Search
  • Follow NativePlanet
Share
» »ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗಾಳಿಯಲ್ಲಿ ತೇಲಾಡುವ ಶಿವಲಿಂಗ!

ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗಾಳಿಯಲ್ಲಿ ತೇಲಾಡುವ ಶಿವಲಿಂಗ!

By Sowmyabhai

ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್‍ಲಿಂಗಗಳು ಅಂದರೆ 12 ಲಿಂಗಗಳು ಇವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ಜ್ಯೋತಿರ್‍ಲಿಂಗ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೆರಾವಲ್‍ನಲ್ಲಿನ ಸೋಮನಾಥ. ಇಲ್ಲಿರುವ ಸೋಮನಾಥ ದೇವಾಲಯ ಎಂಬುದು ಪುರಾತನವಾದ ಶಿವಾಲಯವಾಗಿದೆ. ಭಾರತ ದೇಶದಲ್ಲಿರುವ ಶಿವ ಭಕ್ತರು ಹೆಚ್ಚಾಗಿ ಪೂಜಿಸುವ ದೇವಾಲಯ. ಸೋಮನಾಥ ಕ್ಷೇತ್ರದ ಬಗ್ಗೆ ಪುರಾಣದಲ್ಲಿ ಕೂಡ ಹೇಳಲಾಗಿದೆ. ಎಷ್ಟೊ ಅದ್ಭುತವಾದ ಚಾರಿತ್ರೆಯನ್ನು ಹೊಂದಿರುವ ಈ ಸೋಮನಾಥ ಕ್ಷೇತ್ರದ ವಿಶೇಷತೆಯನ್ನು ಗಮನಿಸಿದರೆ...

ಉತ್ತರ ಭಾರತ ದೇಶದಲ್ಲಿ ಹೆಚ್ಚಾಗಿ ಹಿಂದುಗಳು ಶಿವಾಲಯದಲ್ಲಿ ದೀಪಾಗಳನ್ನು ಬೆಳಗಿಸಿ ಆರಾಧಿಸುತ್ತಾರೆ. ಮುಖ್ಯವಾಗಿ ಜ್ಯೋತಿರ್‍ಲಿಂಗ ಕ್ಷೇತ್ರಗಳಲ್ಲಿ ಎಂದರೆ ಹೇಳುವ ಅವಶ್ಯಕತೆ ಇಲ್ಲ. ಇಲ್ಲಿ ಕ್ಕಿಕ್ಕಿರಿದ ಭಕ್ತ ಸಮೂಹಕ್ಕೆ ಕಾಲು ಇಡಲು ಕೂಡ ಸ್ವಲ್ಪವೂ ಸ್ಥಳವಿರುವುದಿಲ್ಲ.

ಸ್ಥಳ ಪುರಾಣ

ಸ್ಥಳ ಪುರಾಣ

ಚಂದ್ರನು, ದಕ್ಷನ ಶಾಪದಿಂದ ವಿಮುಕ್ತಿ ಮಾಡಿದ ಶಿವನಿಗೆ ಒಂದು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಅದೇ ಸೋಮನಾಥ ದೇವಾಲಯ. ಇದನ್ನು ಮೊದಲು ಚಂದ್ರನು ಬಂಗಾರವನ್ನು ಬಳಸಿ ದೇವಾಲಯವನ್ನು ನಿರ್ಮಾಣ ಮಾಡಿದನು. ಆ ನಂತರ ರಾವಣನು ಬೆಳ್ಳಿಯಿಂದ, ಕೃಷ್ಣನು ಲೋಹದಿಂದ ನಿರ್ಮಾಣ ಮಾಡಿದನು ಎಂಬುದು ಪ್ರತೀತಿ.

PC:username8115

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಸೋಮನಾಥ ದೇವಾಲಯವು ಪ್ರಮುಖ ಜ್ಯೋತಿರ್‍ಲಿಂಗ ಕ್ಷೇತ್ರಗಳಲ್ಲಿ ಮೊದಲನೆಯದು. ಇಲ್ಲಿ ಶಿವ ಭಗವಾನನು ಸಾಕ್ಷಾತ್ ನೆಲೆಸಿದ್ದಾನೆ. ಈ ದೇವಾಲಯವು ನಿರ್ಮಾಣ ಮಾಡಿದ್ದಾಗಿನಿಂದ ಸುಮಾರು 7 ಬಾರಿ ನಾಶವಾಗಿ ಪುನರ್ ನಿರ್ಮಾಣ ಮಾಡಲ್ಪಟ್ಟಿದೆ. ಕೊನೆಯದಾಗಿ ವಲ್ಲಭಾಯ್ ಪಟೇಲ್ 1951 ರಲ್ಲಿ ಈ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು.

