Search
  • Follow NativePlanet
Share
» »ಬೇಸಿಗೆ ರಜೆಯಲ್ಲಿ ಫ್ಯಾಮಿಲಿ ಜೊತೆ ತಿರುಗಾಡ್ಲಿಕ್ಕೆ ಬೆಸ್ಟ್ ಸ್ಥಳಗಳು

ಬೇಸಿಗೆ ರಜೆಯಲ್ಲಿ ಫ್ಯಾಮಿಲಿ ಜೊತೆ ತಿರುಗಾಡ್ಲಿಕ್ಕೆ ಬೆಸ್ಟ್ ಸ್ಥಳಗಳು

By Manjula Balaraj Tantry

ಎಪ್ರಿಲ್,ಮೇ ಅಂದರೆ ಎಲ್ಲರಿಗೂ ಬೇಸಿಗೆ ರಜಾದಿನಗಳ ಕಾಲ. ಶಾಲೆ, ಕಾಲೇಜುಗಳಿಗೆಲ್ಲಾ ರಜೆ ಹೀಗಿರುವಾಗ ಫ್ಯಾಮಿಲಿ ಜೊತೆ ಒಂದು ಲಾಂಗ್ ಪ್ರವಾಸ ಹೋಗದೆ ಇದ್ದರೇ ರಜೆ ಸುಮ್ಮನೆ ವ್ಯರ್ಥವಾದಂತೆ ಅನಿಸುತ್ತದೆ. ಈ ಬಾರಿಯ ಬೇಸಿಗೆಗೆ ಫ್ಯಾಮಿಲಿ ಜೊತೆ ಎಲ್ಲೆಲ್ಲಾ ಸುತ್ತಾಡಬೇಕೆಂದು ಪ್ಲ್ಯಾನ್ ಮಾಡಿದ್ದೀರಾ? ಇಲ್ಲ ಎಂದಾದ್ರೆ ಇಲ್ಲಿದೆ ನಿಮಗೆ ಬೇಸಿಗೆ ರಜಾ ಕಳೆಯಲು ಕೆಲವು ಇಂಟ್ರಸ್ಟಿಂಗ್ ತಾಣಗಳು .

ತಮಿಳುನಾಡಿನಲ್ಲಿರುವ ಜಲಪಾತಗಳನ್ನು ಕಂಡಿದ್ದೀರಾ?

1. ಕಾಶ್ಮೀರ

1. ಕಾಶ್ಮೀರ

Sushrut1701

ಜಹಾಂಗೀರನ ಹೇಳಿಕೆಯಂತೆ ಭೂಮಿಯ ಮೇಲೆ ಸ್ವರ್ಗ ಎಂಬುದು ಇದೆ ಎಂದಾದರೆ ಅದು "ಇಲ್ಲಿ " ಅಂದರೆ ಕಾಶ್ಮೀರದಲ್ಲಿ ಎಂಬುದಾಗಿ. ಕಾಶ್ಮೀರದ ನೈಸರ್ಗಿಕ ಸೌಂದರ್ಯವನ್ನು ನೋಡಿದರೆ ಅವನ ಈ ಹೇಳಿಕೆಯು ಅಕ್ಷರಶಃ ನಿಜ ಎನಿಸುವುದು. ಯಾವಾಗಲಾದರೂ ಭಾರತದಲ್ಲಿ ಏಪ್ರಿಲ್ ತಿಂಗಳುಗಳಲ್ಲಿ ಭೇಟಿ ಕೊಡಬಹುದಾದ 10 ಸ್ಥಳಗಳನ್ನು ಸೂಚಿಸಲು ಹೇಳಿದಲ್ಲಿ ನೈಸರ್ಗಿಕತೆಯ ಸ್ವರ್ಗವೆನಿಸಿರುವ ಕಾಶ್ಮೀರವು ಆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಖಚಿತ. ಬೇಸಿಗೆಯ ತಾಪಮಾನದಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರಿಗೆ ಭೇಟಿ ಕೊಡಲು ಮನಸ್ಸಿಗೆ ಬರುವ ಮೊದಲ ಆಯ್ಕೆ ಎಂದರೆ ಅದು ಕಾಶ್ಮೀರ. ಏಪ್ರಿಲ್ ತಿಂಗಳಿನಲ್ಲಿ ಕಾಶ್ಮೀರದಲ್ಲಿ ಹವಾಮಾನವು ಸ್ವಲ್ಪ ಒಣಹವೆಯನ್ನು ಹೊಂದಿದೆಯಾದರೂ ಯಾವಾಗ ಬೇಕಾದರೂ ಇಲ್ಲಿ ಮಳೆಯಾಗುತ್ತದೆ. ಇಲ್ಲಿ ಹವಾಗುಣವು ಏಪ್ರಿಲ್ ತಿಂಗಳಿನಲ್ಲಿ ಸುಮಾರು 14°ಸೆಲ್ಸಿಯಸ್ ನಿಂದ 21° ಸೆಲ್ಸಿಯಸ್ ವರೆಗೆ ಇರುತ್ತದೆ.

ಪ್ರಮುಖ ಆಕರ್ಷಣೆಗಳು

ಜಮ್ಮು ನಗರ, ಶ್ರೀನಗರ, ಲೇಹ್ ಗುಲ್ ಮಾರ್ಗ್, ಕುಪ್ವಾರಾ, ಸೊನ್ ಮಾರ್ಗ್, ದೋಡಾ, ಪುಲ್ವಾಮಾ, ಪಹಾಲ್ ಗಮ್ ಮತ್ತು ಇತ್ಯಾದಿಗಳು,

ಇಲ್ಲಿ ಮಾಡಬಹುದಾದ ವಿಷಯಗಳು

ದಾಲ್ ಲೇಕ್ ನಲ್ಲಿ ಒಂದು ಶಿಕಾರಾ ಸವಾರಿಯನ್ನು ಮಾಡಿರಿ, ಝಾನ್ಸ್ಕಾರ್ ಶ್ರೇಣಿಗಳಲ್ಲಿ ಟ್ರಕ್ಕಿಂಗ್, ಲಡಾಕ್ ನಲ್ಲಿ ಪರ್ವತ ಬೈಕಿಂಗ್ ಹೋಗಬಹುದು, ಗುಲ್ ಮಾರ್ಗ್ ನಲ್ಲಿ ಸ್ಕೈಯಿಂಗ್ ಮತ್ತು ಇನ್ನಿತರ ಚಟುವಟಿಕೆಗಳನ್ನು ಮಾಡಬಹುದಾಗಿದೆ.

