• Follow NativePlanet
Share
» »ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

ಗೋವಾದ ಬಗ್ಗೆ ಶಾಕಿಂಗ್ ವಿಷಯಗಳು.....

Written By:

ಗೋವಾ ಅತ್ಯಂತ ಸುಂದರವಾದ ಪ್ರದೇಶ. ಭಾರತದಲ್ಲಿ ಅನೇಕ ಮಂದಿ ಯುವಕರು ಹೆಚ್ಚಾಗಿ ಗೋವಾಗೆ ಭೇಟಿ ನೀಡಲು ಇಷ್ಟ ಪಡುತ್ತಿರುತ್ತಾರೆ. ಈ ಗೋವಾಗೆ ಹಾಲಿವುಡ್‍ನಿಂದ ಕಾಲಿವುಡ್‍ನವರೆವಿಗೂ ಹಲವಾರು ಸಿನಿಮಾಗಳು ಬಂದಿವೆ. ಈ ಪ್ರದೇಶ ಅತ್ಯಂತ ಅದ್ಭುತವಾಗಿರುತ್ತದೆ. ತನ್ನ ರಮಣೀಯವಾದ ಪರಿಸರದಿಂದ ಕಂಗೊಳಿಸುತ್ತಿರುತ್ತದೆ. ಈ ಗೋವಾಗೆ ರಾಜಧಾನಿ ಪಣಜಿ. ಗೋವಾದಲ್ಲಿ ಅತಿ ದೊಡ್ಡದಾದ ನಗರ ವಾಸ್ಕೋಡಿಗಾಮ. ಇದು ನಮ್ಮ ಭಾರತದಲ್ಲಿರುವ ಎಲ್ಲಾ ರಾಜ್ಯಗಳಿಗಿಂತ ಅತಿ ಚಿಕ್ಕ (25) ನೇ ರಾಜ್ಯವಾಗಿದೆ.

ಇಲ್ಲಿ ಹೆಚ್ಚಾಗಿ ಕೊಂಕಣಿ, ಕನ್ನಡ ಭಾಷೆಯನ್ನು ಕೂಡ ಮಾತನಾಡುತ್ತಾರೆ. ಈ ಗೋವಾ ನಮ್ಮ ಪಶ್ಚಿಮ ತೀರದ ಅರೇಬಿಯಾ ಮಹಾ ಸಮುದ್ರ ತೀರಕ್ಕೆ ಅಂಚಿನಲ್ಲಿರುತ್ತದೆ. ಈ ಪ್ರದೇಶವನ್ನು ಕೊಂಕಣಿ ತೀರ ಎಂದು ಕೂಡ ಕರೆಯುತ್ತಾರೆ. ಈ ಗೋವಾಗೆ ಉತ್ತರ ದಿಕ್ಕಿಗೆ ಮಹಾರಾಷ್ಟ್ರ, ಪೂರ್ವ-ದಕ್ಷಿಣದ ದಿಕ್ಕಿಗೆ ಕರ್ನಾಟಕ ರಾಜ್ಯ ಇದೆ. ಈ ಗೋವಾ ದೇಶದಲ್ಲಿಯೇ ವಿಶಾಲವಾಗಿರುವ 2 ನೇ ಅತಿ ಚಿಕ್ಕ ರಾಜ್ಯವಾಗಿದೆ.

ಗೋವಾ ಬೀಚ್‍ಗಳು

ಗೋವಾ ಬೀಚ್‍ಗಳು

ಅನೇಕ ಮಂದಿ ಗೋವಾಗೆ ತೆರಳುತ್ತಿರುತ್ತಾರೆ. ಅಲ್ಲಿ ಅಂಥಹ ಇಂಥಹ ಏಂಜಾಯ್‍ಮೆಂಟ್ ಸಿಗುವುದಿಲ್ಲ. ಭಾರತ ದೇಶದವರೇ ಇಷ್ಟು ಏಂಜಾಯ್ ಮಾಡುತ್ತಾ ಇದ್ದರೆ, ವಿದೇಶಿಯರು ಸುಮ್ಮನೆ ಇರುತ್ತಾರೆಯೇ?. ಗೋವಾಗೆ ಅತಿ ಹೆಚ್ಚು ಪ್ರವಾಸಿಗರು ಎಂದರೆ ಅದು ವಿದೇಶಿಯರೇ. ಹಲವಾರು ವಿದೇಶಗಳಿಂದ ಪ್ರವಾಸಿಗರು ಈ ಸ್ಥಳಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಗೋವಾ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಬೀಚ್‍ಗಳು.

