Search
  • Follow NativePlanet
Share
» »ಅಮರನಾಥ ಯಾತ್ರೆಗೆ ನೀವು ರೆಡಿನಾ... ರಿಜಿಸ್ಟ್ರೇಶನ್ ಮಾಡಿಸಿದ್ದೀರಾ?

ಅಮರನಾಥ ಯಾತ್ರೆಗೆ ನೀವು ರೆಡಿನಾ... ರಿಜಿಸ್ಟ್ರೇಶನ್ ಮಾಡಿಸಿದ್ದೀರಾ?

2018ರ ಅಮರನಾಥ ಯಾತ್ರೆಗೆ ದಿನಾಂಕ ವರ್ಷದ ಮೊದಲಿಗೆ ನಿಗಧಿಸಲಾಗಿದ್ದು ಯಾತ್ರೆಯ ದಿನಾಂಕವನ್ನೂ ತಿಳಿಸಿದೆ. ಜಮ್ಮು ಕಾಶ್ಮೀರದ ಶ್ರೀ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಅಮರನಾಥ್ ಕ್ಷೇತ್ರವು ಭಾರತದಲ್ಲಿಯೇ ಪ್ರಧಾನವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟಕ್ಕೆ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ದೇವಾಲಯಕ್ಕೆ ಹಲವಾರು ದೇಶಗಳಿಂದ ಭಕ್ತರು ಭೇಟಿ ನೀಡುತ್ತಾರೆ.

 500 ವರ್ಷಗಳಷ್ಟು ಹಳೆಯ ದೇವಾಲಯ

500 ವರ್ಷಗಳಷ್ಟು ಹಳೆಯ ದೇವಾಲಯ

PC: Itzseoprasoon

ಈ ಗುಹಾ ದೇವಾಲಯದೊಳಗೆ ತಲುಪಲು ಭಕ್ತರು 4000ಮೀ. ಚಾರಣ ಮಾಡಬೇಕು. ಸುಮಾರು 500 ವರ್ಷಗಳಷ್ಟು ಹಳೆಯ ದೇವಾಲಯ ಇದು ಎನ್ನಲಾಗುತ್ತದೆ, ಪ್ರತಿವರ್ಷ ಭಕ್ತರು ಸರ್ಕಾರ ಅಮರನಾಥ ಯಾತ್ರೆಯ ದಿನಾಂಕವನ್ನು ಹೊರಡಿಸುವುದನ್ನೇ ಕಾಯುತ್ತಾ ಇರುತ್ತಿರುತ್ತಾರೆ. ಇದು ಅತ್ಯಂತ ಕಷ್ಟಕರ ಪ್ರಯಾಣವಾಗಿದ್ದು. ಭಕ್ತರು ಮೊದಲೇ ಪ್ಲ್ಯಾನ್ ಮಾಡಿಕೊಂಡಿರಬೇಕಾಗುತ್ತದೆ. ಹಾಗಾಗಿ ಸರ್ಕಾರ ಈ ಮೊದಲೇ ಅಮರನಾಥ ಯಾತ್ರೆಯ ದಿನಾಂಕವನ್ನು ಬಹಿರಂಗಪಡಿಸಿದೆ.

60 ದಿನಗಳ ಯಾತ್ರೆ

60 ದಿನಗಳ ಯಾತ್ರೆ

PC:Itzseoprasoon

ಯಾತ್ರೆ ದಿನಾಂಕ: ಜೂನ್ 28 ರಿಂದ ಆಗಸ್ಟ್ 26

ನೊಂದಣಿ ಪ್ರಾರಂಭ ಮಾರ್ಚ್ 1

ಬ್ಯಾಂಕ್ : ಪಂಜಾನ್ ನ್ಯಾಷನಲ್ ಬ್ಯಾಂಕ್, ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್, ಯೆಸ್ ಬ್ಯಾಂಕ್

ಯಾತ್ರೆಯ ಅವಧಿ : 60 ದಿನಗಳು

ಒಂದು ದಿನಕ್ಕೆ ಒಳ ಪ್ರವೇಶಿಸಲಿರುವ ಭಕ್ತರು : 1500

ಶುಲ್ಕ: 7500ರೂ.

