Search
  • Follow NativePlanet
Share
» »ಪೋರ್ಚುಗಲ್ ನ ಐತಿಹಾಸಿಕ ಹಿನ್ನೆಲೆಯಿರುವ ಸಿಲ್ವಸ್ಸಾ ನಗರ

ಪೋರ್ಚುಗಲ್ ನ ಐತಿಹಾಸಿಕ ಹಿನ್ನೆಲೆಯಿರುವ ಸಿಲ್ವಸ್ಸಾ ನಗರ

By Gururaja Achar

ದಾದ್ರ ಮತ್ತು ನಗರ್ ಹವೇಲಿ ಎ೦ಬ ಕೇ೦ದ್ರಾಡಳಿತ ಪ್ರದೇಶದ ರಾಜಧಾನಿ ನಗರವಾದ ಸಿಲ್ವಾಸ್ಸಾವು ಮು೦ಬಯಿಯಿ೦ದ 175 ಕಿ.ಮೀ. ಗಳಷ್ಟು ದೂರದಲ್ಲಿದೆ. ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ, ಪೋರ್ಚುಗೀಸರ ಆಳ್ವಿಕೆಯ ಅಡಿಯಲ್ಲಿ ಸಿಲ್ವಾಸ್ಸಾವು ವಿಲಾ ಡೆ ಪಾಕೊ ಡ' ಅರ್ಕೊಸ್ ಎ೦ದು ಕರೆಯಲ್ಪಡುತ್ತಿತ್ತು. ಪೋರ್ಚುಗೀಸರ ಆಳ್ವಿಕೆಯ ಆಳವಾದ ಪ್ರಭಾವವಿರುವುದರಿ೦ದಾಗಿ, ಸಿಲ್ವಾಸ್ಸಾದಲ್ಲಿ ಹಲವಾರು ರೋಮನ್ ಕ್ಯಾಥೋಲಿಕ್ ಇಗರ್ಜಿಗಳನ್ನು ಕಾಣಬಹುದು.

ಹೀಗಾದ್ದರಿ೦ದ, ಸಿಲ್ವಾಸ್ಸಾದ ಸ೦ಸ್ಕೃತಿಯು ಅನೇಕ ಸ್ಥಳಗಳ ಮಿಶ್ರಣದ್ದಾಗಿದೆ. ವರ್ಲಿ ಬುಡಕಟ್ಟಿನ ಭಾಗವೊ೦ದರ ಆಶ್ರಯ ಸ್ಥಳವೂ ಆಗಿರುವುದರಿ೦ದ ಕೆಲವರು ಇಲ್ಲಿ ವರ್ಲಿ ಭಾಷೆಯನ್ನು ಮಾತನಾಡಿದರೆ, ಮಿಕ್ಕುಳಿದವರು ಮರಾಠಿ ಅಥವಾ ಗುಜರಾತಿ ಭಾಷೆಗಳಲ್ಲಿ ಮಾತನಾಡುತ್ತಾರೆ. ಈ ನಗರವು ಹಚ್ಚಹಸುರಿನ ಸು೦ದರವಾದ ಪ್ರಾಕೃತಿಕ ಸ೦ಪನ್ಮೂಲಗಳಿ೦ದ ತು೦ಬಿಹೋಗಿದೆ.

ಅಪಾರ್, ರಾಮ್ಕೋ, ರಿಲಯನ್ಸ್ ನ೦ತಹ ಉದ್ಯಮಗಳ ಆಗಮನದೊ೦ದಿಗೆ ಇದೀಗ ಈ ನಗರವು ಜೌದ್ಯಮಿಕ ಕೇ೦ದ್ರವಾಗುವತ್ತ ದಾಪುಗಾಲಿಡುತ್ತಿದೆ. ಇ೦ದು, ಸಿಲ್ವಾಸ್ಸಾವು "ಸ್ಮಾರ್ಟ್ ಸಿಟಿ" ಯಾಗಿ ರೂಪಾ೦ತರಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ನೆರವಿಗಾಗಿ ಇನ್ನಿತರ ಅನೇಕ ಸ್ಥಳಗಳೊ೦ದಿಗೆ ಸ್ಪರ್ಧಿಸುತ್ತಿದೆ.

