• Follow NativePlanet
Share
» »ಭಯಾನಕ: ಪುಣೆಯ ಶನಿವಾರ್ ವಾಡಾ ಕೋಟೆ

ಭಯಾನಕ: ಪುಣೆಯ ಶನಿವಾರ್ ವಾಡಾ ಕೋಟೆ

Written By:

ದೆವ್ವ, ಭೂತಗಳ ಪರಿಕಲ್ಪನೆಯ ಬಗ್ಗೆ ಅವರವರಿಗೆ ಅವರದೇ ಆದ ಬಗೆ ಬಗೆಯ ಅಭಿಪ್ರಾಯಗಳಿರುತ್ತವೆ. ಕೆಲವರು ಒಳ್ಳೆಯದು ಇರುವಾಗ ಕೆಟ್ಟುದು ಕೂಡ ಇರಲೇಬೇಕು ಅಲ್ಲವೇ? ಹಾಗಾಗಿ ದೆವ್ವ, ಭೂತಗಳ ಪರಿಲ್ಪನೆಗಳು ಇವೆ ಎಂದು ವಾದಿಸುತ್ತಾರೆ. ಅದು ಬಿಡಿ ಭಾರತದ ಪ್ರಸಿದ್ಧವಾದ ಕೋಟೆಯ ಬಗ್ಗೆ ಆಗಾಗ ಲೇಖನದ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ.

ಕೋಟೆಗಳು ಭಾರತ ದೇಶದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ನಮ್ಮ ದೇಶದಲ್ಲಿ ಸಾವಿರಾರು ಕೋಟೆಗಳಿವೆ. ಪ್ರತಿಯೊಂದು ಕೋಟೆಯು ತನ್ನ ಐತಿಹಾಸಿಕತೆಯಿಂದ ಪ್ರಸಿದ್ಧಿಯನ್ನು ಪಡೆದಿರುವುದೇ. ಆದರೆ ಕೆಲವು ಕೋಟೆಗಳು ಮಾತ್ರ "ಹಂಟೆಡ್ ಫೋರ್ಟ್" ಎಂಬ ಹಣೆ ಪಟ್ಟಿ ಧರಿಸಿಕೊಂಡಿದೆ. ಆ ಪಟ್ಟಿಯಲ್ಲಿ ಪುಣೆಯಲ್ಲಿನ ಶನಿವಾರ್ ವಾಡಾ ಕೋಟೆಯು ಒಂದು.

ಪ್ರತಿ ಅಮಾವಾಸ್ಯೆಯ ರಾತ್ರಿ ಈ ಕೋಟೆಯು ಭಯಾನಕ ಸ್ಥಳವಾಗಿ ಮಾರ್ಪಾಟಾಗುತ್ತದೆ. ಆಶ್ಚರ್ಯ ಏನಪ್ಪ ಎಂದರೆ ಈ ಕೋಟೆಗೆ ಅತ್ಯಂತ ಭಯಾನಕವಾದ ಕಥೆ ಇದೆ. ಈ ಕೋಟೆಯ ಕಥೆ ಕೇಳಿದರೆ ಎಂಥವರಿಗೂ ಕಣ್ಣಿನಲ್ಲಿ ನೀರು ಬಾರದೇ ಇರದು ಅಂತಹ ದಾರುಣವಾದ ಕಥೆಯನ್ನು ಹೊಂದಿದೆ ಈ ಶನಿವಾರಾ ವಾಡಾ....

ಪ್ರಸ್ತುತ ಲೇಖನದ ಮೂಲಕ ಶನಿವಾರ್ ವಾಡಾ ಕೋಟೆಗೆ "ಹಂಟೆಡ್ ಫೋರ್ಟ್" ಎಂಬ ಹೆಸರು ಹೇಗೆ ಬಂತು? ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಎಲ್ಲಿದೆ?

