Search
  • Follow NativePlanet
Share
» »ಸೋನಾಮಾರ್ಗ : ಬಂಗಾರದಂತಹ ಗಿರಿಧಾಮ

ಸೋನಾಮಾರ್ಗ : ಬಂಗಾರದಂತಹ ಗಿರಿಧಾಮ

By Vijay

ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರ ರಾಜ್ಯದ ಅಂದ ಚೆಂದದ ಕುರಿತು ತಿಳಿಸುವ ಅವಶ್ಯಕತೆಯೆ ಇಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಗೂ ಇದರ ಸುಂದರ ಪ್ರಕೃತಿಯ ಬಗ್ಗೆ ತಿಳಿದೆ ಇದೆ. ಬಹುತೇಕ ಎಲ್ಲ ಭಾಷೆಯ ಚಿತ್ರಗಳಲ್ಲೂ ಕೂಡ ಈ ರಾಜ್ಯದ ಅಂದ ಚೆಂದವನ್ನು ಸೆರೆ ಹಿಡಿಯಲಾಗಿದೆ.

ರಾಜನಿಗೆ ಕಿರೀಟ ಹೇಗೆ ಭೂಷಣವೊ ಅದೇ ರೀತಿಯಲ್ಲಿ ನಮ್ಮ ದೇಶಕ್ಕೆ ಕಿರೀಟದಂತೆಯೆ ಇರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಭೂಷಣವಾಗಿದೆ. ಶಿಮ್ಲಾ, ಶ್ರೀನಗರ, ಕಾಶ್ಮೀರದವರೆಗೂ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ.

ಪ್ರಸ್ತುತ ಲೇಖನವು ಈ ರಾಜ್ಯದಲ್ಲಿರುವ ಸೋನಾಮಾರ್ಗ ಎಂಬ ಅತ್ಯದ್ಭುತ ಹಾಗೂ ಸುಂದರಮಯ ಸ್ಥಳದ ಕುರಿತು ತಿಳಿಸುತ್ತದೆ. ಮೂಲತಃ ಇದೊಂದು ಗಿರಿಧಾಮ ಪ್ರದೇಶವಾಗಿದ್ದು ಪ್ರಕೃತಿಯ ಸೌಂದರ್ಯವು ಇಲ್ಲಿ ಮೈನೆರೆದು ನಿಂತಿದೆ.

ಸೋನಾಮಾರ್ಗ:

ಸೋನಾಮಾರ್ಗ:

ಪ್ರಸ್ತುತ ಸೋನಾಮಾರ್ಗ ಗಿರಿಧಾಮವು ಗಾಂದರ್ಬಲ ಜಿಲ್ಲೆಯಲ್ಲಿದೆ. ಹಿಂದೆ ಶ್ರೀನಗರ ಜಿಲ್ಲೆಯ ಎರಡು ತಾಲೂಕುಗಳಾಗಿ ಗಾಂದರ್ಬಲ ಮತ್ತು ಕಂಗನ್ ಪ್ರದೇಶಗಳಿದ್ದವು. ಈ ಎರಡು ತಾಲೂಕುಗಳು ಒಟ್ಟಿಗೆ ಸೇರಿ ಗಾಂದರ್ಬಲ ಎಂಬ ಹೊಸ ಜಿಲ್ಲೆಯಾಗಿದೆ.

ಚಿತ್ರಕೃಪೆ: Soumyadeep Paul

ಸೋನಾಮಾರ್ಗ:

ಸೋನಾಮಾರ್ಗ:

ಹಿಂದೊಮ್ಮೆ ಹಿಂದಿ ಚಿತ್ರಗಳ ಪ್ರೀಯ ತಾಣವಾಗಿ ಕಂಗೊಳಿಸುತ್ತಿದ್ದ ಸೋನಾಮಾರ್ಗ ಅತಿ ಹಿತಕರವಾದ ವಾತಾವರಣ, ಅತ್ಯದ್ಭುತವಾದ ಪ್ರಕೃತಿ ಸೌಂದರ್ಯ ಹೊಂದಿದ್ದು, ಇಲ್ಲಿರುವ ಅಲ್ಪೈನ್ ಮರಗಳ ಹಿನ್ನಿಲೆಯು ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ದ್ವಿಗುಣ ಗೊಳಿಸಿದೆ.

ಚಿತ್ರಕೃಪೆ: Partha S. Sahana

ಸೋನಾಮಾರ್ಗ:

ಸೋನಾಮಾರ್ಗ:

ಪ್ರವಾಸ ಪ್ರಖ್ಯಾತಿಗಳಿಸಿದ ತಾಣವಾದ ಶ್ರೀನಗರದಿಂದ 80 ಕಿ.ಮೀ ಗಳಷ್ಟು ದೂರವಿರುವ ಸೋನಾಮಾರ್ಗ ಗಿರಿಧಾಮವು ನಾಲ್ಲಾ ಸಿಂಧ್ ನದಿಯ ತಟದ ಮೇಲೆ ನೆಲೆಸಿದೆ. ರಾಷ್ಟ್ರೀಯ ಹೆದ್ದಾರಿ 1D ಮೂಲಕ ಮೂರು ಘಂಟೆಯ ಪ್ರಯಾಣಾವಧಿಯಷ್ಟು ದೂರದಲ್ಲಿದೆ ಸೋನಾಮಾರ್ಗ.

