• Follow NativePlanet
Share
» »ಸೋಮನಾಥ ದೇವಾಲಯವನ್ನು 6 ಬಾರಿ ಪುನರ್ ನಿರ್ಮಾಣ ಮಾಡಿದ್ದಾರೆ ನಿಮಗೆ ಗೊತ್ತ?

ಸೋಮನಾಥ ದೇವಾಲಯವನ್ನು 6 ಬಾರಿ ಪುನರ್ ನಿರ್ಮಾಣ ಮಾಡಿದ್ದಾರೆ ನಿಮಗೆ ಗೊತ್ತ?

Written By:

ಸೋಮನಾಥ ದೇವಾಲಯವು ಗುಜರಾತ್ ರಾಜ್ಯದ ಜುನಾಗಡ ಜಿಲ್ಲೆಯ ಪ್ರಭಾಸದಲ್ಲಿದೆ. ಈ ದೇವಾಲಯವು ಅತ್ಯಂತ ಪುರಾತನವಾದುದು ಮತ್ತು ಮಾಹಿಮಾನ್ವಿತೆ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯವು ಮಹಾಶಿವನ ದ್ವಾದಶ ಜ್ಯೋತ್ಯಿರ್ ಲಿಂಗಗಳಲ್ಲಿ ಸೋಮಾನಾಥ ದೇವಾಲಯ ಮೊದಲನೇಯದು. ಇದನ್ನು "ಪ್ರಭಾಸ ತೀರ್ಥ" ಎಂದು ಕೂಡ ಕರೆಯುತ್ತಾರೆ.

ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್ ಲಿಂಗಗಳಲ್ಲಿ 12 ಲಿಂಗಗಳಿವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೆರಾವಲ್‍ನಲ್ಲಿನ ಸೋಮನಾಥ ದೇವಾಲಯ. ಇದು ಪುರಾತನವಾದ ದೇವಾಲಯವಾಗಿರುವುದರಿಂದ ಭಾರತದ ಶಿವಭಕ್ತರೆಲ್ಲಾ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸೋಮನಾಥ ದೇವಾಲಯದ ಬಗ್ಗೆ ಪುರಾಣಗಳಲ್ಲಿಯೂ ಉಲ್ಲೇಖಗಳನ್ನು ಕಾಣಬಹುದಾಗಿದೆ. ಎಷ್ಟೊ ಅದ್ಭುತವಿರುವ ಈ ತೀರ್ಥಕ್ಷೇತ್ರಕ್ಕೆ ಹಲವಾರು ವಿಶೇಷಗಳು ಇವೆ.

ಈ ತೀರ್ಥಕ್ಷೇತ್ರ ಅರೇಬಿಯಾ ಸಮುದ್ರತೀರದಲ್ಲಿದೆ. ಸಮುದ್ರದ ಅಲೆಗಳನ್ನು ತಡೆಯಲು 25 ಅಡಿ ಎತ್ತರದಲ್ಲಿ ಬಂಡೆಗಳ ಕಲ್ಲಿನಿಂದ ದೇವಾಲಯದ ನಿರ್ಮಾಣ ಮಾಡಿದ್ಧಾರೆ. ಗರ್ಭಗುಡಿಯಲ್ಲಿನ ಶಿವಲಿಂಗವು 4 ಅಡಿ ಎತ್ತರದಲ್ಲಿದ್ದಾನೆ.

ಸೋಮನಾಥ ದೇವಾಲಯ

ಸೋಮನಾಥ ದೇವಾಲಯ

ಈ ಸೋಮನಾಥ ದೇವಾಲಯ ಒಂದಲ್ಲ, ಎರಡಲ್ಲ 6 ಬಾರಿ ಪುನರ್ ನಿರ್ಮಾಣ ಮಾಡಿದ್ದಾರೆ.

PC:BeautifulEyes

ಮೊದಲ ಬಾರಿ

ಮೊದಲ ಬಾರಿ

ಅರಬ್‍ನ ರಾಜಪ್ರತಿನಿಧಿಯಾದ ಜನಯಾದ್ ಈ ದೇವಾಲಯವನ್ನು ಧ್ವಂಸ ಮಾಡಲು ಸೈನ್ಯವನ್ನು ಕಳುಹಿಸಿದನು. ಕ್ರಿ.ಶ 815 ರಲ್ಲಿ ಗುರ್ಜರ್ ಪ್ರತಿಹಾರಾ ರಾಜನಾದ 2 ನೇ ನಾಗಬಟಾ ಈ ದೇವಾಲಯವನ್ನು 3 ನೇ ಸಾರಿ ಕೆಂಪು ಮರಳು ಬಳಸಿ ಬೃಹತ್ ಆಗಿ ಈ ದೇವಾಲಯವನ್ನು ನಿರ್ಮಾಣ ಮಾಡಿದನು.