ಇಲ್ಲಿಗೆ ತಲುಪುವುದು ಹೇಗೆ ?

ವಿಮಾನ ಮೂಲಕ : ಪ್ರಯಾಣಿಕರು ಶ್ರೀನಗರ ದೇಶೀಯ ವಿಮಾನ ನಿಲ್ದಾಣದವರೆಗೂ ಭಾರತದ ಪ್ರಮುಖ ನಗರಗಳಿಂದ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬಹುದು.

ರೈಲು ಮಾರ್ಗ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಜಮ್ಮು ನಗರದ ಕೇಂದ್ರದಿಂದ 290 ಕಿಲೋಮೀಟರ್ ದೂರದಲ್ಲಿದೆ.

ವಿಶ್ವಾಸಾರ್ಹ ಮತ್ತು ಆರ್ಥಿಕವಾಗಿ ಕಡಿಮೆ ದರದ ಬಸ್ ಸೇವೆಗಳನ್ನು ಹತ್ತಿರದ ನಗರಗಳಿಂದ ಪಡೆದುಕೊಳ್ಳಬಹುದಾಗಿದೆ.

2 ಡಿವೈನ್ ಡಾಲ್ ಹೌಸಿ

2 ಡಿವೈನ್ ಡಾಲ್ ಹೌಸಿ

ಡಾಲ್ಹೌಸಿ ಅತ್ಯಂತ ಪ್ರಸಿದ್ಧವಾದ ಬೇಸಿಗೆಯ ತಾಣವಾಗಿದೆ ಇದನ್ನು ಏಪ್ರಿಲ್ ತಿಂಗಳಿನಲ್ಲಿ ಭಾರತಕ್ಕೆ ಭೇಟಿ ನೀಡುವ ಸ್ಥಳಗಳ ಪಟ್ಟಿ ಸೇರಿಸದಿದ್ದರೆ ಆ ಪಟ್ಟಿಯು ಅಪೂರ್ಣವೆನಿಸುವುದು. ಈ ಸ್ಥಳವು ಹಿಮದಿಂದ ಆವೃತವಾಗಿರುವ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದು ಭಾರತದ ಅತ್ಯಂತ ಚಳಿಯ ಪ್ರಮುಖ 10 ಸ್ಥಳಗಳಲ್ಲಿ ಒಂದಾಗಿದೆ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಭೇಟಿ ನೀಡಬಹುದಾದ ಸ್ಥಳವಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ಆಹ್ಲಾದಕರ ಹಿಮಾಚಲ ಪ್ರದೇಶಕ್ಕೆ ಪ್ಯಾಕೇಜ್ ಪ್ರವಾಸ ಮಾಡುವುದಾದರೆ ಡಾಲ್ ಹೌಸಿ ನಿಮ್ಮ ಸಂತೋಷವನ್ನು ಹೆಚ್ಚಿಸಿ ಪ್ರವಾಸವನ್ನು ಪೂರ್ಣಗೊಳಿಸುತ್ತದೆ. ಡಾಲ್ ಹೌಸಿಯಲ್ಲಿ ಬೇಸಿಗೆಯಲ್ಲಿ ತಾಪಮಾನವು ಆಹ್ಲಾದಕರವಾಗಿರುತ್ತದೆ. ಇಲ್ಲಿ ಇಷ್ಟರವರೆಗೆ ದಾಖಲಾದ ಸರಾಸರಿ ತಾಪಮಾನವು ತಾಪಮಾನವು ಗರಿಷ್ಠ 26 ° ಸೆಲ್ಸಿಯಸ್ ಆಗಿರುತ್ತದೆ.

ಇಲ್ಲಿಯ ಪ್ರಮುಖ ಆಕರ್ಷಣೆಗಳು : ಕಾಲಾಟಾಪ್, ಪಾಂಚ್ ಪುಲ್ಲ, ಚಾಮೇರಾ ಸರೋವರ, ದೈನ್ ಕುಂಡ್ ಶ್ರೇಣಿ, ಸಾಚ್ ಪಾಸ್, ಸಂತ ಪ್ಯಾಟ್ರೀಕ್ ರ ಚರ್ಚ್ ಮತ್ತು ಇನ್ನೂ ಅನೇಕ ಸ್ಥಳಗಳನ್ನು ನೋಡಬಹುದಾಗಿದೆ.

ಇಲ್ಲಿ ಮಾಡಬಹುದಾದ ವಿಷಯಗಳು

ಪಾಂಚ್ ಪುಲ್ಲದಲ್ಲಿ ದೃಶ್ಯ ವೀಕ್ಷಣೆ ಮಾಡಬಹುದು, ಸತ್ ಧಾರ ಜಲಪಾತಗಳಲ್ಲಿ ಆನಂದಿಸಬಹುದು, ಚಾಮೇರಾ ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು, ಕಾಲಾಟಾಪ್ ವನ್ಯಜೀವಿ ಧಾಮದಲ್ಲಿ ಅನ್ವೇಷಣೆ ಮಾಡಬಹುದು ಮತ್ತು ಇನ್ನೂ ಅನೇಕ ಸ್ಥಳಗಳನ್ನು ವೀಕ್ಷಿಸಬಹುದು.

ಇಲ್ಲಿಗೆ ತಲುಪುವುದು ಹೇಗೆ ?

ಪಟಾನ್ ಕೋಟ್ ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ ಇದು 75 ಕಿಮೀ ಅಂತರದಲ್ಲಿದೆ ಮತ್ತು 80 ಕಿಮೀ ಅಂತರದಲ್ಲಿ ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣವಿದೆ.