ಚಿತ್ರಕೃಪೆ: Partha S. Sahana

ಸೋನಾಮಾರ್ಗ:

ಸೋನಾಮಾರ್ಗ:

ಆದರೆ ಒಂದು ತಿಳಿಯಬೇಕಾದ ಸಂಗತಿ ಎಂದರೆ ಪ್ರತಿ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಅಪಾಯಕರ ಹಾಗೂ ಹೆಚ್ಚು ಕಡಿಮೆ ಅಸಾಧ್ಯ. ದಟ್ಟ ಆಕಸ್ಮಿಕ ಹಿಮಪಾತ, ವ್ಯತಿರಿಕ್ತ ಹವಾಮಾನ ಈ ಪ್ರದೇಶವನ್ನು ಆಕ್ರಮಿಸಿಕೊಂಡು ಬಿಡುತ್ತವೆ. ಅಂತೆಯೆ ಪ್ರತಿ ವರ್ಷದ ಡಿಸೆಂಬರ್ ನಲ್ಲಿ ಇಲ್ಲಿಗೆ ತಲುಪುವ ರಸ್ತೆಯನ್ನು ಮುಚ್ಚಲಾಗಿರುತ್ತದೆ.

ಚಿತ್ರಕೃಪೆ: Kashmir Pictures

ಸೋನಾಮಾರ್ಗ:

ಸೋನಾಮಾರ್ಗ:

ಇನ್ನು ಐತಿಹಾಸಿಕವಾಗಿಯೂ ಸೋನಾಮಾರ್ಗ ಮಹತ್ವ ಪಡೆದಿದೆ. ಅರಬ್ ದೇಶ ಹಾಗೂ ಚೀನಾ ದೇಶದೊಂದಿಗೆ ಸಂಪರ್ಕ ಬೆಸೆದಿದ್ದ ರೇಷ್ಮೆ ಮಾರ್ಗ (ಸಿಲ್ಕ್ ರೂಟ್)ದ ಹೆಬ್ಬಾಗಿಲಾಗಿ ಸೋನಾಮಾರ್ಗ ಪ್ರಖ್ಯಾತಿಗಳಿಸಿತ್ತು.

ಚಿತ್ರಕೃಪೆ: Girish Suryawanshi

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮಾರ್ಗ ಪದವನ್ನು ಕನ್ನಡದಲ್ಲಿ ಅರ್ಥೈಸಿದಾಗ "ಬಂಗಾರದ ಹುಲ್ಲುಗಾವಲು" ಎಂದಾಗುತ್ತದೆ. ಈ ಒಂದು ಪ್ರದೇಶದಲ್ಲಿ ಅಲ್ಪೈನ್ ಮರಗಳು ಆಕರ್ಷಕ ಹಿಮ ಪರ್ವತಗಳ ಹಿನ್ನಿಲೆಯಲ್ಲಿ ಕಂಗೊಳಿಸುವುದರಿಂದ ಸ್ವರ್ಣಕ್ಕೆ ಈ ಪ್ರದೇಶವನ್ನು ಹೋಲಿಸಲಾಗಿದೆ.

ಚಿತ್ರಕೃಪೆ: Kashmir Pictures

ಸೋನಾಮಾರ್ಗ:

ಸೋನಾಮಾರ್ಗ:

ಇಲ್ಲಿನ ತಾಜಾ ನೀರಿನ ಮೂಲಗಳಲ್ಲಿ ಅಥವಾ ನದಿಗಳಲ್ಲಿ ಹಿಮ ಟ್ರೌಟ್, ಮಹಾಸೀರ್ ಹಾಗೂ ಬ್ರೌನ್ ಟ್ರೌಟ್ ಗಳಂತಹ ಮೀನುಗಳನ್ನು ಹಿಡಿಯಬಹುದಾಗಿದೆ. ಇದೊಂದು ಮೋಜಿನ ಚಟುವಟಿಕೆಯಾಗಿಯೂ ಇಲ್ಲಿ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Tony Gladvin George

ಸೋನಾಮಾರ್ಗ:

ಸೋನಾಮಾರ್ಗ:

ಚಳಿಗಾಲದ ಮುಕ್ತಾಯದ ನಂತರ ಜನವರಿ ಸಮಯದಲ್ಲಿ ಇಲ್ಲಿನ ರಸ್ತೆಯು ಮತ್ತೆ ಪ್ರವಾಸಿಗರಿಗಾಗಿ ತೆರೆಯಲ್ಪಡುತ್ತದೆ. ಈ ಸಂದರ್ಭದಲ್ಲಿ ಈ ಒಂದು ಸ್ಥಳ ಒಂದು ಅದ್ಭುತವಾದ ಅನುಭೂತಿಯನ್ನು ಕರುಣಿಸುತ್ತದೆ.

