» »ಗೋವಾದ ಬಗ್ಗೆ ನಿಮಗೆ ತಿಳಿಯದ ಕೆಲವು ಶಾಕಿಂಗ್ ವಿಷಯಗಳು

ಗೋವಾದ ಬಗ್ಗೆ ನಿಮಗೆ ತಿಳಿಯದ ಕೆಲವು ಶಾಕಿಂಗ್ ವಿಷಯಗಳು

Written By:

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿನ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ. ದೇಶ ವಿದೇಶಗಳಿಂದಲೂ ಹೆಚ್ಚಾಗಿ ಗೋವಾಗೆ ಭೇಟಿ ನೀಡುತ್ತಾರೆ. ಅದರಲ್ಲೂ ಹಾಲಿವುಡ್‍ನಿಂದ ಕಾಲಿವುಡ್‍ವರೆವಿಗೂ ಹಲವು ಸಿನಿಮಾ ನಟ ನಟಿಯರು ಭೇಟಿ ನೀಡುತ್ತಿರುತ್ತಾರೆ. ಗೋವಾದ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಗೋವಾದ ರಾಜಧಾನಿ ಪಣಜಿ. ಈ ಗೋವಾದಲ್ಲಿನ ಅತ್ಯಂತ ದೊಡ್ಡದಾದ ನಗರವೆಂದರೆ ಅದು ವಾಸ್ಕೋಡಿಗಾಮ.

ಗೋವಾ ಭಾರತದ 25ನೇ ಅತ್ಯಂತ ಚಿಕ್ಕ ರಾಜ್ಯವಾಗಿದೆ. ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕೊಂಕಣಿ ಹಾಗೂ ಕನ್ನಡ ಭಾಷೆಯನ್ನು ಮಾತಾನಾಡುತ್ತಾರೆ. ಹಾಗೆಯೇ ಕೊಂಕಣಿ ತೀರ ಎಂದು ಸಹ ಕರೆಯುತ್ತಾರೆ. ಉತ್ತರ ದಿಕ್ಕಿಗೆ ಮಹಾರಾಷ್ಟ್ರ, ದಕ್ಷಿಣ ದಿಕ್ಕಿಗೆ ಕರ್ನಾಟಕ ರಾಜ್ಯವಿದೆ. ಆದರೆ ಗೋವಾದಲ್ಲಿ ನಿಮಗೆ ತಿಳಿಯದ ಕೆಲವು ಸಂಗತಿಗಳಿವೆ. ಅವುಗಳೆಂದರೆ

ಪ್ರಸ್ತುತ ಲೇಖನದಲ್ಲಿ ಗೋವಾದ ಬಗ್ಗೆ ಕೆಲವು ಶಾಕಿಂಗ್ ವಿಷಯಗಳನ್ನು ತಿಳಿದುಕೊಳ್ಳಿ.

 ಗೋವಾ

ಗೋವಾ

ಗೋವಾಗೆ ಎಂಜಾಯ್ ಮಾಡಲು ಹಲವಾರು ಪ್ರವಾಸಿಗರು ಹೋಗುತ್ತಾರೆ. ಆದರೆ ಕೆಲವರ ಪ್ರಕಾರ ಭಾರತದ ನಿವಾಸಿಗಳಿಗೆ ಅಷ್ಟಾಗಿ ಎಂಜಾಯ್ ಗೋವಾದಲ್ಲಿ ದೊರಕುವುದಿಲ್ಲ.


PC:YOUTUBE

ಟ್ಯೂರಿಸ್ಟ್

ಟ್ಯೂರಿಸ್ಟ್

ಗೋವಾದಲ್ಲಿ ಎಂಜಾಯ್ ಮಾಡಲು ಹೆಚ್ಚಾಗಿ ವಿದೇಶಿಯರು ಬರುತ್ತಾರೆ. ಇಲ್ಲಿ ವಿದೇಶಿಯರಿಗೆಂದೇ ಪ್ರತ್ಯೇಕವಾದ ಸ್ಥಳಗಳಿವೆ. ಹಾಗಾಗಿ ಹಲವಾರು ದೇಶಗಳಿಂದ ಗೋವಾ ರಾಜ್ಯಕ್ಕೆ ಭೇಟಿ ನೀಡುತ್ತಿರುತ್ತಾರೆ.