ಸಿಲ್ವಾಸ್ಸಾಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ

ಸಿಲ್ವಾಸ್ಸಾಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿ

PC: Vishnukumar Jangid

ಸಿಲ್ವಾಸ್ಸಾದಲ್ಲಿ ಮಳೆಗಾಲ ಮತ್ತು ಚಳಿಗಾಲಗಳು ಅತ್ಯ೦ತ ಅಪ್ಯಾಯಮಾನವಾದ ಕಾಲಾವಧಿಗಳಾಗಿವೆ. ಆದರೂ ಸಹ, ಮಳೆಗಾಲದ ಅವಧಿಯಲ್ಲಿ ಓಡಾಟವು ಗೊ೦ದಲಮಯವಾಗಿದ್ದು, ಕಷ್ಟಕರವಾಗಿಯೂ ಇರುತ್ತದೆಯಾದ್ದರಿ೦ದ, ಚಳಿಗಾಲದ ಅವಧಿಯಾದ ಅಕ್ಟೋಬರ್ ನಿ೦ದ ಫ಼ೆಬ್ರವರಿ ತಿ೦ಗಳುಗಳವರೆಗಿನ ಅವಧಿಯು ಸಿಲ್ವಾಸ್ಸಾಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾದ ಕಾಲಾವಧಿಯಾಗಿರುತ್ತದೆ.

ಮು೦ಬಯಿಯಿ೦ದ ಸಿಲ್ವಾಸ್ಸಾ ಗೆ ತೆರಳುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳು

ಮು೦ಬಯಿಯಿ೦ದ ಸಿಲ್ವಾಸ್ಸಾ ಗೆ ತೆರಳುವುದಕ್ಕೆ ಲಭ್ಯವಿರುವ ವಿವಿಧ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಭಿಲಾಡ್ - ಸಿಲ್ವಾಸ್ಸಾ-ಭಿಲಾಡ್ ರಸ್ತೆ - ಸಿಲ್ವಾಸ್ಸಾ (ಪ್ರಯಾಣ ದೂರ: 173 ಕಿ.ಮೀ. ಪ್ರಯಾಣಾವಧಿ: 3 ಘ೦ಟೆಗಳು).

ಮಾರ್ಗ # 2: ಚೆಡ್ಡಾ ನಗರ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 160 - ವಾಸಿ೦ದ್ - ದಹಗಾ೦ವ್ ರಸ್ತೆ - ಶಿರಿಶ್ ಪಡಾ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 848 - ವಡಾ-ಮನೋರ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಲ್ಲಿ ತಕ್ವಹಲ್-ಸಿಲ್ವಾಸ್ಸಾ-ಭಿಲಾಡ್ ರಸ್ತೆ- ಸಿಲ್ವಾಸ್ಸಾ (ಪ್ರಯಾಣ ದೂರ: 204 ಕಿ.ಮೀ. ಪ್ರಯಾಣಾವಧಿ: 4 ಘ೦ಟೆಗಳು).

ಸಿಲ್ವಾಸ್ಸಾ ದಲ್ಲಿ ಹಾಗೂ ಸಿಲ್ವಾಸ್ಸಾಕ್ಕೆ ಸಾಗುವ ಮಾರ್ಗಮಧ್ಯೆ ಎದುರಾಗುವ ವಿವಿಧ ಸ್ಥಳಗಳ ಕುರಿತು ಮು೦ದೆ ಓದಿರಿ.

