Search
  • Follow NativePlanet
Share
» »ರೋಮಗಳನ್ನು ಸೆಟೆಸಿ ನಿಲ್ಲಿಸುವ ಶಿಲ್ಲಾಂಗ್ ಹಾಗೂ ಚಿರಾಪುಂಜಿ

ರೋಮಗಳನ್ನು ಸೆಟೆಸಿ ನಿಲ್ಲಿಸುವ ಶಿಲ್ಲಾಂಗ್ ಹಾಗೂ ಚಿರಾಪುಂಜಿ

By Vijay

"ಏಳು ಸಹೋದರಿಯರು" ಎಂದು ಮನ್ನಣೆಗಳಿಸಿರುವ ಈಶಾನ್ಯ ಭಾರತದ ಸಪ್ತ ರಾಜ್ಯಗಳ ಪೈಕಿ ಮೇಘಾಲಯ ರಾಜ್ಯವೂ ಸಹ ಒಂದು. ಈ ರಾಜ್ಯದ ವಿಶೇಷತೆಯೆಂದರೆ ಇಲ್ಲಿ ಯಾವಾಗಲೂ ಮೇಘಗಳು/ಮೋಡಗಳು ತಮಗಿಷ್ಟ ಬಂದಂತೆ ಜಾತ್ರೆಗಳನ್ನು ಏರ್ಪಡಿಸುತಿರುತ್ತವೆ. ಅಂದರೆ ಈ ರಾಜ್ಯವು ಯಾವಾಗಲೂ ದಟ್ಟ ಮೇಘಗಳಿಂದ ಆವರಿಸಿರುತ್ತದೆ.

ಪೇಟಿಎಂ ಕೂಪನ್ನುಗಳು : 200 ರೂ.ಗಳ ಟಿಕೆಟ್ ಮೇಲೆ 15% ರಷ್ಟು ಹಣ ಮರುಪಾವತಿ ಹಾಗೂ ಐ ಫೋನ್ 6 ಗೆಲ್ಲುವ ಅವಕಾಶ

ಅಂತೆಯೆ ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಅಥವಾ ತೇವ ಭೂಮಿಯನ್ನು ಹೊಂದಿರುವ ಎರಡು ಪ್ರಖ್ಯಾತ ಸ್ಥಳಗಳನ್ನು ಈ ರಾಜ್ಯದಲ್ಲಿಯೆ ಕಾಣಬಹುದು. ಚಿರಾಪುಂಜಿ ಹಾಗೂ ಮಾವ್ಸಿನ್ರಾಮ್ ಎಂಬ ಎರಡು ಆಕರ್ಷಕ ಹಾಗೂ ಪ್ರವಾಸಿ ವಿಶೇಷವೂ ಆಗಿರುವ ಈ ಸ್ಥಳಗಳು ಇರುವುದು ಮೇಘಾಲಯ ರಾಜ್ಯದಲ್ಲಿರುವ ಪೂರ್ವ ಖಾಸಿ ಜಿಲ್ಲೆಯಲ್ಲಿ.

ವಿಶೇಷ ಲೇಖನ : ಮಳೆಗಾಲದ ವೈಭವಸಾರುವ ಸ್ಥಳಗಳು

ಇನ್ನೂ ಪೂರ್ವ ಖಾಸಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಶಿಲ್ಲಾಂಗ್, ರಾಜ್ಯದ ರಾಜಧಾನಿ ನಗರವೂ ಹೌದು. ಇಲ್ಲಿ ವಿಶೇಷವಾಗಿ ತಿಳಿಸಬೇಕೆಂದರೆ ಈಶಾನ್ಯ ಭಾರತದ ಈ ನಗರವು ಎಲೆ ಮರೆಯ ಕಾಯಿಯಂತೆ ಅವಿತು ಕುಳಿತಿರುವ ಪ್ರಕೃತಿಯ ಅಸಾಧಾರಣ ಸಂಪತ್ತಿನಿಂದ ಕೂಡಿರುವ ಒಂದು ಸುಂದರ ನಗರ.

