Search
  • Follow NativePlanet
Share
» »ಉತ್ತರಪ್ರದೇಶದ ಶ್ರಾವಸ್ತಿಯ ಸುತ್ತಮುತ್ತಲಿನ ತಾಣಗಳನ್ನೊಮ್ಮೆ ನೋಡಿ

ಉತ್ತರಪ್ರದೇಶದ ಶ್ರಾವಸ್ತಿಯ ಸುತ್ತಮುತ್ತಲಿನ ತಾಣಗಳನ್ನೊಮ್ಮೆ ನೋಡಿ

ಉತ್ತರಪ್ರದೇಶದ ಶ್ರಾವಸ್ತಿ ನಗರ ಗೌತಮ ಬುದ್ದನ ಕಾಲದಲ್ಲಿ ದೇಶದ ಆರನೇ ಅತಿದೊಡ್ಡ ನಗರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಗರದ ಬಗ್ಗೆ ಮಹಾಭಾರತದ ಗ್ರಂಥದಲ್ಲೂ ಉಲ್ಲೇಖವಿದ್ದು, ಶ್ರಾವಸ್ತ ರಾಜನ ನೆನಪಿಗಾಗಿ ಈ ನಗರಕ್ಕೆ ಶ್ರಾವಸ್ತಿ ಎಂದು ಹೆಸರಿಡಲಾಗಿದೆ ಎನ್ನುವುದು ನಂಬಿಕೆ. ಆದರೆ ಬೌದ್ದ ಧರ್ಮೀಯರ ನಂಬಿಕೆಯಂತೆ ಇಲ್ಲಿ ಸಾವತ್ತಾ ಎನ್ನುವ ಮುನಿವಾಸವಾಗಿದ್ದರಿದ ಈ ನಗರಕ್ಕೆ ಶ್ರಾವಸ್ತಿ ಎಂದು ಹೆಸರು ಬಂದಿದೆ.

ಅನಾಥಪಿಂಡಿಕಾ

ಅನಾಥಪಿಂಡಿಕಾ

PC:myself
ಶ್ರಾವಸ್ತಿ ಒಂದು ಬೌದ್ದ ಧರ್ಮೀಯರ ಅತಿದೊಡ್ಡ ಯಾತ್ರಾ ಸ್ಥಳವಾಗಿದ್ದು, ಭಾರತದಿಂದ ಮಾತ್ರವಲ್ಲದೇ ಪ್ರಪಂಚದ ಇತರ ಬೌದ್ದ ದೇಶಗಳಾದ ಶ್ರೀಲಂಕಾ, ಜಪಾನ್, ಚೈನಾ ಮತ್ತು ಥೈಲ್ಯಾಂಡ್ ದೇಶಗಳಿಂದಲೂ ಶ್ರಾವಸ್ತಿಗೆ ಭಕ್ತರು ಬರುತ್ತಾರೆ. ಜೇತ್ವಾನ ಆಶ್ರಮ ಬುದ್ದ ಶ್ರಾವಸ್ತಿ ನಗರದಲ್ಲಿದ್ದಾಗ ಅತಿ ಹೆಚ್ಚು ದಿನ ತಂಗಿದ್ದ ಸ್ಥಳ. ಇಲ್ಲಿಗೆ ಪ್ರಥಮ ಬಾರಿಗೆ ಬುದ್ದ ಭೇಟಿ ನೀಡಿದ್ದು ಅನಾಥಪಿಂಡಿಕಾ ಆಹ್ವಾನದ ಮೇರೆಗೆ, ಇಬ್ಬರೂ ರಾಜಗಹಾ ಎನ್ನುವ ಪ್ರದೇಶದಲ್ಲಿ ಭೇಟಿಯಾದರು.