PC:YOUTUBE

ಫಾರಿನ್ಸ್ ಓನ್ಲಿ ಬೀಚ್ ಇನ್ ಗೋವಾ

ಫಾರಿನ್ಸ್ ಓನ್ಲಿ ಬೀಚ್ ಇನ್ ಗೋವಾ

ವಿದೇಶಿಯರು ಹಲವಾರು ದಿನಗಳು ಈ ಸುಂದರವಾದ ಗೋವಾದಲ್ಲಿಯೇ ಕಾಲ ಕಳೆಯುತ್ತಾರೆ. ವಿದೇಶಿಯರ ಸಂಪ್ರದಾಯ ಹೇಗೆ ಇರುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ.

PC:YOUTUBE

ಡ್ರೆಸ್ಸಿಂಗ್

ಡ್ರೆಸ್ಸಿಂಗ್

ವಿದೇಶಿಯರ ಡ್ರೆಸ್ಸಿಂಗ್ ಯಾವ ರೀತಿಯದು ಎಂಬುದು ನಿಮಗೆ ತಿಳಿದಿದೆ. ಅವರ ದೇಶ ಬಿಟ್ಟು ಬೇರೆ ದೇಶಕ್ಕೆ ಬಂದರೆ ಅವರ ಡ್ರೆಸ್ಸಿಂಗ್ ಎನ್ನಷ್ಟು ಘೋರವಾಗಿರುತ್ತದೆ ಎಂಬುದು ನಿಮಗೆ ಗೊತ್ತು.


PC:YOUTUBE

ಭಾರತೀಯರು

ಭಾರತೀಯರು

ಭಾರತೀಯರಲ್ಲಿ ಹಲವಾರು ವಿದೇಶಿಯರ ಡ್ರೆಸ್ಸಿಂಗ್ ನೋಡಲು ಗೋವಾಗೆ ಹೋಗುತ್ತಿರುತ್ತಾರೆ. ಹೀಗಾಗಿ ವಿದೇಶಿಯರಿಗೆ ಬೇಸರವಾಗುವುದರಿಂದ ಗೋವಾದಲ್ಲಿನ ಬೀಚ್‍ನ ಜೊತೆ ಜೊತೆಗೆ ಹೋಟೆಲ್ ಕೂಡ ವಿದೇಶಿಯರಿಗಾಗಿ ಪ್ರತ್ಯೇಕವಾಗಿದೆ. ಇಲ್ಲಿ ಕೇವಲ ವಿದೇಶಿಯರಿಗೆ ಮಾತ್ರ ಪ್ರವೇಶ.

PC:YOUTUBE

ಬೀಚ್ಸ್

ಬೀಚ್ಸ್

ಈ ರೀತಿ ಗೋವಾದಲ್ಲಿನ ವಿದೇಶಿಯರಿಗೆ ಮಾತ್ರ ಅನುಮತಿ ಇರುವ ಕೆಲವು ಬೀಚ್‍ಗಳಿವೆ. ಇಲ್ಲಿ ಭಾರತೀಯರಿಗೆ ಯಾವುದೇ ರೀತಿಯಲ್ಲೂ ಪ್ರವೇಶವನ್ನು ನೀಡುವುದಿಲ್ಲ.


PC:YOUTUBE

ಪ್ರವಾಸಿಗರು

ಪ್ರವಾಸಿಗರು

ಹೋಟೆಲ್‍ಗಳಲ್ಲಿ ಕೆಲಸ ಮಾಡುವವರಿಗೆ ಹಾಗೂ ಆ ಬೀಚ್ಸ್ ಅನ್ನು ನಿರ್ವಹಿಸುವವರಿಗೆ ಬಿಟ್ಟು ಮತ್ಯಾರಿಗೂ ಪ್ರವೇಶವಿಲ್ಲ. ಗೋವಾದ ಕೆಲವು ರೆಸ್ಟೋರೆಂಟ್‍ಗಳು ವಿದೇಶಿಯರಿಗಾಗಿಯೇ ಹೆಚ್ಚು ಪ್ರಶಸ್ಯವನ್ನು ನೀಡುತ್ತಾರೆ. ಯಾವುದೇ ಕಾರಣಕ್ಕೂ ಭಾರತೀಯರಿಗೆ ಅಲ್ಲಿ ಪ್ರವೇಶವಿಲ್ಲ.


