Search
  • Follow NativePlanet
Share
» »ಪ್ರಾರ್ಥಿಸಿದ 24ಗಂಟೆಯೊಳಗೆ ಮಳೆ ಬರುತ್ತೆ ಇಲ್ಲಿ !

ಪ್ರಾರ್ಥಿಸಿದ 24ಗಂಟೆಯೊಳಗೆ ಮಳೆ ಬರುತ್ತೆ ಇಲ್ಲಿ !

ನಮ್ಮದೇಶದಲ್ಲಿ ಅನೇಕ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರಗಳಿವೆ. ಅಂತಹ ದೇವಸ್ಥಾನಗಳಲ್ಲಿ ಇಂದು ನಾವು ಒಂದು ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ. ಅಲ್ಲಿ ಪ್ರಾರ್ಥಿಸಿದ 24 ಗಂಟೆಯೊಳಗೆ ಮಳೆ ಬರುತ್ತದಂತೆ. ಹಾಗಾದ್ರೆ ಆ ದೇವಸ್ಥಾನ ಎಲ್ಲಿದೆ ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ಎಲ್ಲಿದೆ ಈ ದೇವಸ್ಥಾನ

ಎಲ್ಲಿದೆ ಈ ದೇವಸ್ಥಾನ

ಅರುಲ್ಮಿಗು ಸೊರಿಮುತ್ತು ಅಯ್ಯನಾರ್ ದೇವಸ್ಥಾನವು ಪಪನಾಸಮ್ ಮತ್ತು ಕರಯಿಯರ್ ಅಣೆಕಟ್ಟಿನ ನಡುವೆ ಇದೆ. ಇದು ನೆಲ್ಲೈ ಜಿಲ್ಲೆಯ ಅಂಬಸಮುದ್ರಂ ತಾಲ್ಲೂಕಿನಲ್ಲಿರುವ ತಾರರವರೂನಿ ನದಿಯ ದಡದಲ್ಲಿದೆ. ಇದು ದಕ್ಷಿಣ ಭಾರತದ ಮೊದಲ ಅಯಪ್ಪನ್ ದೇವಸ್ಥಾನವಾಗಿದೆ.

ಕಂಚಿನ ಗಂಟೆ

ಕಂಚಿನ ಗಂಟೆ

ಸಂತಾನಭಾಗ್ಯ ಪಡೆಯಬೇಕೆಂದಿರುವವರು ಈ ದೇವಾಲಯಕ್ಕೆ ಬಂದು ಪ್ರಾರ್ಥಿಸುತ್ತಾರೆ. ದುಷ್ಪರಿಣಾಮಗಳಿಂದ ಪರಿಹಾರ ಪಡೆಯುವವರು ಇಲ್ಲಿಗೆ ಬರುತ್ತಾರೆ. ನ್ಯಾಯಾಲಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಪ್ರಾರ್ಥನೆಯನ್ನು ಸೊರಿಮುತ್ತು ಅಯ್ಯನಾರ್‌ ಮುಂದೆ ಇಡುತ್ತಾರೆ. ಜನರು ತಮ್ಮ ಹಸುಗಳಿಂದ ಹೆಚ್ಚು ಹಾಲು ಪಡೆಯಲು ಸೊರಿಮುತ್ತು ಅಯ್ಯನಾರ್‌ಗೆ ಪ್ರಾರ್ಥಿಸಿ. ದೇವಾಲಯಕ್ಕೆ ಕಂಚಿನ ಗಂಟೆಗಳನ್ನು ನೀಡುತ್ತಾರೆ.

ಮಳೆ ಬರುತ್ತದೆ

ಮಳೆ ಬರುತ್ತದೆ

ಇಲ್ಲಿನ ಇನ್ನೊಂದು ವಿಶೇಷ ಎಂದರೆ ಇಲ್ಲಿನ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಿದರೆ 24 ಗಂಟೆಯೊಳಗೆ ಮಳೆಯಾಗುತ್ತಂತೆ. ಮಳೆಯಾಗಿರುವ ಹಲವಾರು ಉದಾಹರಣೆಗಳೂ ಇವೆ.

ತಮೈರಾಬರಾನಿ ನದಿ

ತಮೈರಾಬರಾನಿ ನದಿ

PC:Karthikeyan.pandian
ತಮೈರಾಬರಾನಿ ನದಿ (ಪೊರುನೈ) ಎಂಬುದು ಪಶ್ಚಿಮದ ಘಟ್ಟಗಳ ಪೊಥಿಗೈ ಬೆಟ್ಟದ ಅಗಸ್ಟಾರ್ಕುಡಮ್ ಶಿಖರದಿಂದ ಹುಟ್ಟಿಕೊಂಡಿದೆ, ಇದು ಅಂಬಾಸಮುದ್ರಂ ತಾಲ್ಲೂಕಿನಲ್ಲಿರುವ ಪಪನಾಶಂಗೆ ಹತ್ತಿರದಲ್ಲಿದೆ. ಇದು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ತಿರುನೆಲ್ವೇಲಿ ಮತ್ತು ಟ್ಯುಟಿಕೋರಿನ್ ಜಿಲ್ಲೆಗಳ ಮೂಲಕ ಮನ್ನಾರ್ ಕೊಲ್ಲಿಗೆ ಹರಿಯುತ್ತದೆ.

ಕರಯಿಯಾರ್ ಅಣೆಕಟ್ಟು

ಕರಯಿಯಾರ್ ಅಣೆಕಟ್ಟು

Pc:Sukumaran sundar

ಕರಯಿಯಾರ್ ಅಣೆಕಟ್ಟು ಮುಂಡಂತುರೈ ಟೈಗರ್ ರಿಸರ್ವ್ ಆವರಣದಲ್ಲಿದೆ ಮತ್ತು ಇದು ಒಂದು ಭಾಗವಾಗಿದೆ. ಈ ಅಣೆಕಟ್ಟು ಪ್ರವಾಸಿಗರನ್ನು ರೋಮಾಂಚನಗೊಳಿಸಲು ಬೋಟಿಂಗ್ ಸೇವೆಗಳನ್ನು ಒದಗಿಸುತ್ತದೆ. ಇಲ್ಲಿ ಜಲಕ್ರೀಡೆಗಳೂ ಇವೆ. ತಮಿಳುನಾಡಿನ ಪ್ರಮುಖ ಅಣೆಕಟ್ಟುಗಳಲ್ಲಿ ಇದೂ ಒಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X