Search
  • Follow NativePlanet
Share
» »ಶೂರ್ಪನಖಿಯ ಮೂಗು ಕತ್ತರಿಸಿದ ಪ್ರದೇಶ-ನಾಸಿಕ್!!

ಶೂರ್ಪನಖಿಯ ಮೂಗು ಕತ್ತರಿಸಿದ ಪ್ರದೇಶ-ನಾಸಿಕ್!!

ರಾಮನು ತನ್ನ ವನವಾಸದಕಾಲದಲ್ಲಿ ಇಲ್ಲಿನ ತಪೋವನದಲ್ಲಿಯೇ ನಿವಾಸವಿದ್ದ ಎಂದೂ ಹಾಗು ಲಕ್ಷ್ಮಣನು... ಶೂರ್ಪನಖಳ ಮೂಗು ಕತ್ತರಿಸಿದ್ದು ಇಲ್ಲೇ ಎಂದು ಹೇಳುತ್ತಾರೆ. ನಾಸಿಕ ಎಂದರೆ ಮೂಗು ಹಾಗಾಗಿ ನಾಸಿಕ ಕತ್ತರಿಸಿದ ಪ್ರದೇಶ ಇದಾದ್ದರಿಂದ ನಾಸಿಕ್ ಎಂದು

ನಾಸಿಕ ನಗರವು ಸಾವಿರಾರು ವರ್ಷಗಳ ಸಂಸ್ಕøತಿ ಹಾಗೂ ಚರಿತ್ರೆಗಳಿಗೆ ಸಾಕ್ಷಿಯಾಗಿರುವ ಪ್ರದೇಶ. ಕುಂಭಮೇಳದಿಂದಾಗಿ ದೇಶಿಯ ಹಾಗು ವಿದೇಶಿಯ ಪ್ರವಾಸಿಗರನ್ನು ಆರ್ಕಷಿಸುತ್ತದೆ. ಕ್ರಿ.ಪೂರ್ವದಿಂದ ಈ ಪ್ರದೇಶದ ಕುರಿತು ತನ್ನದೇ ಆದ ಮಹತ್ವವನ್ನು ಪಡೆದಿದೆ.

ರಾಮನು ತನ್ನ ವನವಾಸದಕಾಲದಲ್ಲಿ ಇಲ್ಲಿನ ತಪೋವನದಲ್ಲಿಯೇ ನಿವಾಸವಿದ್ದ ಎಂದೂ ಹಾಗು ಲಕ್ಷ್ಮಣನು... ಶೂರ್ಪನಖಳ ಮೂಗು ಕತ್ತರಿಸಿದ್ದು ಇಲ್ಲೇ ಎಂದು ಹೇಳುತ್ತಾರೆ. ನಾಸಿಕ ಎಂದರೆ ಮೂಗು ಹಾಗಾಗಿ ನಾಸಿಕ ಕತ್ತರಿಸಿದ ಪ್ರದೇಶ ಇದಾದ್ದರಿಂದ ನಾಸಿಕ್ ಎಂದು ಹೆಸರು ಬಂದಿತು ಎಂದು ಹೇಳುತ್ತಾರೆ.

ಸ್ಥಳ ಪುರಾಣದ ಮಾತು ಪಕ್ಕಕ್ಕೆ ಇಟ್ಟರೆ ಈ ನಾಸಿಕ್‍ನಲ್ಲಿ ನೋಡಬೇಕಾಗಿರುವ ಪ್ರದೇಶಗಳು ಬಹಳಷ್ಟಿದೆ. ನಾಸಿಕ್‍ನನ್ನು "ಗ್ರೇಟ್ ಗಾರ್ಡನ್ ಸಿಟಿ" ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ತ್ರಯಂಬಕೇಶ್ವರನ ದೇವಾಲಯ, ತೊಪೋವನ, ಪಂಚವಟಿ, ಮಿನರಲ್ ಮ್ಯೂಸಿಯಂ, ದ್ರಾಕ್ಷಿ ತೋಟ, ವೈನ್ ತಯಾರಿ, ಅಂಜನೇರಿ ಜಲಪಾತ ಇನ್ನೂ ಹಲವಾರು ಪ್ರವಾಸಿತಾಣಗಳನ್ನು ಇಲ್ಲಿ ಕಾಣಬಹುದಾಗಿದೆ. ಪ್ರಸ್ತುತ ನಾಸಿಕದಲ್ಲಿನ ಪ್ರವಾಸಿತಾಣಗಳ ಬಗ್ಗೆ ತಿಳಿಯೋಣ.....