ಶ್ರಾವಸ್ತಿ ಸುತ್ತ ಮುತ್ತಲಿನ ಪ್ರವಾಸಿ ತಾಣಗಳು

ಶ್ರಾವಸ್ತಿ ಸುತ್ತ ಮುತ್ತಲಿನ ಪ್ರವಾಸಿ ತಾಣಗಳು

PC:myself
ಬುದ್ದ ಅನಾಥಪಿಂಡಿಕಾ ಬೆಳಿಸಿದ್ದ ಎನ್ನುವುದು ಪುರಾಣದಲ್ಲಿ ಸಿಗುವ ಮಾಹಿತಿ, ಇದು ರಪ್ತಿ ಎನ್ನುವ ನದಿಯ ಹಿಂಬದಿಯಲ್ಲಿದೆ. ಮಹೇಥ್ ಸುತ್ತಿ ಕೊಳ್ಳುವಂತಹ ಆಕ್ರುತಿಯಲ್ಲಿರುವ ಅತಿ ಎತ್ತರದ ರಕ್ಷಣೆಯಲ್ಲಿದ್ದು ಗಟ್ಟಿಮುಟ್ಟಾದ ಗೋಡೆಯನ್ನು ಹೊಂದಿದ್ದು ಹಲವಾರು ಗೇಟು ಮತ್ತು ನಾಲ್ಕು ಕೋಟೆಗಳ ಮೂಲಕ ಸುತ್ತುವರಿದಿದೆ. ಈ ಭಾಗದಲ್ಲಿ ಭೂಶೋಧನೆ ನಡೆಸಿದಾಗ ಹಲವಾರು ವಿಸ್ಮಯಕಾರಿ ಸಂಗತಿಗಳು ಸಹೇಥ್ ನಲ್ಲಿ ಪತ್ತೆಯಾಗಿದೆ, ಅದರಲ್ಲಿ ಪ್ರಮುಖವಾಗಿ ಗದ್ದಿಗೆಕಲ್ಲು, ಬುದ್ದರ ಕಾಲದ ಹಲವು ಅಡಿಪಾಯಗಳು, ಸ್ತೂಪಗಳು, ಆಶ್ರಮಗಳು ಮತ್ತು ದೇವಾಲಯಗಳು. ಬಲಾರಂಪುರ ಜಿಲ್ಲೆ ಹೆಸರಾಂತ ಪ್ರವಾಸಿ ಸ್ಥಳವಾಗಿದ್ದು ಅತಿಹೆಚ್ಚು ಸುರಕ್ಷಿತ ತಾಣವಾಗಿದೆ.

ಪಯಾಗಪುರ ಮತ್ತು ಖರಗಪುರ

ಪಯಾಗಪುರ ಮತ್ತು ಖರಗಪುರ

PC:myself
ಇಲ್ಲಿಗೆ ಭೇಟಿ ನೀಡಿದಾಗ ಪಯಾಗಪುರ ಮತ್ತು ಖರಗಪುರಕ್ಕೂ ಭೇಟಿ ನೀಡಬಹುದು, ಅತಿ ಸುಂದರ ಹಳ್ಳಿ ಮತ್ತು ಪ್ರದೇಶವನ್ನು ಹೊಂದಿದೆ. ಚರಿತ್ರೆ ರಪ್ತಿ ನದಿ ತಟದಲ್ಲಿರುವ ಶ್ರಾವಸ್ತಿ ಕೋಸಲರ ರಾಜಧಾನಿಯಾಗಿತ್ತು ಮತ್ತು ಪಸೇನದಿ ರಾಜನ ಆಳ್ವಿಕೆಯಲ್ಲಿತ್ತು, ಅವನು ಬುದ್ದ ಧರ್ಮದ ಪರಿಪಾಲಕನಾಗಿದ್ದನು. ನಂಬಿಕೆಯ ಪ್ರಕಾರ ಬುದ್ಧನು ಹೆಚ್ಚಿನ ಸಮಯವನ್ನು ಇಲ್ಲಿ ಕಳೆದಿದ್ದಾನೆ.

ಐತಿಹಾಸಿಕ ಸ್ಮಾರಕಗಳು

ಐತಿಹಾಸಿಕ ಸ್ಮಾರಕಗಳು

PC:Varun Shiv Kapur
ಇಲ್ಲಿ ಹಲವು ಆಶ್ರಮಗಳನ್ನು ಅವರ ಆಳ್ವಿಕೆಯಲ್ಲಿ ಕಟ್ಟಲಾಗಿತ್ತು ಅದರಲ್ಲಿ ಪ್ರಮುಖವಾಗಿ ಜೇತವನ ಮತ್ತು ಪುಬ್ಬರಾಮ ಆಶ್ರಮ, ರಾಜಕುಮಾರ ಆಶ್ರಮವನ್ನು ಪಸೇನದಿ ರಾಜ ಕಟ್ಟಿದ್ದ. ಈಗಲೂ, ಶ್ರಾವಸ್ತಿ ನಗರವು ಮೂರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಅನಾಥಪಿಂಡಿಕಾ ಸ್ತೂಪ, ಅಂಗುಲಿಮಾಲಾನ ಸ್ತೂಪ ಮತ್ತು ಜೈನ್ ತೀರ್ಥಂಕರರ ಪುರಾಣ ದೇವಾಲಯ. ನಗರದ ಹೊರವಲಯದ ಗೇಟಿನಲ್ಲಿ ಅವಳಿ ವಿಸ್ಮಯಗಳು ನಡೆದ ಜಾಗವಿದೆ.

