Search
  • Follow NativePlanet
Share
» »ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದಲ್ಲಿ ಯಲಗಂಡ್ಲ ಖಿಲ್ಲಾದಾರ್ ಆದ ಸಯ್ಯದ್ ಕರಿಮುದ್ಧಿನ್ ಹೆಸರಿನಿಂದ ನಿರ್ಮಿತವಾದ 100 ಸ್ಮಾರ್ಟ್ ಸಿಟಿಯಲ್ಲಿ ಒಂದಾಗಿದೆ ಕರಿಂನಗರ. ಪಟ್ಟಣಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಜೀವಕಳಾ ಲಿಂಗ ಕ್ಷೇತ್

By Sowmyabhai

ನೂತನವಾಗಿ ನಿರ್ಮಿತವಾದ ತೆಲಂಗಾಣ ರಾಜ್ಯದಲ್ಲಿ ಯಲಗಂಡ್ಲ ಖಿಲ್ಲಾದಾರ್ ಆದ ಸಯ್ಯದ್ ಕರಿಮುದ್ಧಿನ್ ಹೆಸರಿನಿಂದ ನಿರ್ಮಿತವಾದ 100 ಸ್ಮಾರ್ಟ್ ಸಿಟಿಯಲ್ಲಿ ಒಂದಾಗಿದೆ ಕರಿಂನಗರ. ಪಟ್ಟಣಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಜೀವಕಳಾ ಲಿಂಗ ಕ್ಷೇತ್ರ ಕೋಟಿ ಲಿಂಗಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ, ಈ ಬಗ್ಗೆ ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೊಣ.

ದೇಶದಲ್ಲಿಯೇ 2 ನೇ ಅತಿ ದೊಡ್ಡ ಜೀವನದಿಯಾದ ಗೋದಾವರಿ ನದಿ ತೀರದಲ್ಲಿ ಶಾತವಾಹನರ ಚರಿತ್ರೆಗೆ ಕಂಚು ಕೋಟೆಯಾಗಿ ನಿಂತ ಈ ಮಹಾಪುಣ್ಯಕ್ಷೇತ್ರವನ್ನು ಶಿವಭಕ್ತರು ತಪ್ಪದೇ ದರ್ಶಿಸುತ್ತಾರೆ. ಯಂಥವರೇ ಆಗಲಿ ಇಲ್ಲಿನ ಸ್ಥಳ ಪುರಾಣದ ಬಗ್ಗೆ ತಿಳಿದರೆ ತಪ್ಪದೇ ಈ ಕ್ಷೇತ್ರದ ದರ್ಶನಕ್ಕೆ ಹಾತೊರೆಯುತ್ತಾರೆ. ಶಾತವಾಹನ ಸಾಮ್ರಾಜ್ಯವು ಎತ್ತರವಾದ ಕೋಟೆಯ ಮಧ್ಯದಲ್ಲಿ ನಿರ್ಮಾಣ ಮಾಡಿದ ಸಲುವಾಗಿ ಈ ದೇವಾಲಯಕ್ಕೆ ಕೋಟಿ ಲಿಂಗಗಳು ಎಂದು ಹೆಸರು ಬಂದಿತು.

1.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

1.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಪಾಶ್ಚಿಮಾತ್ಯರು ಇನ್ನು ಆರ್ಯರು ಈ ಪ್ರದೇಶವನ್ನು ಅತಿ ಕಡಿಮೆ ದೃಷ್ಟಿಯಿಂದ ನೋಡಿದರು ಕೂಡ, ಕೋಟಿಲಿಂಗಗಳ ಘನಚರಿತ್ರೆ ತೆಲುಗು ಭಾಷೆಯವರ ಖ್ಯಾತಿಯನ್ನು ವಿಶ್ವವಿಖ್ಯಾತಿಯ ಮಟ್ಟಕ್ಕೆ ಏರಿಸಿದೆ. ಈ ಪ್ರದೇಶವು ಶಾತವಾಹನರ ಸಮಯದಿಂದ ಅಭಿವೃದ್ಧಿಯಾಯಿತು ಎಂಬುದು ತಿಳಿದು ಬಂದಿದೆ.