ದೇವಿ ಸತಿಯ ಕಣ್ಣುಗುಡ್ಡೆ ಬಿದ್ದಿರುವ ಜಾಗ ಇದು

14ರಿಂದ 74 ವರ್ಷದವರಿಗೆ ಮಾತ್ರ ಅವಕಾಶ

14ರಿಂದ 74 ವರ್ಷದವರಿಗೆ ಮಾತ್ರ ಅವಕಾಶ

PC:Guptaele

14 ರಿಂದ 74 ವರ್ಷದ ಒಳಗಿನವರು ಮಾತ್ರ ಈ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು, 13 ವರ್ಷಕ್ಕಿಂತ ಕೆಳಗಿನ ಹಾಗೂ ೭೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ.

ಪಾರ್ವತಿ ದೇವಿಗೆ ಅಮರತ್ವದ ಗುಟ್ಟು ತಿಳಿಸಿದ ಶಿವ

ಪಾರ್ವತಿ ದೇವಿಗೆ ಅಮರತ್ವದ ಗುಟ್ಟು ತಿಳಿಸಿದ ಶಿವ

PC:Nitjsandy

ಪಾರ್ವತಿ ದೇವಿ ತನಗೆ ಅಮರತ್ವದ ಗುಟ್ಟನ್ನು ತಿಳಿಸು ಎಂದಾಗ ಶಿವನು ಆ ಗುಟ್ಟು ಯಾರ ಕಿವಿಗೂ ಬೀಳಬಾರದೆಂದು ಶಿವನು ತನ್ನ ತಲೆಯಲ್ಲಿದ್ದ ಚಂದ್ರನ್ನು ಚಂದನವಾರಿಯಲ್ಲಿ ಹಾಗು ತನ್ನ ನಂದಿಯನ್ನು ಪೆಹೆಲ್ಕಾನಲ್ಲಿ ಬಿಟ್ಟು ತೆರಳಿದನು , ಮಗ ಗಣೇಶನನ್ನು ಮಹಾ ಗುಣಾಸ್ ಪರ್ವತದ ಮೇಲೆ ಹಾಗು ತನ್ನ ಸರ್ಪವನ್ನು ಸೇಶ್ ನಾಗದಲ್ಲಿ ಬಿಟ್ಟನು. ನಂತರ ಮಹಾ ಶಿವನು ಪಂಚಭೂತಗಳನ್ನು ಪಂಚರತ್ನದಲ್ಲಿ ಬಿಟ್ಟು ತನ್ನ ಪತ್ನಿಯ ಜೊತೆ ಈ ಗುಹೆಗೆ ತೆರಳಿದನು . ಗುಹೆಯಲ್ಲಿ ತೆರಳಿದ ಮಹಾಶಿವನು ತನ್ನ ಮಾತುಗಳನ್ನು ಯಾರು ಕೇಳಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಜ್ವಾಲೆಯನ್ನು ಉತ್ಪತ್ತಿ ಮಾಡಿ ಸಮಸ್ತ ಜೀವ ರಾಶಿಯನ್ನು ನಾಶಗೊಳಿಸಿದನು ಎನ್ನಲಾಗುತ್ತದೆ.

ಗುಹೆಯೊಳಗೆ ಕಾಣಸಿಗುವ ಹಕ್ಕಿಯ ಜೋಡಿ

ಗುಹೆಯೊಳಗೆ ಕಾಣಸಿಗುವ ಹಕ್ಕಿಯ ಜೋಡಿ

PC:Nittin sain

ಆದರೆ ಜಿಂಕೆ ಚರ್ಮದ ಕೆಳಗೆ 2 ಹಕ್ಕಿಗಳ ಮೊಟ್ಟೆಗಳು ಇದ್ದವು. ಇವುಗಳಿಗೆ ಯಾವುದೇ ಹಾನಿಯಾಗಲಿಲ್ಲ. ಈ ಎರಡು ಮೊಟ್ಟೆಗಳು ಶಿವನು ಪಾರ್ವತಿ ದೇವಿಗೆ ಜೀವನ ರಹಸ್ಯವನ್ನು ವಿವರಿಸುವಾಗ ಅವುಗಳು ಗುಪ್ತವಾಗಿ ಕೇಳಿಸಿಕೊಂಡವು . ಹಾಗಾಗಿ ಅವು ಮತ್ತೆ ಮತ್ತೆ ಜನಿಸುತ್ತವೆ ಎನ್ನಲಾಗುತ್ತದೆ, ಅಮರನಾಥ ಯಾತ್ರೆಗೆ ಹೋಗುವವರಿಗೆ ಈ ಗುಹೆಯೊಳಗೆ ಎರಡು ಹಕ್ಕಿಯ ಜೋಡಿ ಕಾಣಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more