ಕೇವಲ ಶಿಲ್ಲಾಂಗ್ ಏಕೆ, ಸಂಪೂರ್ಣ ಈಶಾನ್ಯ ಭಾರತವೆ ಒಂದು ಕೌತುಕಮಯ ಹಾಗೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಭಾರತದ ಅದ್ಭುತ ಭಾಗವಾಗಿದೆ. ಭಾರತದ ಅವಿಸ್ಮರಣೀಯ ಹಾಗೂ ರೋಮಾಂಚಗೊಳಿಸುವಂತಹ ರಮಣೀಯ ದೃಶ್ಯಾವಳಿಗಳನ್ನು ನೋಡಬೇಕೆಂದಿದ್ದರೆ ಒಮ್ಮೆಯಾದರೂ ಈಶಾನ್ಯ ಭಾರತಕ್ಕೆ ಭೇಟಿ ನೀಡಲೇಬೇಕು.

ಪ್ರಸ್ತುತ ಲೇಖನದ ಮೂಲಕ ಶಿಲ್ಲಾಂಗ್ ಹಾಗೂ ಚಿರಾಪುಂಜಿಗಳ ಕುರಿತು ತಿಳಿಯಿರಿ. ಒಮ್ಮೆಯಾದರೂ ಈ ಸುಂದರ ಸ್ಥಳಗಳಿಗೆ ಭೇಟಿ ನೀಡಲು ಶತಾಯಗತಾಯವಾಗಿ ಪ್ರಯತ್ನಿಸಿ. ನಿಮ್ಮ ಆ ಪ್ರಯತ್ನ ಖಂಡಿತವಾಗಿಯೂ ವ್ಯರ್ಥವಾಗುವುದಿಲ್ಲ.

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಪೂರ್ವಭಾರತದ ಸ್ಕಾಟ್ಲೆಂಡ್ ಎಂದೇ ಜನಜನಿತವಾಗಿರುವ ಮೇಘಾಲಯ ರಾಜ್ಯದ ಶಿಲ್ಲಾಂಗ್, ಈಶಾನ್ಯ ಭಾರತದ ಅತಿ ಪ್ರಸಿದ್ಧವಾದ ಪ್ರವಾಸಿ ತಾಣಗಳಲ್ಲೊಂದು ಎಂಬುದಂತೂ ನಿಸ್ಸಂದೇಹ. ಶಿಲ್ಲಾಂಗ್ ರಸ್ತೆಯ ಮೂಖಾಂತರ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ್ ಹೆದ್ದಾರಿ ಸಂಖ್ಯೆ 40 ಅಸ್ಸಾಂ ರಾಜ್ಯದ ಗುವಾಹಟಿ ನಗರವನ್ನು ಸಂಪರ್ಕಿಸಿದರೆ, ರಾ.ಹೆ ಸಂಖ್ಯೆ 44 ತ್ರಿಪುರಾ ಹಾಗೂ ಮಿಜೋರಾಮ್ ಗಳನ್ನು ಸಂಪರ್ಕಿಸುತ್ತದೆ. ಗುವಾಹಾಟಿಯಿಂದ ಶಿಲ್ಲಾಂಗ್ ಸುಮಾರು 100 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ದೊರೆಯುತ್ತವೆ. ಇನ್ನೂ ಗುವಾಹಾಟಿಯನ್ನು ದೇಶದ ಪ್ರಮುಖ ನಗರಗಳ ಮೂಲಕ ರೈಲಿನಿಂದ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Masrur Ashraf