PC:YOUTUBE

ಡ್ರೆಸ್ಸ್

ಡ್ರೆಸ್ಸ್

ಭಾರತೀಯರಿಗೆ ಅನುಮತಿ ಇಲ್ಲದೇ ಇರುವುದರಿಂದ ಅವರಿಗೆ ಇಷ್ಟವಾಗುವ ರೀತಿಯ ಡ್ರೆಸ್ಸ್‍ಗಳನ್ನು ಧರಿಸಿ ತಮಗೆ ಇಷ್ಟ ಬಂದ ರೀತಿಯಲ್ಲಿ ಇರುತ್ತಾ ಏಂಜಾಯ್ ಮಾಡುತ್ತಾರೆ.

PC:YOUTUBE

ಕೇಂದ್ರ ಪ್ರದೇಶ

ಕೇಂದ್ರ ಪ್ರದೇಶ

ಗೋವಾ 1957 ಮೇ 30 ರಂದು ಕೇಂದ್ರ ಪ್ರದೇಶ ಎಂದೂ ಹಾಗೂ ಪ್ರತ್ಯೇಕವಾದ ರಾಜ್ಯವೆಂದೂ ಘೋಷಿಸಲಾಯಿತು. ಭಾರತ ದೇಶದ 25 ನೇ ರಾಜ್ಯವಾಗಿ ಮಾಡಿದರು. ಗೋವಾ ಪ್ರವಾಸಿಗರ ಸ್ವರ್ಗವೇ ಆಗಿದೆ.


PC:YOUTUBE

ಕದಂಬ ರಾಜ

ಕದಂಬ ರಾಜ

ಈ ಗೋವಾ ಸಂಪೂರ್ಣವಾಗಿ 121 ಕಿ,ಮೀ ವಿಸ್ತೀರ್ಣದ ಸಮುದ್ರ ತೀರವನ್ನು ಹೊಂದಿದೆ. ಈ ಗೋವಾವನ್ನು ಪೂರ್ವ ಕಾಲದಲ್ಲಿ ಆಳ್ವಿಕೆ ನಡೆಸಿದ ಕದಂಬ ರಾಜ ಇಲ್ಲಿ 300 ಕ್ಕೂ ಅಧಿಕವಾದ ಕೊಳವನ್ನು ನಿರ್ಮಿಸಿದ.

PC:YOUTUBE

 ಔಷಧ ಗುಣ

ಔಷಧ ಗುಣ

ಹಾಗೇಯೆ ಉತ್ತಮವಾದ ಔಷಧಗುಣ ಹೊಂದಿರುವ 100 ಕ್ಕೂ ಅಧಿಕವಾದ ಸಸ್ಯಗಳು ಕೂಡ ಗೋವಾದಲ್ಲಿ ಕಾಣಬಹುದಾಗಿದೆ. ಗೋವಾದ ಭೂಭಾಗ ಹೆಚ್ಚಾಗಿ ಖನಿಜ ಸಂಪನ್ಮೂಲದಿಂದ ಕೂಡಿದೆ. ಇಲ್ಲಿ ಕೆಂಪಾಗಿರುವ ಭೂಮಿಯನ್ನು ಕಾಣಬಹುದಾಗಿದೆ.


