Search
  • Follow NativePlanet
Share
» »ರಾಜರ ಅತಿಥಿ ಗೃಹವಾಗಿದ್ದ ಈ ಪ್ಯಾಲೇಸ್ ಈಗ ಐಷಾರಾಮಿ ಹೊಟೇಲ್

ರಾಜರ ಅತಿಥಿ ಗೃಹವಾಗಿದ್ದ ಈ ಪ್ಯಾಲೇಸ್ ಈಗ ಐಷಾರಾಮಿ ಹೊಟೇಲ್

ಉದೈಪುರವು ಅನೇಕ ಅರಮನೆಗಳನ್ನು ಹೊಂದಿದೆ, ಅವುಗಳಲ್ಲಿ ಶಿವ ನಿವಾಸ್ ಪ್ಯಾಲೇಸ್‌ ಕೂಡಾ ಒಂದು. ಲೇಕ್ ಪಿಚೊಲಾ ದಡದಲ್ಲಿರುವ ಶಿವ ನಿವಾಸ್ ಪ್ಯಾಲೇಸ್, ಉದೈಪುರದ ಮಹಾರಾಜರ ಹಿಂದಿನ ನಿವಾಸವಾಗಿದೆ. ಸರೋವರದ ಮೇಲಿನಿಂದ ನೋಡಿದಾಗ, ಕ್ರೆಸೆಂಟ್-ಆಕಾರದಲ್ಲಿ ಕಾಣಿಸುವ ಈ ಕಟ್ಟಡದ ಅರಮನೆಯನ್ನು 1920 ರಲ್ಲಿ ಸ್ಥಾಪಿಸಲಾಯಿತು.

ಅತಿಥಿ ಗೃಹವಾಗಿತ್ತು

ಅತಿಥಿ ಗೃಹವಾಗಿತ್ತು

PC:SINHA

ಇದು ಮೂಲತಃ ಮಹಾರಾಜ ಫತೇಹ್ ಸಿಂಗ್‌ರ ಅರಮನೆಯಾಗಿತ್ತು. 1978 ರವರೆಗೆ, ರಾಜನನ್ನು ಭೇಟಿ ಮಾಡುವ ಗಣ್ಯರಿಗೆ ಅತಿಥಿ ಗೃಹಗಳ ರೂಪದಲ್ಲಿ ರಾಜವಂಶದ ಪೀಳಿಗೆ ಇದನ್ನು ಬಳಸಿಕೊಳ್ಳುತ್ತಿದ್ದರು. ಈಗ ಇದು ಒಂದು ಐಷಾರಾಮಿ ಹೆರಿಟೇಜ್ ಹೋಟೆಲ್ ಆಗಿದೆ.

ಐಷಾರಾಮಿ ಹೋಟೆಲ್

ಐಷಾರಾಮಿ ಹೋಟೆಲ್

PC:Avanindra Dugar

1978 ಮತ್ತು 1982 ರ ನಡುವೆ, ಆಗಿನ ಮಾಲೀಕರಾಗಿದ್ದ ಮಹಾರಾಣ ಭಗವತ್ ಸಿಂಗ್, ಅರಮನೆಯ ಎರಡನೆಯ ಮಹಡಿಯನ್ನು ಐಷಾರಾಮಿ ಹೋಟೆಲ್ ಆಗಿ ರೂಪಾಂತರಗೊಳಿಸಿದರು. ಪ್ರಸ್ತುತ ಉದಯಪುರದ ಮೇವಾರ್ ರಾಯಲ್ ಕುಟುಂಬದ ಮಾಲೀಕತ್ವ ಹೊಂದಿದ್ದು, ಇದು ರಾಜಸ್ಥಾನದಲ್ಲಿನ HRH ಗ್ರೂಪ್ ಆಫ್ ಹೊಟೇಲ್‌ಗಳಲ್ಲಿ ಒಂದಾಗಿದೆ. ಇದು ಭಾರತದಿಂದ ಮಾತ್ರವಲ್ಲ, ಅಲ್ಲದೇ ಹಲವಾರು ಪ್ರವಾಸಿಗರಿಗೆ ಸೌಕರ್ಯವಾಗಿದೆ. ರಾಜ ಕುಟುಂಬದಿಂದ ಪೂಜಿಸಲ್ಪಡುವ ಹಿಂದು ದೇವರಾದ 'ಶಿವನ' ಹೆಸರನ್ನು ಈ ಅರಮನೆಗೆ ಇಡಲಾಗಿದೆ.

