೆಸಿರುವ ಪಾರ್ವತಿ ದೇವಿಯ ಸ್ವರೂಪಿಯಾದ ಸಹ್ರಾಕ್ಷಿ ತಾಯಿ. ಸಹ್ರಾಕ್ಷಿ ಎಂದರೆ 100 ಕಣ್ಣುಗಳನ್ನು ಹೊಂದಿರುವವಳು ಎಂದು ಅರ್ಥವಾಗಿದೆ. ಇಲ್ಲಿ ಕಾಮೇಶ್ವರನು ಶಿವಲಿಂಗ ರೂಪದಾರಿಯಾಗಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ಈ 2 ದೇವತಾ ಮೂರ್ತಿಗಳೂ ಕೂಡ ಪ್ರಧಾನವಾದ ದೇವತಾ ಮೂರ್ತಿಗಳಾಗಿದ್ದಾರೆ.

ಈ ದೇವಾಲಯ ಅತ್ಯಂತ ಮಾಹಿಮಾನ್ವಿತವಾದುದು ಇಲ್ಲಿನ ತಾಯಿಗೆ ಮೈಯೆಲ್ಲಾ ಕಣ್ಣನ್ನು ಹೊಂದಿರುವ ಪರಾಶಕ್ತಿಯಾಗಿ ಇಲ್ಲಿ ನೆಲೆಸಿದ್ದಾಳೆ. ಪ್ರಸ್ತುತ ಲೇಖನದ ಮೂಲಕ ಈ ದೇವಿಯ ಮಹಿಮೆಯ ಬಗ್ಗೆ ತಿಳಿಯೋಣ.

ಟಾಟಾ ಫಂಡಮೆಂಡಲ್ ರೆಸರ್ಟ್ ಇನ್ಸಿಟ್ಯೂಟ್

ಟಾಟಾ ಫಂಡಮೆಂಡಲ್ ರೆಸರ್ಟ್ ಇನ್ಸಿಟ್ಯೂಟ್

ಮುಂಬೈನಲ್ಲಿನ ಟಾಟಾ ಫಂಡಮೆಂಡಲ್ ರೆಸರ್ಟ್ ಇನ್ಸಿಟ್ಯೂಟ್‍ನಲ್ಲಿ ಶಾಸ್ತ್ರಕಾರನಾಗಿ ಕೆಲಸ ಮಾಡುತ್ತಿದ್ದ ಪ್ರಹ್ಲಾದ್ ಶಾಸ್ತ್ರೀ (ಅಮೃತಾನಂದ ಸರಸ್ವತಿ ಸ್ವಾಮಿ)ಗೆ ಒಂದು ದಿನ ರಾತ್ರಿ ನಿದ್ರೆ ಮಾಡುತ್ತಿದ್ದಾಗ ದೇವಿ ಕನಸ್ಸಿನಲ್ಲಿ ಕಾಣಿಸಿಕೊಂಡಳು. ತನಗೆ ದೇವಾಲಯವನ್ನು ನಿರ್ಮಾಣ ಮಾಡು ಎಂಬ ಕನಸ್ಸು ಅದಾಗಿತ್ತು.

ವೈಜಾಕ್

ವೈಜಾಕ್

ಅದಕ್ಕಾಗಿ ಆತನು ಸುಂದರವಾದ ಸ್ಥಳಗಳನ್ನು ಹುಡುಕುತ್ತಾ ಕೊನೆಗೆ ವೈಜಾಕ್‍ನಲ್ಲಿ ನಡೆಯುವ ದೇವಿಯ ಯಾಗಕ್ಕೆ ಹಾಜರಾಗುತ್ತಾನೆ. ಸುತ್ತಲೂ ಇರುವ ಪ್ರಕೃತಿ, ಅಲ್ಲಿ ನಡೆದ ಪ್ರತ್ಯೇಕವಾದ ಸಂಘಟನೆಗಳಿಂದಾಗಿ ಆತನು ದೇವಾಲಯವನ್ನು ಇಲ್ಲಿಯೇ ನಿರ್ಮಾಣ ಮಾಡಬೇಕು ಎಂದು ನಿಶ್ಚಿಯಿಸಿಕೊಂಡ.

