Search
  • Follow NativePlanet
Share
» »ನಿಮಗೆ ಗೊತ್ತೆ? ಎಷ್ಟು ಪ್ರಾಚೀನ ದೇವಾಲಯಗಳಿವು!

ನಿಮಗೆ ಗೊತ್ತೆ? ಎಷ್ಟು ಪ್ರಾಚೀನ ದೇವಾಲಯಗಳಿವು!

By Vijay

ಇಂದಿಗೂ ಭಾರತದಲ್ಲಿ ಅತ್ಯಂತ ಪುರಾತನವಾದ ದೇವಾಲಯ ಯಾವುದೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೆ ನಿಖರವಾದ ಐತಿಹಾಸಿಕ ದಾಖಲೆಗಳಾಗಲಿ ಅಥವಾ ಪುರಾವೆಗಳಾಗಲಿ ಲಭ್ಯವಿಲ್ಲ. ಆದರೂ ವಿವಿಧ ಕಾಲದಲ್ಲಿ ದೊರೆತ ಹಲವಾರು ಶಾಸನಗಳ ಮೂಲಕ ದೇವಾಲಯಗಳ ಪುರಾತನತೆಯನ್ನು ತಿಳಿಯಬಹುದಾಗಿದೆ.

ಪ್ರಸ್ತುತ ಲೇಖನದಲ್ಲಿ ಭಾರತದಲ್ಲೆ ಕಂಡುಬರುವ ಅತ್ಯಂತ ಪುರಾತನವೆನ್ನಲಾಗುವ ಕೆಲವು ಆಯ್ದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಕೆಲವು ತಜ್ಞ ಇತಿಹಾಸಕಾರರ ಪ್ರಕಾರ, ಸುಮಾರು 2000 ವರ್ಷಗಳ ಮುಂಚೆ ದೇವಾಲಯಗಳ ನಿರ್ಮಾಣ ಆರಂಭವಾಯಿತೆಂದು ಹೇಳಲಾಗಿದೆ. ಇದಕ್ಕೂ ಮುಂಚೆ ಹಿಂದುಗಳು ಗುಹೆಗಳನ್ನೆ ದೇವರ ಆರಾಧನಾ ಸ್ಥಳವನ್ನಾಗಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ.

ಈ ಲೇಖನದಲ್ಲಿ ತಿಳಿಸಲಾಗಿರುವ ದೇವಾಲಯಗಳ ಕುರಿತು ನಿಮ್ಮಲ್ಲಿ ಬಹುತೇಕರು ತಿಳಿದಿರಬಹುದು ಅಥವಾ ಕೆಲವರು ಭೇಟಿ ನೀಡಿರಲೂಬಹುದು. ಆದರೆ ಒಂದೊಮ್ಮೆ ಯೋಚಿಸಿ ನೋಡಿ ನೀವು ಈ ದೇವಾಲಯದ ಎದುರು ನಿಂತಾಗ ಅದು ಎಷ್ಟೊ ಸಾವಿರ ವರ್ಷಗಳಷ್ಟು ಪುರಾತನವಾದುದೆಂದು! ಕಲ್ಪಿಸಿಕೊಳ್ಳಿ ಆ ದೇವಾಲಯ ನಿರ್ಮಾಣವಾಗುತ್ತಿದ್ದಾಗ ನಮ್ಮ ಮುತ್ತಜ್ಜರ ಮುತ್ತಜ್ಜರೂ ಕೂಡ ಹುಟ್ಟಿರಲಿಲ್ಲವೆಂದು.

ಭಾರತದಲ್ಲಿರುವ ಅತಿ ಶ್ರೀಮಂತ ದೇವಾಲಯಗಳು

ಇಂದಿನ ಆಧುನಿಕ ಯುಗದಲ್ಲಿ ಅತ್ಯಾಧುನಿಕ ನಿರ್ಮಾಣ ಉಪಕರಣಗಳನ್ನು ಬಳಸಿಯೂ ಸಹ ನಿರ್ಮಿಸಿದ ರಚನೆಗಳಿಗೆ ನೂರು ವರ್ಷಗಳ ಖಾತರಿಯನ್ನೂ ನೀಡಲು ಕಷ್ಟ, ಅಂತಹ ಒಂದು ಸಂದರ್ಭದಲ್ಲಿ ಕಾಲಕ್ಕೆ ಸೆಡ್ಡು ಹೊಡೆದು ನಿಂತು ಇಂದಿಗೂ ಭದ್ರವಾಗಿ ತಳವೂರಿರುವ ಸಾವಿರ ಸಾವಿರ ವರ್ಷಗಳ ಈ ದೇವಾಲಯಗಳು ನಿಜಕ್ಕೂ ಅದ್ಭುತ ಹಾಗೂ ನಾವು ಎಂದಿಗೂ ಹೆಮ್ಮೆ ಪಡಬೇಕಾದ ರಚನೆಗಳು.

