Search
  • Follow NativePlanet
Share
» »ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ರಾಮಾಯಣ ಎಕ್ಸ್‌ಪ್ರೆಸ್‌; ಇದರ ವಿಶೇಷತೆ ಏನು? ಟಿಕೇಟ್‌ ಎಷ್ಟು?

ಒಂದೇ ಪ್ರವಾಸದಲ್ಲಿ ಅಯೋಧ್ಯೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ಸುತ್ತಾಡಲು ಐಆರ್‌ಟಿಸಿಯು ರಾಮಾಯಣ ಎಕ್ಸ್‌ಪ್ರೆಸ್‌ ರೈಲನ್ನು ಜಾರಿಗೆ ತಂದಿದೆ. ಇದು ಪ್ರಯಾಣಿಕರಿಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ ಮಾಡಿಸಲಿದೆ.

ರಾಮಾಯಣ ಎಕ್ಸ್‌ಪ್ರೆಸ್‌

ರಾಮಾಯಣ ಎಕ್ಸ್‌ಪ್ರೆಸ್‌

ರಾಮಾಯಣ ಎಕ್ಸ್‌ಪ್ರೆಸ್‌..ಹೆಸರು ಕೇಳುವಾಗಲೇ ರಾಮಾಯಣಕ್ಕೆ ಸಂಬಂಧಿಸಿದ್ದೇನೋ ಅನ್ನಿಸುವುದು ಸಹಜ. ಹೌದು ರಾಮಾಯಣ ಎಕ್ಸ್‌ಪ್ರೆಸ್‌ ರೈಲು ರಾಮನಿಗೆ ಸಂಬಂಧಿಸಿದ ಕೆಲವು ಅಭೂತಪೂರ್ವ ತೀರ್ಥ ಸ್ಥಳಗಳ ದರ್ಶನ ಮಾಡಿಸಲಿದೆ. ನವಂಬರ್‌ 14ರಂದು ರಾಮಾಯಣ ಎಕ್ಸ್‌ಪ್ರೆಸ್ ತನ್ನ ಮೊದಲ ಸವಾರಿಯನ್ನು ಪ್ರಾರಂಭಿಸಿದೆ.

ನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿನೀವು ದೇವಸ್ಥಾನಕ್ಕೆ ಹೋದ್ರೂ ಹೋಗದಿದ್ರೂ ನಿಮ್ಮ ನಕ್ಷತ್ರಕ್ಕೆ, ರಾಶಿಗೆ ಪ್ರತಿದಿನ ಪೂಜೆ ಮಾಡ್ತಾರೆ ಇಲ್ಲಿ

ಸಫದರ್‌ಜಂಗ್‌ನಿಂದ ಆರಂಭ

ಸಫದರ್‌ಜಂಗ್‌ನಿಂದ ಆರಂಭ

ದೆಹಲಿಯ ಸಫದರ್‌ಜಂಗ್‌ ಸ್ಟೇಶನ್‌ನಿಂದ ತನ್ನ ಮೊದಲ ಯಾತ್ರೆ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ರೈಲು ನಿಲ್ದಾಣ ಹಾಗೂ ರೈಲನ್ನು ಸುಂದರವಾಗಿ ಅಲಂಕರಿಸಲಾಗಿದೆ.

 ರಾಮ ಸಂದರ್ಶಿಸಿದ ಸ್ಥಳ

ರಾಮ ಸಂದರ್ಶಿಸಿದ ಸ್ಥಳ

ಮಧ್ಯಾಹ್ನ 2.30 ಕ್ಕೆ ಹೊರಟಿರುವ ಈ ರೈಲು ಶ್ರೀರಾಮ ಹೋಗಿದ್ದ ಸ್ಥಳಗಳ ದರ್ಶನ ಮಾಡಿಸಲಿದೆ. ಭಾರತದಿಂದ ಹಿಡಿದು ಶ್ರೀಲಂಕಾವರೆಗೆ ರಾಮನಿಗೆ ಸಂಬಂಧಿಸಿದ ಸ್ಥಳಗಳನ್ನು ನೋಡುವುದರ ಜೊತೆಗೆ ಅದರ ಬಗ್ಗೆ ತಿಳಿಯಲು ಸಹಕಾರಿಯಾಗುತ್ತದೆ.

ಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದುಕಾಶಿ ವಿಶ್ವನಾಥಕ್ಕಿಂತಲೂ ಪುಣ್ಯಕ್ಷೇತ್ರವಂತೆ ಇದು

800 ಜನರು ಪ್ರಯಾಣಿಸಬಹುದು

800 ಜನರು ಪ್ರಯಾಣಿಸಬಹುದು

16 ದಿನಗಳ ಯಾತ್ರೆ ಇದಾಗಿದೆ. ಈ ರೈಲಿನಲ್ಲಿ ೮೦೦ ಜನರು ಪ್ರಯಾಣಿಸಬಹುದು. ಅವರಲ್ಲಿ ೪೦ ಯಾತ್ರಿಗಳು ಶ್ರೀಲಂಕಾವರೆಗೆ ಪ್ರಯಾಣಿಸಬಹುದು. ರೈಲಿನ ಮೊದಲ ಯಾತ್ರೆಗೆ ಎಲ್ಲಾ ಸೀಟುಗಳು ಫುಲ್ ಆಗಿವೆ.

ಎಲ್ಲೆಲ್ಲಾ ಸುತ್ತಾಡಬಹುದು

ಎಲ್ಲೆಲ್ಲಾ ಸುತ್ತಾಡಬಹುದು

ಭಾರತದಲ್ಲಿ ಅಯೋಧ್ಯೆ, ನಂದಿಗ್ರಾಮ, ಜನಕ್‌ಪುರ, ವಾರಣಾಸಿ, ಪ್ರಯಾಗ, ಶೃಂಗವೇರ್‌ಪುರ್, ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರ ದರ್ಶನ ಮಾಡಿಸಲಾಗುವುದು.

 ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ ಜೋಗೇಶ್ವರಿ ಮಾತ ; ಇಲ್ಲಿಗೆ ಹೋದ್ರೆ ನಿಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರುತ್ತಂತೆ

 ಟಿಕೇಟ್ ಬೆಲೆ ಎಷ್ಟು ?

ಟಿಕೇಟ್ ಬೆಲೆ ಎಷ್ಟು ?

ಭಾರತ ದರ್ಶನ ಮಾಡುವ ಯಾತ್ರಿಗಳಿಗೆ ಟಿಕೇಟ್‌ ಬೆಲೆ 15,120 ರೂ. ಶ್ರೀಲಂಕಾ ಹೋಗುವ ಯಾತ್ರಿಗಳಿಗೆ 36,970 ರೂ. ಯಾತ್ರೆಯ ಸಂದರ್ಭದಲ್ಲಿ ಎಲ್ಲಾ ರೀತಿಯ ಸುರಕ್ಷತೆಯನ್ನು ಒದಗಿಸಲಾಗುವುದು. ಜೊತೆಗೆ ಟೂರ್ ಮ್ಯಾನೇಜರ್ ಕೂಡಾ ಇರುತ್ತಾರೆ.

ಐಆರ್‌ಸಿಟಿಸಿ ವ್ಯವಸ್ಥೆ

ಐಆರ್‌ಸಿಟಿಸಿ ವ್ಯವಸ್ಥೆ

ಈ ಪ್ರವಾಸದ ಎಲ್ಲಾ ಆಯೋಜನೆಯನ್ನು ಐಆರ್‌ಸಿಟಿಸಿ ಮೂಲಕವೇ ನಡೆಸಲಾಗುವುದು. ಊಟ ಹಾಗೂ ವಾಸ್ತವ್ಯದ ವ್ಯವಸ್ಥೆ , ಬಟ್ಟೆ ಒಗೆಯುವುದು ಎಲ್ಲಾ ಪ್ಯಾಕೇಜ್‌ನಲ್ಲೇ ಬರುತ್ತದೆ. ಶ್ರೀಲಂಕಾದ ಯಾತ್ರೆ ಮಾಡಬೇಕೋ ಬಿಡುವುದು ನಿಮಗೆ ಬಿಟ್ಟಿದ್ದು.

 ಶ್ರೀಲಂಕಾ ಯಾತ್ರೆ

ಶ್ರೀಲಂಕಾ ಯಾತ್ರೆ

ಒಂದು ವೇಳೆ ನೀವು ಶ್ರೀಲಂಕಾದ ಯಾತ್ರೆ ಮಾಡಬೇಕೆಂದಿದ್ದರೆ, ಐಆರ್‌ಸಿಟಿಸಿ ಚೆನ್ನೈನಿಂದ ಫ್ಲೈಟ್ ಟಿಕೇಟ್ ಬುಕ್ ಮಾಡುತ್ತದೆ. ಶ್ರೀಲಂಕಾ ಪ್ರವಾಸವು 6 ದಿನ ಹಾಗೂ 5ರಾತ್ರಿಯದ್ದಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X