ನೀವು ದೆಹಲಿಯಿಂದ ಅಥವಾ ಚಂಡೀಗಡದಿಂದ ಡಾಲ್ ಹೌಸಿ ಗೆ ಬಸ್ಸು ಮೂಲಕವೂ ಪ್ರಯಾಣಿಸಬಹುದು ಮತ್ತು ದಾರಿಯಲ್ಲಿ ಇಲ್ಲಿಯ ನಯನ ಮನೋಹರ ದೃಶ್ಯಗಳನ್ನು ಆನಂದಿಸಬಹುದು.

3 ಬೆರಗುಗೊಳಿಸುವ ಧರ್ಮಶಾಲಾ

3 ಬೆರಗುಗೊಳಿಸುವ ಧರ್ಮಶಾಲಾ

ಇದು ಹಿಮಾಚಲಪ್ರದೇಶದ ಅತಿವಾಸ್ತವಿಕ ಸ್ಥಳಗಳಲ್ಲೊಂದಾಗಿದ್ದು ಇಲ್ಲಿಯ ಒಂದು ಚಿಕ್ಕ ರತ್ನವೆನಿಸಿದೆ. ಅಲ್ಲದೆ ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಭೇಟಿ ನೀಡಬಹುದಾದ ಸ್ಥಳವಾಗಿದೆ. ಬಲಿಷ್ಟವಾದ ಪರ್ವತಗಳು ಮತ್ತು ಹಸಿರುಮಯ ವಾತಾವರಣಗಳಿಂದ ಸುತ್ತುವರಿಯಲ್ಪಟ್ಟ ಧರಮ್ ಶಾಲಾ ಪ್ರಕೃತಿ ಸೌಂದರ್ಯವನ್ನು ಪುನ: ವ್ಯಾಖ್ಯಾನಿಸುವಂತಿದೆ ಅಲ್ಲದೆ ಇಲ್ಲಿ ಆಗುವ ಹಿಮಪಾತವು ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಹೆಚ್ಚಾಗಿ ಡಾಲ್ ಹೌಸಿಯ ಪ್ರವಾಸದ ಜೊತೆಗೆ ಧರಮ್ ಶಾಲಾದ ಪ್ರವಾಸವು ಜಂಟಿಯಾಗಿ ಮಾಡಬಹುದಾಗಿದ್ದು ಇದೂ ಕೂಡಾ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಭೇಟಿ ಕೊಡಬಹುದಾದಂತಹ ಪ್ರಮುಖ ಸ್ಥಳವಾಗಿದೆ. ಧರಮ್ ಶಾಲಾವು ಏಪ್ರೀಲ್ ತಿಂಗಳಲ್ಲಿ ದಿನವೆಲ್ಲಾ ಬೆಚ್ಚಗಿದ್ದು ರಾತ್ರೀ ಅಷ್ಟೇ ಚಳಿಯನ್ನು ಹೊಂದಿದೆ. ಇಲ್ಲಿ ಗರಿಷ್ಟ ಸರಾಸರಿ ಉಷ್ಣತೆಯು ಸುಮಾರು 24 ಡಿಗ್ರಿ ಸೆಂಟಿಗ್ರೇಡ್ ಮತ್ತು ಇಲ್ಲಿ ಯಾವ ಸಮಯದಲ್ಲಾದರೂ ಮಳೆ ಬೀಳಬಹುದು.

ಪ್ರಮುಖ ಆಕರ್ಷಣೆ:

ಎಚ್ ಪಿ ಸಿ ಎ ಸ್ಟೇಡಿಯಂ, ಟಿಬೇಟಿಯನ್ ವಸ್ತುಸಂಗ್ರಹಾಲಯ, ಕಾಲಚಕ್ರ ದೇವಾಲಯ, ಕಾಂಗ್ರಾ ಕಣಿವೆ ಮತ್ತು ದ್ ವಾರ್ ಮೆಮೋರಿಯಲ್ ಇವು ಇಲ್ಲಿಯ ಪ್ರಮುಖ ಆಕರ್ಷಣೆಗಳು.

ಇಲ್ಲಿ ಮಾಡಬಹುದಾದ ವಿಷಯಗಳು

ಪ್ಯಾರಾಗೈಡ್ಲಿಂಗ್ ಮೂಲಕ ಎತ್ತರಕ್ಕೆ ಹಾರಿ, ಧರಮ್ ಕೋಟ್ ನಲ್ಲಿ ಟ್ರಕ್ಕಿಂಗ್, ಪ್ರವಾಸದುದ್ದಕ್ಕೂ ದೃಶ್ಯವನ್ನು ವೀಕ್ಷಿಸಬಹುದು ಕರೇರಿ ಸರೋವರದಲ್ಲಿ ಟ್ರಕ್ಕಿಂಗ್ ಆನಂದಿಸಿರಿ, ಲಾಹೇಶ್ ಗುಹೆಗಳಲ್ಲಿ ಕ್ಯಾಂಪಿಂಗ್ ಇನ್ನೂ ಅನೇಕ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದಾಗಿದೆ.

ತಲುಪುವುದು ಹೇಗೆ ?

ಗಗ್ಗಲ್ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದ್ದು ಇದು ಧರಮ್ ಶಾಲಾದಿಂದ 13 ಕಿ.ಮೀ ಅಂತರದಲ್ಲಿದೆ ಮತ್ತು ಪಟಾನ್ ಕೋಟ್ ರೈಲ್ವೇ ನಿಲ್ದಾಣವು ಇಲ್ಲಿಗೆ 85 ಕಿ.ಮೀ ಅಂತರದಲ್ಲಿದ್ದು ಅತ್ಯಂತ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ.

ನೀವು ಇಲ್ಲಿ ಲಕ್ಸುರಿ ವೊಲ್ವೋ ಮತ್ತು ಬಸ್ಸುಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಧರಂಶಾಲಾವು ಉತ್ತರ ಭಾರತದ ಅನೇಕ ನಗರಗಳಿಗೆ ರಸ್ತೆಯ ಮೂಲಕ ಉತ್ತಮ ರೀತಿಯಲ್ಲಿ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ರಾತ್ರಿಯ ಪ್ರಯಾಣವು ಕನಿಷ್ಟ 12 ಗಂಟೆಗಳ ಗರಿಷ್ಠ 15 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.

