Search
  • Follow NativePlanet
Share
» »ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ವೈಷ್ಣೋ ದೇವಿ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ . ಪುರಾಣಗಳ ಪ್ರಕಾರ ವೈಷ್ಣೋ ದೇವಿ ಈ ಗುಹೆಯಲ್ಲಿ ಅಡಗಿ ರಾಕ್ಷಸನ ವಧೆ ಮಾಡಿದ್ದಳಂತೆ. ಈ ದೇವಸ್ಥಾನ ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ನೀವೂ ಕೂಡಾ ಕುಟುಂಬ ಸಮೇತರಾಗಿ ವೈಷ್ಣೋ ದೇವಿಯ ದರ್ಶನ ಪಡೆಯಬೇಕೆಂದಿದ್ದರೆ ರೈಲ್ವೆ ಇಲಾಖೆ ನೀಡುತ್ತಿರುವ ಅತ್ಯದ್ಭುತ ಪ್ಯಾಕೇಜ್‍ನ್ನು ಬಳಸಿಕೊಳ್ಳಿ. ಕೇವಲ 2500ರೂ.ಯಲ್ಲಿ ವೈಷ್ಣೋ ದೇವಿಯ ಯಾತ್ರೆ ಮುಗಿಸಿ.

ಕರ್ನಾಟಕದ ಈ ಕೋಟೆಯಲ್ಲಿ ಬಂಧಿಯಾಗಿದ್ದರಂತೆ ಗಾಂಧೀಜಿ!ಕರ್ನಾಟಕದ ಈ ಕೋಟೆಯಲ್ಲಿ ಬಂಧಿಯಾಗಿದ್ದರಂತೆ ಗಾಂಧೀಜಿ!

ಎಲ್ಲಿಂದ ಶುರುವಾಗುತ್ತದೆ ವೈಷ್ಣೋ ದೇವಿ ಯಾತ್ರೆ

ಎಲ್ಲಿಂದ ಶುರುವಾಗುತ್ತದೆ ವೈಷ್ಣೋ ದೇವಿ ಯಾತ್ರೆ

PC: Raulcaeser

ಈ ಯಾತ್ರೆ ಜಮ್ಮುವಿನ ಕಟ್ರಾದಿ ಂದ ಪ್ರಾರಂಭವಾಗುತ್ತದೆ. ಕಟ್ರಾ ಜಮ್ಮುವಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಒಂದು ಹಳ್ಳಿ. ಯಾತ್ರಿಗಳು ಮೊದಲು ಕಟ್ರಾಗೆ ಬಂದು ಅಲ್ಲಿ ಒಂದು ಚೀಟಿಯನ್ನು ನೀಡಲಾಗುತ್ತದೆ. ಅಲ್ಲಿಂದ ಪಾದಯಾತ್ರೆ ಶುರುವಾಗುತ್ತದೆ. 14ಕಿ.ಮೀ ಹತ್ತಬೇಕು ಕಟ್ರಾದಿಂದ ವೈಷ್ಣೋದೇವಿ ಮಂದಿರಕ್ಕೆ 14 ಕಿ.ಮೀ ಬೆಟ್ಟ ಹತ್ತಬೇಕು.