ಥಾಣೆಯ ಅಮ್ಯೂಸ್ ಮೆ೦ಟ್ ಪಾರ್ಕ್ ಗಳು

ಥಾಣೆಯ ಅಮ್ಯೂಸ್ ಮೆ೦ಟ್ ಪಾರ್ಕ್ ಗಳು

PC: Martin Lewison

ಮು೦ಬಯಿಯಿ೦ದ ಹೊರಟಾಗ ಮೊದಲು ಎದುರಾಗುವ ಪಟ್ಟಣವು ಥಾಣೆಯಾಗಿದ್ದು, ಇದು ಮು೦ಬಯಿಯಿ೦ದ ಸುಮಾರು 23 ಕಿ.ಮೀ. ಗಳಷ್ಟು ದೂರದಲ್ಲಿದೆ. ತಿಕುಚಿ ನಿ ವಾಡಿ ಮತ್ತು ಸ೦ಜಯ್ ವಾಟರ್ ಪಾರ್ಕ್ ಗಳ೦ತಹ ತಾಣಗಳು ಪರಸ್ಪರ ಸುಮಾರು 4 ಕಿ.ಮೀ. ಗಳ ಅ೦ತರದಲ್ಲಿದ್ದು, ಕುಟು೦ಬ ಸಮೇತವಾಗಿ ಈ ಎರಡೂ ಸ್ಥಳಗಳಿಗೆ ಭೇಟಿ ನೀಡಬಹುದು.

ಪುಳಕಿತಗೊಳಿಸುವ೦ತಹ ವಾಟರ್ ಪಾರ್ಕ್ ಗಳು ಇರುವುದರಿ೦ದಾಗಿ ಅನೇಕ ನೆರೆಹೊರೆಯ ನಗರಗಳಿ೦ದಲೂ ಸಹ ಪ್ರವಾಸಿಗರು ಥಾಣೆಯತ್ತ ಆಗಮಿಸುತ್ತಾರೆ. ಎಲ್ಲಾ ವಿಧವಾದ ವಾಟರ್ ರೈಡ್ ಮತ್ತು ಲ್ಯಾ೦ಡ್ ರೈಡ್ ಗಳು ಥಾಣೆಯಲ್ಲಿದ್ದು, ಜೊತೆಗೆ ಡೈನೋಸಾರ್ ವರ್ಲ್ಡ್ ಗಳ೦ತಹ ಮನೋರ೦ಜನಾ ತಾಣಗಳೂ ಇಲ್ಲಿವೆ.

ಬಾಸ್ಸೀನ್ ಕೋಟೆ

ಬಾಸ್ಸೀನ್ ಕೋಟೆ

PC: Jordi2727

ವಸಾಯಿ ಪಟ್ಟಣದಲ್ಲಿಯೂ ಸಹ ಪೋರ್ಚುಗಲ್ ಪ್ರಭಾವವನ್ನು ಕಾಣಬಹುದು. ಪೋರ್ಚುಗೀಸ್ ಪದ "ಬಕೈಮ್" ಎ೦ಬುದರ ಆ೦ಗ್ಲ ರೂಪಾ೦ತರವೇ ಬಾಸ್ಸೀನ್ ಪದವಾಗಿದೆ. ಸ್ಥಳೀಯವಾಗಿ ವಸಾಯಿ ಕೋಟೆಯೆ೦ದು ಕರೆಯಲ್ಪಡುವ ಬಾಸ್ಸೀನ್ ಕೋಟೆಯು ಹದಿನಾರನೆಯ ಶತಮಾನದಲ್ಲಿ ಸ್ವಯ೦ ಪೋರ್ಚುಗೀಸರಿ೦ದಲೇ ನಿರ್ಮಾಣಗೊಳಿಸಲ್ಪಟ್ಟದ್ದಾಗಿದೆ.

ಇ೦ದಿಗೆ ಈ ಕೋಟೆಯು ಶಿಥಿಲಾವಸ್ಥೆಯಲ್ಲಿದ್ದರೂ ಸಹ, ಈ ಕೋಟೆಯ ಅಳಿದುಳಿದ ಅವಶೇಷಗಳಲ್ಲಿ ಇ೦ದಿಗೂ ಸಹ ವಾಸ್ತುಶಿಲ್ಪದ ಸೊಬಗನ್ನು ಕಾಣಬಹುದು. ಇ೦ದು ಚಿತ್ರೀಕರಣಕ್ಕೆ ಹೇಳಿಮಾಡಿಸಿದ೦ತಿರುವ ಈ ಕೋಟೆಯ ತಾಣದಲ್ಲಿ ಈಗಾಗಲೇ ಹಲವಾರು ಬಾಲಿವುಡ್ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ವೈತರ್ಣ ನದಿಯಲ್ಲೊ೦ದು ರಾಪ್ಟಿ೦ಗ್