ಹೆರಿಟೇಜ್ ಗ್ರ್ಯಾಂಡ್

ಹೆರಿಟೇಜ್ ಗ್ರ್ಯಾಂಡ್

PC: Ashwin Kumar

'ಹೆರಿಟೇಜ್ ಗ್ರ್ಯಾಂಡ್' ವಿಭಾಗದಲ್ಲಿ ಅತ್ಯುತ್ತಮ ಪರಂಪರೆ ಹೋಟೆಲ್‌ಗಾಗಿ ಮೂರು ಬಾರಿ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ ಪಡೆದುಕೊಂಡಿದೆ. ಇದು ಪ್ರವಾಸಿ ಆಕರ್ಷಣೆಯ ರೂಪದಲ್ಲಿ ಪ್ರವಾಸಿಗರಿಗೆ ತೆರೆದಿರುತ್ತದೆ. ರಾಯಲ್ ಮೋಡಿಯನ್ನು ಹೊಳೆಯುವ ಸೊಗಸಾದ ಒಳಾಂಗಣ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ ಮತ್ತು ಅರಮನೆಯನ್ನು ಅನ್ವೇಷಿಸುವ ಅನುಭವವನ್ನು ನೀಡುತ್ತದೆ. ಈ ಅರಮನೆಯು ರಜಪೂತ ಮತ್ತು ಯುರೋಪಿಯನ್ ವಾಸ್ತುಶಿಲ್ಪ ಶೈಲಿಯ ಮಿಶ್ರಣವಾಗಿದ್ದು, ಅರ್ಧ-ವೃತ್ತಾಕಾರದ ಆಕಾರದಲ್ಲಿ ಇದನ್ನು ನಿರ್ಮಿಸಲಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: DeyaRoy

ಭಾರತದ ಹೆಚ್ಚಿನ ತಾಣಗಳಂತೆ, ಉದೈಪುರವು ಮೂರು ಪ್ರಮುಖ ಋತುಗಳಿಗೆ ಸಾಕ್ಷಿಯಾಗುತ್ತದೆ. ಬೇಸಿಗೆ ಮಾರ್ಚ್ ನಿಂದ ಜೂನ್ ವರೆಗೆ, ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲ ಮತ್ತು ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಚಳಿಗಾಲವಾಗಿರುತ್ತದೆ. ಉದಯಪುರ್ ಗೆ ಭೇಟಿ ನೀಡಲು ಸೂಕ್ತ ಸಮಯ ಸೆಪ್ಟೆಂಬರ್ ನಿಂದ ಮಾರ್ಚ್‌. ಏಕೆಂದರೆ ವಾತಾವರಣವು ದೃಶ್ಯ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಮಾನ್ಸೂನ್ ಮಳೆಗಾಲದ ಸಂದರ್ಭದಲ್ಲಿ ಸರೋವರಗಳನ್ನು ಅನ್ವೇಷಿಸಲು ಉದಯಪುರಕ್ಕೆ ಹೋಗಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Cecil Stoughton

ದಾಬೊಕ್ ವಿಮಾನ ನಿಲ್ದಾಣ ಅಥವಾ ಮಹಾರಾಣ ಪ್ರತಾಪ್ ವಿಮಾನ ನಿಲ್ದಾಣವು ನಗರದಿಂದ 22 ಕಿ.ಮೀ ದೂರದಲ್ಲಿರುವ ಉದೈಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ನಿಯಮಿತ ವಿಮಾನಗಳು ಉದಯಪುರವನ್ನು ಭಾರತದ ಪ್ರಮುಖ ಸ್ಥಳಗಳಿಗೆ ಮತ್ತು ವಿಶ್ವಕ್ಕೆ ಸಂಪರ್ಕಿಸುತ್ತವೆ. ಉದಯಪುರ ವಿಮಾನ ನಿಲ್ದಾಣವು ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು, ಗೋವಾ, ಹೈದರಾಬಾದ್, ಕೊಚ್ಚಿನ್, ಅಹ್ಮದಾಬಾದ್ ಮತ್ತು ಗುವಾಹಾಟಿಯಂತಹ ಪ್ರಮುಖ ಭಾರತೀಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಉದೈಪುರ್ ರೈಲ್ವೆ ನಿಲ್ದಾಣವು ರಾಜಸ್ತಾನದ ಪ್ರಮುಖ ನಗರಗಳೊಂದಿಗೆ ಮತ್ತು ಭಾರತಕ್ಕೆ ಉತ್ತಮ ಸಂಪರ್ಕ ಹೊಂದಿದೆ. ಆಗಾಗ ರೈಲುಗಳು ದೆಹಲಿ, ಮುಂಬೈ ಮತ್ತು ಜೈಪುರಗಳಂತಹ ಸ್ಥಳಗಳಿಗೆ ಉದಯಪುರವನ್ನು ಸಂಪರ್ಕಿಸುತ್ತವೆ. ಇದು ಪ್ಯಾಲೆಸ್ ಆನ್ ವೀಲ್ಸ್ ಎಂಬ ಐಷಾರಾಮಿ ರೈಲು ನಿಲ್ದಾಣವಾಗಿದೆ.

ಉತ್ತಮವಾದ ರಸ್ತೆಗಳು ಉದಯಪುರವನ್ನು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತವೆ. ನಿರಂತರವಾಗಿ ಸರ್ಕಾರಿ-ನಿರ್ವಹಣೆಯ ಜೊತೆಗೆ ಖಾಸಗಿ ಬಸ್ಸುಗಳು ಉತ್ತಮ ಸಂಪರ್ಕವನ್ನು ನೀಡುತ್ತವೆ. ಕೋಟಾ, ಅಜ್ಮೀರ್, ಮೌಂಟ್ ಅಬು, ಜೈಪುರ್, ಇಂದೋರ್, ಅಹಮದಾಬಾದ್ ಮತ್ತು ಜೈಪುರ್‌ಗದಿಂದ ಬಸ್‌ಗಳು ಉದಯಪುರಕ್ಕೆ ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more