PC: Jagadip Singh

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಸೋಮನಾಥ ದೇವಾಲಯದಲ್ಲಿ ಯಾರಿಗೂ ಅರ್ಥವಾಗದ ವಿಚಿತ್ರವಿದೆ. ಅದೇ ಚಂದ್ರನು ಪ್ರತಿಷ್ಟಾಪಿಸಿದ ಶಿವಲಿಂಗ. ದೇವಾಲಯದ ಮಧ್ಯದಲ್ಲಿ, ಭೂಮಿಯ ಒಳಗೆ ಯಾವುದೇ ಆಧಾರವಿಲ್ಲದೇ ಶಿವಲಿಂಗವನ್ನು ಪ್ರತಿಷ್ಟಾಪಿಸಿರುವುದು. ಇದು ಗಾಳಿಯಲ್ಲಿ ತೇಲುವ ಶಿವಲಿಂಗದ ಹಾಗೆ ಕಾಣುತ್ತದೆ. ಇದೊಂದು ವರ್ಣಿಸಲಾಗದಂತಹ ಒಂದು ಅದ್ಭುತ ದೃಶ್ಯ ಎಂದೇ ಹೇಳಬಹುದು.

PC:Kaushik Patel

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಸೋಮನಾಥ ದೇವಾಲಯದ ಒಳಗೆ ವಿಶಾಲವಾದ ಮಂಟಪ, ಎತ್ತರವಾದ ಗೋಪುರ ಕಾಣಿಸುತ್ತದೆ. ಗರ್ಭಗುಡಿಯಲ್ಲಿ ಶಿವಲಿಂಗವು ಗಾತ್ರದಲ್ಲಿ ದೊಡ್ಡದಾಗಿದೆ. ಶಿವಲಿಂಗದ ಹಿಂದೆ ಪಾರ್ವತಿ ದೇವಿ ವಿಗ್ರಹವು ಕೂಡ ಕಾಣಿಸುತ್ತದೆ. ದ್ವಾರಕ್ಕೆ ಬಲಭಾಗದಲ್ಲಿ ಹಾಗು ಹಿಂದೆ ಭಾಗದಲ್ಲಿ ವಿನಾಯಕನ ವಿಗ್ರಹ, ಆಂಜನೇಯನ ವಿಗ್ರಹಗಳು ಇವೆ.


PC: veerendhersharma

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಸೋಮನಾಥ ದೇವಾಲಯವು ಅದರ ಅದ್ಭುತವಾದ ಕೆತ್ತನೆ, ಬೆಳ್ಳಿಯ ದ್ವಾರಗಳು, ನಂದಿ ವಿಗ್ರಹಗಳು ಮತ್ತು ಅದರ ಕೇಂದ್ರ ಶಿವಲಿಂಗಕ್ಕೆ ಪ್ರಸಿದ್ಧಿ ಹೊಂದಿದೆ. ಭಕ್ತರು ಕಾರ್ತಿಕ ಪೌರ್ಣಮಿಯ ಹಬ್ಬದ ಸಮಯದಂದು ಈ ದೇವಾಲಯಕ್ಕೆ ವಿಶೇಷವಾಗಿ ಭೇಟಿ ನೀಡುತ್ತಾರೆ. ಮಹಾಶಿವರಾತ್ರಿ, ಚಂದ್ರ ಗ್ರಹಣ, ಸಮಯದಲ್ಲಿ ಲಕ್ಷಾಧಿ ಭಕ್ತರು ಸೋಮನಾಥ ದೇವಾಲಯಕ್ಕೆ ಬಂದು ಸ್ವಾಮಿಯನ್ನು ದರ್ಶನ ಭಾಗ್ಯವನ್ನು ಪಡೆಯುತ್ತಾರೆ.

