Search
  • Follow NativePlanet
Share
» »1000 ವರ್ಷದ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ!

1000 ವರ್ಷದ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ!

ಭಾರತದಲ್ಲಿ ಅನೇಕ ಶಿವನ ದೇವಸ್ಥಾನಗಳಿವೆ. ಅವುಗಳಲ್ಲಿ ಬಹುತೇಕ ದೇವಾಲಯಗಳು ಶಿವಲಿಂಗವನ್ನು ಹೊಂದಿವೆ. ಶಿವಲಿಂಗವು ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಅದುವೇ ಅಮರನಾಥ ಗುಹೆಯಲ್ಲಿ ನೀವು ಬಿಳಿ ಬಣ್ಣದ ಶಿವಲಿಂಗವನ್ನು ನೋಡಿರುವಿರಿ. ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ 1000 ವರ್ಷ ಹಳೆಯ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ.

ಎಲ್ಲಿದೆ ಈ ಶಿವಲಿಂಗ ?

ಎಲ್ಲಿದೆ ಈ ಶಿವಲಿಂಗ ?

PC: Gyanendrasinghchauha...

ರಾಜಸ್ಥಾನದ ದೋಲ್‌ಪುರದಲ್ಲಿ 1000 ವರ್ಷ ಹಳೆಯ ಶಿವಾಲಯವೊಂದಿದೆ. ಈ ಪುರಾತನ ಮಂದಿರವನ್ನು ಅಚಲೇಶ್ವರ ಮಹದೇವ ಮಂದಿರ ಎನ್ನಲಾಗುತ್ತದೆ. ಈ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಸೂರ್ಯನ ಕಿರಣಗಳ ಕಾರಣದಿಂದಾಗಿ ಇಲ್ಲಿನ ಶಿವಲಿಂಗವು ತನ್ನ ಬಣ್ಣ ಬದಲಾಯಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಈ ವರೆಗೂ ಸಾಭೀತಾಗಿಲ್ಲ.

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ ! ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಮೂರು ಬಾರಿ ಬಣ್ಣ ಬದಲಾಯಿಸುತ್ತದೆ

ಮೂರು ಬಾರಿ ಬಣ್ಣ ಬದಲಾಯಿಸುತ್ತದೆ

ಈ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ. ಬೆಳಗ್ಗೆ ಕೆಂಪು ಬಣ್ಣದಲ್ಲಿದ್ದರೆ ಮಧ್ಯಾಹ್ನ ಕೇಸರಿ ಬಣ್ಣಕ್ಕೆ ತಿರುಗುತ್ತದೆ. ರಾತ್ರಿಯಾಗುತ್ತಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ವಿಸ್ಮಯವನ್ನು ನೋಡಲು ಭಕ್ತರು ಇಡೀ ದಿನ ಈ ಮಂದಿರದಲ್ಲಿರುತ್ತಾರೆ. ದೂರದೂರದ ಊರುಗಳಿಂದಲೂ ಭಕ್ತರು ಬರುತ್ತಾರೆ.

ಪಂಚಲೋಹದ ನಂದಿಯ ವಿಗ್ರಹ

ಪಂಚಲೋಹದ ನಂದಿಯ ವಿಗ್ರಹ

PC: youtube

ದಂತಕಥೆಗಳ ಪ್ರಕಾರ ಶಿವನ ಪಾದದ ಗುರತಿನ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಶಿವನು ಲಿಂಗದ ರೂಪದಲ್ಲಿದ್ದಾನೆ. ಈ ಲಿಂಗವು ಸ್ವಾಭಾವಿಕವಾಗಿ ಸಿಗುವ ಕಲ್ಲಿನ ರಚನೆಯಾಗಿದೆ. ಈ ಮಂದಿರದಲ್ಲಿರುವ ಶಿವಲಿಂಗವು ಎಷ್ಟು ಪ್ರಾಮುಖ್ಯತೆಯನ್ನು ಪಡೆದಿದೆಯೋ ಅಲ್ಲಿರುವ ನಂದಿಯೂ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಅಲ್ಲಿನ ನಂದಿಯನ್ನು ಪಂಚಲೋಹಗಳಿಂದ ನಿರ್ಮಿಸಲಾಗಿದ್ದು ನಾಲ್ಕು ಟನ್ ತೂಗುತ್ತದೆ.

ನರಕಕ್ಕೆ ಹೋಗುವ ದ್ವಾರ

ನರಕಕ್ಕೆ ಹೋಗುವ ದ್ವಾರ

PC:Gyanendrasinghchauha

ಈ ದೇವಾಲಯದಲ್ಲಿ ಒಂದು ದ್ವಾರವಿದೆ. ಆ ದ್ವಾರವನ್ನು ನರಕಕ್ಕೆ ತೆರಳುವ ದ್ವಾರ ಎಂದು ಭಕ್ತರು ನಂಬುತ್ತಾರೆ. ಹಾಗೆಯೇ ದೇವಾಲಯದ ಸಮೀಪದಲ್ಲಿ 3 ಬೃಹತ್ ಕಲ್ಲಿನ ಎಮ್ಮೆಯ ಪ್ರತಿಮೆಗಳು ಇವೆ. ಈ ಎಮ್ಮೆಗಳು ದುಷ್ಟ ಶಕ್ತಿ ಎಂದು ನಂಬಲಾಗುತ್ತದೆ.

ಸ್ವಯಂಭೂ ಲಿಂಗ

ಸ್ವಯಂಭೂ ಲಿಂಗ

PC:Gyanendrasinghchauha...

ಇಲ್ಲಿನ ಶಿವಲಿಂಗಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳಿವೆ. ಈ ಶಿವಲಿಂಗವು ಸ್ವಯಂಭೂ ಆಗಿದ್ದು ಎನ್ನಲಾಗುತ್ತದೆ. ಈವರೆಗೆ ಯಾರೂ ಕೂಡಾ ಈ ಶಿವಲಿಂಗದ ಎತ್ತರ ಎಷ್ಟು ಅನ್ನೋದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.ವಿವಾಹ ಭಾಗ್ಯ ಒದಗಬೇಕಾದರೆ ಭಕ್ತರು ಇಲ್ಲಿ ಬಂದು ಪೂಜೆ ಮಾಡುತ್ತಾರೆ. ಈ ದೇವಸ್ಥಾನದಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಕೋರಿಕೆ ಈಡೇರುತ್ತದೆ ಎನ್ನುವುದು ಜನರ ನಂಬಿಕೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ರೈಲ್ವೆ ನಿಲ್ದಾಣ: ಅಚಲೇಶ್ವರ ದೇವಾಲಯಕ್ಕೆ ತಲುಪಲು ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ರಾಜಸ್ಥಾನದ ಮೌಂಟ್ ಅಬು ರೈಲ್ವೆ ನಿಲ್ದಾಣ.

ವಿಮಾನ ನಿಲ್ದಾಣ : ಮಹಾರಾಣಾ ಪ್ರತಾಪ ಏರ್ ಪೋರ್ಟ್. ಇದು ರಾಜಸ್ಥಾನದ ಉದಯಪುರದಲ್ಲಿದೆ. ಇಲ್ಲಿಂದ ಅಚಲೇಶ್ವರ ದೇವಾಲಯಕ್ಕೆ ಸುಮಾರು 207 ಕಿ.ಮೀ ದೂರವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X