2.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

2.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಭಾರತೀಯ ಪುರಾವಸ್ತು ಶಾಖೆಯವರು ಈ ಪ್ರದೇಶಕ್ಕೆ ಸೇರಿದ ಕೆಲವು ಆರಿಸಿಕೊಂಡ ಪ್ರದೇಶದಲ್ಲಿ ನಡೆದ ಸಂಶೋಧನೆಗಳಿಂದ ದಿಗ್ಭಮೆಗೊಳಿಸುವ ಶಾತವಾಹನರ ಕಾಲದ ವಸ್ತು ಸಂಪತ್ತು ದೊರೆತಿದೆ. ಅಷ್ಟೇ ಅಲ್ಲ ಗೌತಮಿ ಪುತ್ರ ಶಾತವಾಹನರ ಕಾಲದ್ದು ಮತ್ತು ಲೋಹದಿಂದ ಸಮ್ಮಿಳಿತವಾದ ನಾಣ್ಯಗಳು, ಚೌಕದ ಆಭರಣಗಳು, ಮಣ್ಣಿನ ಪಾತ್ರೆಗಳು, ಭೋಜನ ಸಮಯದಲ್ಲಿ ಬಳಸುವ ವಸ್ತುಗಳು, ಅಡುಗೆಯ ಪರಿಕರಗಳು ದೊರೆತ್ತಿದ್ದರಿಂದ ಆಶ್ಚರ್ಯಗೊಂಡರು ಅಲ್ಲಿನ ಸ್ಥಳೀಯರು.

3.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

3.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಅಷ್ಟೇ ಅಲ್ಲ, ಗೋದಾವರಿಯಿಂದ ತಮ್ಮ ನೌಕಾ ಸಂಬಂಧಿತ ವ್ಯಾಪಾರಕ್ಕೆ ಬಳಸುವ ಹಾಗು ಯುದ್ಧಕ್ಕೆ ಅವಸರವಾದ ಖನಿಜಗಳು, ಭಾರವಾದ ಯುದ್ಧ ಸಾಮಾಗ್ರಿಗಳು ಸಾಗಿಸಲು ಬಳಸಿದ ರೇವು ಪಟ್ಟಣ ಕೇಂದ್ರವಾಗಿ ಕೂಡ ಬಳಸುತ್ತಿದ್ದರು ಎಂದು ತಿಳಿದುಬರುತ್ತದೆ.

4.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

4.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಅಖಂಡ ಭಾರತದಲ್ಲಿ ಹೆಸರುವಾಸಿಯಾದ ಜಾನಪದ ಸಂಸ್ಥಾನ ಎನ್ನುವ ಪರಿಪಾಲನೆ ವ್ಯವಸ್ಥೆಯ ಪ್ರದೇಶವಾಗಿದ್ದು ಮತ್ತೊಂದು ವಿಶೇಷ ಎಂದೇ ಹೇಳಬಹುದು. ಅಂಥಹ ಆಧ್ಯಾತ್ಮಿಕ ಮತ್ತು ಶಾಸ್ತ್ರ ಪ್ರಾವಿಣ್ಯವನ್ನು ಹೊಂದಿದ್ದ ಶೈವ ಕ್ಷೇತ್ರವಾಗಿ ಕಂಗೊಳಿಸುತ್ತಿರುವ ಈ ಮಹಾ ಪುಣ್ಯಕ್ಷೇತ್ರಕ್ಕೆ ವರ್ಷದಾದ್ಯಂತ ಭಕ್ತರು ಹೆಚ್ಚಾಗಿ ಭೇಟಿ ನೀಡುವುದು ಒಂದು ಶುಭಪರಿಣಾಮ ಎಂದೇ ಹೇಳಬಹುದು.