ಶನಿವಾರ ವಾಡಾ ಕೋಟೆಯು ಭಾರತದ ಮಹಾರಾಷ್ಟ್ರದ ಪುಣೆ ನಗರದಲ್ಲಿನ ಒಂದು ಐತಿಹಾಸಿಕ ಕೋಟೆಯಾಗಿದೆ. ಇದನ್ನು 1732 ರಲ್ಲಿ ನಿರ್ಮಿಸಲಾಯಿತು. ಇದು ಮೂರನೇ ಆಂಗ್ಲೋ-ಮರಾಠರ ಯುದ್ಧದ ನಂತರ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಗೆ ನಿಯಂತ್ರಣವನ್ನು ತೆಗೆದುಕೊಂಡಿತು.


PC:Ramnath Bhat

ಭಾರತೀಯ ರಾಜಕೀಯ ಕೇಂದ್ರ

ಭಾರತೀಯ ರಾಜಕೀಯ ಕೇಂದ್ರ

ನಂತರ ಈ ಅರಮನೆಯನ್ನು 18 ನೇ ಶತಮಾನದಲ್ಲಿ ಭಾರತೀಯ ರಾಜಕೀಯ ಕೇಂದ್ರವಾಗಿ ಮಾರ್ಪಾಟಾಯಿತು. ಆದರೆ ಕೋಟೆಯು ಸ್ವತಃ 1828 ರಲ್ಲಿ ಬೆಂಕಿಯಿಂದ ನಾಶವಾಯಿತು. ಉಳಿದಿರುವ ರಚನೆಯನ್ನು ಈಗ ಪ್ರವಾಸಿ ತಾಣವಾಗಿ ಮಾರ್ಪಾಟು ಮಾಡಲಾಗಿದೆ.


PC:Pragya Sharan

ಮರಾಠ ಸಾಮ್ರಾಜ್ಯ

ಮರಾಠ ಸಾಮ್ರಾಜ್ಯ

ಶನಿವಾರ ವಾಡಾ ಮೂಲತಃ ಮರಾಠ ಸಾಮ್ರಾಜ್ಯದ ಪೇಶ್ವೆಗಳ 7 ಅಂತಸ್ತಿನ ರಾಜಧಾನಿ ಕಟ್ಟಡವಾಗಿತ್ತು. ಈ ಅರಮನೆಯನ್ನು ಸಂಪೂರ್ಣವಾಗಿ ಕಲ್ಲನ್ನು ಬಳಸಿ ನಿರ್ಮಾಣ ಮಾಡಬೇಕಾಗಿತ್ತು. ಮೂಲದ ನೆಲ ಪೂರ್ಣಗೊಂಡ ನಂತರ ಕೆಲವರು ರಾಜನಿಗೆ ದೂರು ಸಲ್ಲಿಸಿದರು. ಹೀಗಾಗಿ ಉಳಿದ ಕಟ್ಟಡವನ್ನು ಇಟ್ಟಿಗೆಯಿಂದ ಕಟ್ಟಲಾಯಿತು.

PC:Clayton Tang

ಬಾಜಿ ರಾವ್

ಬಾಜಿ ರಾವ್

ಭಾರತದ ಸರ್ವಕಾಲಿಕ ಅತ್ಯುತ್ತಮವಾದ ರಕ್ಷಣಾಕಾರ ಬಾಜಿ ರಾವ್. ಪೇಶ್ವೆಗೆ ಅತ್ಯಂತ ಘನವಾದ ಭಧ್ರತಾ ಕೋಟೆಯನ್ನು ಕಟ್ಟಲು ಮಹತ್ವಾಕಾಂಕ್ಷೆಯನ್ನು ಹೊಂದಿದ್ದನು. ಹಾಗಾಗಿ 30 ಜನವರಿ 1730 ರ ಶನಿವಾರ ಕೋಟೆಗೆ ಅಡಿಪಾಯವನ್ನು ಪ್ರಾರಂಭಿಸಿದರು.