PC:YOUTUBE

ಅತ್ಯಂತ ಪುರಾತನವಾದ

ಅತ್ಯಂತ ಪುರಾತನವಾದ

ನದಿತೀರದಲ್ಲಿ ಮಾತ್ರವೇ ಕಪ್ಪು ಮಣ್ಣುವನ್ನು ಅತ್ಯಧಿಕವಾಗಿ ಕಾಣಬಹುದಾಗಿದೆ. ಗೋವಾ ಕರ್ನಾಟಕಕ್ಕೆ ಸಮೀಪದ ರಾಜ್ಯವಾದುದ್ದರಿಂದ ಈ ರಾಜ್ಯಗಳ ನಡುವೆ ಇರುವ ಪುರಾತನವಾದ ಶಿಲೆಗಳು ಭಾರತದ ಉಪಖಂಡದಲ್ಲೇ ಅತ್ಯಂತ ಪುರಾತನವಾದದು ಎಂದು ಗುರುತಿಸಲಾಗಿದೆ.

PC:YOUTUBE

ಅರೇಬಿಯಾ ಸಮುದ್ರ

ಅರೇಬಿಯಾ ಸಮುದ್ರ

ಗೋವಾದಲ್ಲಿರುವ ಕೆಲವು ಶಿಲೆಗಳು ಸುಮಾರು 3600 ಮಿಲಿಯನ್ ವರ್ಷದ ಪುರಾತನವಾದುದು ಎಂದು ಗುರುತಿಸಿದ್ದಾರೆ. ಉಷ್ಣ ವಾತಾವಾರಣದ ಸಮಯದಲ್ಲಿ ಅರೇಬಿಯಾ ಸಮುದ್ರದ ಪರಿಣಾಮವಾಗಿ ಉಷ್ಣದಿಂದ ಕೂಡಿರುತ್ತದೆ.


PC:YOUTUBE

ಮಳೆ

ಮಳೆ

ಗೋವಾದಲ್ಲಿ 35 ಡಿಗ್ರಿ ಸೆಂಟಿಗ್ರೆಡ್‍ಕ್ಕಿಂತ ಅಧಿಕ ವಾತಾವರಣವಿರುತ್ತದೆ. ಮಳೆಗಾಲದ ಅವಧಿಯಲ್ಲಿ ಮಳೆಯು ಅತ್ಯಧಿಕವಾಗಿ ಬೀಳುತ್ತವೆ.


PC:YOUTUBE

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ವಾಯು ಮಾರ್ಗ: ದಭೋಲಿಯಂ ಏರ್ಪೋಟ್ ಮಾತ್ರ ಗೋವಾದಲ್ಲಿರುವ ಏಕೈಕ ಏರ್ಪೋಟ್. ಈ ಏರ್ಪೋಟ್‍ನಿಂದ ರಾಜಧಾನಿ ಪಣಜಿಗೆ ಸುಮಾರು 59 ಕಿ,ಮೀ ದೂರ ಹೊಂದಿದೆ. ಇಲಿಗೆ ಬೆಂಗಳೂರು, ಹೈದ್ರಾಬಾದ್, ದೆಹಲಿ, ಚೆನ್ನೈ, ಮುಂಬೈ ಪ್ರದೇಶಗಳಿಗೆ ವಿಮಾನ ಹೋಗುವುದು ಬರುವುದು ಮಾಡುತ್ತಿರುತ್ತವೆ.

PC:YOUTUBE

ರೈಲು ಮಾರ್ಗ

ರೈಲು ಮಾರ್ಗ

ಗೋವಾ ರಾಜ್ಯಕ್ಕೆ ತೆರಳಲು 2 ರೈಲ್ವೆ ವ್ಯವಸ್ಥೆ ಕೂಡ ಇದೆ. ಒಂದು ಸ್ವಾತಂತ್ರ್ಯದ ಪೂರ್ವದಲ್ಲಿ ನಿರ್ಮಿಸಿದ ವಾಸ್ಕೋಡಿಗಾಮ. ಈ ರೈಲ್ವೆ ಸ್ಟೇಷನ್ನಿಗೆ ಹುಬ್ಬಳ್ಳಿ ಮಾರ್ಗವಾಗಿ ಚಲಿಸುತ್ತದೆ. ಎರಡನೇಯದು 20 ನೇ ಶತಮಾನದಲ್ಲಿ ನಿರ್ಮಿಸಿದ ಕೊಂಕಣಿ ರೈಲ್ವೆ ಮಾರ್ಗ.

PC:YOUTUBE

Please Wait while comments are loading...