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಹಚ್ಚ ಹಸಿರಾದ ಸಾಗುವಳಿ ಭೂಮಿ, ನಯನ ಮನೋಹರವಾದ ಪ್ರಾಕೃತಿಕ ದೃಶ್ಯಗಳು, ಅತ್ಯುನ್ನತ ಪರ್ವತಶ್ರೇಣಿಗಳು ಹಾಗೂ ಅದನ್ನು ಮುತ್ತಿಕೊಂಡಿರುವ ಮೋಡಗಳು, ಕಂಪನ್ನು ಸೂಸುವ ಹೂಗಳು, ಯಾವುದೇ ಗ್ರಂಥದಲ್ಲಿ ಅಲಭ್ಯವಿರಬಹುದಾದ, ಉಲ್ಲೇಖಗೊಂಡಿರದ ತಾಣಗಳು, ಜಲಪಾತಗಳು, ವನಸಿರಿಗಳು, ಸ್ನೇಹಪರ ಜನರು, ಆತ್ಮೀಯವಾದ ಆತಿಥ್ಯ ನೀಡುವ ವಸತಿಗೃಹಗಳು, ಇವೆಲ್ಲವೂ ಕೂಡ ಶಿಲ್ಲಾಂಗ್ ನಗರದ ವೈಶಿಷ್ಟ್ಯಗಳು.

ಚಿತ್ರಕೃಪೆ: Subharnab Majumdar

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಪ್ರಕೃತಿ ಮಾತೆಯು ಶಿಲ್ಲಾಂಗ್ ನಗರವನ್ನು ಅನೇಕ ಜಲಪಾತಗಳು, ಅವಿಸ್ಮರಣೀಯ ಪರ್ವತಶ್ರೇಣಿ (ಆ ಪ್ರದೇಶದಲ್ಲಿಯೇ ಎರಡನೆ ಅತಿ ಎತ್ತರದ್ದು), ಮತ್ತು ಅನೇಕ ಇತರ ಆಸಕ್ತಿದಾಯಕ, ಹೆಚ್ಚು ಪರಚಿತವಲ್ಲದ ಸುಂದರ ತಾಣಗಳಿಂದ ಪುನೀತಳಾಗಿಸಿದ್ದಾಳೆ. ಶಿಲ್ಲಾಂಗ್ ಶೃಂಗ, ಎಲಿಫೆಂಟಾ ಜಲಪಾತ, ಸ್ವೀಟ್ ಜಲಪಾತ, ಲೇಡಿ ಹೈದರಿ ಉದ್ಯಾನ, ವಾರ್ಡ್ಸ್ ಸರೋವರ ಮತ್ತು ಪೋಲಿಸ್ ಬಜಾರ್ ಗಳಂತಹ ಆಕರ್ಷಕ ಪ್ರವಾಸಿ ಆಕರ್ಷಣೆಗಳಿಗೆ ಭೇಟಿ ನೀಡದೇ ಹೋದರೆ, ಶಿಲ್ಲಾಂಗ್ ನ ಪ್ರವಾಸವು ಅಪೂರ್ಣವಾಗುತ್ತದೆ.

ಚಿತ್ರಕೃಪೆ: Sun-anda

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಖಾಸಿ ಜನಾಂಗವು ಈಶಾನ್ಯ ಭಾರತದ ಅತಿ ಪ್ರಾಚೀನ ಬುಡಕಟ್ಟು ಜನಾಂಗವಾಗಿದೆ. ಖಾಸಿ ಜನಾಂಗವರು ಆಸ್ಟ್ರೋ - ಏಷಿಯಾಟಿಕ್(Austro - Asiatic) ಪೀಳಿಗೆಗೆ ಸೇರಿದವರಾಗಿದ್ದು, ಇವರು ಮಾತೃಪ್ರಧಾನ ಕುಟುಂಬ ಪದ್ಧತಿಯನ್ನು ಅನುಸರಿಸುತ್ತಾರೆ (ಇದು ಭಾರತದಲ್ಲಿಯೇ ಅತಿ ಅಪರೂಪವಾದ ಸಂಪ್ರದಾಯಗಳಲ್ಲೊಂದು).