4 ಮನಾಲಿ

4 ಮನಾಲಿ

ಭವ್ಯವಾದ ಪಿರ್ ಪಂಜಾಲ್ ಮತ್ತು ಧೌಲಾಧರ್ ಶ್ರೇಣಿಗಳ ಮಧ್ಯೆ ನೆಲೆಸಿರುವ ಮನಾಲಿ, ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಹಿಮಾಚಲ ಪ್ರದೇಶದಲ್ಲಿ ತನ್ನ ಕೇಂದ್ರ ಸ್ಥಳವನ್ನು ಹೊಂದಿದೆ ಮತ್ತು ಹಿಮಾಲಯ ಪರ್ವತಗಳ ಉತ್ತಮ ನೋಟವನ್ನು ನೀಡುತ್ತದೆ. ದಟ್ಟವಾದ ಪೈನ್ ವುಡ್ ಕಾಡುಗಳಿಂದ ಆವೃತವಾದ ಮನಾಲಿ ಏಪ್ರಿಲ್ ನಲ್ಲಿ ಭಾರತದಲ್ಲಿ ಭೇಟಿ ನೀಡುವ ಅತ್ಯುತ್ತಮ ಹಿಮಬಿಂದು ಪ್ರದೇಶಗಳಲ್ಲಿ ಒಂದಾಗಿದೆ. ಮನಾಲಿಯು ಏಪ್ರಿಲ್ ನಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸುತ್ತದೆ ಈ ಸಮಯದಲ್ಲಿ ಇಲ್ಲಿನ ಹವಾಗುಣವು 10°ಸೆಂಟಿಗ್ರೇಡ್ ನಿಂದ to 25°ಸೆಂಟಿಗ್ರೇಡ್ ತನಕ ಇರುತ್ತದೆ.

ಪ್ರಮುಖ ಆಕರ್ಷಣೆಗಳು

ಹಿಡಿಂಬಾ ದೇವಿ ದೇವಾಲಯ, ಜೋಗಿನಿ ಜಲಪಾತ, ಸೋಲಾಂಗ್ ಕಣಿವೆ, ರೋಹ್ತಾಂಗ್ ಪಾಸ್, ಭ್ರಿಗು ಸರೋವರ, ಪಾಂದೋಹ್ ಅಣೆಕಟ್ಟು, ಮತ್ತು ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ.

ಇಲ್ಲಿ ಮಾಡಬಹುದಾದ ಚಟುವಟಿಕೆಗಳು

ಮನಾಲಿಯಲ್ಲಿ ಸುಂದರ ದೃಶ್ಯಗಳನ್ನು ಆನಂದಿಸಬಹುದು, ಸೊಲಾಂಗ್ ಕಣಿವೆಯಲ್ಲಿ ಪ್ಯಾರಾಗೈಡ್ಲಿಂಗ್ ಮತ್ತು ರಾಫ್ಟಿಂಗ್ ಶ್ರೀ ಹರಿಯೋಗ ಆಶ್ರಮದಲ್ಲಿ ವಿಶ್ರಾಂತಿಯನ್ನು ಅನುಭವಿಸಿ, ರೊಹ್ತಾಂಗ್ ಪಾಸ್ ನಲ್ಲಿ ಬೈಕ್ ಸವಾರಿ, ಮನಾಲಿ ವನ್ಯಜೀವಿ ಅಭಯಾರಣ್ಯದಲ್ಲಿ ಯಾಕ್ ಸವಾರಿ, ಮಾಲ್ ಗಳ ರಸ್ತೆಗಳಲ್ಲಿ ಇನ್ನಷ್ಟು ಶಾಪಿಂಗ್ ಇತ್ಯಾದಿ.

ಇಲ್ಲಿಗೆ ತಲುಪುವುದು ಹೇಗೆ ?

ಮನಾಲಿಯಿಂದ 50 ಕಿಲೋಮೀಟರ್ ದೂರದಲ್ಲಿರುವ ಭುಂತರ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ದೆಹಲಿ, ಲೇಹ್, ಧರಮಶಾ ಮುಂತಾದ ಸ್ಥಳಗಳಿಂದ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳಲ್ಲಿ ಸಹ ನೀವು ಪ್ರಯಾಣ ಮಾಡಬಹುದಾಗಿದೆ. .

5. ಖಜ್ಜಿಯರ್

5. ಖಜ್ಜಿಯರ್

ಇದನ್ನು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದು ಗುರುತಿಸಲಾಗುತ್ತದೆ. ಖಜ್ಜಿಯರ್ ನಿಮ್ಮ ಏಪ್ರಿಲ್ ನಲ್ಲಿ ಭೇಟಿ ಕೊಡಬಹುದಾದ ಸ್ಥಳಗಳ ಪ್ರಯಾಣ ಪಟ್ಟಿಯಲ್ಲಿ ಸೇರಿಸಲೇಬೇಕಾದ ಸ್ಥಳವಾಗಿದೆ. ಹಿಮದಿಂದ ಆವೃತವಾದ ಪರ್ವತಗಳಿಂದ ಮತ್ತು ನಾಲ್ಕು ಕಡೆಗಳಲ್ಲೂ ಸುಂದರವಾದ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದ್ದು ಮತ್ತು ಅದರ ನೈಸರ್ಗಿಕ ಸೌಂದರ್ಯದಿಂದಾಗಿ ಮತ್ತು ಇಲ್ಲಿರುವ ಪ್ಯಾರಾಗ್ಲೈಡಿಂಗ್ ವರ್ಷವಿಡೀ ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಜ್ಜಿಯಾರ್ ನಲ್ಲಿ ವಾತಾವರಣವು ಸೌಮ್ಯವಾಗಿದ್ದು ಇಲ್ಲಿ ಬೇಸಿಗೆಯುದ್ದಕ್ಕೂ ತಾಪಮಾನವು 17°ಸೆಂಟಿಗ್ರೇಡ್ ನಿಂದ 30°ಸೆಂಟಿಗ್ರೇಡ್ .

