Search
  • Follow NativePlanet
Share
» »ಇಲ್ಲಿನ ದೆವ್ವಗಳು ಸಹಾಯ ಮಾಡ್ತಾವೆ, ಮಾರ್ಚ್ ಫಾಸ್ಟ್‌ ಕೂಡಾ ಮಾಡ್ತಾವೆಯಂತೆ!

ಇಲ್ಲಿನ ದೆವ್ವಗಳು ಸಹಾಯ ಮಾಡ್ತಾವೆ, ಮಾರ್ಚ್ ಫಾಸ್ಟ್‌ ಕೂಡಾ ಮಾಡ್ತಾವೆಯಂತೆ!

ಜಮ್ಮು ಕಾಶ್ಮೀರ ಪ್ರಕೃತಿ ಸೌಂದರ್ಯದಿಂದ ಕೂಡಿರುವಂತಹ ಪ್ರದೇಶ. ಇಲ್ಲಿ ಅನೇಕ ದೇವಾಲಯಗಳು, ಪ್ರೇಕ್ಷಣೀಯ ಸ್ಥಳಗಳೂ ಇವೆ. ಹಾಗೆಯೇ ಭಯಾನಕ ಸ್ಥಳಗಳೂ ಇವೆ. ಹೆಚ್ಚಿನವರಿಗೆ ಇದು ತಿಳಿದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ಪ್ರೇತಬಾಧಿತ ಸ್ಥಳಗಳ ಬಗ್ಗೆ ತಿಳಿಯಬೇಕಾದರೆ ಇದನ್ನು ಓದಿ.

ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

ರಹಸ್ಯದ ಮರ

ರಹಸ್ಯದ ಮರ

ಶ್ರೀನಗರದ ಗುರೇಜ್ ಘಾಟಿಯಲ್ಲಿ ಒಂದು ಎಲೆಗಳಿಲ್ಲ ಮರ ಇದೆ. ಸ್ಥಳೀಯರು ಈ ಮರಕ್ಕೆ ಭೂತದ ಮರ ಎನ್ನುತ್ತಾರೆ. ಈ ಮರ ನೋಡಲೂ ಭಯಾನಕವಾಗಿದೆ. ಯಾರು ಈ ಮರವನ್ನು ಅಮಾವಾಸ್ಯೆ ದಿನದಂದು ಮುಟ್ಟಲು ಪ್ರಯತ್ನಿಸುತ್ತಾರೋ ಅವರನ್ನು ಈ ಆತ್ಮ ಹಿಡಿಯುತ್ತದೆ ಎನ್ನಲಾಗುತ್ತದೆ. ಈ ಭಯದಿಂದಾಗಿ ಯಾರೂ ಕೂಡಾ ಆಮರದ ಬಳಿಗೆ ಹೋಗೋದೇ ಇಲ್ಲ.

ಇಲ್ಲಿನ ಕಾಲೇಜ್ ಕ್ಯಾಂಪಸ್‌ನಲ್ಲಿ ಕುರ್ಚಿ ತನ್ನಷ್ಟಕ್ಕೆ ಓಡಾಡುತ್ತಂತೆ!