ಚಿತ್ರಕೃಪೆ: Kashmir Pictures

ಸೋನಾಮಾರ್ಗ:

ಸೋನಾಮಾರ್ಗ:

ಒಂದೆಡೆ ಚಿಗುರುತ್ತಿರುವ ಸಸ್ಯರಾಶಿಯಿದ್ದರೆ ಇನ್ನೊಂದೆಡೆ ನಿಮ್ಮನ್ನು ಸ್ವಾಗತಿಸುತ್ತಿರುವಂತೆ ಶ್ವೇತ ವರ್ಣದ ಹಿಮ ರಾಶಿಯು ಚಾಪೆಯ ರೂಪದಲ್ಲಿ ಭುವಿಯ ಮೇಲೆ ಅಲ್ಲಲ್ಲಿ ಹರಡಿರುವುದನ್ನು ನೋಡಿದಾಗ ಮನದಲ್ಲಿ ಸಂತಸ ಉಂಟಾಗದೆ ಇರಲಾರದು.

ಚಿತ್ರಕೃಪೆ: Kashmir Pictures

ಸೋನಾಮಾರ್ಗ:

ಸೋನಾಮಾರ್ಗ:

ಮಳೆಗಾಲದ ಸಮಯದಲ್ಲಿ ಅಷ್ಟೊಂದು ದಟ್ಟವಾಗಿ ಮಳೆ ಬೀಳುವುದಿಲ್ಲ. ಬಿದ್ದರೂ ಕಡಿಮೆ ದಿನಗಳು ಮಾತ್ರ. ಅಲ್ಲದೆ ಈ ಪ್ರದೇಶವು ಟ್ರೆಕ್ಕಿಂಗ್ ಮಾಡಲೂ ಸಹ ಯೋಗ್ಯವಾಗಿದೆ. ಇಲ್ಲಿಂದ ಸಾಕಷ್ಟು ಹಿಮಾಲಯ ಕೆರೆಗಳ ದರುಶನಕ್ಕೆ ತೆರಳಬಹುದಾಗಿದೆ. ಇದೊಂದು ರೋಮಾಂಚಭರಿತ ಚಟುವಟಿಕೆಯಾಗಿದೆ.

ಚಿತ್ರಕೃಪೆ: Girish Suryawanshi

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮರ್ಗಿನಿಂದ ಟ್ರೆಕ್ ಮೂಲಕ ಹಿಮಾಲಯ ಪ್ರದೇಶದ ಕೆರೆಗಳಾದ ವಿಷನ್ಸಾರ್, ಕ್ರಿಷ್ಣನ್ಸಾರ್, ಗಂಗಾಬಾಲ ಮತ್ತು ಗದಸಾರ ಕೆರೆಗಳಿಗೆ ತೆರಳಬಹುದಾಗಿದೆ.

ಚಿತ್ರಕೃಪೆ: Girish Suryawanshi

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮಾರ್ಗದ ಅಂದ ಚೆಂದದ ಪ್ರಕೃತಿ ಸೌಂದರ್ಯವನ್ನು ತೆರೆದಿಡುವ ಆನಂದಮಯ ಚಿತ್ರಗಳು.

ಚಿತ್ರಕೃಪೆ: PravnGupta

ಚಿತ್ರಕೃಪೆ: Praveen Selvam

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮಾರ್ಗದ ಅಂದ ಚೆಂದದ ಪ್ರಕೃತಿ ಸೌಂದರ್ಯವನ್ನು ತೆರೆದಿಡುವ ಆನಂದಮಯ ಚಿತ್ರಗಳು.

ಚಿತ್ರಕೃಪೆ: Kashmir Pictures

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮಾರ್ಗದ ಅಂದ ಚೆಂದದ ಪ್ರಕೃತಿ ಸೌಂದರ್ಯವನ್ನು ತೆರೆದಿಡುವ ಆನಂದಮಯ ಚಿತ್ರಗಳು.

ಚಿತ್ರಕೃಪೆ: June West

ಸೋನಾಮಾರ್ಗ:

ಸೋನಾಮಾರ್ಗ:

ಸೋನಾಮಾರ್ಗದ ಅಂದ ಚೆಂದದ ಪ್ರಕೃತಿ ಸೌಂದರ್ಯವನ್ನು ತೆರೆದಿಡುವ ಆನಂದಮಯ ಚಿತ್ರಗಳು.

ಚಿತ್ರಕೃಪೆ: Akshay N

ಚಿತ್ರಕೃಪೆ: Vamsi Krishna

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X