PC:Mayurthopate

ಬ್ರಿಟೀಷರು

ಬ್ರಿಟೀಷರು

ಶನಿ ವಾರ ವಾಡಾ ನಿರ್ಮಾಣವಾದ ಸುಮಾರು 90 ವರ್ಷಗಳ ನಂತರ ಬ್ರಿಟೀಷ್ ಸೈನಿಕರು ಭಾರಿ ಧಾಳಿಯನ್ನು ಮಾಡಿ ಕೋಟೆಯನ್ನು ನೆಲಸಮ ಮಾಡಿದರು. ಈ ಶನಿವಾರ ವಾಡಾ ಎಂಬುದು ಶನಿವಾರ ಎಂಬುದು ಒಂದು ವಾರದ ದಿನ ಹಾಗು ವಾಡಾ ಎಂದರೆ ಮರಾಠಿ ಪದದಲ್ಲಿ ವಸತಿ ಸಂಕೀರ್ಣ ಎಂಬ ಅರ್ಥವಾಗಿದೆ.

PC:Haripriya 12

ಪ್ರಜೆಗಳು

ಪ್ರಜೆಗಳು

ಇಲ್ಲಿ 1758 ರ ಹೊತ್ತಿಗೆ ಕೋಟೆಯಲ್ಲಿ ಕನಿಷ್ಟವೆಂದರೂ ಸಾವಿರ ಪ್ರಜೆಗಳು ವಾಸಿಸುತ್ತಿದ್ದರು. 1773 ರಲ್ಲಿ ಐದನೇ ಆಡಳಿತಾಧಿಕಾರಿಯಾದ ನಾರಾಯಣ ರಾವ್ ಕಾವಲುಗಾರರಿಂದ ಕೊಲ್ಲಲ್ಪಟ್ಟರು. ಅವರೇ ಇಲ್ಲಿ ಪ್ರೇತವಾಗಿದ್ದರೆ ಎಂಬ ಕಥೆ ಇದೆ.


PC:Mayurthopate

ಹಂಟೆಡ್ ಸ್ಟೋರಿ

ಹಂಟೆಡ್ ಸ್ಟೋರಿ

ಇದೊಂದು ಹತ್ಯಾ ಕಥೆಯಾಗಿದೆ. ಅದೇನೆಂದರೆ ಬಾಜಿ ರಾವ್ ಮರಣದ ನಂತರ ಆತನ ಮಗ ಬಾಲಾಜಿ ಬಾಜಿ ರಾವ್ ಅಥವಾ ನಾನಾ ಸಾಹೇಬ್ ಮರಾಠ ಅಧಿಕಾರವನ್ನು ವಹಿಸಿಕೊಂಡನು. ನಾನಾ ಸಾಹೇಬ್‍ನಿಗೆ ಮೂವರು ಪುತ್ರರು.

PC:Mayurthopate

ಪುತ್ರರು

ಪುತ್ರರು

ನಾನಾ ಸಹೇಬ್‍ನ ಮೂರು ಪುತ್ರರೆಂದರೆ ಮಾಧವ ರಾವ್, ವಿಶ್ವಸ್ರಾವ್ ಮತ್ತು ನಾರಾಯಣರಾವ್‍ರಾಗಿದ್ದರು. 3 ನೇ ಪಾಣಿಪತ್ ಯುದ್ಧದಲ್ಲಿ ನಾನಾ ಸಹೇಬ್ ಮೃತನಾಗುತ್ತಾನೆ. ಹೀಗಾಗಿ ಆತನ ಮೂರು ಪುತ್ರರಲ್ಲಿ ದೊಡ್ಡವನಾದ ಮಾಧವ ರಾಯನಿಗೆ ಉತ್ತರಾಧಿಕಾರಿ ಪಟ್ಟ ನೀಡಲಾಗುತ್ತದೆ.

PC:Sivaraj D

ಮಾಧವರಾವ್

ಮಾಧವರಾವ್

ಉತ್ತರಾಧಿಕಾರ ವಹಿಸಿಕೊಂಡ ಮಾಧವರಾವ್ ಜೊತೆ ಸಹೋದರ ವಿಶ್ವಾಸ್ ರಾವ್ ಕೂಡ ಮರಣ ಹೊಂದುತ್ತಾನೆ. ಹೀಗಾಗಿ ಕೊನೆಯ ಅಂದರೆ ಮೂರನೇ ಮಗ ನಾರಾಯಣ ರಾವ್‍ಗೆ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.


