India
Search
  • Follow NativePlanet
Share
» »1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

ಶಿವನಿಗೆ ಸಂಬಂಧಿಸಿ ಅನೇಕ ಧಾರ್ಮಿಕ ಕ್ಷೇತ್ರಗಳು ಪರ್ವತ ಪ್ರದೇಶದಲ್ಲೇ ಇವೆ. ಅಂತಹದ್ದೇ ಒಂದು ಕ್ಷೇತ್ರ ಜಮ್ಮುಕಾಶ್ಮೀರದ 140 ಕಿ.ಮಿ ಉತ್ತರದಲ್ಲಿ ಪರ್ವತಗಳಲ್ಲಿ ನೆಲೆಗೊಂಡಿದೆ. ಇಲ್ಲಿ ಶಿವನ ಒಂದು ಪ್ರಾಚೀನ ದೇವಾಲಯವಿದೆ. ಇದನ್ನು ಶಿವಕೋಡಿ ಧಾಮ ಎನ್ನುತ್ತಾರೆ. ಕೋಡಿ ಎಂದರೆ ಗುಹೆ. ಇದೊಂದು ಗುಹಾ ದೇವಾಲಯವಾಗಿದೆ.

ಶಿವಕೋಡಿ ಧಾಮ

ಶಿವಕೋಡಿ ಧಾಮ

PC: Sahuajeet

ಜಮ್ಮು ಕಾಶ್ಮೀರದಲ್ಲಿರುವ ಶಿವಕೋಡಿ ಧಾಮವು ರಣಸೂರ್‌ ನಗರದಿಂದ ಸುಮಾರು 3 ಕಿ.ಮಿ ದೂರದಲ್ಲಿದೆ. ಇಲ್ಲಿಗೆ ನಡೆದುಕೊಂಡೇ ಹೋಗಬೇಕಾಗುತ್ತದೆ. ರಣಸೂರ್‌ನ್ನು ಶಿವಕೋಡಿ ಯಾತ್ರೆಯ ಆಧಾರ ಸ್ಥಂಭ ಎಂದೇ ಹೇಳಬಹುದು. ಇಲ್ಲಿ ಪೂಜಾ ಸಮಾಗ್ರಿಗಳ ಅಂಗಡಿ ಮುಗ್ಗಟ್ಟುಗಳು ಕಾಣಸಿಗುತ್ತವೆ.

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಧೂದ್‌ ಗಂಗಾ

ಧೂದ್‌ ಗಂಗಾ

ರಣಸೂರು ಪರ್ವತ ಕ್ಷೇತ್ರವಾಗಿದ್ದು, ಇದರ ಸುತ್ತಮುತ್ತಲಿನ ದೃಶ್ಯಗಳು ಬಹಳ ಸುಂದರವಾಗಿದೆ. ಈ ರಸ್ತೆಯಲ್ಲಿ ಒಂದು ಬೆಟ್ಟದ ನದಿ ಇದೆ. ಇದನ್ನು ಸ್ಥಳೀಯರು ಧೂದ್‌ ಗಂಗಾ ಎನ್ನುತ್ತಾರೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ದಾರಿಯಲ್ಲೆಲ್ಲಾ ಶಿವನ ಜಪ ಮಾಡುತ್ತಾ, ಹಾಡು ಹಾಡುತ್ತಾ ಹೋಗುತ್ತಾರೆ.

3ಕಿ.ಮೀ ಯಾತ್ರೆ

3ಕಿ.ಮೀ ಯಾತ್ರೆ

ಹೆಚ್ಚಿನವರು ಮೂರು ಕಿ.ಮೀ ಈ ಯಾತ್ರೆಯನ್ನು ನಡೇದೇ ಹೋಗುತ್ತಾರೆ. ನಡೆಯಲು ಸಾಧ್ಯವಿಲ್ಲದವರಿಗೆ ಕುದುರೆ ಸವಾರಿ, ಪಲ್ಲಕ್ಕಿಯ ವ್ಯವಸ್ಥೆಯೂ ಇದೆ. ಹೆಚ್ಚಾಗಿ ವಯಸ್ಸಾದವರು, ಮಹಿಳೆಯರು ಈ ವ್ಯವಸ್ಥೆಯನ್ನು ಬಳಸುತ್ತಾರೆ.

ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ! ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

200 ಮೀ. ಉದ್ದದ ಗುಹಾ ಮಾರ್ಗ

200 ಮೀ. ಉದ್ದದ ಗುಹಾ ಮಾರ್ಗ

ಶಿವಕೋಡಿಯ ಪ್ರವೇಶ ದ್ವಾರ ತಲುಪಿ ಸ್ವಲ್ಪ ಮೆಟ್ಟಿಲುಗಳನ್ನು ಹತ್ತಿ ಗುಹೆಯ ಮುಖ್ಯದ್ವಾರವನ್ನು ತಲುಪಬಹುದು. 1 ಮೀ,ಅಗಲ ಹಾಗೂ 3 ಮೀಟರ್ ಎತ್ತರ ಗುಹೆ ಇದಾಗಿದೆ. ಒಬ್ಬೊಬ್ಬರಾಗಿ ಬಗ್ಗುತ್ತಾ ಈ ಗುಹೆಯೊಳಗೆ ಪ್ರವೇಶಿಸಬೇಕು. ಈ ಗುಹೆಯು ಸುಮಾರು 200 ಮೀ ಉದ್ದವಿದೆ. ಗುಹೆಯ ಒಳಗೆ ಕೆಳಗೆ ಇಳಿಯಬೇಕಾಗುತ್ತದೆ.

ಸ್ವಯಂ ಭೂ ಶಿವಲಿಂಗ

ಸ್ವಯಂ ಭೂ ಶಿವಲಿಂಗ

ಈ ಗುಹಾ ಮಾರ್ಗವು ಕಠಿಣಕರವಾಗಿದ್ದು, ಅಲ್ಲಿನ ಬಂಡೆಕಲ್ಲುಗಳನ್ನು ಹಿಡಿದುಕೊಂಡು ಹೋಗಬೇಕಾಗುತ್ತದೆ. ಗುಹೆಯ ಒಳಗೆ ಹೋದನಂತರ ದೇವರ ಗುಡಿಯ ಬಳಿ ವಿಶಾಲವಾದ ಸ್ಥಳವನ್ನು ಕಾಣಬಹುದು. ಇಲ್ಲಿ ನೈಸರ್ಗಿಕ ಬೆಳಕು ಶಿವಲಿಂಗದ ಬಳಿ ಬೀಳುತ್ತದೆ. ಇಲ್ಲಿನ ಶಿವಲಿಂಗವನ್ನು ಸ್ವಯಂ ಭೂ ಎನ್ನುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X