ಸಹ್ರಾಕ್ಷಿ ದೇವಾಲಯ ನಿರ್ಮಾಣ

ಸಹ್ರಾಕ್ಷಿ ದೇವಾಲಯ ನಿರ್ಮಾಣ

ದೇವಿಪುರಂನಲ್ಲಿ ಸಹ್ರಾಕ್ಷಿ ಎಂಬ ಹೆಸರಿನಿಂದಾಗಿ ದೇವಾಲಯದ ನಿರ್ಮಾಣ 1985ರ ವರ್ಷದಲ್ಲಿ ಪ್ರಾರಂಭ ಮಾಡಿದರು. ಈ ದೇವಾಲಯದ ನಿರ್ಮಾಣ ಪೂರ್ತಿಯಾದ ಮೊದಲ ಕುಂಭಾಭಿಷೇಕವನ್ನು 1994 ರಲ್ಲಿ ನಡೆಯಿತು.

3 ಎಕರೆಗಳು

3 ಎಕರೆಗಳು

ದೇವಿಪುರಂನ ಪ್ರಧಾನವಾದ ಆಕರ್ಷಣೆ ಎಂದರೆ ಸಹ್ರಾಕ್ಷಿ ದೇವಾಲಯ. ಈ ದೇವಾಲಯವನ್ನು 3 ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ವಿಶೇಷವೆನೆಂದರೆ ದೇವಾಲಯವು 3 ಅಂತಸ್ತಿನಿಂದ ಕೂಡಿದೆ. ಗುಡಿಯ ಪ್ರಾಂಗಣದಲ್ಲಿ ರಾಜಾರಾಜೇಶ್ವರಿ ಮಂದಿರದ ಜೊತೆ 108 ದೇವತಾ ಮೂರ್ತಿಗಳ ಪ್ರತಿಮೆಯನ್ನು ಕಾಣಬಹುದಾಗಿದೆ.

ಪೀಠ

ಪೀಠ

ದೇವಾಲಯದ ಸಮೀಪದಲ್ಲಿನ ಬೆಟ್ಟದ ಮೇಲೆ ಕಾಮಾಖ್ಯ ಪೀಠ ಮತ್ತು ಶಿವಾಲಯವಿದೆ. ದೇವಿಯು ಮೈತುಂಬ ವಸ್ತ್ರಾಭರಣಗಳಿಂದ ಕಂಗೊಳಿಸುತ್ತಿದ್ದಾಳೆ. ಸೃಷ್ಠಿಕಾರ್ಯದಲ್ಲಿ ನಿರತಳಾಗಿದ್ದಾಳೆ ಎಂಬ ಭಂಗಿಯಲ್ಲಿ ಕುಳಿತಿದ್ದಾಳೆ.

ವಿಶೇಷ ಪೂಜೆ

ವಿಶೇಷ ಪೂಜೆ

ಪೌರ್ಣಮಿ, ಅಮಾವಾಸ್ಯೆಯ ದಿನಗಳಲ್ಲಿ ದೇವಿಗೆ ಪ್ರತ್ಯೇಕವಾದ ಅಭಿಷೇಕಗಳನ್ನು ಮಾಡುತ್ತಾರೆ. ವಿಶೇಷವೆನೆಂದರೆ ದೇವಿಗೆ ಭಕ್ತರೇ ನೇರವಾಗಿ ಪಂಚಾಮೃತ (ನೀರು, ಹಾಲು, ಮೊಸರು, ಜೇನು, ಹಣ್ಣುಗಳು) ಗಳನ್ನು ಉಪಯೋಗಿಸಿ ಅಭಿಷೇಕವನ್ನು ಮಾಡುತ್ತಾರೆ.