ಸಾಮಾನ್ಯವಾಗಿ ಹಲವು ವೈದಿಕ ಗ್ರಂಥಗಳಲ್ಲಿ ದೇವಾಲಯ ರಚನೆಗಳ ಕುರಿತು, ಇಂದ್ರ, ಅಗ್ನಿ ಮುಂತಾದ ದೇವ, ದೇವತೆಯರ ಕುರಿತು ಉಲ್ಲೇಖಿಸಲಾಗಿದ್ದು ಶಿಲ್ಪಗಳ ರೂಪದಲ್ಲಿ ಆರಾಧಿಸುವುದರ ಬಗ್ಗೆ ಹೇಳಲಾಗಿದೆ. ಧನಪತಿ, ರಾಮ, ಕೇಶವ ದೇವರುಗಳ, ದೇವಾಲಯ ವಿನ್ಯಾಸದ ಕುರಿತು ಹಲವು ಪೌರಾಣಿಕ ಗ್ರಂಥಗಳಲ್ಲಿ ವಿವರಿಸಲಾಗಿದೆಯಾದರೂ ಸುಮಾರು ನಾಲ್ಕನೇಯ ಶತಮಾನದ ಸಂದರ್ಭದಲ್ಲಿ ಗುಪ್ತರ ಆಳ್ವಿಕೆಯಾ ಕಾಲದಲ್ಲಿ ದೇವಾಲಯಗಳು ಸಾಕಷ್ಟು ಸುಧಾರಿತ ರೂಪಗಳನ್ನು ಪಡೆದವು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಲಾಡ್ ಖಾನ್ ದೇವಾಲಯ : ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿರುವ ಪ್ರಖ್ಯಾತ ಐತಿಹಾಸಿಕ ತಾಣವಾದ ಐಹೊಳೆಯ ಕೆಲವು ದೇವಾಲಯ ರಚನೆಗಳನ್ನು ಭಾರತದ ಅತ್ಯಂತ ಪುರಾತನ ರಚನೆಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಇಲ್ಲಿ ರುವ ಲಾಡ್ ಖಾನ್ ದೇವಾಲಯವು ಸುಮಾರು ಐದನೇಯ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಿತವಾದ ದೇವಾಲಯವೆನ್ನಲಾಗಿದೆ.

ಚಿತ್ರಕೃಪೆ: Mukul Banerjee

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಲಾಡ್ ಖಾನ್ ಎಂಬ ವ್ಯಕ್ತಿ ಕೆಲ ಕಾಲ ಇದನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದರ ಪರಿಣಾಮವಾಗಿ ಇದಕ್ಕೆ ಲಾಡ್ ಖಾನ್ ದೇವಾಲಯ ಎಂಬ ಹೆಸರು ಬಂದಿದೆ. ಮೂಲತಃ ಇದು ಶಿವನಿಗೆ ಮುಡಿಪಾದ ದೇವಾಲಯವಾಗಿದ್ದು ಐಹೊಳೆಯ ಅತ್ಯಂತ ಪುರಾತನ ದೇವಾಲಯವಾಗಿದೆ.

ಚಿತ್ರಕೃಪೆ: Mukul Banerjee

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಇನ್ನೂ ಲಾಡ್ ಖಾನ್ ದೇವಾಲಯದ ಉತ್ತರಕ್ಕಿರುವ ದುರ್ಗಾ ದೇವಿಯ ದೇವಾಲಯವನ್ನೂ ಸಹ ಅತ್ಯಂತ ಪುರಾತನ ರಚನೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣದ ಭಾಗವಾಗಿರುವ ಈ ದೇವಾಲಯವು ಸುಮಾರು ಏಳರಿಂದ ಎಂಟನೇಯ ಶತಮಾನದ ಮಧ್ಯದಲ್ಲಿ ನಿರ್ಮಿತವಾದ ದೇವಿಯ ದೇವಾಲಯವಾಗಿದೆ.