ಪ್ರಮುಖ ಆಕರ್ಷಣೆ :

ಖಜ್ಜಿಯಾರ್ ಸರೋವರ, ಗೋಲ್ಡನ್ ದೇವಿ ದೇವಾಲಯ, ಕಾಜ್ಜ್ ನಾಗ ದೇವಾಲಯ ಮತ್ತು ಟಿಬೇಟಿಯನ್ ಕರಕುಶಲ ಕೇಂದ್ರ.

ಇಲ್ಲಿ ಮಾಡಬಹುದಾದ ವಿಷಯಗಳು

ಖಿಜ್ಜಿಯಾರ್ ಟ್ರಕ್ಕಿಂಗ್ ಆನಂದಿಸಿ, ಪ್ಯಾರಾಗೈಡ್ಲಿಂಗ್ ಮತ್ತು ಜೋರ್ಬಿಂಗ್ ಗೆ ಹೋಗಿ, ಚಾಮೇರಾ ಅಣೆಕಟ್ಟನ್ನು ಅನ್ವೇಷಣೆ ಮಾಡಿ ಮತ್ತು ಭುರಿ ಸಿಂಗ್ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ

ಇಲ್ಲಿಗೆ ತಲುಪುವ ಬಗೆ ?

ನೀವು ಖಜ್ಜಿಯಾರ್ ಡಾಲ್ ಹೌಸಿಯಿಂದ ಕಜ್ಜಿಯಾರ್ ಅನ್ನು ತಲುಪಬಹುದು ಇದು 22 ಕಿ,ಮೀ ದೂರದಲ್ಲಿದೆ ಮತ್ತು 24 ಚಾಂಬಾದಿಂದ ಕೂಡಾ ಖಜ್ಜಿಯಾರ್ ತಲುಪಬಹುದು. ಇಲ್ಲಿಗೆ ಹತ್ತಿರದ ರೈಲ್ವೇ ನಿಲ್ದಾಣವೆಂದರೆ ಅದು ಪಟಾನಕೋಟ್ ಆಗಿದ್ದು ಇಲ್ಲಿ ನೀವು ಟ್ಯಾಕ್ಸಿ ಸೇವೆಗಳನ್ನು ತೆಗೆದುಕೊಳ್ಳಬಹುದಾಗಿದೆ.

6. ಮಸ್ಸೂರಿ

6. ಮಸ್ಸೂರಿ

ಡೆಹರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿ ಒಂದು ಪ್ರಸಿದ್ದವಾದ ರಜಾ ತಾಣವಾಗಿದ್ದು ಏಪ್ರಿಲ್ ತಿಂಗಳಿನಲ್ಲಿ ಭೇಟಿ ಕೊಡಬಹುದಾದ ಒಂದು ಪ್ರಮುಖ ತಾಣವಾಗಿದೆ. ಇದು ಉತ್ತರಾಖಾಂಡ್ ನ ಒಂದು ರತ್ನವೆನಿಸಿದೆ. ಹಿಮಾಲಯದ ಘರ್ ವಾಲಿ ಶ್ರೇಣಿಗಳಲ್ಲಿರುವ ಮಸ್ಸೂರಿ ಹಿಂದಿನಿಂದಲೂ ಉತ್ತರಭಾರತದ ಪರ್ವತಗಳ ರಾಣಿಯೆಂದೇ ಗುರುತಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ 1880 ಮೀಟರ್ ಎತ್ತರದಲ್ಲಿರುವ. ಮುಸ್ಸೂರಿಯಲ್ಲಿ ಭೇಟಿ ನೀಡುವ ಸ್ಥಳಗಳು ಶಾಂತಿಯುತ ಪರಿಸರವು ಎಲ್ಲರೂ ಎಲ್ಲವನ್ನೂ ಸಮಾನವಾಗಿ ಇಷ್ಟ ಪಡುವಂತೆ ಮಾಡುತ್ತದೆ.

ಏಪ್ರಿಲ್ ನಲ್ಲಿ ಇಲ್ಲಿಯ ಹವಾಮಾನ

ಮಸ್ಸೂರಿಯಲ್ಲಿ ಹವಾಮಾನವು ಮಧ್ಯಮ ವರ್ಗದ ತಾಪಮಾನವನ್ನು ಹೊಂದಿದ್ದು 10 °ಸೆಂಟಿಗ್ರೇಡ್ ನಿಂದ 30 ° ಸೆಂಟಿಗ್ರೇಡ್ ವರೆಗೆ ಇರುತ್ತದೆ.

ಪ್ರಮುಖ ಆಕರ್ಷಣೆಗಳು : ಲಾಲ್ ತಿಬ್ಬಾ , ಕಂಪನಿ ಗಾರ್ಡನ್, ಕೆಮ್ಟೀ ಜಲಪಾತ , ಕಾಮೆಲ್ಸ್ ಬ್ಯಾಕ್ ರಸ್ತೆ, ಗನ್ ಹಿಲ್,ಜ್ವಾಲಾಜೀ ದೇವಾಲಯ ಮತ್ತು ಇತ್ಯಾದಿಗಳು

ಇಲ್ಲಿ ಮಾಡಬಹುದಾದ ವಿಷಯಗಳು

ಜೂಲಾಘಾಟ್ ನಿಂದ ಗನ್ ಹಿಲ್ ಗೆ ಕೇಬಲ್ ಕಾರು ಸವಾರಿಯನ್ನು ಆನಂದಿಸಿ, ಯಮುನೋತ್ರಿ ಸಪ್ತರಿಷಿ ಕುಂದ್ ನಲ್ಲಿ ಟ್ರಕ್ ಗೆ ಹೋಗಿ, ಸ್ಕೈ ವಾಕ್ ನಲ್ಲಿ ಜಿಪ್ಲಿಂಗ್ ಮತ್ತು ಜಿಪ್ ಸ್ವಿಂಗ್ ನ ರೋಮಾಂಚಕಾರಿ ಅನುಭವವನ್ನು ಆನಂದಿಸಿ, ರಾಕ್ ಕ್ಲೈಂಬಿಂಗ್ ನ ಉತ್ತಮ ಅನುಭವದಂತಹ ಇನ್ನಿತರ ಉತ್ತಮ ಅನುಭವವನ್ನು ಪಡೆಯಿರಿ.

ಇಲ್ಲಿಗೆ ತಲುಪುವುದು ಹೇಗೆ ?