ಇಗ್ಲೂ

ಇಗ್ಲೂ

ಪೀಠವಿರುವ ಶಿವಲಿಂಗಗಳ ಸಮೂಹಗಳಲ್ಲಿ ದಕ್ಷಿಣ ದ್ವಿ ಸಹಸ್ರ ಲಿಂಗಗಳನ್ನು ಏರ್ಪಾಟು ಮಾಡಿದ್ದಾರೆ. ಹಿಮಾಲಯವನ್ನೇ ನಾಚಿಸುವ ಹಾಗೆ ಇಲ್ಲಿ ಇಗ್ಲೂವಿನ ರೀತಿಯಲ್ಲಿ ಮನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ದೇವಿಯ ರಥ

ದೇವಿಯ ರಥ

ಇಲ್ಲಿ ದೇವಿಯ ರಥ ಹಾಗು ಅಮೃತಾನಂದ ಸ್ವಾಮಿಯ ವಿಗ್ರಹವು ಮತ್ತಷ್ಟು ಮನೋಹರವಾಗಿದೆ. ಒಮ್ಮೆ ಈ ತಾಯಿಯ ಕೃಪೆ ಪಡೆಯಬೇಕು ಎಂದಾದರೆ ಭೇಟಿ ನೀಡಲೇಬೇಕಾದ ತಾಣ ಇದಾಗಿದೆ. ಭಕ್ತರ ಅಭಿಲಾಷೆಗಳನ್ನು ಈಡೇರಿಸುವ ಶಕ್ತಿ ದೇವತೆ ಈ ತಾಯಿಯಾಗಿದ್ದಾಳೆ.

ದೇವಾಲಯಕ್ಕೆ ಹೇಗೆ ಸಾಗಬೇಕು?

ದೇವಾಲಯಕ್ಕೆ ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ ತೆರಳುವವರು ಮೊದಲು ವೈಜಾಕ್ ವಿಮಾನ ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಸುಮಾರು 20 ಕಿ.ಮೀ ದೂರದಲ್ಲಿ ಇರುವ ದೇವಿಪುರಂಗೆ ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದಾಗಿದೆ.

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ದೇವಿಪುರಂ ಸಮೀಪದಲ್ಲಿ ವೈಜಾಕ್ ರೈಲ್ವೆ ನಿಲ್ದಾಣವಿದೆ. ದೇಶದ ಹಲವಾರು ಪ್ರದೇಶಗಳಿಂದ ಇಲ್ಲಿಗೆ ರೈಲುಗಳು ಬರುತ್ತಿರುತ್ತದೆ. ಈ ಸ್ಟೇಷನ್‍ನಿಂದ ದೇವಿಪುರಕ್ಕೆ ಸುಮಾರು 28 ಕಿ.ಮೀ ದೂರದಲ್ಲಿ ಇದೆ. ಅನಕಾಪಲ್ಲಿ ರೈಲ್ವೆ ನಿಲ್ದಾಣ ಇನ್ನೊಂದು ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಸುಮಾರು 18 ಕಿ.ಮೀ ದೂರದಲ್ಲಿದೆ ಆ ಮಾಹಿಮಾನ್ವಿತವಾದ ದೇವಾಲಯ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಬಸ್ಸುಗಳ ಮೂಲಕ ತಲುಪುವವರು ಮೊದಲು ವೈಜಾಗ್‍ನಲ್ಲಿನ ದ್ವಾರಕ ಬಸ್ ಸ್ಟಾಂಡ್ ತಲುಪಬೇಕು. ಅಲ್ಲಿಂದ ಹಲವಾರು ಬಸ್ಸುಗಳು ಕೇವಲ 30 ನಿಮಿಷಗಳಲ್ಲಿ ಆ ದೇವಾಲಯಕ್ಕೆ ತಲುಪಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X