PC:D.H. Sykes

ಗಜಿನಿ ಮಹಮ್ಮದ್

ಗಜಿನಿ ಮಹಮ್ಮದ್

ಮಾಲ್ವಾ ರಾಜನಾದ ಭೋಜಿ ಮತ್ತು ಚೋಳಂಕಿ ರಾಜನಾದ ಭೀಮದೇವನ ಕೈನಲ್ಲಿ ಕ್ರಿ.ಶ 1026 ರಿಂದ 1042 ರ ಮಧ್ಯ ಕಾಲದಲ್ಲಿ ಈ ದೇವಾಲಯ ಪುನರ್ ನಿರ್ಮಾಣ ನಡೆಯಿತು. ಕುಮಾರ್ ಪಾಲ್‍ನು ಕ್ರಿ.ಶ 1143 ರಿಂದ 1172ರ ಮಧ್ಯೆ ಪುನರ್ ನಿರ್ಮಾಣ ಮಾಡಿದರು.

PC:Narendra Modi

ಅಲ್ಲಾವುದ್ದೀನ್ ಖಿಲ್ಜಿ

ಅಲ್ಲಾವುದ್ದೀನ್ ಖಿಲ್ಜಿ

ಕ್ರಿ.ಶ 1296ರಲ್ಲಿ ಈ ದೇವಾಲಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಸೈನ್ಯರ ಕೈಯಲ್ಲಿ ಮತ್ತೇ ನಾಶವಾಯಿತು. ಕ್ರಿ.ಶ 1308ರಲ್ಲಿ ಸೌರಾಷ್ಟ್ರ ರಾಜನಾದ ವಂಶಿಕನಾದ ಮಹಿಪಾದಾವನ ಕೈಯಲ್ಲಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಯಿತು. ಕ್ರಿ.ಶ 1326-1351ರ ಮಧ್ಯೆ ಈ ದೇವಾಲಯಯಲ್ಲಿ ಲಿಂಗ ಪ್ರತಿಷ್ಟಾಪನೆ ನಡೆಯಿತು.

PC: Dore chakravart

ಗುಜರಾತ್ ಸುಲ್ತಾನ್

ಗುಜರಾತ್ ಸುಲ್ತಾನ್

1701ದಲ್ಲಿ ಈ ದೇವಾಲಯ ಮತ್ತೊಂದು ಬಾರಿ ನಾಶ ಮಾಡಿದರು. ಕ್ರಿ.ಶ 1701 ರಲ್ಲಿ ಔರಂಗಜೇಬು ಕೈಯಲ್ಲಿ ಆತನ ಮತ್ತೊಂದು ಮಗ ಈ ದೇವಾಲಯವನ್ನು ಧ್ವಂಸ ಮಾಡಿದನು. ಈ ದೇವಾಲಯವನ್ನು ಧ್ವಂಸ ಮಾಡಿದ ಕಲ್ಲನ್ನು ಉಪಯೋಗಿಸಿ ಔರಂಗಜೇಬು ಮಸೀದಿಯನ್ನು ನಿರ್ಮಾಣ ಮಾಡಿದನು.


PC:Samadolfo

ಕ್ರಿ.ಶ 1783ರಲ್ಲಿ

ಕ್ರಿ.ಶ 1783ರಲ್ಲಿ

ನಂತರ ಕ್ರಿ.ಶ 1783ರಲ್ಲಿ ಪುನಾ ಪೇಶ್ವೆ, ನಾಗಪೂರಕ್ಕೆ ಸೇರಿದ "ಭೋನ್ಸ್‍ಲ್, ಖಲಾಪೂರಕ್ಕೆ ಸೇರಿದ ಛತ್ರಪತಿ, ಇಂಡೋರಕ್ಕೆ ಸೇರಿದ ರಾಣಿ ಅಹಲುಬಾಯಿ, ಗ್ವಾಲಿಯಕ್ಕೆ ಸೇರಿದ ಶ್ರೀಮಂತ ಸಮಷ್ಟಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಈ ಮೊದಲೇ ದೇವಾಲಯವನ್ನು ನಾಶ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದ ಸಮೀಪದಲ್ಲಿಯೇ ದೇವಾಲಯವನ್ನು ನಿರ್ಮಾಣ ಮಾಡಲಾಯಿತು.