ಕೊಲೆಪಾತಕಿ ರಸ್ತೆ

ಕೊಲೆಪಾತಕಿ ರಸ್ತೆ

ಕಾಶ್ಮೀರದ ಬೆಟ್ಟಗಳ ನಡುವೆ ಒಂದು ಬೆಟ್ಟದ ರಸ್ತೆ ಇದೆ. ಈ ರಸ್ತೆಯಲ್ಲಿ ಹೆಚ್ಚಾಗಿ ಅಪಘಾತಗಳು ನಡೆಯುತ್ತವೆ. ಹಾಗಾಗಿ ಇದನ್ನು ರಕ್ತದ ರಸ್ತೆ ಎನ್ನುತ್ತಾರೆ. ಈ ರಸ್ತೆಯಲ್ಲಿ ರಾತ್ರಿ ಕಪ್ಪು ಸೀರೆ ಧರಿಸಿದ ಹೆಂಗಸು ಕಾಣಿಸುತ್ತಾಳೆ. ಆಕೆಯ ಕೈಯಲ್ಲಿ ಒಂದು ಮಗು ಕೂಡಾ ಕಾಣಿಸುತ್ತದೆ. ಈ ಕಪ್ಪು ಸೀರೆಯ ಹೆಂಗಸೇ ಇಲ್ಲಿ ನಡೆಯುವ ಅವಘಡಗಳಿಗೆ ಕಾರಣ ಎನ್ನಲಾಗುತ್ತದೆ. ಯಾವುದಾದರೂ ವಾಹನ ಆ ರಸ್ತೆಯಲ್ಲಿ ಹೋಗುತ್ತಿದ್ದರೆ ಈ ಮಹಿಳೆ ಬಂದು ಲಿಫ್ಟ್ ಕೇಳುತ್ತಾಳೆ. ಹೀಗಾಗಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸುತ್ತದೆ ಎನ್ನಲಾಗುತ್ತದೆ. ಹಲವು ವರ್ಷಗಳ ಹಿಂದೆ ಯಾರೋ ಒಂದು ಮಹಿಳೆ ಮಗುವಿನ ಜೊತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು . ಆಕೆಯ ಆತ್ಮ ಇಲ್ಲಿ ತಿರುಗಾಡುತ್ತಿದೆ ಎನ್ನಲಾಗುತ್ತದೆ.

ಭೂತದ ಮಸೀದಿ

ಭೂತದ ಮಸೀದಿ

ಇದೊಂದು ತರ್ಕಕ್ಕೂ ನಿಕದ್ದಾಗಿದೆ. ದೇವರ ಮನೆಯಲ್ಲಿ ಆತ್ಮ ಇರಲು ಹೇಗೆ ಸಾಧ್ಯ. ಕಾಶ್ಮೀರದ ಯಾವುದೋ ಹಳ್ಳಿಯ ಮಸೀದಿಯಲ್ಲಿ ಆತ್ಮದ ವಾಸವಿದೆಯಂತೆ. ಈ ಮಸೀದಿಯೊಳಗೆ ಹೋದವರ ಜೊತೆ ಚಿತ್ರ ವಿಷಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಒಂದು ರೀತಿಯ ಭಯಾನಕ ವಾತಾವರಣ ಈ ಮಸೀದಿಯ ಸುತ್ತಲೂ ಆವರಿಸಿದೆ.

ಕುನನ್ ಪೋಶ್‌ಪೋರಾ

ಕುನನ್ ಪೋಶ್‌ಪೋರಾ

ಕಾಶ್ಮೀರದಲ್ಲಿ ಕುನನ್ ಹಾಗೂ ಪೋಶ್‌ಪೋರಾ ಎನ್ನುವ ಅವಳಿ ಹಳ್ಳಿಗಳಿವೆ. ಹಲವು ವರ್ಷಗಳ ಹಿಂದೆ ಇಲ್ಲಿ ಯಾವದೋ ಹುಡುಗಿಯ ಸಾಮೂಹಿಕ ಬಲಾತ್ಕಾರ ಮಾಡಲಾಗಿತ್ತಂತೆ. ಆ ನಂತರ ಆಕೆ ಸಾವನ್ನಪ್ಪಿದ್ದಳು. ಈ ಎರಡು ಹಳ್ಳಿಗಳಲ್ಲಿ ಆ ಹುಡುಗಿಯ ಆತ್ಮ ತಿರುಗುತ್ತಿದೆಯಂತೆ. ಕೆಲವೊಮ್ಮೆ ಆಕೆಯ ನೆರಳು ಕೂಡಾ ಕಾಣಿಸುತ್ತದಂತೆ.