ಚಿತ್ರಕೃಪೆ: Bogman

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಹೆಣ್ಣು ಶಿಶುವಿನ ಜನನದ ಕುರಿತು ಖುಷಿಪಡುವ ವೈಶಿಷ್ಟ್ಯ ಈ ಖಾಸಿ ಜನಾಂಗದ್ದು. ಕಾರಣ, ಹೆಣ್ಣು ಶಿಶುವು ವಂಶವನ್ನು ಮುನ್ನಡೆಸುವವಳು ಎಂಬ ನಂಬಿಕೆ ಈ ಜನಾಂಗದ್ದು. ಖಾಸಿ ಜನಾಂಗದ ಕುಟುಂಬ ಸಂಪ್ರದಾಯದ ಒಂದು ವೈಶಿಷ್ಟ್ಯವೆಂದರೆ, ಮದುಮಗನು, ಮದುಮಗಳ ಮನೆಯಲ್ಲಿಯೇ ಜೀವನ ನಡೆಸುತ್ತಾನೆ. ಕೌಟುಂಬಿಕ ವಿಚಾರದಲ್ಲಿ ಮಾತೃ ಸಂಬಂಧಿ ಸೋದರ ಮಾವನ ಪಾತ್ರವೇ ನಿರ್ಣಾಯಕ, ವಿಶೇಷವಾಗಿ ಮದುವೆ, ಆಸ್ತಿಪಾಸ್ತಿಗಳ ವಿಚಾರದಲ್ಲಿ ಈತನ ನಿರ್ಣಯವೇ ಅಂತಿಮ.

ಚಿತ್ರಕೃಪೆ: Anthony Knuppel

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ನಗರ ಕೇಂದ್ರದಿಂದ ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿರುವ ಎಲಿಫಂಟಾ ಜಲಪಾತವು ಒಂದು ಸುಂದರ ಹಾಗೂ ಆಕರ್ಷಕವಾದ ಜಲಪಾತವಾಗಿದೆ. ಬೆಟ್ಟದ ಮೇಲಿನಿಂದ ನೀರು ಒಟ್ಟಾರೆ ಎರಡು ಕವಲುಗಳಲ್ಲಿ ಬಂಡೆಯ ಮೂಲಕ ಧುಮುಕುವುದನ್ನು ನೋಡಿದಾಗ ರೋಮಾಂಚನ ಉಂಟಾಗದೆ ಇರಲಾರದು.

ಚಿತ್ರಕೃಪೆ: Subharnab Majumdar

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಜಗತ್ತಿನಲ್ಲಿಯೆ ತೇವಭರಿತ ಅತಿ ದೊಡ್ಡ ಗಾಲ್ಫ್ ಮೈದಾನಗಳ ಪೈಕಿ ಶಿಲ್ಲಾಂಗ್ ಗಾಲ್ಫ್ ಮೈದಾನವೂ ಸಹ ಒಂದಾಗಿದ್ದು ಏಷಿಯಾದ ದೊಡ್ಡ ಗಾಲ್ಫ್ ಮೈದಾನವಾಗಿದೆ. ಅತ್ಯದ್ಭುತ ನಿಸರ್ಗ ಸಂಪತ್ತಿನಿಂದ ಮೈಗೂಡಿರುವ ಈ ಗಾಲ್ಫ್ ಮೈದಾನವು ಕೆಲವೆ ಕೆಲವು ನಿಸರ್ಗ ಸಹಜ ಮೈದಾನಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Kinshuk Kashyap

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ವಾರ್ಡ್ಸ್ ಕೆರೆ : ಶಿಲ್ಲಾಂಗ್ ನಗರದಲ್ಲಿರುವ ಈ ನಯನಮನೋಹರವಾದ ಕೆರೆ ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಸ್ಥಳೀಯವಾಗಿ ನಾನ್ ಪೊಲೊಕ್ ಎಂದು ಕರೆಯಲ್ಪಡುವ ಈ ಕೆರೆ ಒಂದು ಕೃತಕ ಕೆರೆಯಾಗಿದ್ದು ದೋಣಿ ವಿಹಾರದ ಸೌಲಭ್ಯವನ್ನು ಒಳಗೊಂಡಿದೆ.