PC:Bkjit

ಔರಂಗಜೇಬು

ಔರಂಗಜೇಬು

ಗಜನಿ ಮಹಮ್ಮದ್ ಈ ಪ್ರದೇಶದ ಮೇಲೆ ದಾಳಿ ಮಾಡಿ ದೇವಾಲಯವನ್ನು ಧ್ವಂಸಮಾಡಿದನು. ಕೊನೆಯದಾಗಿ ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯವು ನೆಲಸಮವಾಯಿತು.


PC:Admishra

 ಸರ್ದಾರ್ ವಲ್ಲಭಾಯ್ ಪಟೇಲ್

ಸರ್ದಾರ್ ವಲ್ಲಭಾಯ್ ಪಟೇಲ್

ಭಾರತದ ಸ್ವಾತಂತ್ರ್ಯದ ನಂತರ ಅಂದರೆ 1950ರಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಈ ದೇವಾಲಯವನ್ನು ಮತ್ತೊಮ್ಮೆ ಪುನರ್ ನಿರ್ಮಾಣ ಮಾಡಿದನು. ಇಲ್ಲಿನ ಸ್ತೂಪಗಳು, ದೇವತಾ ಮೂರ್ತಿಗಳನ್ನು ಒಂದು ಮ್ಯೂಸಿಯಂನಲ್ಲಿ ಸಂಗ್ರಹಸಿ ಇಟ್ಟರು. ಮಹಾ ಶಿವರಾತ್ರಿಯ ದಿನದಂದು ಅತ್ಯಂತ ವೈಭವವಾಗಿ ಉತ್ಸವ ನಡೆಯುತ್ತದೆ.

PC:WIKIPEDIA

ವಿಮಾನ ಮಾರ್ಗ

ವಿಮಾನ ಮಾರ್ಗ

ಸೋಮನಾಥ ದೇವಾಲಯಕ್ಕೆ ತೆರಳಲು ಸುಮಾರು 90 ಕಿ.ಮೀ ದೂರದಲ್ಲಿರುವ ಡಯ್ಯು ವಿಮಾನ ನಿಲ್ದಾಣವು ಸಮೀಪವಾದುದಾಗಿದೆ. ಈ ವಿಮಾನ ನಿಲ್ದಾನವು ಮುಂಬೈ ವಿಮಾನ ನಿಲ್ದಾಣದ ಮಾರ್ಗವಾಗಿ ಪ್ರಯಾಣಿಸುತ್ತದೆ. ಡಯ್ಯನಿಂದ ಕ್ಯಾಬ್‍ನಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.

ರೈಲು ಮಾರ್ಗ

ರೈಲು ಮಾರ್ಗ

ಸೋಮನಾಥ ದೇವಾಲಯಕ್ಕೆ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ವೆರವಾಲ್ ರೈಲ್ವೆ ನಿಲ್ದಾಣವಾಗಿದೆ. ಈ ನಿಲ್ದಾಣವು ಸೋಮನಾಥ ದೇವಾಲಯಕ್ಕೆ ಕೇವಲ 5 ಕಿ.ಮೀ ದೂರದಲ್ಲಿದೆ. ವೆರವಾಲ್‍ನಿಂದ ಮುಂಬೈವರೆಗೆ ರೈಲು ಸಂಚಾರವಿದೆ. ಮುಂಬೈನಿಂದ ಎಲ್ಲಾ ದೇಶದ ಪ್ರಧಾನ ನಗರಗಳನ್ನು ಮಾರ್ಗ ಮಧ್ಯೆಯಲ್ಲಿ ಕಾಣಬಹುದಾಗಿದೆ.

ರಸ್ತೆ ಮಾರ್ಗವಾಗಿ

ರಸ್ತೆ ಮಾರ್ಗವಾಗಿ

ಸೋಮನಾಥಕ್ಕೆ ರಸ್ತೆಯ ವ್ಯವಸ್ಥೆ ಚೆನ್ನಾಗಿ ಇದೆ. ಡಯ್ಯುನಿಂದ ಮತ್ತು ಸಮೀಪದ ಇತರ ಪ್ರದೇಶದಿಂದ ಸಾರಿಗೆ ವ್ಯವಸ್ಥೆ ಇದೆ. ಸರ್ಕಾರಿ ಅಥವಾ ಖಾಸಗಿ ಬಸ್ಸುಗಳ ಮುಖಾಂತರ ಸೋಮನಾಥ ದೇವಾಲಯಕ್ಕೆ ಸೇರಿಕೊಳ್ಳಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