ರಾತ್ರಿಯೂ ಬೆಟ್ಟ ಹತ್ತು ಭಕ್ತರು

ರಾತ್ರಿಯೂ ಬೆಟ್ಟ ಹತ್ತು ಭಕ್ತರು

PC: Nitin3233

ಭಕ್ತರು ರಾತ್ರಿ ಹೊತ್ತಿನಲ್ಲೂ ಬೆಟ್ಟ ಹತ್ತುತ್ತಿರುತ್ತಾರೆ. ಚೀಟಿ ಸಿಕ್ಕಿದ ಮೂರು ಗಂಟೆಗಳ ನಂತರ ಒಂದು ಚೆಕಿಂಗ್ ಪಾಯಿಂಟ್ ಸಿಗುತ್ತದೆ ಅಲ್ಲಿ ಆ ಚೀಟಿಯನ್ನು ದಾಖಲಿಸಬೇಕು. 6 ಗಂಟೆಗಳ ನಂತರ ಚೀಟಿ ರದ್ದಾಗುತ್ತದೆ ಚೀಟಿ ಪಡೆದುಕೊಂಡ 6 ಗಂಟೆಗಳ ಒಳಗೆ ಚೀಟಿ ದಾಖಲಿಸಬೇಕು. ಇಲ್ಲವಾದಲ್ಲಿ ಚೀಟಿ ರದ್ದಾಗುತ್ತದೆ. ವೈಷ್ಣೊದೇವಿ ಮಂದಿರಕ್ಕೆ ಬೆಟ್ಟ ಹತ್ತುವ ಜಾಗದಲ್ಲಿ ಅಲ್ಲಲ್ಲಿ ಚಹಾ ಕಾಫಿ ವ್ಯವಸ್ಥೆ ಇದೆ.

ಹೆಲಿಕಾಫ್ಟರ್ ವ್ಯವಸ್ಥೆ ಕೂಡಾ ಇದೆ

ಹೆಲಿಕಾಫ್ಟರ್ ವ್ಯವಸ್ಥೆ ಕೂಡಾ ಇದೆ

PC:Varunkau

ಕಟ್ರಾದ ಬೇರೂನಾಥ ಮಂದಿರದಿಂದ ಕೆಲವು ಕಿ.ಮೀ ದೂರದಲ್ಲಿರುವ ಸಂಜೀಚತ್‍ವರೆಗೆ ಹೆಲಿಕಾಫ್ಟರ್ ವ್ಯವಸ್ಥೆ ಇದೆ. ಇದರ ಬಾಡಿಗೆ ಸುಮಾರು 1000 ರೂ. ಯಿಂದ 7000ರೂ. ವರೆಗೆ ಇರುತ್ತದೆ. ಇಲ್ಲಿ ಬ್ಯಾಟ್ರಿ ಕರ್ ವ್ಯವಸ್ಥೆ ಕೂಡಾ ಇದೆ. ಹಾಗೆಯೇ ಕುದುರೆ, ಪಲ್ಲಕ್ಕಿ ವ್ಯವಸ್ಥೆ ಕೂಡಾ ಇದೆ. ವೈಷ್ಣೋ ದೇವಿ ವೈಷ್ಣೋ ದೇವಿ ಬೈರವನಾಥನನ್ನು ವಧೆ ಮಾಡಿದ ಸ್ಥಳವು ಭವನದ ಹೆಸರಿನಿಂದ ಪ್ರಸಿದ್ಧಿಯಾಗಿದೆ. ಈ ಗುಹೆಯೊಳಗೆ ಕಾಳಿ, ಸರಸ್ವತಿ ಹಾಗು ಲಕ್ಷ್ಮೀ ದೇವಿ ಒಟ್ಟಾಗಿರುವ ರೂಪವನ್ನೇ ವೈಷ್ಣೋ ದೇವಿ ಎನ್ನಲಾಗುತ್ತದೆ.

ಆಫರ್ ದೆಹಲಿಯಿಂದ ಮಾತ್ರ

ಆಫರ್ ದೆಹಲಿಯಿಂದ ಮಾತ್ರ

PC: wikicommons

ನೆನಪಿಡಿ ಈ ಪ್ಯಾಕೇಜ್ ಆಫರ್ ಕೇವಲ ದೆಹಲಿಯಿಂದ ಮಾತ್ರ. ದೆಹಲಿಯಿಂದ ಟಿಕೇಟ್ ಬುಕ್ ಮಾಡುವುದಾದರೆ ಮಾತ್ರ ನೀವು ಪ್ಯಾಕೇಜ್‌ನ ಉಪಯೋಗವನ್ನು ಪಡೆಯಬಹುದು. ಟಿಕೇಟ್ ಬುಕ್ ಮಾಡಲು ನೀವು ಈಗಲೇ ಐಆರ್‍ಸಿಟಿಸಿ ಅಧೀಕೃತ ವೆಬ್‍ಸೈಟ್‍ಗೆ ಲಾಗಿನ್ ಆಗಿ.

Read more about: india temple kashmir travel
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X