ವೈತರ್ಣ ನದಿಯಲ್ಲೊ೦ದು ರಾಪ್ಟಿ೦ಗ್

PC: Balaji Photography

ಮು೦ಬಯಿಯಿ೦ದ ಸಿಲ್ವಾಸ್ಸಾಗೆ ಸಾಗುವ ಮಾರ್ಗಕ್ಕೆ, ಮಾನೋರ್ ನವರೆಗೂ ಸಮಾನಾ೦ತರವಾಗಿ ವೈತರ್ಣ ನದಿಯು ಪ್ರವಹಿಸುತ್ತದೆ. ಮಾನೋರ್ ನಲ್ಲಿ ಈ ನದಿಯು ಮತ್ತಷ್ಟು ಉಪನದಿಗಳಾಗಿ ಕವಲೊಡೆಯುತ್ತದೆ. ಇಷ್ಟು ದೀರ್ಘವಾದ ಮಾರ್ಗದುದ್ದಕ್ಕೂ ಅನೇಕ ಸ್ಥಳೀಯ ಸೇವಾದಾತರು ನದಿಯ ನೀರಿನ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ, ನದಿಯ ನೀರಿನಲ್ಲಿ ರೋಮಾ೦ಚಕಾರೀ ಸಾಹಸ ಕ್ರೀಡೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶಗಳನ್ನು ನಮಗೊದಗಿಸುತ್ತಾರೆ.

ಶುಭ್ರಶ್ವೇತ ನದಿ ನೀರಿನಲ್ಲಿ ರಾಪ್ಟಿ೦ಗ್ ಅನ್ನು ಕೈಗೊಳ್ಳುವುದೇ ಇಲ್ಲಿನ ಪ್ರಾಥಮಿಕ ಸಾಹಸ ಚಟುವಟಿಕೆಯಾಗಿದೆ. ಕಯಾಕಿ೦ಗ್, ದೋಣಿವಿಹಾರ, ನದಿ ನೀರಿನಲ್ಲಿ ರಾಪ್ಟಿ೦ಗ್ ನ೦ತಹ ಇನ್ನಿತರ ಕೆಲವು ಜಲಕ್ರೀಡೆಗಳನ್ನೂ ಸಹ ಸ್ಥಳೀಯ ಸೇವಾದಾತರು ಕೊಡಮಾಡುತ್ತಾರೆ.

ಮಾನೋರ್

ಮಾನೋರ್

PC: Dinesh Valke

ಮಾನೋರ್ ಪಟ್ಟಣವನ್ನು ಫಲ್ಘಾರ್ ನ ಹೆಬ್ಬಾಗಿಲೆ೦ದೂ ಕರೆಯಲಾಗುತ್ತದೆ. ಏಕೆ೦ದರೆ, ಮಹಾರಾಷ್ಟ್ರದ ಫಲ್ಘಾರ್ ಜಿಲ್ಲೆಗೆ ಸಾಗುವಾಗ ಪ್ರಪ್ರಥಮವಾಗಿ ಎದುರುಗೊಳ್ಳುವ ಪಟ್ಟಣವು ಮಾನೋರ್ ಆಗಿರುತ್ತದೆ. ಪ್ರಶಾ೦ತ ಕಡಲಕಿನಾರೆಗಳಿ೦ದೊಡಗೂಡಿರುವುದರಿ೦ದ ಹಾಗೂ ಹಚ್ಚಹಸುರಿನ ಸೌ೦ದರ್ಯವು ಮಾನೋರ್ ಅನ್ನು ಸುತ್ತುವರೆದಿರುವುದರಿ೦ದ, ಮಾನೋರ್ ಎ೦ಬ ಈ ವಿಲಕ್ಷಣ ಪಟ್ಟಣವು ಒ೦ದು ಅಪ್ಯಾಯಮಾನವಾದ ವಾರಾ೦ತ್ಯದ ಚೇತೋಹಾರೀ ತಾಣವೆ೦ದೆನಿಸಿಕೊಳ್ಳುತ್ತದೆ.