ಅಲೆಯುತ್ತಿರುವ ಪ್ರವಾದಿ

ಅಲೆಯುತ್ತಿರುವ ಪ್ರವಾದಿ

ಶ್ರೀನಗರದಲ್ಲಿ ಯಾರೋ ಒಬ್ಬ ಪ್ರವಾದಿಗೆ ವಿವಾಹಿತ ಮಹಿಳೆ ಮೇಲೆ ಪ್ರೇಮಾಂಕುರಗುತ್ತಂತೆ. ಹಾಗಾಗಿ ಆಕೆ ತನ್ನ ಪತಿಯನ್ನು ದ್ವೇಷಿಸುತ್ತಿದ್ದಳು. ಗಂಡ ಮನೆಯಲ್ಲಿರುವಾಗ ಯಾವಾಗಲು ಗಂಡನ ಜೊತೆ ಗಲಾಟೆ ಮಾಡುತ್ತಿದ್ದಳು. ಗಂಡ ಮನೆಯಿಂದ ಹೊರಹೋದಂತೆ ಆಕೆ ಆರಾಮವಾಗಿರುತ್ತಿದ್ದಳು. ಹೆಂಡತಿಯ ಈ ವಿಚಿತ್ರ ವರ್ತನೆಯನ್ನು ಕಂಡು ಗಂಡ ಆಕೆಯನ್ನು ತಾಂತ್ರಿಕನ ಬಳಿ ಕರೆದುಕೊಂಡು ಹೋಗುತ್ತಾನೆ. ಆಗ ಮಹಿಳೆಯ ಒಳಗಿನಿಂದ ಪ್ರವಾದಿಯ ಆತ್ಮ ಹೊರಬಂದು ಆಕೆಯ ಮೇಲೆ ಪ್ರೇಮವಾಗಿದೆ. ಆಕೆಯನ್ನು ಬಿಟ್ಟು ಹೋಗುವುದಿಲ್ಲ ಎನ್ನುತ್ತದೆ. ಆದ್ರೆ ಇದೆಲ್ಲಾ ಗಾಳಿಸುದ್ದಿಗಳು ಎಷ್ಟು ನಿಜವೋ ಎನ್ನುವುದನ್ನು ಹೇಳಲು ಸಾಧ್ಯವಾಗೋದಿಲ್ಲ.

ಸಹಾಯ ಮಾಡುವ ಆತ್ಮ

ಸಹಾಯ ಮಾಡುವ ಆತ್ಮ

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಒಂದು ಆತ್ಮ ಇದೆ. ಆದ್ರೆ ಅದು ಯಾರಿಗೂ ತೊಂದರೆಯನ್ನು ನೀಡೋದಿಲ್ಲ. ಬದಲಾಗಿ ಸಹಾಯ ಮಾಡುತ್ತದಂತೆ. ಈ ಬಗ್ಗೆ ಪ್ರತಿಯೊಬ್ಬರದು ಬೇರೆ ಬೇರೆ ಅಭಿಪ್ರಾಯ. ಕೆಲವರು ತಮಗೆ ಸಹಾಯ ಮಾಡಿರುವ ವ್ಯಕ್ತಿಯನ್ನು ನೋಡಿದ್ದಾರಂತೆ.

ಉದಾಮ್‌ಪುರ್(ಆರ್ಮಿ ಕ್ವಾಟ್ರಸ್)

ಉದಾಮ್‌ಪುರ್(ಆರ್ಮಿ ಕ್ವಾಟ್ರಸ್)

ಇಲ್ಲಿ ಆತ್ಮಗಳು ಸಾಲಾಗಿ ಹೋಗುತ್ತವಂತೆ. ಅದೂ ಕೂಡಾ ಲೈಟ್ ಹಿಡಿದುಕೊಂಡು ಆಕಾಶದತ್ತ ಮಾರ್ಚ್ ಪಾಸ್ಟ್ ಮಾಡುತ್ತದಂತೆ. ಆ ನಂತರ ಮಾಯವಾಗುತ್ತದಂತೆ. ಅವುಗಳು ಬೆಳಗ್ಗಿನ ಜಾವ 2ರಿಂದ 2.30ರ ಸುಮಾರಿಗೆ ಕಾಣಿಸುತ್ತವಂತೆ.

Read more about: himachal pradesh kashmir haunted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more