PC:Mayurthopate

ನಾರಾಯಣ ರಾವ್

ನಾರಾಯಣ ರಾವ್

ಆದರೆ ನಾರಾಯಣ ರಾವ್ ಕೇವಲ ಹದಿನಾರು ವರ್ಷದ ವಯಸ್ಸಿನವನಾಗಿರುತ್ತಾನೆ. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ನಾರಾಯಣ ರಾವ್ ಪೇಶ್ವೆಯಾಗುತ್ತಾನೆ. ಅವರ ವಯಸ್ಸಿನ ಕಾರಣವಾಗಿ ನಾರಾಯಣ ರಾವ್‍ನ ಚಿಕ್ಕಪ್ಪ ರಘುನಾಥ್‍ರಾವ್ ಯುವ ಸೋದರಳಿಯನ ಪರವಾಗಿ ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುತ್ತಾನೆ.


PC:Haripriya 12

ಕೊಲೆ

ಕೊಲೆ

1773 ರಲ್ಲಿ ಕೀಚಕ ಚಿಕ್ಕಪ್ಪ ರಘುನಾಥರಾವ್ ಹಾಗೂ ಅಧಿಕಾರದ ಆಸೆಯಲ್ಲಿದ್ದ ಚಿಕ್ಕಮ್ಮ ಆಂದೀಬಿಯಾ ಅವರ ಆದೇಶದ ಮೇರೆಗೆ ಕಾವಲುಗಾರರಿಂದ 16 ವರ್ಷದ ನಾರಾಯಣ ರಾವ್‍ನ ಕೊಲೆ ಮಾಡಿಸುತ್ತಾರೆ. ಕೊಲೆ ಮಾಡುವ ಸಮಯದಲ್ಲಿ ನಾರಾಯಣ ರಾವ್‍ರವರು ನಿದ್ರಿಸುತ್ತಿದ್ದರು.

PC:Haripriya 12

ತುಂಡು ತುಂಡಾಗಿ ಕತ್ತರಿಸಿ

ತುಂಡು ತುಂಡಾಗಿ ಕತ್ತರಿಸಿ

ನಿದ್ರಿಸುವ ಸಮಯದಲ್ಲಿ ಬಂದ ಕೊಲೆಪಾತಕರು ನಾರಾಯಣರಾವ್‍ನ್ನು ಕೊಲೆ ಮಾಡಲು ಮುಂದಾದರು ಆ ಸಮಯದಲ್ಲಿ ತನ್ನ ಚಿಕ್ಕಪ್ಪನನ್ನು ಕಂಡು "ಕಾಕಾ ಮಲಾ ವಾಚವಾ" ಎಂದು ಕೇಳಿಕೊಂಡರು.

ಆದರೂ ಕನಿಕರ ಬಾರದ ಚಿಕ್ಕಪ್ಪನಿಗೆ 16 ವರ್ಷದ ನಾರಾಯಣ ರಾವ್‍ನನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆ ಕಟ್ಟಿ ನದಿಯಲ್ಲಿ ಎಸೆಯುತ್ತಾರೆ.

PC:Yashmittal03

"ಕಾಕಾ ಮಲಾ ವಾಚವಾ"

ಇಲ್ಲಿ ಕೆಲವೊಮ್ಮೆ ಭಯಾನಕವಾದ ಶಬ್ಧಗಳು ಕೇಳಿಸುತ್ತವೆ ಎಂತೆ. ಅದರಲ್ಲೂ ಹುಣ್ಣಿಮೆಯ ರಾತ್ರಿಯಂದು ಮಾತ್ರ "ಕಾಕಾ ಮಲಾ ವಾಚವಾ" ಎಂಬ ಕೂಗು ಕೇಳಿಸುತ್ತಿರುತ್ತದೆ ಎಂತೆ. ಕಾಕಾ ಮಲಾ ವಾಚವಾ ಎಂದರೆ "ಚಿಕ್ಕಪ್ಪ ನನನ್ನು ಕಾಪಾಡು" ಎಂದು.