PC:Rajarshi MITRA

ವಿದೇಶಿಯರು

ವಿದೇಶಿಯರು

ಆ ಬೀಚ್‍ಗಳಲ್ಲಿ ಕೇವಲ ಭಾರತೀಯರೇ ಅಲ್ಲದೇ ವಿದೇಶಿಯರೂ ಕೂಡ ಏಂಜಾಯ್ ಮಾಡುತ್ತಾರೆ. ಆದರೆ ನಿಮಗೆ ಗೊತ್ತೆ? ಭಾರತೀಯರು ವಿದೇಶಿಯರ ಉಡುಪುಗಳನ್ನು ಕಂಡು ಫೋಟೋಗಳನ್ನು ತೆಗೆದುಕೊಳ್ಳುವುದರಿಂದ ವಿದೇಶಿಯರಿಗೆ ಇಷ್ಟವಾಗುವುದಿಲ್ಲ. ನಿಮಗೆ ಗೊತ್ತ? ಕೆಲವು ಬೀಚ್‍ಗಳಿಗೆ ಭಾರತೀಯರಿಗೆ ನೂ ಎಂಟ್ರಿ. ಹಾಗಾಗಿ ವಿದೇಶಿಯರ ಒಪ್ಪಿಗೆ ಇಲ್ಲದೇ ಫೋಟೋಗಳನ್ನು ತೆಗೆಯಬಾರದು. ಹಾಗೇನಾದರೂ ತೆಗೆದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

PC:Jaskirat Singh Bawa

ಟ್ಯಾಟೋ

ಟ್ಯಾಟೋ

ಗೋವಾದಲ್ಲಿ ಟ್ಯಾಟೋಗಳನ್ನು ಹಾಕುವವರು ಹೆಚ್ಚಾಗಿರುತ್ತಾರೆ. ಚಿಕ್ಕ ಚಿಕ್ಕ ಮರದ ಬಳಿ, ಬೀಚ್‍ನ ಬಳಿ ಟ್ಯಾಟೋ ಹಾಕುವವರು ಹೆಚ್ಚಾಗಿರುತ್ತಾರೆ. ಇವರು ಟ್ಯಾಟೋ ಹಾಕುವುದರಲ್ಲಿ ಪರಿಣಿತರಲ್ಲ. ಗೋವಾದಲ್ಲಿ ಟ್ಯಾಟೋ ಹಾಕಿಸಿಕೊಳ್ಳಲೇಬೇಕು ಎಂದಾದರೆ ಸ್ವಲ್ಪ ದುಡ್ಡು ಹೆಚ್ಚಾದರೂ ಕೂಡ ಒಳ್ಳೆಯ ಸ್ಥಳದಲ್ಲಿ ಹಾಕಿಸಿಕೊಳ್ಳಿ. ಇಲ್ಲಿವಾದರೇ ಕೆಲವು ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆಗಳು ಇರುತ್ತವೆ.

PC:Vicky WJ

ಮದ್ಯಪಾನ

ಮದ್ಯಪಾನ

ಭಾರತ ದೇಶದಲ್ಲಿಯೇ ಅತ್ಯಂತ ಕಡಿಮೆ ಬೆಲೆಯಲ್ಲಿ ಮದ್ಯಪಾನ ದೊರೆಯುವ ಸ್ಥಳವೆಂದರೆ ಅದು ಗೋವಾ. ವಿದೇಶಿಯರ ಬ್ಯ್ರಾಂಡ್ ಕೂಡ ಅಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಗೋವಾಗೆ ತೆರಳುವವರಲ್ಲಿ ಕೆಲವರು ಅತ್ಯಂತ ಕಡಿಮೆ ಬೆಲೆಯಲ್ಲಿ ಮದ್ಯಪಾನ ದೊರೆಯುತ್ತದೆ ಎಂದು ಹೆಚ್ಚು ಕುಡಿಯುತ್ತಿರುತ್ತಾರೆ. ಅಪ್ಪಿ-ತಪ್ಪಿ ನೀವು ಕುಡಿದು ಅಲ್ಲಿಯೇ ಬಿದ್ದು ಹೋದರೆ ಯಾರು ಕೂಡ ನಿಮಗೆ ಸಹಾಯವನ್ನು ಮಾಡುವುದಿಲ್ಲ. ಕಾರಣವೇನೆಂದರೆ ಗೋವಾದಲ್ಲಿರುವ ಜನರು ಅತ್ಯಂತ ಬ್ಯುಸಿ ಲೈಫ್ ಅನುಸರಿಸುತ್ತಿರುತ್ತಾರೆ.