PC: Paulus Veltman

ದೈತ್ಯುಸುದನ್ ಪುಣ್ಯಕ್ಷೇತ್ರ, ಸೋಮನಾಥ

ದೈತ್ಯುಸುದನ್ ಪುಣ್ಯಕ್ಷೇತ್ರ, ಸೋಮನಾಥ

ದೈತ್ಯುಸುದನ್ ಮಂದಿರ ಸೋಮನಾಥ ಕ್ಷೇತ್ರದಲ್ಲಿಯೇ ಇದೆ. ಈ ದೇವಾಲಯದಲ್ಲಿ ಕ್ರಿ.ಶ 7 ನೇ ಶತಮಾನಕ್ಕೆ ಸೇರಿದ ವಿಷ್ಣುಮೂರ್ತಿ ಚಿತ್ರವು ಕೂಡ ಇದೆ. ಕಾರ್ತಿಕ ಮಾಸದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ದರ್ಶಿಸುತ್ತಾರೆ.

PC:telugu native planet

ಸೂರ್ಯ ದೇವಾಲಯ, ಸೋಮನಾಥ

ಸೂರ್ಯ ದೇವಾಲಯ, ಸೋಮನಾಥ

ಸೋಮನಾಥ ದೇವಾಲಯದ ನಂತರ, ಆ ಪ್ರದೇಶದಲ್ಲಿ ಹೆಸರುವಾಸಿಯಾಗಿರುವ ಮತ್ತೊಂದು ದೇವಾಲಯ ಯಾವುದೆಂದರೆ ಸೂರ್ಯ ದೇವಾಲಯ. ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಈ ದೇವಾಲಯದಲ್ಲಿ ಪ್ರಧಾನವಾದ ವಿಗ್ರಹವು ಸೂರ್ಯ ಭಗವಾನನು ನೆಲೆಸಿದ್ದಾನೆ. ಆದಿ ದೇವನ ಇಬ್ಬರು ಸೇವಕರ ವಿಗ್ರಹವು ಕೂಡ ಈ ದೇವಾಲಯದಲ್ಲಿ ಇದೆ.

PC:Sumit Bhowmick

ಶಶಿಭೂಷಣ್, ಸೋಮಾನಾಥ

ಶಶಿಭೂಷಣ್, ಸೋಮಾನಾಥ

ಶಶಿಭೂಷಣ್ ಕೂಡ ಒಂದು ಪೂಣ್ಯ ಕ್ಷೇತ್ರವೇ. ಇದು ಗುಜರಾತ್ ರಾಷ್ಟ್ರದಲ್ಲಿನ ಸೋಮನಾಥ-ಭಲ್ಕ ತೀರ್ಥ ಹೋಗುವ ಮಾರ್ಗದಲ್ಲಿ ಇದೆ. ಇಲ್ಲಿಯೇ ಚಂದ್ರ ದೇವನು, ಸೋಮ, ತನ್ನ ಪಾಪಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಯಜ್ಞವನ್ನು ಮಾಡಿದರು. ಸೋಮನಾಥ ಕ್ಷೇತ್ರವನ್ನು ಭೇಟಿ ನೀಡಿ ಪ್ರತಿ ಯಾತ್ರಿಕನು ಶಶಿ ಭೂಷಣ್‍ನನ್ನು ತಪ್ಪದೇ ದರ್ಶಸಿಕೊಳ್ಳಬೇಕಾಗಿರುವುದೇ.

PC: telugu native planet

ಮಹಾಕಾಳಿ ದೇವಾಲಯ,ಸೋಮನಾಥ

ಮಹಾಕಾಳಿ ದೇವಾಲಯ,ಸೋಮನಾಥ

ಮಹಾಕಾಳಿ ದೇವಾಲಯ, ಪವಿತ್ರ ಸೋಮನಾಥ ದೇವಾಲಯಕ್ಕೆ ಸಮೀಪದಲ್ಲಿಯೇ ಇದೆ. ಇದನ್ನು ಕ್ರಿ.ಶ 1783 ರಲ್ಲಿ ಇಂದೋರ್ ಮಹಾರಾಣಿ ಆಹಲ್ಯಾಬಾಯಿ ಹೋಲ್ಕರ್ ನಿರ್ಮಾಣ ಮಾಡಿದರು. ಈ ದೇವಾಲಯವನ್ನು ಕೂಡ ಭಕ್ತರು ತಪ್ಪದೇ ಭೇಟಿ ನೀಡುತ್ತಾರೆ.