ಪುರಾಣದ ಪ್ರಕಾರ

ಪುರಾಣದ ಪ್ರಕಾರ

PC:myself
ಪುರಾಣದ ಪ್ರಕಾರ, ಬುದ್ದ ಶ್ರಾವಸ್ತಿಯಲ್ಲಿ 25 ಮಳೆಗಾಲವನ್ನು ಕಳೆದಿದ್ದ, ಅದರಲ್ಲಿ 19 ಮಳೆಗಾಲವನ್ನು ಜೇತವನ ಆಶ್ರಮದಲ್ಲಿ ಕಳೆದ, ಆರನ್ನು ಪುಬ್ಬರಾಮ ಆಶ್ರಮದಲ್ಲಿ ಕಳೆದ. ಇದೇ ಜಾಗದಲ್ಲಿ ಬುದ್ದ ತನ್ನ ಹಿಂಬಾಲಕರಿಗೆ ಹಲವು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದ. ಶ್ರಾವಸ್ತಿ ಜೈನ ಸಮುದಾಯದವರಿಗೂ ಅತಿ ವಿಶಿಷ್ಟವಾದ ಜಾಗ, ಮೂರನೇ ಜೈನ್ ತೀರ್ಥಂಕರ ಶಂಭವನಾಥ್ ಇಲ್ಲೇ ಜನಿಸಿದ್ದರು ಎನ್ನುವುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:myself
ಶ್ರಾವಸ್ತಿ ತಲುಪಲು ಉತ್ತಮ ಸಮಯ ಶ್ರಾವಸ್ತಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ, ಹುಲಿಧಾಮ ಮತ್ತು ಧಾರ್ಮಿಕ ಸ್ಥಳಗಳು ಪ್ರವಾಸಿಗರನ್ನು ವರ್ಷಾದ್ಯಂತ ತನ್ನತ್ತ ಆಕರ್ಷಿಸುತ್ತದೆ.

ಶ್ರಾವಸ್ತಿ ತಲುಪುದು ಹೇಗೆ

ಶ್ರಾವಸ್ತಿ ತಲುಪುದು ಹೇಗೆ

PC:myself
ಇಲ್ಲಿಗೆ ತಲುಪಲು ರೈಲಿನ ಮೂಲಕ ಎರಡು ದಾರಿಗಳಿವೆ. ಒಂದು ಬಲರಾಂಪುರದ ಮೂಲಕ, ಇದೊಂದು ಪುಟ್ಟ ರೈಲು ನಿಲ್ದಾಣ ಮತ್ತು ಇದರಲ್ಲಿ ಹಲವು ರೈಲುಗಳು ಬಂದು ಹೋಗುತ್ತವೆ. ಮತ್ತೊಂದು ದಾರಿಯೆಂದರೆ ಗೊಂಡಾ ರೈಲ್ವೇ ನಿಲ್ದಾಣ, ಇಲ್ಲಿಗೆ ದೇಶದ ಪ್ರಮುಖ ನಗರಗಳಾದ ದೆಹಲಿ, ಲಕ್ನೋ, ಅಹಮದಾಬಾದ್ ಮತ್ತು ಬೆಂಗಳೂರು, ಕೊಲ್ಕತ್ತಾ, ಆಗ್ರಾದಿಂದ ಸಂಪರ್ಕವಿದೆ. ಗೊಂಡಾದಿಂದ ಟ್ಯಾಕ್ಸಿ ಮೂಲಕ ಶ್ರಾವಸ್ತಿ ತಲುಪಬಹುದು. ಶ್ರಾವಸ್ತಿ ನಗರ ತಲುಪಲು ಲಕ್ನೋ, ವಾರಣಾಸಿ ಮತ್ತು ಸಾರಾನಾಥ್ ಮೂಲಕ ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X