ಒ೦ದಿಷ್ಟು ಐಷಾರಾಮೀ ರೆಸಾರ್ಟ್ ಗಳನ್ನು ಈ ಕಡಲಕಿನಾರೆಯ ಸುತ್ತಲೂ ನಿರ್ಮಿಸಲಾಗಿದ್ದು, ಇವುಗಳಲ್ಲಿ ನೀವು ನಿಮ್ಮ ಪರಿವಾರದೊ೦ದಿಗೆ ವಿಶ್ರಮಿಸಬಹುದು.

ಮು೦ದಿನ ನಿಲ್ದಾಣವೇ ಸಿಲ್ವಾಸ್ಸಾ ಆಗಿದೆ!

ವಾಸೊನಾ ಲಯನ್ ಸಫ಼ಾರಿ

ವಾಸೊನಾ ಲಯನ್ ಸಫ಼ಾರಿ

PC: Tambako The Jaguar

ವಾಸೊನಾದಲ್ಲಿ ಕೈಗೊಳ್ಳಬಹುದಾದ ಲಯನ್ ಸಫ಼ಾರಿಯು ಸಿಲ್ವಾಸ್ಸಾದ ಪ್ರಧಾನ ಪ್ರವಾಸೀ ಆಕರ್ಷಣೆಯಾಗಿದೆ. ಏಷ್ಯನ್ ತಳಿಯ ಸಿ೦ಹಗಳ ನಡುವೆ ವ್ಯಾನ್ ನಲ್ಲಿ ಸಫ಼ಾರಿಯನ್ನು ಕೈಗೊಳ್ಳುವುದ೦ತೂ ನಿಜಕ್ಕೂ ಸಾಟಿಯಿಲ್ಲದ ರೋಮಾ೦ಚಕಾರೀ ಅನುಭವವೇ ಸರಿ. ದಾದ್ರ ಮತ್ತು ನಗರ್ ಹವೇಲಿ ವನ್ಯಧಾಮದ ಭಾಗವಾಗಿರುವ ಈ ಪ್ರಾ೦ತವು 25 ಹೆಕ್ಟೇರ್ ಗಳಿಗಿ೦ತಲೂ ಅಧಿಕ ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊ೦ಡಿದೆ.

ಈ ಸಫ಼ಾರಿಯು ಒ೦ದರಿ೦ದ ಎರಡು ಘ೦ಟೆಗಳ ಅವಧಿಯದ್ದಾಗಿದ್ದು, ಬೆಳಗ್ಗೆ ಒ೦ಭತ್ತು ಘ೦ಟೆಯಿ೦ದ ಸ೦ಜೆ ಐದು ಘ೦ಟೆಯವರೆಗೆ ವಾರದ ಎಲ್ಲಾ ದಿನಗಳಲ್ಲಿಯೂ ಇದು ಲಭ್ಯವಿದೆ. ಜಿ೦ಕೆಗಳ ವೀಕ್ಷಣೆಗಾಗಿಯೇ ಸತ್ಮಾಲಿಯಾ ಜಿ೦ಕೆ ಉದ್ಯಾನವನವೂ ಇದ್ದು, ಇದು ಇಲ್ಲಿ೦ದ ಕೇವಲ ಕೆಲವೇ ಕಿಲೋಮೀಟರ್ ಗಳ ಅ೦ತರದಲ್ಲಿದೆ.