PC:Jaskirat Singh Bawa

ರಾತ್ರಿಯ ಸಮಯ

ರಾತ್ರಿಯ ಸಮಯ

ಗೋವಾದಲ್ಲಿ ರಾತ್ರಿಯ ಸಮಯದಲ್ಲಿ ಒಂಟಿಯಾಗಿ ಎಲ್ಲಿಯೂ ತಿರುಗಬಾರದು. ಗೋವಾಗೆ ತೆರಳಿದಾಗ ನಿಮಗೆ ತಿಳಿಯದೇ ಇರುವ ಸ್ಥಳಗಳಿಗೆಲ್ಲಾ ಭೇಟಿ ನೀಡಬಾರದು. ಅದರಲ್ಲಿಯೂ ಮುಖ್ಯವಾಗಿ ರಾತ್ರಿಯ ಸಮಯದಲ್ಲಿ. ಏಕೆಂದರೆ ಆ ಸಮಯದಲ್ಲಿಯೇ ಕಳ್ಳರು ಹೆಚ್ಚಾಗಿರುವುದರಿಂದ ನಿಮ್ಮ ಪ್ರಾಣವನ್ನು ತೆಗೆಯಲು ಕೂಡ ಹಿಂದೆ-ಮುಂದೆ ನೋಡುವುದಿಲ್ಲ.


PC:Rajan Manickavasagam

ವಾತಾವರಣ

ವಾತಾವರಣ

ಗೋವಾದ ವಾತಾವರಣ ಅತ್ಯಂತ ಸುಂದರವಾಗಿದೆ ಎಂದು ರಾತ್ರಿಯ ಸಮಯದಲ್ಲಿ ತಂಪಾದ ಗಾಳಿಯ ಜೊತೆ ಬೀಚ್‍ನ ಬಳಿ ಮಲಗಲು ಹೋಗಬಾರದು. ಏಕೆಂದರೆ ಆ ಸಮಯದಲ್ಲಿ ಆಹಾರಕ್ಕಾಗಿ ಏಡಿಕಾಯಿಗಳು, ನಾಯಿಗಳು ಇರುತ್ತವೆ. ಹಾಗಾಗಿಯೇ ರಾತ್ರಿಯ ಸಮಯದಲ್ಲಿ ಬೀಚ್‍ಗಳಲ್ಲಿ ಪ್ರವಾಸಿಗರು ಮಲಗಬಾರದು.


PC:Greg Younger

ವಾಟರ್ ಗೇಮ್ಸ್

ವಾಟರ್ ಗೇಮ್ಸ್

ಗೋವಾದ ಬೀಚ್‍ಗಳಲ್ಲಿ ಸ್ವಿಮ್ಮಿಂಗ್, ಬೋಟ್ ಸೇಲಿಂಗ್‍ನಂತಹ ವಾಟರ್ ಗೇಮ್ಸ್‍ಗಳು ಅನೇಕವಿರುತ್ತದೆ. ನೀವು ಗುಂಪಿನಲ್ಲಿ ಹೋಗುವುದಾದರೆ ಅಲ್ಲಿ ಟ್ರೈನಿಂಗ್ ನೀಡುವ ಕೋಚ್‍ಗಳು ಇರುತ್ತಾರೆ. ಅವರ ಅನುಮತಿಯ ನಂತರವೇ ಬೀಚ್‍ನಲ್ಲಿ ಇಳಿದು ಆಟವಾಡಿದರೆ, ಬೋಟ್‍ನಲ್ಲಿ ತೆರಳಿದರೆ ತುಂಬ ಒಳ್ಳೆಯದು. ಅದರ ಬದಲಿಗೆ ಸಮುದ್ರದ ಒಳಗೆ ಹೋಗುವುದಕ್ಕೆ ಆಗಲಿ, ಒಂಟಿಯಾಗಿ ಸ್ವಿಮ್ಮಿಂಗ್ ಮಾಡಲು ಪ್ರಯತ್ನಿಸಿದರೆ ಅಪಾಯ.