5.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

5.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಈ ಕ್ಷೇತ್ರದ ಬಗೆಗಿನ ಚರಿತ್ರೆಯನ್ನು ನಾವು ತಿಳಿದುಕೊಳ್ಳಬೇಕಾದರೆ ಆಜ್ಞೇಯಾ ದಿಕ್ಕಿನಲ್ಲಿರುವ ಮುನಿಗಳ ಗುಡ್ಡದಲ್ಲಿನ ತಪಸ್ಸ್ ಶಕ್ತಿ ಸಂಪನ್ನರಾದ ಕೆಲವು ಮುನಿಗಳ ಆರಾಧನೆಯಿಂದಾಗಿ ನಿರ್ಮಿಸಲ್ಪಟ್ಟ ಲಿಂಗಾದಾರಕ್ಷೇತ್ರವೆಂದು ನಮಗೆ ತಿಳಿಯುತ್ತದೆ.

6.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

6.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಸ್ಥಳೀಯರು ಹೇಳುವ ತ್ರೇತಾಯುಗದಲ್ಲಿನ ಕಥೆಯ ಆಧಾರವಾಗಿ ಸಾಕ್ಷಾತ್ತು ಚಿರಂಜೀವಿಯಾದ ಮಹಾ ಬಾಹುಬಲಿ ಆಂಜನೇಯನು ತಂದ ಮಹಾಕಾಶಿ ಲಿಂಗ ಸ್ಥಾನದಲ್ಲಿ ಸಮಯಭಾವದಿಂದಾಗಿ ಮುನಿ ನಿರ್ಮಿತವಾದ ಮರಳಿನ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಯಿತು ಎಂದು ತಿಳಿದುಬರುತ್ತದೆ.

7.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

7.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಹಾಗೆ ದಿವ್ಯಮಾನವಾಗಿ ಅಖಂಡ ಭಾರತದೇಶದಲ್ಲಿ ತನಗೆ ಎಂದೂ ಒಂದು ಪ್ರತ್ಯೇಕವಾದ ಸ್ಥಾನವನ್ನು ಏರ್ಪಡಿಸಿಕೊಂಡ ಈ ಆಂಜನೇಯ ರಕ್ಷಿತ ಪಾರ್ವತಿ ಅಧಿತ ದಿವ್ಯಲಿಂಗ ಕ್ಷೇತ್ರದ ಬಗ್ಗೆ ಎಷ್ಟೇ ಹೇಳಿಕೊಂಡರು ಅಷ್ಟೇ. ಸಾವಿರ ವರ್ಷಗಳ ಚರಿತ್ರೆಯನ್ನು ಹೊಂದಿರುವ ಈ ದೇವಾಲಯದ ಬಗ್ಗೆ ಶಾಸ್ತ್ರಿಯ ಮತ್ತು ಶಾಸ್ತ್ರ ಅಂಶಗಳು ಇನ್ನು ಅಲ್ಲಿನ ಭೂಮಿಯಲ್ಲಿ ಭದ್ರವಾಗಿ ಇದೆ ಎಂದು ಹೇಳಲಾಗುತ್ತಿದೆ.

8.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

8.ಮರಳಿನಲ್ಲಿ ಮಾಡಿದ ಶಿವಲಿಂಗಗಳು...

ಆ ದೇವಾಲಯವೇ ಕೋಟೇಶ್ವರ ದೇವಾಲಯ. ಅವುಗಳನ್ನು ಯಾವುದಾದರೂ ದಿನ ಬೆಳಕಿಗೆ ತಂದು ಪ್ರಪಂಚಕ್ಕೆ ಈ ಶೈವಕ್ಷೇತ್ರದ ವಿಶಿಷ್ಟತೆಯನ್ನು ಹಿಂದೂ ಸನಾತನ ಧರ್ಮದಲ್ಲಿನ ರಾಜಸತ್ವವನ್ನು, ದರ್ಪವನ್ನು, ಆತ್ಮ ಗೌರವವನ್ನು ಹಾಗು ಶಾತವಾಹನರ ಚರಿತ್ರೆಯ ಬಗ್ಗೆ ತಿಳಿಸಬೇಕು ಎಂದು ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಹಾಗು ತೆಲಂಗಾಣ ಸರ್ಕಾರವು ಧೃಡ ಸಂಕಲ್ಪವನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X