ಚಿತ್ರಕೃಪೆ: Udayan Singh

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಕ್ಯಾಥೆಡ್ರಲ್ ಆಫ್ ಮೇರಿ : ಶಿಲ್ಲಾಂಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕ್ಯಾಥೋಲಿಕ್ಕರ ಪ್ರಧಾನ ಪ್ರಾರ್ಥನಾ ಮಂದಿರವಾಗಿದೆ ಇದು. ಇದು ಶಿಲ್ಲಾಂಗ್ ನಗರದಲ್ಲಿರುವ ಅತಿ ಸುಂದರ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರಕೃಪೆ: Simbu123

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಸ್ವೀಟ್ ಜಲಪಾತ : ಇದು ಶಿಲ್ಲಾಂಗ್ ನಲ್ಲಿರುವ ಜಲಪಾತಗಳ ಪೈಕಿ ಸುಂದರವಾದ ಜಲಪಾತವಾಗಿದೆ. ಶಿಲ್ಲಾಂಗ್ ನಾಲಿರುವ ಹ್ಯಾಪಿ ಎಂಬ ಕಣಿವೆಯಿಂದ ಸುಮಾರು ಐದು ಕಿ.ಮೀ ಗಳಷ್ಟು ದೂರದಲ್ಲಿ ಈ ಜಲಪಾತ ಕೇಂದ್ರವಿದೆ. ಇದು ಎಷ್ಟು ಸುಂದರವಾಗಿದೆಯೊ ಅಷ್ಟೆ ಅಪಾಯಕಾರಿಯೂ ಸಹ ಆಗಿದೆ. ಸ್ಥಳೀಯರ ಪ್ರಕಾರ, ಈ ಜಲಪಾತವು ಶಾಪಗ್ರಸ್ಥವಾಗಿದೆಯಂತೆ. ಬೆಸ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡಿದರೆ ಮರಳುವಾಗ ಸರಿ ಸಂಖ್ಯೆಯಲ್ಲಿರುತ್ತಾರಂತೆ. ಆದರೆ ಈ ಸ್ಥಳವು ಬಹಳ ಅಪಾಯಕಾರಿಯಾಗಿದ್ದುದದರಿಂದ ಹಾಗೂ ಹಿಂದೆ ಅನೇಕ ಸಾವಿನ ಅವಗಢಗಳು ಇಲ್ಲಿ ಸಂಭವಿಸಿರುವುದರಿಂದ ಇದರ ಹತ್ತಿರಕ್ಕೆ ಹೋಗಲು ಅವಕಾಶವಿಲ್ಲ.

ಚಿತ್ರಕೃಪೆ: josephlalrinhlua786

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ನಗರದಿಂದ ಸುಮಾರು ಹದಿನೈದು ಕಿ.ಮೀ ಗಳಷ್ಟು ದೂರದಲ್ಲಿರುವ ಮಾವ್ ಫ್ಲಾಂಗ್ ಎಂಬಲ್ಲಿ ಉಮಿಯಮ್ ಒಂದು ಸುಂದರ ಜಲಾಶಯವಾಗಿದೆ. ಉಮಿಯಮ್ ನದಿಗೆ ಅಣೆಕಟ್ಟು ನಿರ್ಮಿಸಿ ಈ ಸುಂದರ ಜಲಾಶಯವನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: RMehra

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಈ ಜಲಾಶಯ ತಾಣವು ಸೂರ್ಯಾಸ್ತದ ನೋಟಕ್ಕೆ ಬಲು ಪ್ರಸಿದ್ಧವಾಗಿದ್ದು ಸಾಕಷ್ಟು ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ.

ಚಿತ್ರಕೃಪೆ: Vikramjit Kakati

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ವಿದ್ಯುತ್ ಉತ್ಪಾದನೆ, ಕುಡಿಯುವ ನೀರು, ಮೀನುಗಾರಿಕೆ, ನೀರಾವರಿ ಹೀಗೆ ಹಲವು ಉದ್ದೇಶಗಳಿಗೆ ನಿರ್ಮಿಸಲಾದ ವಿವಿಧೋದ್ದೇಶಗಳ ಜಲಾಶಯ ತಾಣ ಇದಾಗಿದೆ.

ಚಿತ್ರಕೃಪೆ: Benoy

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಈ ಕೆರೆಯಲ್ಲಿ ದೋಣಿ ವಿಹಾರಗಳ ಸೌಲಭ್ಯವನ್ನೂ ಸಹ ಪ್ರವಾಸಿಗರು ಪಡೆಯಬಹುದಾಗಿದೆ.