PC:Abhishek Singh

ಟೂರ್ ಪ್ಯಾಕೆಜ್

ಟೂರ್ ಪ್ಯಾಕೆಜ್

ಅನೇಕ ಮಂದಿ ಗೋವಾಗೆ ತೆರಳಿದಾಗ ಟೂರ್ ಪ್ಯಾಕೆಜ್ ಬುಕ್ ಮಾಡಿಕೊಳ್ಳುತ್ತಾರೆ. 3 ಸ್ಟಾರ್ ಅಥವಾ 5 ಸ್ಟಾರ್ ಹೋಟೆಲ್‍ಗಳನ್ನು ಬುಕ್ ಮಾಡಿಕೊಳ್ಳುತ್ತಿರುತ್ತಾರೆ. ಗೋವಾಗೆ ಗೆಳೆಯರ ಜೊತೆಗೆ ಹೋದರೆ ಮಾತ್ರ 5 ಸ್ಟಾರ್ ಹೋಟೆಲ್‍ಗಳಿಗಿಂತ ಪ್ರಕೃತಿದತ್ತವಾದ ಕುಟೀರಗಳಿರುತ್ತವೆ. ಕುಟೀರಗಳು ಅತ್ಯಂತ ಕಡಿಮೆ ದರಕ್ಕೆ ಸಿಗುತ್ತವೆ. 5 ಸ್ಟಾರ್ ಹೋಟೆಲ್‍ಗಳ ಹಾಗೆಯೇ ಈ ಕುಟೀರಗಳಲ್ಲಿಯೂ ಅದೇ ವ್ಯವಸ್ಥೆ ಇರುತ್ತದೆ.

PC:Klaus Nahr

ಪರಿಚಯ

ಪರಿಚಯ

ಯಾವುದೇ ಕಾರಣಕ್ಕೂ ಗೋವಾಗೆ ತೆರಳಿದಾಗ ಅಪರಿಚಿತರನ್ನು ಪರಿಚಯ ಮಾಡಿಕೊಂಡು ಸ್ನೇಹವನ್ನು ಬೆಳೆಸಬಾರದು. ಇಲ್ಲಿಗೆ ಬರುವ ಆನೇಕರು ಗೆಳೆತನವನ್ನು ಬೆಳಸಿ ಮೋಸ ಮಾಡುವುದಕ್ಕೆ ಭೇಟಿ ನೀಡುತ್ತಾರೆ. ಹಾಗೆಯೇ ನೀವು ಮೊದಲೇ ಬುಕ್ ಮಾಡಿಕೊಂಡ ಕ್ಯಾಬ್‍ಗಳನ್ನೇ ಹೆಚ್ಚಾಗಿ ಬಳಸಬೇಕು. ಗೋವಾಗೆ ಹೆಚ್ಚಾಗಿ ಆದಾಯ ಬರುವುದೇ ಬೀಚ್‍ಗಳಿಂದ, ಅವುಗಳೇ ಗೋವಾದ ಮುಖ್ಯ ಪ್ರವಾಸಿ ತಾಣವಾಗಿದೆ.

PC:Akash Bhattacharya

ಸ್ವಚ್ಛತೆ

ಸ್ವಚ್ಛತೆ

ಸರ್ಕಾರವು ಕೂಡ ಗೋವಾವನ್ನು ಮತ್ತಷ್ಟು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ, ಹೆಚ್ಚು ಸ್ವಚ್ಛತೆಯನ್ನು ಕಾಪಾಡುತ್ತಿದೆ. ಅಲ್ಲಿನ ಬೀಚ್‍ಗಳಲ್ಲಿ ಕುಡಿದ ಬಾಟಲಿಗಳು, ಕಸವನ್ನು ಎಲ್ಲೆಂದರಲ್ಲಿ ಯಾರು ನೋಡುತ್ತಿಲ್ಲ ಎಂದು ಎಸೆಯುತ್ತಿರುತ್ತಾರೆ. ಆದರೆ ಬೀಚ್ ಅನ್ನು ನೋಡಿಕೊಳ್ಳುತ್ತಿರುವವರು ದೂರದಿಂದಲೇ ಗಮನಿಸಿ ಅದಕ್ಕೆ ತಕ್ಕ ಕ್ರಮವನ್ನು ತೆಗೆದುಕೊಳ್ಳುತ್ತಾರೆ.

PC:Portugal Editor Exploration

ತಲುಪುವ ಬಗೆ?

ತಲುಪುವ ಬಗೆ?

ಗೋವಾ ಕರ್ನಾಟಕದಿಂದ ಹತ್ತಿರವಿರುವ ರಾಜ್ಯವಾದ್ದರಿಂದ ವಿಮಾನ. ರೈಲು, ಅಥವಾ ಹಲವಾರು ಖಾಸಗಿ ಬಸ್‍ಗಳ ಸೌಕರ್ಯವಿದೆ. ಹೀಗಾಗಿ ಸುಲಭವಾಗಿ ಸುಂದರವಾದ ಗೋವಾಗೆ ತಲುಪಬಹುದಾಗಿದೆ.

PC:Vinoth Chandar

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