ತ್ರಯಂಬಕೇಶ್ವರ ದೇವಾಲಯ

ತ್ರಯಂಬಕೇಶ್ವರ ದೇವಾಲಯ

ತ್ರಯಂಬಕೇಶ್ವರ ದೇವಾಲಯವು ನಾಸಿಕ್‍ನಿಂದ ಸ್ವಲ್ಪ ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುವ ಒಂದು ಆಧ್ಯಾತ್ಮಿಕ ತಾಣವಾಗಿದೆ. ದೇಶದಲ್ಲಿನ ಪರಮಶಿವನ ಲಿಂಗವು 4 ಜ್ಯೋತ್ಯಿರ್ ಲಿಂಗಗಳಲ್ಲಿ ಒಂದಾಗಿದೆ.

ಈ ದೇವಾಲಯದ ಗೋಡೆಗಳ ಮೇಲೆ ಆರ್ಕಷಣೀಯ ರೀತಿಯಲ್ಲಿ ಭಗವದ್ಗಿತೆಯಲ್ಲಿನ ಶ್ಲೋಕಗಳನ್ನು ಕಾಣಬಹುದಾಗಿದೆ. ವಿಶೇಷವೆನೆಂದರೆ ಪ್ರಖ್ಯಾತ ಸಿನಿರಂಗ ಪಿತಾಮಹನಾದ ದಾದಾ ಪಾಲ್ಕೆ ಇಲ್ಲಿಯೇ ಜನಿಸಿದವರು.


PC:Nilesh.shintre

ತಪೋವನ

ತಪೋವನ

ಶೂರ್ಪನಖಳ ಮೂಗು (ನಾಸಿಕ) ಅನ್ನು ಕತ್ತರಿಸಿದ ಪ್ರದೇಶ ಇದಾಗಿದೆ. ರಾಮಾಯಣವನ್ನು ಹೊಂದಿರುವ ಪವಿತ್ರವಾದ ಭೂಮಿ ಎಂದೇ ಹೇಳಬಹುದು. ಇಲ್ಲಿ ರುಚಿಕರವಾದ ಚೇಪೆಕಾಯಿ ದೊರೆಯುತ್ತದೆ ಎಂತೆ....

PC:Indi Samarajiva

ಪಂಚವಟಿ

ಪಂಚವಟಿ

ಪಂಚವಟಿಯಲ್ಲಿ ಕಾಲರಾಮ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಕಾಲಾರಾಮ ದೇವಾಲಯ ನಾಸಿಕದಲ್ಲಿನ ಪ್ರಧಾನ ಆಕರ್ಷಣೆಯಾಗಿದೆ. ಈ ದೇವಾಲಯವನ್ನು 1794 ರಲ್ಲಿ ಗೋಪಿಕಾಬಾಯಿ ಪೇಶ್ವೆ ನಿರ್ಮಾಣ ಮಾಡಿದರು. ಈ ದೆವಾಲಯವು ತ್ರಯಂಬಕೇಶ್ವರ ದೇವಾಲಯವನ್ನು ಹೋಲುವಂತೆ ಇದೆಯಂತೆ.

ಈ ದೇವಾಲಯವನ್ನು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಶಿಖರವು ಸುಮಾರು 70 ಅಡಿ ಎತ್ತರದಲ್ಲಿದೆ. ಇದರಲ್ಲಿ ರಾಮ, ಲಕ್ಷ್ಮಣ, ಸೀತಾ ಮಾತೆಯ ವಿಗ್ರಹಗಳನ್ನು ಕಾಣಬಹುದಾಗಿದೆ. ಇಲ್ಲಿಯೇ ಒಂದು ಗಣಪತಿ, ಅಂಜನೇಯ ಮತ್ತು ವಿಠಲನ ದೇವಾಲಯ ಕೂಡ ಇದೆ.


PC:World8115

ಮಿನರಲ್ ಮ್ಯೂಸಿಯಂ

ಮಿನರಲ್ ಮ್ಯೂಸಿಯಂ

ನಾಸಿಕ್‍ನಲ್ಲಿ ಒಂದು ಮಿನರಲ್ ಮ್ಯೂಸಿಯಂ ಇದೆ. ಇಲ್ಲಿ ವಿಧ ವಿಧವಾದ ಕಲ್ಲುಗಳನ್ನು ಕಾಣಬಹುದಾಗಿದೆ.


PC:RKBot

ಪಾಂಡವಲೋನಿ

ಪಾಂಡವಲೋನಿ

ಇದು ಒಂದು ಕಾಲದಲ್ಲಿ ಪಾಂಡವರು ನಿವಾಸಿಸಿದ್ದ ಒಂದು ಗುಹೆಯಾಗಿದೆ. ಇದು ಪಾಂಡವರು ಇರುತ್ತಿದ್ದ ಗುಹೆ. ಪಾಂಡವಲೋನಿ ನಾಸಿಕ್-ಮುಂಬೈನ ರಹದಾರಿಯಲ್ಲಿ ಇದೆ. ಪಾಂಡವಲೋನಿ ಗುಹೆಗಳು ಸುಮಾರು 20 ಶತಮಾನಕ್ಕಿಂತ ಹಳೆಯದು. ನಾಸಿಕ್‍ನ ತ್ರಿವಂಶಿ ಪರ್ವತದ ಮೇಲೆ ಇದೆ. ಇಲ್ಲಿ ಸುಮಾರು 24 ಗುಹೆಗಳಿವೆ. ಅವುಗಳನ್ನು ಜೈನ ರಾಜರು ನಿರ್ಮಾಣ ಮಾಡಿದರು ಎಂದು ಗುರುತಿಸಲಾಗಿದೆ.