ಚಿತ್ರಕೃಪೆ: Mukul Banerjee

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಮುಂಡೇಶ್ವರಿ ದೇವಿ ದೇವಾಲಯ : ಶಿವ ಹಾಗೂ ಶಕ್ತಿ ದೇವಿಗೆ ಮುಡಿಪಾದ ಈ ದೇವಾಲಯವನ್ನು ಭಾರತದ ಅತಿ ಪುರಾತನ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಅಲ್ಲದೆ ಬಿಹಾರ ರಾಜ್ಯದಲ್ಲೆ ಅತ್ಯಂತ ಪುರಾತನ ದೇವಾಲಯವೆನ್ನಲಾಗಿದೆ. ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಜಗತ್ತಿನ ಅತ್ಯಂತ ಪುರಾತನ ದೇವಾಲಯಗಳಲ್ಲೊಂದಾಗಿರುವ ಇದು ಬಿಹಾರ್ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾ ಎಂಬ ಪಟ್ಟಣದಲ್ಲಿದೆ. ಬಿಹಾರ್ ರಿಲಿಜಿಯಸ್ ಟ್ರಸ್ಟ್ ಬೋರ್ಡ್ ಪ್ರಕಾರವಾಗಿ ಈ ದೇವಾಲಯ ಕ್ರಿ.ಶ. 105 ರಲ್ಲಿ ನಿರ್ಮಿತವಾದುದೆನ್ನಲಾಗಿದೆ.

ಚಿತ್ರಕೃಪೆ: Lakshya2509

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಕೈಲಾಶನಾಥ ದೇವಾಲಯ : ಇತಿಹಾಸದ ಪ್ರಕಾರ ಇದು 1200 ವರ್ಷಗಳಷ್ಟು ಪುರಾತನವಾದ ದೇವಾಲಯವಾಗಿದೆ. ಮಹಾರಾಷ್ಟ್ರ ಜಿಲ್ಲೆಯ ಔರಂಗಾಬಾದ್ ನಗರದಿಂದ 29 ಕಿಲೋಮೀಟರ್ ದೂರದಲ್ಲಿ ವಿಶ್ವ ವಿಖ್ಯಾತ ವಿಹಾರತಾಣ ಎಲ್ಲೋರ ಗುಹಾ ಸಮೂಹಗಳಲ್ಲಿ ಶಿವನಿಗೆ ಮುಡಿಪಾದ ಒಂದೆ ಬಂಡೆಯಲ್ಲಿ ಕೆತ್ತಲಾದ ಅತ್ಯದ್ಭುತ ದೇವಾಲಯ ಇದಾಗಿದೆ.

ಚಿತ್ರಕೃಪೆ: Y.Shishido

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಕೋನಾರ್ಕ್ ಸೂರ್ಯ ದೇವಾಲಯ : ಒಡಿಶಾ ರಾಜ್ಯದ ಕೋನಾರ್ಕ್ ನಲ್ಲಿರುವ ಸೂರ್ಯ ದೇವಾಲಯವು ಭಾರತದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿದೆ. ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಭಾರತದ ಹಲವು ಸ್ಥಳಗಳ ಪೈಕಿ ಕೋನಾರ್ಕ್ ಸೂರ್ಯ ದೇವಾಲಯವೂ ಒಂದಾಗಿದೆ. ಆದ್ದರಿಂದ ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಈ ದೇವಸ್ಥಾನವು ಹೆಚ್ಚಿನ ಮಹತ್ವ ಪಡೆದಿದೆ ಎಂದು ಹೇಳಬಹುದಾಗಿದೆ. 13 ನೇಯ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು ಮನಸೆಳೆವ ಅತ್ಯಾಕರ್ಷಕ ಕೆತ್ತನೆಗಳಿಂದ ಕೂಡಿದೆ.