ಚಿತ್ರಕೃಪೆ: Nori Syamsunder Rao

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಉಮಿಯಮ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಆಣೆಕಟ್ಟು ಹಾಗೂ ಜಲ ವಿದ್ಯುತ್ ಉತ್ಪಾದಕ ಯೋಜನೆ. ಮಾವ್ ಫ್ಲಾಂಗ್ ಡ್ಯಾಮ್ ಎಂದು ಇದನ್ನು ಕರೆಯಲಾಗುತ್ತದೆ.

ಚಿತ್ರಕೃಪೆ: ChanduBandi

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಬೈ ಪಾಸ್ ಹೆದ್ದಾರಿ.

ಚಿತ್ರಕೃಪೆ: Sandydessert

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ನಲ್ಲಿರುವ ಶಿಲ್ಲಾಂಗ್ ಪೀಕ್ ಅಥವಾ ಶಿಲ್ಲಾಂಗ್ ತುದಿಯು ಒಂದು ಅದ್ಭುತ ವೀಕ್ಷಣಾ ಕೇಂದ್ರವಾಗಿದೆ. ಇಲ್ಲಿಂದ ಸಂಪೂರ್ಣ ಶಿಲ್ಲಾಂಗ್ ನಗರದ ಹಾಗೂ ದಟ್ಟ ಹಸಿರಿನಿಂದ ಕೂಡಿದ ಪರ್ವತಗಳ ಅದ್ಭುತ ನೋಟಗಳನ್ನು ಕಾಣಬಹುದು. ಹೆಸರಿಗೆ ತಕ್ಕ ಹಾಗೆ ಮೇಘಾಲಯ ರಾಜ್ಯವು ಮೇಘಗಳಿಂದಲೆ ಆವೃತವಾಗಿರುತ್ತದೆ.

ಚಿತ್ರಕೃಪೆ: steve kharmawphlang

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ನಗರದ ಪ್ರಕೃತಿ ಸಹಜ ನೈಜ ಸುಂದರತೆಯನ್ನು ಅನಾವರಣಗೊಳಿಸುವ ಚಿತ್ರ. ಈ ಚಿತ್ರದಿಂದಲೆ ಶಿಲ್ಲಾಂಗ್ ನಗರದ ಭವ್ಯತೆಯ ಅರಿವು ನಿಮಗುಂಟಾಗಬಹುದು.

ಚಿತ್ರಕೃಪೆ: Prabhakar Banerjee

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಅಂಕು ಡೊಂಕಾದ, ಎತ್ತರ ಹಾಗೂ ಗಿಡ್ಡವಿರುವ ಭೂಪ್ರದೇಶಗಳಲ್ಲಿ ಶಿಲ್ಲಾಂಗ್ ನಗರದ ವಸತಿ ಮನೆಗಳು ಆವರಿಸಿಕೊಂಡಿರುವ ರೀತಿ.

ಚಿತ್ರಕೃಪೆ: Subharnab Majumdar

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಮೇಘಾಲಯ ರಾಜ್ಯವು ತನ್ನಲ್ಲಿರುವ ನೈಸರ್ಗಿಕ ಗುಹೆಗಳಿಗೂ ಸಹ ಹೆಚ್ಚು ಹೆಸರುವಾಸಿಯಾಗಿದೆ. ಶಿಲ್ಲಾಂಗ್ ನಗರದಲ್ಲಿರುವ ಒಂದು ಪ್ರವಾಸಿ ಆಕರ್ಷಣೆಯುಳ್ಳ ಗುಹೆ.