PC:Katyare

ದ್ರಾಕ್ಷಿತೋಟಗಳು

ದ್ರಾಕ್ಷಿತೋಟಗಳು

ಈ ನಾಸಿಕ್ ನಗರದಲ್ಲಿ ಗಂಗಾಪುರಕ್ಕೆ ಸಮೀಪದಲ್ಲಿ ವಿಸ್ತಾರಗೊಂಡ ದಾಕ್ಷಿತೋಟ ಈ ಪ್ರದೇಶಕ್ಕೆ ಹೈಲೈಟ್ ಎಂದೇ ಹೇಳಬಹುದು. ಇಲ್ಲಿನ ದ್ರಾಕ್ಷಿ ಗೊಂಚಲುಗಳು ಪ್ರವಾಸಿಗರ ಬಾಯಿಯಲ್ಲಿ ನೀರೂರಿಸದೆ ಬಿಡದು. ಈ ತೋಟದಲ್ಲಿ ಕೆಂಪಾದ ದ್ರಾಕ್ಷಿಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇದರಿಂದ ತಯಾರಿಸಿದ ಮದ್ಯ ಕೂಡ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.


PC:Pablo Ares Gastesi

ವೈನ್ ತಯಾರಿ

ವೈನ್ ತಯಾರಿ

ಇಲ್ಲಿ ವೈನ್ ತಯಾರಿಕೆಗಳ ನಂತರ ವಿಶಾಲವಾದ ಪರೀಕ್ಷ ಕೊಠಡಿಗಳಿವೆ. ಇಲ್ಲಿ ಹಲವಾರು ತೋಟಗಳಿದ್ದು ಇವುಗಳನ್ನು ನೋಡುತ್ತಾ ಆನಂದಿಸಬಹುದಾಗಿದೆ. ಪ್ರವಾಸಿಗಳಿಗೆ ದ್ರಾಕ್ಷಿ ತೋಟದ ಒಳಗೆ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾರೆ. ವೈನ್ ತಯಾರಿ ವಿಧಾನವನ್ನು ತೋರಿಸುತ್ತಾರೆ. ಈ ಎಲ್ಲವೂ ಒಂದು ರೀತಿಯಲ್ಲಿ ಮನರಂಜನೆಯನ್ನು ಅನುಭವಿಸಬಹುದಾಗಿದೆ.


PC:chiragndesai

ಅಂಜನೇರಿ ಪರ್ವತ

ಅಂಜನೇರಿ ಪರ್ವತ

ತ್ರಯಂಬಕೇಶ್ವರ ದೇವಾಲಯದ ಸಮೀಪದಲ್ಲಿ ಈ ಅಂಜನೇರಿ ಜಲಪಾತವಿದೆ. ಈ ಪ್ರದೇಶದಲ್ಲಿನ ಪರ್ವತ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ ಎಂದೇ ಹೇಳಬಹುದಾಗಿದೆ. ಈ ಸ್ಥಳಕ್ಕೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಿರುತ್ತಾರೆ.

PC:amol kataria

ರೈಲ್ವೆ ಮಾರ್ಗದ ಮೂಲಕ

ರೈಲ್ವೆ ಮಾರ್ಗದ ಮೂಲಕ

ನಾಸಿಕೆ ರೈಲ್ವೆ ಸ್ಟೇಷನ್ ಇರುವ ಪ್ರದೇಶವನ್ನು ನಾಸಿಕ್ ರೋಡ್ ಎಂದು ಕರೆಯುತ್ತಾರೆ. ಪ್ರಧಾನ ನಗರವು ಇಲ್ಲಿಂದ ಸುಮಾರು 10 ಕಿ.ಮೀ ದೂರದಲ್ಲಿ ಇದೆ. ಹೈದ್ರಾಬಾದ್‍ನಿಂದ ನಾಸಿಕ್‍ಗೆ ತೆರಳುವುದಕ್ಕೆ ದೇವಗಿರಿ ರೈಲು ಇದೆ. ಇಲ್ಲಿಂದ ಸುಮಾರು 700 ಕಿ.ಮೀ ದೂರದಲ್ಲಿ ನಾಸಿಕ್ ಇದೆ.


PC:Superfast1111

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ನಾಸಿಕ್‍ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ನಾಸಿಕ್‍ನ ಓಜಾರ್ ಏರ್ ಫೋರ್ಟ್. ಇಲ್ಲಿಂದ ನಾಸಿಕ್ ಪಟ್ಟಣಕ್ಕೆ 25 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X