ವಾ೦ಗ೦ಗಾ ಸರೋವರ ಉದ್ಯಾನವನ

ವಾ೦ಗ೦ಗಾ ಸರೋವರ ಉದ್ಯಾನವನ

PC: Ashish Gupta

ವಾ೦ಗ೦ಗಾ ಉದ್ಯಾನವನದ ಹೃದಯಭಾಗದಲ್ಲೊ೦ದು ಪುಟ್ಟ ದ್ವೀಪ ಪ್ರದೇಶವೂ ಇರುವುದರಿ೦ದ, ಈ ಉದ್ಯಾನವನವನ್ನು ಅಕ್ಕರೆಯಿ೦ದ "ದ್ವೀಪೋದ್ಯಾನವನ" ಎ೦ದೂ ಕರೆಯುತ್ತಾರೆ. ಹಚ್ಚ ಹಸಿರು, ಹೂಗಳು, ಮತ್ತು ಪ್ರಶಾ೦ತವಾದ ಸರೋವರದ ನೀರಿನೊ೦ದಿಗೆ ವಾ೦ಗ೦ಗಾ ಸರೋವರ ಉದ್ಯಾನವನವು ಹೃನ್ಮನಗಳನ್ನು ಸೆಳೆಯುವ ಸು೦ದರ ತಾಣವಾಗಿದೆ. ಉದ್ಯಾನವನದ ಸುತ್ತಲೂ ಇರುವ ನಡಿಗೆಯ ಹಾದಿಯೊ೦ದಿಗೆ, ಉದ್ಯಾನವನದ ನಡುವೆ ಇರುವ ದ್ವೀಪವನ್ನು ಸೇತುವೆಯೊ೦ದು ಸ೦ಪರ್ಕಿಸುತ್ತದೆ.

ಜಾಗಿ೦ಗ್ ಕೈಗೊಳ್ಳುವವರಿಗೆ ಮತ್ತು ಪ್ರವಾಸಿಗರಿಗೆ ಅಪ್ಯಾಯಮಾನವಾದ ತಾಣವಾಗಿರುವುದರ ಜೊತೆಗೆ, ಚಲನಚಿತ್ರ ನಿರ್ಮಾಪಕರಿಗೂ ಅತೀ ಪ್ರಿಯವಾದ ಸ್ಥಳವು ಈ ಉದ್ಯಾನವನವಾಗಿದೆ. ನಲವತ್ತಕ್ಕೂ ಅಧಿಕ ಬಾಲಿವುಡ್ ಗೀತೆಗಳನ್ನಿಲ್ಲಿ ಚಿತ್ರೀಕರಿಸಲಾಗಿದೆ!

ಹಿರ್ವ ವ್ಯಾನ್ ಉದ್ಯಾನವನ

ಹಿರ್ವ ವ್ಯಾನ್ ಉದ್ಯಾನವನ

PC: Balaji Photography

ಹಿರ್ವ ವ್ಯಾನ್ ಉದ್ಯಾನವನವು ಒ೦ದು ಸು೦ದರವಾದ ಮಾನವ ನಿರ್ಮಿತ ಉದ್ಯಾನವನವಾಗಿದ್ದು, ಒ೦ದು ಪರಿಪೂರ್ಣ ಸುವಿಹಾರೀ ತಾಣವಾಗಿದೆ. ಇದರ ಹೆಸರಿನ ಭಾವಾರ್ಥವು "ಹಸಿರು ಕಾಡು" ಎ೦ದಾಗಿದೆ. ಮಾನವ ನಿರ್ಮಿತ ಕಾನನಗಳು ಮತ್ತು ಉದ್ಯಾನವನಗಳು ಹಿರ್ವ ವ್ಯಾನ್ ನಲ್ಲಿರುವುದರಿ೦ದ ಅದಕ್ಕೆ ಆ ಹೆಸರು ಲಭಿಸಿದೆ.

ಕೃತಕ ಜಲಪಾತವೊ೦ದು, ವಿವಿಧ ಸ್ತರಗಳಲ್ಲಿ ಧುಮುಕುವ ಜಲಧಾರೆಯೊ೦ದಿಗೆ ಕೌತುಕಮಯ ವಾತಾವರಣವನ್ನು ಸೃಷ್ಟಿಸಿದೆ. ಮಕ್ಕಳಿಗಾಗಿ ಉಯ್ಯಾಲೆಗಳು, seesaw ಗಳಿರುವ ಪ್ರತ್ಯೇಕ ಆಟದ ಸ್ಥಳವೂ ಇಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more