ಡೆಹ್ರಾಡೂನ್ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು 54 ಕಿಲೋಮೀಟರ್ ದೂರದಲ್ಲಿದೆ.

ದೆಹಲಿಯಿಂದ ಮಸ್ಸೂರಿಗೆ ಸ್ವಂತ ವಾಹನದ ಮೂಲಕವೂ ಪ್ರಯಾಣ ಮಾಡಬಹುದಾಗಿದೆ.

ನವದೆಹಲಿಯಿಂದ ಒಂದು ರಾತ್ರಿಯ ರೈಲು ಪ್ರಯಾಣವು ಮುಸ್ಸೂರಿಯನ್ನು ತಲುಪಲು ಗರಿಷ್ಟ 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

7. ಚಿರಾಪುಂಜಿ

7. ಚಿರಾಪುಂಜಿ

ಸಮುದ್ರ ಮಟ್ಟದಿಂದ ಸುಮಾರು 1490 ಮೀ. ಎತ್ತರವಿರುವ ಚಿರಾಪುಂಜಿಯು ಒಂದು ಉತ್ತಮವಾದ ವಾಸಸ್ಥಾನವಾಗಿದ್ದು ಅಲ್ಲಿ ಮೋಡಗಳು ಯಾವಾಗಲೂ ಆಕಾಶದೊಂದಿಗೆ ಪ್ರಣಯವನ್ನು ಮಾಡುವಂತೆ ಕಾಣುತ್ತದೆ. ಇದು ಅತೀ ಹೆಚ್ಚು ಮಳೆಯಾಗುವುದಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಚಿರಾಪೂಂಜಿಯು ಭವ್ಯವಾದ ಜಲಪಾತಗಳು ಮತ್ತು ಉಪೋಷ್ಣವಲಯದ ಕಾಡುಗಳಿಗೆ ಹೆಸರುವಾಸಿಯಾಗಿದೆ.

ಏಪ್ರಿಲ್ ನಲ್ಲಿ ಇಲ್ಲಿಯ ಹವಾಗುಣ: ಚಿರಾಪುಂಜಿಯು ಭಾರತದಲ್ಲಿ ಅತೀ ಹೆಚ್ಚಿನ ಮಳೆಯನ್ನು ಹೊಂದುವ ಸ್ಥಳವಾಗಿದೆ ಇದರಿಂದಾಗಿ ಇಲ್ಲಿಯ ಸರಾಸರಿ ಹವಾಮಾನವು 15°ಸೆಂಟಿಗ್ರೇಡ್ ನಿಂದ 22°ಸೆಂಟಿಗ್ರೇಡ್ ವರೆಗೆ ಇರುತ್ತದೆ.

ಪ್ರಮುಖ ಆಕರ್ಷಣೆಗಳು : ಲಿವಿಂಗ್ ರೂಟ್ ಅಣೆಕಟ್ಟು, ನೋಹ್ಕಾಲಿಕೈ ಜಲಪಾತ, ಮಾವ್ಸ್ಮಾಯಿ ಗುಹೆ, ಸೆವೆನ್ ಸಿಸ್ಟರ್ಸ್ ಫಾಲ್ಸ್, ಮಾಕ್ಡೊಕ್ ಡೈಮ್ಪೆಪ್ ವ್ಯಾಲಿ, ಇಕೊ ಪಾರ್ಕ್ ಮತ್ತು ಕಾ ಖೋಹ್ ರಾಮ್ಹಾ.

ಇಲ್ಲಿ ಮಾಡಬಹುದಾದ ವಿಷಗಳು

ಪ್ರಸಿದ್ದ ಡಬಲ್ ಡೆಕ್ಕರ್ ರೂಟ್ ಸೇತುವೆಗೆ ಟ್ರಕ್ಕಿಂಗ್, ಖಾಸಿ ಬೆಟ್ಟಗಳನ್ನು ಅನ್ವೇಷಿಸಿ, ದೈನ್ತ್ಲೆನ್, ಸೆವೆನ್ ಸಿಸ್ಟರ್ಸ್ ಜಲಪಾತ, ನೊಖ್ಹಾಲಿಕೈ ಜಲಪಾತ ಮತ್ತು ಖಿನ್ರೆಮ್ ಗಳ ಕಡೆಗೆ ದೃಶ್ಯವೀಕ್ಷಣೆಗಾಗಿ ಪ್ರವಾಸ ಹೋಗಿ.

ಇಲ್ಲಿಗೆ ತಲುಪುವುದು ಹೇಗೆ ?

ಸಮೀಪದ ವಿಮಾನ ನಿಲ್ದಾಣವು ಗುವಹಾಟಿ ವಿಮಾನನಿಲ್ದಾಣದಿಂದ 181 ಕಿಲೋಮೀಟರ್ ದೂರದಲ್ಲಿದೆ. ಗುವಾಹಾಟಿಯು ಚಿರಾಪುಂಜಿಯ ಹತ್ತಿರದ ರೈಲು ನಿಲ್ದಾಣವಾಗಿದೆ.

8 ಕೂರ್ಗ್

8 ಕೂರ್ಗ್

ದಕ್ಷಿಣ ಭಾರತದಲ್ಲಿಯ ಅತ್ಯಂತ ಹೆಚ್ಚಾಗಿ ಭೇಟಿ ಕೊಡಬಹುದಾದ ಪ್ರದೇಶಗಳಲ್ಲೊಂದಾದ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಕೂರ್ಗ್ ಒಂದು ಅತ್ಯಂತ ಪ್ರಸಿದ್ದವಾದ ಪ್ರವಾಸಿ ತಾಣವೆನಿಸಿದೆ. ಇದು ಕೊಡಗು ಎಂದೂ ಕೂಡ ಕರೆಯಲ್ಪಡುತ್ತದೆ. ಆಳವಾದ ಕಣಿವೆಗಳು ಮತ್ತು ಆಹ್ಲಾದಕರವಾದ ಹವಾಮಾನವನ್ನು ದಟ್ಟವಾದ ಕಾಡುಗಳ ಮಧ್ಯೆ ಒದಗಿಸಿಕೊಡುವ ಕೂರ್ಗ್ ಸುಂದರವಾದ ದೃಶ್ಯವನ್ನು ಒದಗಿಸಿಕೊಡುತ್ತದೆ. ಸರಾಸರಿ ತಾಪಮಾನ 15 ಡಿಗ್ರಿನಿಂದ 20 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ.