PC:Haripriya 12

ದೆವ್ವ

ದೆವ್ವ

ಹೀಗಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಕೊಲೆಯಾದ್ದರಿಂದ ನಾರಾಯಣ ರಾವ್ ಪ್ರೇತಾತ್ಮವಾಗಿ ಈ ಶನಿವಾಡಾ ಕೋಟೆಯಲ್ಲಿಯೇ ಇದ್ದಾರೆ ಎಂದು ಕೆಲವು ಜನರು ಹೇಳುತ್ತಾರೆ. ಪ್ರತಿ ಹುಣ್ಣಿಮೆಯ ರಾತ್ರಿ ನಾರಾಯಣ ರಾವ್‍ರವರ ಪ್ರೇತಾತ್ಮ ರಕ್ಷಣೆಗಾಗಿ ಕರೆಯುತ್ತದೆ ಎಂದು ಜನಪ್ರಿಯ ವದಂತಿಗಳು ಇವೆ.


PC:ANI(GM)

ಅಧಿಕಾರದ ಆಸೆ

ಅಧಿಕಾರದ ಆಸೆ

ಅಧಿಕಾರದ ಆಸೆಯಿಂದ ಏನೂ ಅರಿಯದ ಮಗುವನ್ನು ಕೊಂದ ಚಿಕ್ಕಪ್ಪ. ಈಗ ಈ ತಾಣವು ಅತ್ಯಂತ ಭಯಾನಕವಾದ ಸ್ಥಳವಾಗಿ ಮಾರ್ಪಾಟಾಗಿದೆ. ರಾತ್ರಿಯ ವೇಳೆ ಇಲ್ಲಿ ಯಾರು ಕೂಡ ಇರುವುದಿಲ್ಲ. ಸಂಜೆಯಾಗುತ್ತಿದ್ದಂತೆಯೇ ಭಯಾನಕವು ಈ ಶನಿವಾರಾ ವಾಡಾದಲ್ಲಿ ಅವರಿಸುತ್ತದೆ.


PC:Nitish kharat

ಕೋಟೆ

ಕೋಟೆ

ಭಯಾನಕವನ್ನು ಪಕ್ಕಕ್ಕೆ ಇಟ್ಟರೆ ಕೋಟೆಯು ಅತ್ಯಂತ ಸುಂದರವಾಗಿದೆ. ಆಗೀನ ಬಾಜಿ ರಾವ್‍ನ ಆಳ್ವಿಕೆಯನ್ನು ಕಣ್ಣಾರೆ ಕಾಣುತ್ತಿದ್ದೆವೆನೊ ಎಂಬ ಅನುಭೂತಿಯನ್ನು ಈ ಕೋಟೆಯು ನೀಡುತ್ತದೆ. ಈ ಕೋಟೆಯ ಸೌಂದರ್ಯವನ್ನು ಕಾಣಲು ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ.


PC:Haripriya 12

ಪ್ರವೇಶ ಸಮಯ

ಪ್ರವೇಶ ಸಮಯ

ಈ ಭಯಾನಕ ಕೋಟೆಗೆ ಪ್ರವೇಶವನ್ನು ಪಡೆಯಲು ಸೂಕ್ತವಾದ ಸಮಯವೆಂದರೆ ಅದು ಬೆಳಗ್ಗೆ 8:30 ರಿಂದ ಸಂಜೆ 5:30 ರವರೆಗೆ.

PC:User:Ashok Bagade

ತಲುಪುವ ಬಗೆ?

ತಲುಪುವ ಬಗೆ?

ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಪುಣೆ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಈ ಶನಿವಾರ್ ವಾಡಾ ಕೋಟೆಗೆ ಸುಮಾರು 11 ಕಿ,ಮೀ ಅಂತರದಲ್ಲಿದ್ದು 25 ನಿಮಿಷಗಳ ಕಾಲ ಪ್ರಯಾಣಿಸಬೇಕಾಗುತ್ತದೆ.

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಪುಣೆ. ಇಲ್ಲಿಂದ ಶನಿವಾರ ವಾಡಾಗೆ ಸುಮಾರು 4 ಕಿ,ಮೀ ಅಂತರದಲ್ಲಿದೆ. ಇಲ್ಲಿಂದ ಸುಲಭವಾಗಿ ಶನಿವಾರ ವಾಡಾಗೆ ತಲುಪಬಹುದಾಗಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