ಚಿತ್ರಕೃಪೆ: Achilli Family | Journeys

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಲಿಂಗರಾಜ ದೇವಾಲಯ : ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರದಲ್ಲಿರುವ ಲಿಂಗರಾಜ ದೇವಾಲಯವು ನಗರದ ಅತ್ಯಂತ ಪ್ರಮುಖ ಹಾಗೂ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿದೆ. ಕೆಲವು ಇತಿಹಾಸಕಾರರ ಪ್ರಕಾರ, ಆರನೇಯ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯ ಇದಾಗಿದ್ದು ಇಲ್ಲಿ ಶಿವ ಹಾಗೂ ವಿಷ್ಣುವಿನ ಅವತಾರಗಳ ಏಕರೂಪವಾದ ಹರಿಹರನನ್ನು ಪೂಜಿಸಲಾಗುತ್ತದೆ.

ಚಿತ್ರಕೃಪೆ: I, G-u-t

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಖಂಡರಿಯಾ ಮಹಾದೇವ ದೇವಾಲಯ: ಮಧ್ಯಪ್ರದೇಶದ ಅತ್ಯಂತ ಆಕರ್ಷಕ ಪ್ರವಾಸಿ ಕೇಂದ್ರವಾದ ಖಜುರಾಹೊದ ಸ್ಮಾರಕ ಸಂಕೀರ್ಣದಲ್ಲಿರುವ ಖಂಡರಿಯಾ ಮಹಾದೇವನ ದೇವಾಲಯವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ದಾಖಲೆಗಳ ಪ್ರಕಾರ, ಚಾಂಡೇಲ ದೊರೆ ವಿದ್ಯಾಧರನಿಂದ ಹನ್ನೊಂದನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: China Crisis

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಮೊಧೇರಾ ಸೂರ್ಯ ದೇವಾಲಯ : ಸೂರ್ಯ ದೇವರಿಗೆ ಮುಡಿಪಾದ ಒಂದು ಸುಂದರ ಸೂರ್ಯ ದೇವಾಲಯವು ಗುಜರಾತ್ ರಾಜ್ಯದಲ್ಲಿದೆ. ಗುಜರಾತಿನ ಮೊಧೇರಾ ಎಂಬಲ್ಲಿದೆ ಈ ಸೂರ್ಯ ದೇಗುಲ. ಸೋಲಂಕಿ ರಾಜವಂಶದ ಭೀಮದೇವ ರಾಜನಿಂದ ಈ ದೇಗುಲವು 1026 ರಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯವು ಭಾರತದಲ್ಲಿರುವ ಅತಿ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Sudhamshu Hebbar

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಶ್ರೀಕಾಳಹಸ್ತಿ ದೇವಾಲಯ : ಸ್ವರ್ಣಮುಖಿ ನದಿ ತಟದಲ್ಲಿ ನೆಲೆಸಿರುವ ಶಿವನಿಗೆ ಮುಡಿಪಾದ ಆಂಧ್ರಪ್ರದೇಶ ರಾಜ್ಯದ ಶ್ರೀಕಾಳಹಸ್ತಿ ದೇವಾಲಯವು ಅತ್ಯಂತ ಪುರಾತನ ದೇವಾಲಯಗಳಲ್ಲೊಂದಾಗಿದ್ದು ಸುಮಾರು ಐದನೇಯ ಶತಮಾನದಲ್ಲಿ ನಿರ್ಮಿತವಾದ ದೇವಾಯವೆನ್ನಲಾಗಿದೆ. ತಿರುಪತಿಯಿಂದ ಸುಮಾರು 35 ಕಿ.ಮೀ ದೂರವಿರುವ ಈ ಸ್ಥಳಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Krishna Kumar Subramanian

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ತಿರುಮಲ ವೆಂಕಟೇಶ್ವರ ದೇವಾಲಯ : ಆಂಧ್ರದಲ್ಲಿರುವ ವಿಶ್ವವಿಖ್ಯಾತ ತಿರುಮಲದ ಶ್ರೀ ವೆಂಕಟೇಶ್ವರನ ದೇವಾಲಯವು ಭಾರತದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇತಿಹಾಸದ ಪ್ರಕಾರ, ಕ್ರಿ.ಶ. 300 ರಲ್ಲಿ ಸ್ಥಾಪಿಸಲಾದೆ ವೆಂಕಟೇಶ್ವರನ ಸನ್ನಿಧಿ ಇದಾಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Raji.srinivas

