Search
  • Follow NativePlanet
Share
» »ಶ್ರೀರಾಮನ ಅಕ್ಕನಿಗೂ ಒಂದು ಮಂದಿರವಿದೆ ಗೊತ್ತಾ?

ಶ್ರೀರಾಮನ ಅಕ್ಕನಿಗೂ ಒಂದು ಮಂದಿರವಿದೆ ಗೊತ್ತಾ?

ಶ್ರೀರಾಮ ಹಾಗೂ ಆತನ ತಮ್ಮಂದಿರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ನಿಮಗೆ ಶ್ರೀ ರಾಮನ ಸಹೋದರಿ ಬಗ್ಗೆ ಗೊತ್ತಾ? ಬಹುತೇಕರಿಗೆ ಶ್ರೀರಾಮನಿಗೆ ಒಬ್ಬಳು ಸಹೋದರಿ ಇದ್ದಾಳೆ ಅನ್ನೋದೇ ಗೊತ್ತಿಲ್ಲ. ಹೀಗಿರುವಾಗ ನಮ್ಮ ದೇಶದಲ್ಲಿ ಶ್ರೀರಾಮನ ಸಹೋದರಿಗಾಗಿ ಒಂದು ಮಂದಿರವಿದೆ ಎನ್ನುವ ವಿಷ್ಯ ಗೊತ್ತಿರತ್ತಾ?

ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !ಮಹಾಶಕ್ತಿ ಪೀಠದಲ್ಲಿ ದೇವಿಯ ಮುಟ್ಟಿನ ಬಟ್ಟೆಯೇ ಭಕ್ತರಿಗೆ ಪ್ರಸಾದ !

ಶಾಂತಳ ಜೊತೆ ಶೃಂಗ ಋಷಿ

ಶಾಂತಳ ಜೊತೆ ಶೃಂಗ ಋಷಿ

PC: flicker

ಕುಲ್ಲುವಿನಿಂದ ಸುಮಾರು ೫೦ ಕಿ.ಮೀ ದೂರದಲ್ಲಿ ಶೃಂಗ ಋಷಿ ಮಂದಿರವಿದೆ. ಈ ಮಂದಿರದಲ್ಲಿ ಪೂಜಿಸಲ್ಪಡುವ ದೇವಿ ಶ್ರೀರಾಮನ ಅಕ್ಕ ಶಾಂತ. ಇಲ್ಲಿ ಶಾಂತಳ ಪ್ರತಿಮೆಯು ಆಕೆಯ ಪತಿ ಶೃಂಗ ಋಷಿಯ ಜೊತೆ ಪ್ರತಿಷ್ಠಾಪಿಸಲಾಗಿದೆ.

ಶೃಂಗ ಋಷಿ ಯಾರು?

ಶೃಂಗ ಋಷಿ ಯಾರು?

PC: youtube
ಪೌರಾಣಿಕ ಕಥೆಗಳ ಪ್ರಕಾರ ಶೃಂಗ ಋಷಿ , ಋಷ್ಯಶೃಂಗ ವಿಭಂಡಕನ ಪುತ್ರ. ದಶರಥನಿಗೆ ಪುತ್ರ ಸಂತಾನಕ್ಕಾಗಿ ಋಷ್ಯಶೃಂಗನೇ ಪುತ್ರ ಕಾಮೇಷ್ಠಿ ಯಜ್ಞ ನಡೆಸಿದ್ದನು. ಯಜ್ಞ ಮಾಡಿದ ಜಾಗ ಅಯೋಧ್ಯೆಯಿಂದ ಸುಮಾರು ೩೯ ಕಿ.ಮೀ ದೂರದಲ್ಲಿದೆ. ಅಲ್ಲಿ ಆಶ್ರಮ ಇಂದಿಗೂ ಇದೆ.

ದೇವಿ ಶಾಂತ

ದೇವಿ ಶಾಂತ

PC: Flicker
ಅಂಗದೇಶದ ರಾಜ ರೋಮ್ ಪದ ತನ್ನ ಪತ್ನಿಯೊಂದಿಗೆ ಅಯೋಧ್ಯೆಗೆ ಬಂದಿದ್ದಾಗ ಅವರಿಗೆ ಯಾವುದೇ ಸಂತಾನವಿಲ್ಲ ಎನ್ನುವುದು ದಶರಥನಿಗೆ ತಿಳಿದು ತನ್ನ ಪುತ್ರಿಯನ್ನು ರೋಮ್ ಪದನಿಗೆ ದತ್ತು ನೀಡಿದ್ದನು ಎನ್ನಲಾಗುತ್ತದೆ.

ಶ್ರೀರಾಮನಿಗೆ ಸಂಬಂಧಿಸಿ ಎಲ್ಲಾ ಉತ್ಸವ ಆಚರಣೆ

ಶ್ರೀರಾಮನಿಗೆ ಸಂಬಂಧಿಸಿ ಎಲ್ಲಾ ಉತ್ಸವ ಆಚರಣೆ

PC: Youtube

ಈ ಮಂದಿರಲ್ಲಿ ಶ್ರೀರಾಮನಿಗೆ ಸಂಬಂಧಿಸಿ ಎಲ್ಲಾ ಉತ್ಸವ ಆಚರಿಸಲಾಗುತ್ತದೆ. ರಾಮ ನವಮಿ, ದಸರಾವನ್ನೆಲ್ಲಾ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಮಂದಿರದಲ್ಲಿ ದೇವಿ ಶಾಂತ ಹಾಗೂ ಶೃಂಗ ಋಷಿಯ ಪೂಜೆ ಮಾಡುವುದರಿಂದ ಶ್ರೀರಾಮನ ಕೃಪಾ ಕಟಾಕ್ಷ ತಮ್ಮ ಮೇಲಿರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

Read more about: kullu temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X