PC: Roshan


ವೆರವಾಲ್, ಸೋಮನಾಥ

ವೆರವಾಲ್, ಸೋಮನಾಥ

ಸೋಮನಾಥದಿಂದ ಕೇವಲ 6 ಕಿ.ಮೀ ದೂರದಲ್ಲಿ ವೆರವಾಲ್ ಮೀನುಗಳಿಗೆ ಪ್ರಸಿದ್ಧಿ ಹೊಂದಿರುವ ಪ್ರದೇಶ. ಸಂಪ್ರದಾಯ ಪ್ರದ್ಧತಿಯ ಪ್ರಕಾರ ಇಲ್ಲಿ ಹಲವಾರು ತಯಾರಿಕೆಗಳನ್ನು ನೋಡಬಹುದು. ಇಲ್ಲಿನಿಂದ ಭಾರಿ ಸಂಖ್ಯೆಯಲ್ಲಿ ಸಮುದ್ರ ಆಹಾರಗಳು ವಿದೇಶಗಳಿಗೆ ರಫ್ತಾಗುತ್ತದೆ.

PC: telugu native planet

ಭಲ್ಕಾ ತೀರ್ಥ, ಸೋಮನಾಥ

ಭಲ್ಕಾ ತೀರ್ಥ, ಸೋಮನಾಥ

ಸೋಮನಾಥದಲ್ಲಿ ಭಲ್ಕಾ ತೀರ್ಥಕ್ಕೆ ಒಂದು ವಿಶೇಷತೆ ಇದೆ. ಈ ಗ್ರಾಮವನ್ನು ಶ್ರೀ ಕೃಷ್ಣನೇ ನಿರ್ವಹಣೆ ಮಾಡಿದನಂತೆ. ಈ ಸ್ಥಳದಲ್ಲಿ ಶ್ರೀ ಕೃಷ್ಣನಿಗೆ ಬೇಟೆಗಾರನ ಬಾಣ ತಗುಲಿ ತನ್ನ ಅವತಾರವನ್ನು ಬಿಟ್ಟನು ಎಂದು ಹೇಳುತ್ತಾರೆ. ಇಲ್ಲಿಯೂ ಕೂಡ ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ.

PC: username8115

ಮೈ ಪೂರಿ ಮಸೀದಿ, ಸೋಮನಾಥ

ಮೈ ಪೂರಿ ಮಸೀದಿ, ಸೋಮನಾಥ

ಮೈ ಪೂರಿ ಮಸೀದಿ ಜುನಾಗಡ್ ದ್ವಾರದಿಂದ ಸುಮಾರು ಕಿ.ಮೀ ದೂರದಲ್ಲಿದೆ. ವೆರವಾಲ್‍ಗೆ ಪ್ರಧಾನವಾದ ದ್ವಾರವಾಗಿ ಕೆಲಸ ಮಾಡುತ್ತದೆ. ನೀಲಿ ಮತ್ತು ಬಿಳಿ ಬಣ್ಣದಿಂದ ಅತ್ಯಂತ ಸುಂದರವಾಗಿರುತ್ತದೆ. ಮಹೊಮ್ಮದಿಯರು ಇದನ್ನು ಸೋಮನಾಥದಲ್ಲಿನ ಒಂದು ಮುಖ್ಯವಾದ ಯಾತ್ರಾಸ್ಥಳವಾಗಿ ಭಾವಿಸುತ್ತಾರೆ.

PC: telugu native planet

ಸನಾ ಗುಹೆಗಳು, ಸೋಮನಾಥ

ಸನಾ ಗುಹೆಗಳು, ಸೋಮನಾಥ

ಸನಾ ಗುಹೆಗಳು ಸೋಮನಾಥದಲ್ಲಿನ ಒಂದು ಬೆಟ್ಟದ ಮೇಲೆ ಇರುವ ಗುಹಾ ಸಮುದಾಯವಾಗಿ ಹೇಳಬಹುದು. ಚರಿತ್ರೆಕಾರರ ಅಭಿಪ್ರಾಯದ ಪ್ರಕಾರ, ಈ ಗುಹೆಗಳು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು ಎಂದು ತಿಳಿದು ಬರುತ್ತದೆ. ಇಲ್ಲಿ ಸುಂದರವಾದ ಬೊಂಬೆಗಳು, ಸ್ಥೂಪಗಳು ಇನ್ನು ಅನೇಕ ಪ್ರವಾಸಿ ಆಕರ್ಷಣೆಗಳು ಇಲ್ಲಿವೆ.

