Search
  • Follow NativePlanet
Share
» »ಇಲ್ಲಿ ದೇವಿಗೆ ಬಾಯಿಗೆಬಂದಂತೆ ಬೈಯ್ತಾರಂತೆ ಭಕ್ತರು…ಕಾರಣ ಏನು?

ಇಲ್ಲಿ ದೇವಿಗೆ ಬಾಯಿಗೆಬಂದಂತೆ ಬೈಯ್ತಾರಂತೆ ಭಕ್ತರು…ಕಾರಣ ಏನು?

ಸಾಮಾನ್ಯವಾಗಿ ಯಾವ ದೇವಸ್ಥಾನದಲ್ಲಾದರೂ ಅಲ್ಲಿರುವ ದೇವತೆಯನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಆದರೆ ನೀವು ದೇವರನ್ನು ಬೈಯುವವರನ್ನು ನೋಡಿದ್ದೀರಾ. ಇಂತಹ ಒಂದು ದೇವಸ್ಥಾನವು ಇದೆ ಎಂದರೆ ನಂಬಲೇ ಬೇಕು. ಇಲ್ಲಿ ಬರುವ ಭಕ್ತರೆಲ್ಲಾ ದೇವರನ್ನು ಬೈಯುತ್ತಾ ಇರುತ್ತಾರಂತೆ.

ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !

ಆದರೆ ಕೇರಳದ ಒಂದು ದೇವಾಲಯದಲ್ಲಿ ಮಾತ್ರ ಅಲ್ಲಿನ ದೇವರನ್ನು ಬೈಯುತ್ತಾರೆ. ಕೆಲವೊಮ್ಮೆ ಬಳಸಬಾರದಂತಹ ಪದಗಳನ್ನು ಬಳಸಿ ದೇವರನ್ನು ಬೈಯಲಾಗುತ್ತದೆ. ಇಲ್ಲಿನ ಜನರ ಭಕ್ತಿಯು ತುಂಬಾನೇ ಭಿನ್ನವಾಗಿದೆ. ಇಲ್ಲಿನ ದೇವಿಯು ಉಗ್ರಸ್ವರೂಪಿಣಿ ಯಾಗಿದ್ದಾಳೆ. ಈ ದೇವಿಯು ತಮ್ಮನ್ನು ಭೂತ, ಪ್ರೇತಗಳಿಂದ ರಕ್ಷಿಸುತ್ತಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಇಲ್ಲಿನಡೆಯುವ ಭರಣಿ ಉತ್ಸವವನ್ನು ನೋಡಲು ದೇಶಾದ್ಯಂತ ಜನರು ಇಲ್ಲಿಗೆ ಆಗಮಿಸುತ್ತಾರೆ.

ಪರಶುರಾಮನ ಪ್ರಾರ್ಥಿಸಿದ ಪ್ರಜೆಗಳು

ಪರಶುರಾಮನ ಪ್ರಾರ್ಥಿಸಿದ ಪ್ರಜೆಗಳು

PC: Dinakarr

ಸ್ಥಾನಿಕ ಪುರಾಣಾಗಳ ಪ್ರಕಾರ ಕೇರಳದಲ್ಲಿ ದಾರುಕ ಎನ್ನುವ ರಾಕ್ಷಸನಿದ್ದ ಆತನ ಅಲ್ಲಿನ ಪ್ರಜೆಗಳನ್ನು ಹಿಂಸಿಸುತ್ತಿದ್ದ. ಹಾಗಾಗಿ ಅಲ್ಲಿನ ಪ್ರಜೆಗಳು ವಿಷ್ಣುವಿನ ಅವತಾರವಾದ ಪರಶುರಾಮನ ಕೇಳಿಕೊಳ್ಳುತ್ತಾರೆ. ಪರಶುರಾಮನು ಪರಶಿನನ್ನು ಪ್ರಾರ್ಥೀಸುತ್ತಾರೆ. ಪರಶಿವನು ತನ್ನ ತಪೋಶಕ್ತಿಯಿಂದ ಭದ್ರಕಾಳಿ ಪ್ರತಿಮೆಯನ್ನು ಸೃಷ್ಠಿಸಿ ಪರಶುರಾಮನಿಗೆ ನೀಡುತ್ತಾನೆ.

ದೇವಿಯ ಮೂರ್ತಿ ಇತ್ತ ಪರಶಿವ

ದೇವಿಯ ಮೂರ್ತಿ ಇತ್ತ ಪರಶಿವ

PC: നിരക്ഷരൻ

ಪರಶುರಾಮನು ಆ ಪ್ರತಿಮೆಯನ್ನು ತೆಗೆದುಕೊಂಡು ಹೋಗಿ ಕೊಂಡುಗಲ್ಲೂರು ಎನ್ನುವ ಪ್ರಾಂತ್ಯದಲ್ಲಿ ಸ್ಥಾಪಿಸುತ್ತಾನೆ. ಪ್ರಜೆಗಳನ್ನು ಹಿಂಸಿಸಲು ಬಂದ ರಾಕ್ಷಸನ ಜೊತೆ ದೇವಿ ಯುದ್ಧ ಮಾಡಿ ಆತನನ್ನು ಸಂಹರಿಸುತ್ತಾರೆ. ತಮ್ಮನ್ನು ಕಾಪಾಡಿದ್ದಕ್ಕಾಗಿ ಪ್ರಜೆಗಳು ನಿತ್ಯವೂ ದೇವಿಗೆ ಪೂಜೆ, ಅರ್ಚನೆ, ಅಭಿಷೇಕಗಳನ್ನು ಮಾಡುತ್ತಾರೆ.