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಚೆನ್ನಕೇಶವ ದೇವಾಲಯ : ಕರ್ನಾಟಕದ ಹಾಸನ ಜಿಲ್ಲೆಯ ಐತಿಹಾಸಿಕ ಪ್ರವಾಸಿ ಅವಳಿಗಳಾದ ಬೇಲೂರು-ಹಳೆಬೀಡುವಿನ ಬೇಲೂರು ಎಂಬಲ್ಲಿರುವ ವಿಷ್ಣುವಿಗೆ ಮುಡಿಪಾದ ಚೆನ್ನಕೇಶ್ವನ ದೇವಾಲಯ ಇದಾಗಿದೆ. ಯಗಚಿ ನದಿ ತಟದಲ್ಲಿರುವ ಈ ದೇವಾಲಯವು ಹೊಯ್ಸಳ ದೊರೆ ವಿಷ್ಣುವರ್ಧನನಿಂದ 1117 ರಲ್ಲಿ ನಿರ್ಮಿಸಲಾದ ಅತ್ಯಾಕರ್ಷಕ ಶಿಲ್ಪಕಲೆಯುಳ್ಳ ಸುಂದರ ದೇವಾಲಯವಾಗಿದೆ.

ಚಿತ್ರಕೃಪೆ: Dineshkannambadi

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ದಿಲ್ವಾರಾ ದೇವಾಲಯಗಳು: ರಾಜಸ್ಥಾನ ರಾಜ್ಯದ ಏಕೈಕ ಗಿರಿಧಾಮ ಪ್ರದೇಶವಾದ ಮೌಂಟ್ ಅಬುವಿನಿಂದ ಎರಡುವರೆ ಕಿ.ಮೀ ದೂರದಲ್ಲಿರುವ ದಿಲ್ವಾರಾ ಎಂಬಲ್ಲಿ ಈ ಜೈನ ದೇವಾಲಯಗಳನ್ನು ಕಾಣಬಹುದಾಗಿದೆ. ಹನ್ನೊಂದರಿಂದ ಹದಿಮೂರನೇಯ ಶತಮಾನದ ಮಧ್ಯದಲ್ಲಿ ನಿರ್ಮಿತವಾದ ಅದ್ಭುತ ಶಿಲ್ಪಕಲೆಯ ದೇವಾಲಯಗಳು ಇವಾಗಿವೆ.

ಚಿತ್ರಕೃಪೆ: Malaiya

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ವರದರಾಜ ಪೆರುಮಾಳ ದೇವಾಲಯ : ತಮಿಳುನಾಡಿನ ಕಂಚೀಪುರಂನಲ್ಲಿರುವ ವರದರಾಜ ಪೆರುಮಾಳ್ ದೇವಾಲಯವು ವಿಷ್ಣುವಿಗೆ ಮುಡಿಪಾದ ದೇವಾಲಯವಾಗಿದ್ದು ಪಲ್ಲವರಿಂದ ಸುಮಾರು ಕ್ರಿ.ಶ. 1053 ರಲ್ಲಿ ನಿರ್ಮಿತವಾದ ದೇವಾಲಯವಾಗಿದೆ. 108 ದಿವ್ಯ ದೇಸಂನಲ್ಲಿ ಒಂದಾಗಿರುವ ಈ ದೇವಾಲಯಕ್ಕೆ ವಿಷ್ಣು ಸ್ವತಃ ಭೇಟಿ ನೀಡಿದ್ದನೆಂಬ ಪ್ರತೀತಿಯಿದೆ.

ಚಿತ್ರಕೃಪೆ: Ssriram mt

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಆದಿ ಕುಂಬೇಶ್ವರ: ತಮಿಳುನಾಡಿನ ದೇವಾಲಯಗಳ ಪಟ್ಟಣ ಎಂದೆ ಖ್ಯಾತಿ ಪಡೆದ ಕುಂಬಕೋಣಂನಲ್ಲಿರುವ ಶಿವ ಹಾಗೂ ಅವನ ಮಡದಿಯಾದ ಮಂಗಳಾಂಬಿಕೆಗೆ ಮುಡಿಪಾದ ಆದಿ ಕುಂಬೇಶ್ವರ ದೇವಾಲಯವು ಏಳನೇಯ ಶತಮಾನದಲ್ಲಿ ನಿರ್ಮಿತವಾದ ಭಾರತದಲ್ಲಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