PC: telugu native planet

ಪುರಾವಸ್ತು ಸಂಗ್ರಹಾಲ, ಸೋಮನಾಥ

ಪುರಾವಸ್ತು ಸಂಗ್ರಹಾಲ, ಸೋಮನಾಥ

ಸೋಮನಾಥದಲ್ಲಿರುವ ಪುರಾವಸ್ತು ಸಂಗ್ರಹಾಲಯದಲ್ಲಿ ಧ್ವಂಸವಾದ ಹಳೆಯ ಸೋಮನಾಥ ದೇವಾಲಯದ ಅವಶೇಷಗಳನ್ನು ಕಾಣಬಹುದು. ಹೇಗೆ ನಾಶ ಪಡಿಸಿದರು? ಹೇಗೆ ಪುನರ್ ನಿರ್ಮಾಣ ಮಾಡಿದರು? ಎಂಬ ಅನೇಕ ವಿಷಯದ ಕುರಿತು ಈ ಸಂಗ್ರಹಾಲಯವು ವಿವರಿಸುತ್ತದೆ. ಇಲ್ಲಿ ವಿವಿಧ ಬಗೆಯ ಕಲ್ಲಿನ ಶಿಲ್ಪಗಳು, ವಿಗ್ರಹಗಳನ್ನು ಕೂಡ ಇಲ್ಲಿ ಭದ್ರಗೊಳಿಸಿದ್ದಾರೆ.

PC: Mihirkumar Upadhyay

ಸೋಮನಾಥಕ್ಕೆ ಹೇಗೆ ಸೇರಿಕೊಳ್ಳಬೇಕು?

ಸೋಮನಾಥಕ್ಕೆ ಹೇಗೆ ಸೇರಿಕೊಳ್ಳಬೇಕು?

ವಿಮಾನ ಮಾರ್ಗದ ಮೂಲಕ


ಸೋಮನಾಥಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಡಯ್ಯು ವಿಮಾನ ನಿಲ್ದಾಣವು ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಮುಂಬೈ ವಿಮಾನ ನಿಲ್ದಾಣದಿಂದ ಸಂಪರ್ಕ ಸಾಧಿಸುತ್ತದೆ. ಡಯ್ಯುನಿಂದ ಕ್ಯಾಬ್, ಇತರ ಸಾರಿಗೆಯ ಮುಲಕ ಸುಲಭವಾಗಿ ಸೇರಿಕೊಳ್ಳಬಹುದು.

ರೈಲ್ವೆ ಮಾರ್ಗದ ಮೂಲಕ


ಸೋಮನಾಥಕ್ಕೆ ಸುಮಾರು 5 ಕಿ.ಮೀ ದೂರದಲ್ಲಿರುವ ವೆರವಾಲ್ ಸಮೀಪದಲ್ಲಿ ರೈಲ್ವೆ ನಿಲ್ದಾಣವಿದೆ. ವೆರವಾಲ್‍ನಿಂದ ಮುಂಬೈವರೆಗೆ ರೈಲುಗಳು ಸಂಪರ್ಕ ಸಾಧಿಸುತ್ತವೆ. ಮುಂಬೈನಿಂದ ದೇಶದಲ್ಲಿಯೇ ಎಲ್ಲಾ ನಗರಗಳಿಂದ, ಪಟ್ಟಣಗಳಿಂದ ಪ್ರಯಾಣಿಸಬಹುದು.

ರಸ್ತೆ ಮಾರ್ಗದ ಮೂಲಕ


ಸೋಮನಾಥಕ್ಕೆ ರಸ್ತೆ ವ್ಯವಸ್ಥೆ ಚೆನ್ನಾಗಿದೆ. ಡಯ್ಯುನಿಂದ ಮತ್ತು ಸಮೀಪದಲ್ಲಿನ ಇತರ ಪ್ರದೇಶಗಳಿಂದ ಬಸ್ಸುಗಳು ದೊರೆಯುತ್ತವೆ. ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮೂಲಕ ಸುಲಭವಾಗಿ ಸೋಮನಾಥ ದೇವಾಲಯಕ್ಕೆ ಸೇರಿಕೊಳ್ಳಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more