ಚಿತ್ರಕೃಪೆ: bertconcepts

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ನಲ್ಲಿ ತಂಗಿ ಹಾಯಾಗಿ ವಿಹರಿಸಿ, ವಿಶ್ರಾಂತಿ ಪಡೆದು ನಂತರ ದಟ್ಟ ಪ್ರಕೃತಿಯ ಸುಂದರ ಸೊಬಗಿನಾಳದಲ್ಲಿ ಮತ್ತಷ್ಟು ನುಸುಳಲು ಚಿರಾಪುಂಜಿಯೆಡೆ ಸಾಗಿರಿ. ಚಿರಾಪುಂಜಿಯು ಶಿಲ್ಲಾಂಗ್ ನಗರದಿಂದ ಸುಮಾರು 55 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ಈ ಮಾರ್ಗದ ಪ್ರಯಾಣವು ಸುಂದರವಾದ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: Prateek Rungta

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಈಶಾನ್ಯ ಭಾರತದ ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನೆಲೆಸಿದೆ ಜಗತ್ತಿನಲ್ಲೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಚಿರಾಪುಂಜಿ. ಹಿಂದೆ ಹಲವು ಬಾರಿ ಅತಿ ಹೆಚ್ಚು ಮಳೆಯನ್ನು ಪಡೆದು ಜಗತ್ತಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಎಂಬ ಕೀರ್ತಿಗೂ ಸಹ ಪಾತ್ರವಾಗಿದೆ ಈ ಸೊಹ್ರಾ ಎಂಬ ಐತಿಹಾಸಿಕ ನಾಮ ಹೊಂದಿರುವ ಚಿರಾಪುಂಜಿ. ಭೂಗೃಹದಲ್ಲೆ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಎಂಬ ವಿಷಯ ತಿಳಿಸುವ ಚಿರಾಪುಂಜಿಯಲ್ಲಿರುವ ಒಂದು ಮಾಹಿತಿ ಫಲಕ.

ಚಿತ್ರಕೃಪೆ: RMehra

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಚಿರಾಪುಂಜಿಯಲ್ಲಿರುವ ಮಾವ್ಸ್ ಮೈ ಎಂಬ ಹಳ್ಳಿಯಲ್ಲಿರುವ ಈ ಸುಂದರ ಜಲಪಾತವು ಖಾಸಿ ಪರ್ವತದ ಏಳು ಕಡೆಗಳಲ್ಲಿ ಕವಲೊಡೆದು ನೇರವಾಗಿ ಭುವಿಗೆ ಧುಮ್ಮಿಕ್ಕುತ್ತವೆ. ಆದಕಾರಣ ಇದನ್ನು ಒಮ್ಮೊಮ್ಮೆ ಏಳು ಸಹೋದರಿಯರ ಜಲಪಾತ ಎಂತಲೂ ಕರೆಯುತ್ತಾರೆ.

ಚಿತ್ರ ಕೃಪೆ: Kunal Dalui

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ನೊಹ್ಕಾಲಿಕಾಯ್ ಜಲಪಾತ: ಚಿರಾಪುಂಜಿಯಲ್ಲಿ ಕಾಣಬಹುದಾದ ಈ ಜಲಪಾತವು 1,100 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುತ್ತದೆ. ಭಾರತದ ಮೊದಲ ಐದು ಅತಿ ಎತ್ತರದ ಜಲಪಾತಗಳ ಪೈಕಿ ಇದೂ ಸಹ ಒಂದು. ಈ ಪ್ರದೇಶದಲ್ಲಿ ಮಳೆಯು ಹೆಚ್ಚಾಗಿ ಬಿಳುವುದರಿಂದ ನೀರಿನ ಮೂಲ ಬಹುತೇಕವಾಗಿ ಮೇಲ್ಸ್ತರದಲ್ಲಿ ಕ್ರೋಢಿಕರಣಗೊಂಡ ಮಳೆಯ ನೀರಾಗಿದೆ. ನೋಡಲು ರುದ್ರ ರಮಣೀಯವಾದ ನೋಟವನ್ನು ಜಲಪಾತ ತಾಣವು ಒದಗಿಸುತ್ತದೆ.