ಪ್ರಮುಖ ಆಕರ್ಷಣೆಗಳು :

ನಮ್ಡ್ರೊಲಿಂಗ್ ಮಠ, ಗೋಲ್ಡನ್ ದೇವಾಲಯ, ಇರುಪ್ಪು ಜಲಪಾತ, ಅಬ್ಬೆ ಜಲಪಾತ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ನಿಸರ್ಗಧಾಮ ಅರಣ್ಯ ಇತ್ಯಾದಿಗಳು

ಇಲ್ಲಿ ಮಾಡಬಹುದಾದ ವಿಷಯಗಳು :

ಮೈಕ್ರೋ ಲೈಟ್ ಫ಼್ಲೈಯಿಂಗ್, ಬರಾಪೊಲೆಯಲ್ಲಿ ರಿವರ್ ರಾಫ್ಟಿಂಗ್, ದುಬಾರೆನಲ್ಲಿ ರಾಫ್ಟಿಂಗ್, ತಾಡಿಯಾಂಡಮೋಲ್ ನಲ್ಲಿ ಟ್ರಕ್ಕಿಂಗ್, ಚೆಲವಾರಾ ಜಲಪಾತದ ಸೌಂದರ್ಯವನ್ನು ಅನ್ವೇಷಿಸಿ ಮತ್ತು ಇತ್ಯಾದಿ

ತಲುಪುವುದು ಹೇಗೆ?

160 ಕಿಲೋಮೀಟರ್ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನ ಕೆಎಸ್ಆರ್ಟಿಸಿ ಬಸ್ಸುಗಳ ಮೂಲಕ ನೀವು ಕೂರ್ಗ್ ಗೆ ತಲುಪಬಹುದು.

ಮೈಸೂರು ರೈಲ್ವೆ ನಿಲ್ದಾಣವು 95 ಕಿ.ಮೀ ದೂರದಲ್ಲಿದೆ. ಸ್ವಂತ ವಾಹನದ ಮೂಲಕ, ನೀವು ಬೆಂಗಳೂರಿನಿಂದ ಸುಮಾರು 5 ಗಂಟೆಗಳಲ್ಲಿ ಕೂರ್ಗ್ ತಲುಪಬಹುದು.

9. ಊಟಿ

9. ಊಟಿ

" ಬೆಟ್ಟಗಳ ರಾಣಿ" ಎಂದು ಖ್ಯಾತಿ ಪಡೆದಿರುವ ಊಟಿಯು ದಕ್ಷಿಣಭಾರತದ ಪ್ರಸಿದ್ದ ಗಿರಿಧಾಮಗಳಲ್ಲೊಂದಾಗಿದೆ. ನೀಲಗಿರಿಯ ನೀಲಿ ಪರ್ವತಗಳ ಶ್ರೇಣಿಗಳ ಮಧ್ಯೆ ಇರುವ ಊಟಿ ಯು ತನ್ನ ಸುಂದರವಾದ ದಟ್ಟವಾದ ಹಸಿರುಮಯ ಪರಿಸರ ಮತ್ತು ವಸಾಹತುಶಾಹಿ ವಾಸ್ತುಶಿಲ್ಪದಿಂದಾಗಿ ಜಗತ್ತಿನಾದ್ಯಂತದ ಅನೇಕ ಪ್ರಯಾಣಿಕರನ್ನು ಆಕರ್ಷಿಸುತ್ತದೆ. ಊಟಿಯ ಹವಾಮಾನವು ಅನಿರೀಕ್ಷಿತವಾದುದಾಗಿದ್ದು, ಬೇಸಿಗೆಗಳು ವೀಕ್ಷಣೆಗೆ ಯೋಗ್ಯವಾಗಿದ್ದರೂ ಸರಾಸರಿ ತಾಪಮಾನವು 12 °ಸೆಲ್ಸಿಯಸ್ ನಿಂದ 30 ° ಸೆಲ್ಸಿಯಸ್ ವರೆಗೆ ಇರುತ್ತದೆ.

ಪ್ರಮುಖ ಆಕರ್ಷಣೆಗಳು: ನೀಲಗಿರಿ ಪರ್ವತ ರೈಲ್ವೇ, ಬೊಟಾನಿಕಲ್ ಗಾರ್ಡನ್, ಪೈಕಾರ್ ಸರೋವರ, ಅವಲಾಂಚೆ ಸರೋವರ, ದೊಡ್ಡಬೆಟ್ಟಾ ಶ್ರೇಣಿ, ರೋಸ್ ಗಾರ್ಡನ್ ಮತ್ತು ಸಂತ ಸ್ಟೀಫನ್ಸ್ ಚರ್ಚ್. ಇತ್ಯಾದಿ.

ಇಲ್ಲಿರುವಾಗ ಮಾಡಬಹುದಾದ ಚಟುವಟಿಕೆಗಳು :

ದೃಶ್ಯವೀಕ್ಷಣೆಗೆ ಹೋಗಬಹುದು, ನೀಲಿ ಪರ್ವತಗಳಲ್ಲಿ ಪರ್ವತ ಬೈಕಿಂಗ್ ಮಾಡಬಹುದು, ಗ್ಲೆನ್ ಮೋರ್ಗನ್ ನಲ್ಲಿ ಟ್ರಕ್ಕಿಂಗ್ ಮಾಡಬಹುದು, ನಿಲಗಿರಿ ಮೌಂಟನ್ ರೈಲ್ವೇಯಲ್ಲಿ ಸವಾರಿ ಮಾಡಬಹುದು, ಊಟಿ ಬೋಟ್ ಹೌಸ್ ನಲ್ಲಿ ಬೋಟಿಂಗ್ ಹೋಗಬಹುದಾಗಿದೆ.

ಇಲ್ಲಿಗೆ ತಲುಪುವುದು ಹೇಗೆ ?