ಕಾಪು ತಿಂಡಲ್

ಕಾಪು ತಿಂಡಲ್

PC: Challiyan

ದೇವಿಯು ರಾಕ್ಷಸನ ಜೊತೆ ಯುದ್ಧ ಮಾಡಿ ಆತನನ್ನು ಸಂಹರಿಸಿದ ನೆನಪಿಗಾಗಿ ಇಲ್ಲಿನ ಪ್ರಜೆಗಳು ಆಯುಧವನ್ನು ಕೈಯಲ್ಲಿ ಹಿಡಿದುಕೊಂಡು ಯುದ್ಧಕ್ಕೆ ಹೋಗುವಾಗೆ ಮಾಡುತ್ತಾರೆ. ಇದನ್ನು ಕಾಪು ತಿಂಡಲ್ ಉತ್ಸವ ಎನ್ನುತ್ತಾರೆ. ಆಯುಧವನ್ನು ಹಿಡಿದುಕೊಂಡು ದೇವಸ್ಥಾನಕ್ಕೆ ಮೂರು ಸುತ್ತು ಸುತ್ತುತ್ತಾರೆ.

ಭರಣಿ ಉತ್ಸವ

ಭರಣಿ ಉತ್ಸವ

PC: Challiyan

ಇಲ್ಲಿ ಮುಖ್ಯವಾದುದೆಂದರೆ ಭರಣಿ ಉತ್ಸವ. ಇದನ್ನು ಸಾಮಾನ್ಯವಾಗಿ ಮಾರ್ಚ, ಎಪ್ರಿಲ್ ತಿಂಗಳ ಮಧ್ಯದಲ್ಲಿ ನಡೆಸುತ್ತಾರೆ. ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತರು ಎರಡು ಗುಂಪುಗಳನ್ನಾಗಿ ಮಾಡುತ್ತಾರೆ. ಒಂದು ಗುಂಪು ದೇವಸ್ಥಾನದ ಒಳಗೆ ಇದ್ದರೆ ಇನ್ನೊಂದು ಗುಂಪು ದೇವಸ್ಥಾನದ ಹೊರಗೆ ಇರುತ್ತದೆ. ದೇವಸ್ಥಾನದ ಹೊರಗೆ ಇರುವವರು ದೇವಿಯನ್ನು ಬಾಯಿಗೆ ಬಂದಂತೆ ಬೈಯುತ್ತಾ ಇರುತ್ತಾರೆ.

ಉಗ್ರರೂಪಿಣಿ

ಉಗ್ರರೂಪಿಣಿ

P.C: നിരക്ഷര

ಉಗ್ರರೂಪಿಣಿಯಾಗಿ ತಮ್ಮನ್ನು ಭೂತ, ಪ್ರೇತಗಳಿಂದ ರಕ್ಷಿಸುತ್ತಾರೆ ಎನ್ನುವುದು ಇಲ್ಲಿನ ಪ್ರಜೆಗಳ ನಂಬಿಕೆ. ಸುಮಾರು 10 ಎಕರೆ ಪ್ರದೇಶದಲ್ಲಿ ಈ ದೇವಸ್ಥಾನವಿದೆ.

 ರಾಜರ ಕುಲದೈವ

ರಾಜರ ಕುಲದೈವ

ಪ್ರಾಚೀನ ಕಾಲದಲ್ಲಿ ಇಲ್ಲಿ ಪ್ರಾಣಿ,ಪಕ್ಷಿಗಳ ಬಲಿ ನೀಡಲಾಗುತ್ತಿತ್ತು. ಆದರೆ ಕೊಚ್ಚಿನ್ ಸರ್ಕಾರದ ಹಸ್ತಕ್ಷೇಪದ ನಂತರ ಪ್ರಾಣಿ ಬಲಿ ನೀಡುವುದನ್ನು ನಿಲ್ಲಿಸಲಾಯಿತು. ದೇವಿಯ ವಿಗ್ರಹದ ಸುತ್ತ ಸಪ್ತಮಾತ್ರಕೆಯರು, ವೀರಭದ್ರ, ಗಣಪತಿ ವಿಗ್ರಹಗಳನ್ನೂ ನೋಡಬಹುದು. ಹಲವಾರು ವರ್ಷಗಳಿಂದ ಕೊಂಡುಗಲ್ಲರ ಸಂಸ್ಥಾನಕ್ಕೆ ಸಂಬಂಧಿಸಿದ ಅನೇಕ ರಾಜರಿಗೆ ಕೊಂಡುಗಲ್ಲೂರ ಭಗವತಿ ದೇವಿಯು ಕುಲದೈವವಾಗಿದೆ.

Read more about: india travel temple kerla
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more