ಚಿತ್ರಕೃಪೆ: Sun-anda

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಚಿರಾಪುಂಜಿ ಬಳಿಯಿರುವ ಮರದ ಬೇರುಗಳಿಂದ ನೈಸರ್ಗಿಕವಾಗಿ ಉದ್ಭವಗೊಂಡ ಪುರಾತನ ತೂಗು ಸೇತುವೆ. ಇಂದಿಗೂ ಕೂಡ ನಿರ್ಭಯವಾಗಿ ಸ್ಥಳೀಯರಿಂದ ಇದು ಬಳಸಲ್ಪಡುತ್ತದೆ. ಈ ತರಹದ ಕೆಲವು ಸೇತುವೆಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಇವು ಸುಮಾರು 500 ವರ್ಷಗಳಷ್ಟು ಪುರಾತನವಾಗಿವೆ.

ಚಿತ್ರಕೃಪೆ: 2il org

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ದುವಾನ್ ಸಿಂಗ್ ಸೀಯ್ಮ್ ಚಿರಾಪುಂಜಿಯ ದಿಂಪೇಪ್ ನಲ್ಲಿರುವ ಒಂದು ವೀಕ್ಷಣಾ ಸ್ಥಳ. ಸುತ್ತಮುತ್ತಲಿನ ವಾತಾವರಣದ ವಿಹಂಗಮ ನೋಟವನ್ನು ಇದು ಒದಗಿಸುತ್ತದೆ.

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ವರ್ಷಪೂರ್ತಿ ಮಳೆಯಿಂದ ಕೂಡಿದ್ದು ಸದಾ ದಟ್ಟ ಹಸಿರಿನಿಂದ ಕಂಗೊಳಿಸುವ ಚೀರಾಪುಂಜಿ ತನ್ನಲ್ಲಿರುವ ಮಳೆಗಾಲದಲ್ಲಿ ರೂಪಗೊಳ್ಳುವ ಮನಮೋಹಕ ಜಲಪಾತಗಳಿಗೂ ಹೆಸರುವಾಸಿ.

ಚಿತ್ರಕೃಪೆ: t.saldanha

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಚಿರಾಪುಂಜಿಯಲ್ಲಿ ಹೆಚ್ಚಾಗಿ ಮಳೆ ಬೀಳುವುದರಿಂದ ಇಲ್ಲಿ ಕ್ರಿಮಿ, ಕೀಟ, ಸರ್ಪ ಮುಂತಾದ ಜೀವಿಗಳೂ ಸಹ ಅಪಾರವಾಗಿ ಕಂಡುಬರುತ್ತವೆ ಹಾಗೂ ಈ ಸ್ಥಳವು ಪ್ರಾಣಿ ಶಾಸ್ತ್ರಜ್ಞರ ಇಲ್ಲ ಕೀಟ ಸಂಶೋಧಕರ ನೆಚ್ಚಿನ ಸ್ಥಳವಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಚಿತ್ರಕೃಪೆ: t.saldanha

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಮನೆಯಲ್ಲಿ ಕಂಡುಬರುವ ತಿಗಣೆಗಳಿಗಿಂತಲೂ ದೊಡ್ಡ ಗಾತ್ರದ ತಿಗಣೆಗಳು ಸಾಮಾನ್ಯವಾಗಿ ಈ ಮಳೆಗಾಡಿನ ಪ್ರದೇಶದಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: t.saldanha

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಮಳೆಗಾಲದ ಸಮಯದಲ್ಲಿ ಚಿರಾಪುಂಜಿಯಲ್ಲಿನ ಒಂದು ಸಾಮಾನ್ಯ ದಿನ್ನವು ಹೀಗಿರುತ್ತದೆ.

ಚಿತ್ರಕೃಪೆ: anas shaikh

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಶಿಲ್ಲಾಂಗ್ ಹಾಗೂ ಚಿರಾಪುಂಜಿ:

ಸ್ಪೈಡರ್ ಮ್ಯಾನ್ ಗಿಂತ ನಾನೇನೂ ಕಮ್ಮಿ ಇಲ್ಲ...ನಾನು ಚಿರಾಪುಂಜಿ ಕೋತಿ ಎಂದು ಹೆಮ್ಮೆಯಿಂದ ಹೇಳುತ್ತಿರಬಹುದೆ?.

ಚಿತ್ರಕೃಪೆ: Abhinav

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X