ಸುಮಾರು 96 ಕಿ.ಮೀ ದೂರದಲ್ಲಿರುವ ಕೊಯಂಬತ್ತೂರು ಇಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ ಪ್ರಮುಖ ನೀವು ಕೊಯಂಬತ್ತೂರು ಮುಖ್ಯ ಬಸ್ ನಿಲ್ದಾಣದಿಂದ ಊಟಿಗೆ ಸ್ಥಳೀಯ ಬಸ್ ಗಳನ್ನು ತೆಗೆದುಕೊಳ್ಳಬಹುದು ಮತ್ತು ಸುಮಾರು 5 ಗಂಟೆಗಳ ಕಾಲ ತಲುಪಬಹುದು ಕೇವಲ 40 ಕಿಲೋಮೀಟರ್ ದೂರದಲ್ಲಿರುವ ಊಟಿಯಿಂದ ಮೆಟ್ಟುಪಾಳಯಂಗೆ ಹತ್ತಿರದ ರೈಲ್ವೇ ಕೇಂದ್ರವಾಗಿದೆ

10. ಅಂಡಮಾನ್ ದ್ವೀಪಗಳು

10. ಅಂಡಮಾನ್ ದ್ವೀಪಗಳು

ಅಂಡಮಾನ್ ದ್ವೀಪವು ನೀರಿನ ಉತ್ಸಾಹಿಗಳಿಗೆ ಪರಿಚಯವಿಲ್ಲದೇ ಇಲ್ಲ. ಇದು ಜೀವನ ಪರ್ಯಂತದ ರೋಚಕ ಅನುಭವವನ್ನು ಒದಗಿಸಿಕೊಡುತ್ತದೆ. ಸ್ಪಟಿಕದಂತೆ ಹೊಳೆಯುವ ನೀಲಿ ನೀರಿನಲ್ಲಿ ಸ್ವಚ್ಚ ಆಕಾಶ ಮತ್ತು ಮೃದು ವಾದ ಬಿಳಿ ಮರಳಿನ ಬೀಚ್ ಗಳ ಮಧ್ಯೆ ರಜಾದಿನಗಳನ್ನು ಆರಾಮವಾಗಿ ಕಳೆಯಲು ಅಂಡಮಾನ್ ದ್ವೀಪಗಳು ಭೇಟಿ ಕೊಡಲೇ ಬೇಕಾದ ಸ್ಥಳವಾಗಿದೆ . ಅಂಡಮಾನ್ ದ್ವೀಪಗಳು ವರ್ಷದುದ್ದಕ್ಕೂ ಒಂದು ಉಷ್ಣವಲಯದ ಹವಾಮಾನವನ್ನು ಅನುಭವಿಸುತ್ತವೆ ಮತ್ತು ಸರಾಸರಿ ತಾಪಮಾನವು 27 ° ಸೆಲ್ಸಿಯಸ್ ನಿಂದ 32 ° ಸೆಲ್ಸಿಯಸ್ ವರೆಗೆ ಬೇಸಿಗೆಯಲ್ಲಿ ಬದಲಾಗುತ್ತಾ ಇರುತ್ತದೆ.

ಪ್ರಮುಖ ಆಕರ್ಷಣೆಗಳು

ಹಾವ್ಲಾಕ್ ದ್ವೀಪ, ರಾಧಾನಗರ್ ಬೀಚ್, ಸೆಲ್ಯುಲರ್ ಜೈಲ್, ನೀಲ್ ಐಲೆಂಡ್, ರಾಸ್ ಐಲ್ಯಾಂಡ್, ಎಲಿಫೆಂಟ್ ಬೀಚ್, ಕಾರ್ಬಿನ್ಸ್ ಕೋವ್ ಬೀಚ್ ಮತ್ತು ಇನ್ನಷ್ಟು.

ಇಲ್ಲಿ ಮಾಡಬಹುದಾದ ವಿಷಯಗಳು

ಹಾವ್ಲಾಕ್ ದ್ವೀಪದಲ್ಲಿ ಸ್ಕೂಬಾ ಡೈವಿಗ್, ರಾಧಾನಗರ್ ಬೀಚ್ ನಲ್ಲಿ ಸ್ನೋರ್ಕ್ಲಿಂಗ್, ಸೆಲ್ಯುಲಾರ್ ಜೈಲಿನಲ್ಲಿ ಲೈಟ್ ಮತ್ತು ಸೌಂಡ್ ಪ್ರದರ್ಶನ, ಸಮುದ್ರದ ಅಡಿಯಲ್ಲಿ ವಾಕಿಂಗ್, ಮೌಂಟ್ ಹ್ಯಾರಿಯೆಟ್ ನಿಂದ ಮಧುಬಾನ್ ಗೆ ಟ್ರಕಿಂಗ್ ಮತ್ತು ಇತ್ಯಾದಿ

ತಲುಪುವುದು ಹೇಗೆ ?

ಅಂಡಮಾನ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್ ಹತ್ತಿರದ ವಿಮಾನನಿಲ್ದಾಣವಾಗಿದ್ದು ಅಂಡಮಾನ್ ದ್ವೀಪಗಳನ್ನು ಸಮೀಪದ ದೇಶೀಯ ವಿಮಾನ ನಿಲ್ದಾಣಗಳೊಂದಿಗೆ ಸಂಪರ್ಕಿಸುತ್ತದೆ. ನೀವು ಕಡಲ ತೀರದಿಂದ ಅಂಡಮಾನ್ ದ್ವೀಪಗಳಿಗೆ ಸಹ ಹೋಗಬಹುದು ಆದರೆ ಕೊಲ್ಕತ್ತಾ, ಚೆನ್ನೈ ಮತ್ತು ವೈಜಾಗ್ ನಿಂದ ಪೋರ್ಟ್ ಬ್ಲೇರ್ ಗೆ ನಿಯಮಿತವಾದ ಪ್ರಯಾಣಿಕರ ಹಡಗುಗಳ ಮೂಲಕ ಸುಮಾರು 50 ಗಂಟೆಗಳಿಂದ 60 ಗಂಟೆಗಳನ್ನು ತೆಗೆದುಕೊಳ್ಳಬಹುದು.

Read more about: kashmir travel summer india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more