ಚಿತ್ರಕೃಪೆ: Arian Zwegers

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ತುಂಗನಾಥ : ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯ ಚಂದ್ರಪರ್ವತ ಗಿರಿ ಶಿಖರದಲ್ಲಿ ಪಂಚ ಕೇದಾರಗಳ ಪೈಕಿ ಒಂದಾದ ಪವಿತ್ರ ತುಂಗನಾಥವು ನೆಲೆಸಿದೆ. ತುಂಗನಾಥದಲ್ಲಿರುವ ಶಿವನು ಜಗತ್ತಿನಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ಶಿವನ ಸನ್ನಿಧಿ ಎಂಬ ಕೀರ್ತಿಗೆ ಪಾತ್ರವಾಗಿರುವುದೂ ಅಲ್ಲದೆ ಈ ದೇವಾಲಯವು ಸಾವಿರ ವರ್ಷಗಳಷ್ಟು ಪುರಾತನವಾಗಿದೆ.

ಚಿತ್ರಕೃಪೆ: Varun Shiv Kapur

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಬೃಹದೇಶ್ವರ ದೇವಾಲಯ : ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಹಿಂದೂ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಪೈಕಿ ಒಂದಾಗಿ ನಿಲ್ಲುತ್ತದೆ ತಂಜಾವೂರಿನ ಬೃಹದೇಶ್ವರ ದೇವಸ್ಥಾನ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಈ ದೇವಸ್ಥಾನವು ಇರುವುದು ದೇವಾಲಯಗಳ ರಾಜ್ಯ ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿ. ಚೋಳ ಸಾಮ್ರಾಜ್ಯದ ದೊರೆ ಒಂದನೇಯ ರಾಜ ರಾಜ ಚೋಳನಿಂದ 1010 ರಲ್ಲಿ ನಿರ್ಮಿಸಲಾದ ಈ ದೇವಾಲಯ 2010 ಕ್ಕೆ ತನ್ನ ಸಾವಿರ ವರ್ಷಗಳನ್ನು ಪೂರ್ಣಗೊಳಿಸಿದೆ.

ಚಿತ್ರಕೃಪೆ: Thamizhpparithi Maari

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ಜಗತ್ಪಿತ ಬ್ರಹ್ಮ ಮಂದಿರ : ಭಾರತದಲ್ಲಿ ಜಗತ್ಪಿತ ಬ್ರಹ್ಮನಿಗೆಂದೆ ಮುಡಿಪಾದ ದೇವಾಲಯಗಳಿರುವುದೆ ಅಪರೂಪ. ಅದರಲ್ಲೂ ಇರುವ ಕೆಲವೆ ಕೆಲವು ವಿರಳವಾದ ದೇವಸ್ಥಾನಗಳ ಪೈಕಿ ರಾಜಸ್ಥಾನ ರಾಜ್ಯದ ಪುಷ್ಕರ್ ನಲ್ಲಿರುವ ಬ್ರಹ್ಮನ ದೇವಸ್ಥಾನ ದೇಶದಲ್ಲೆ ಹೆಚ್ಚು ಜನಪ್ರೀಯತೆಗಳಿಸಿರುವ ದೇವಸ್ಥಾನವಾಗಿದೆ. ಪವಿತ್ರವಾದ ಪುಷ್ಕರ್ ಸರೋವರದ ತಟದಲ್ಲಿ ನೆಲೆಸಿರುವ ಈ ದೇವಸ್ಥಾನವು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ದೇವಾಲಯವೆಂದು ನಂಬಲಾಗಿದೆ.

ಚಿತ್ರಕೃಪೆ: Rashmi.parab

ಅತ್ಯಂತ ಪುರಾತನ ದೇವಾಲಯಗಳು:

ಅತ್ಯಂತ ಪುರಾತನ ದೇವಾಲಯಗಳು:

ತಿರುನೆಲ್ಲಿ ಮಹಾವಿಷ್ಣು ದೇವಾಲಯ: ಕೇರಳದ ವಯನಾಡ್ ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಬಳಿಯಿರುವ ತಿರುನೆಲ್ಲಿ ಎಂಬಲ್ಲಿರುವ ವಿಷ್ಣುವಿಗೆ ಮುಡಿಪಾದ ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯ ಎನ್ನಲಾಗಿದೆ.

ಚಿತ್ರಕೃಪೆ: Augustus Binu

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more