Search
  • Follow NativePlanet
Share
» »ಸವದತ್ತಿ ಕೋಟೆ- ಕರ್ನಾಟಕದ ಅನ್ವೇಷಣೆಗೊಳಪಡದೇ ಇರುವ ಅನರ್ಘ್ಯ ರತ್ನ

ಸವದತ್ತಿ ಕೋಟೆ- ಕರ್ನಾಟಕದ ಅನ್ವೇಷಣೆಗೊಳಪಡದೇ ಇರುವ ಅನರ್ಘ್ಯ ರತ್ನ

By Manjula Balaraj

ಸೌಂದತ್ತಿಯನ್ನು ಸವದತ್ತಿ ಎಂದೂ ಕೂಡಾ ಕರೆಯಲಾಗುತ್ತದೆ ಇದು ಕರ್ನಾಟಕದ ಬೆಳಗಾಂ ಜಿಲ್ಲೆಯ ಒಂದು ಸುಂದರವಾದ ಪಟ್ಟಣವಾಗಿದ್ದು ಸ್ಥಳೀಯರು ಮತ್ತು ಕಾಲೋಚಿತ ಪ್ರವಾಸಿಗರಿಗೆ ಯಾತ್ರಿ ಸ್ಥಳವಾಗಿ ಪ್ರಸಿದ್ದಿಯನ್ನು ಪಡೆದಿದೆ. ಆದುದರಿಂದ ಇದು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ನೆಲೆಯಾಗಿದೆ. ಇದಲ್ಲದೆ ಇಲ್ಲಿ ಇನ್ನೂ ಹೆಚ್ಚಿನದನ್ನು ನೀವು ನೋಡಬಹುದು ಎಂಬುದು ನಿಮಗೆ ತಿಳಿದಿದೆಯೆ ? ಭಾರತದ ಆರಂಭಿಕ ಮಧ್ಯಕಾಲೀನ ಅವಧಿಯ ಇತಿಹಾಸವನ್ನು ಹೊಂದಿದ ಈ ಸ್ಥಳವು ಅನೇಕ ಪ್ರಾಚೀನ ತಾಣಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಹೊಂದಿದೆ.

ಅಂತಹುದೇ ಹಲವಾರು ವರ್ಷಗಳಿಂದಲೂ ಅನ್ವೇಷಣೆಗೊಳಗಾಗದೇ ಇರುವ ತಾಣಗಳಲ್ಲಿ ಸೌಂದತ್ತಿ ಕೋಟೆಯೂ ಕೂಡಾ ಒಂದು. ಆಸಕ್ತಿದಾಯಕ ಇತಿಹಾಸ ಮತ್ತು ಸುಂದರ ಪರಿಸರವನ್ನು ಹೊಂದಿರುವುದಕ್ಕಾಗಿ ಈ ಸ್ಥಳವನ್ನು ಪ್ರತಿಯೊಬ್ಬ ಪ್ರಯಾಣಿಕನು ಭೇಟಿ ಕೊಡಲೇಬೇಕು. ಅದರಲ್ಲೂ ವಿಶೇಷವಾಗಿ ಇತಿಹಾಸಪ್ರಿಯರು. ಈ ಕೋಟೆಯ ಇತಿಹಾಸ, ಸುತ್ತಮುತ್ತಲಿನ ಪ್ರದೇಶ ಮತ್ತು ಇಲ್ಲಿಗೆ ತಲುಪುವುದು ಹೇಗೆ ಎಂಬುದರ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿಯನ್ನು ಓದಿ ತಿಳಿಯಿರಿ.

ಸೌಂದತ್ತಿ ಕೋಟೆಗೆ ಭೇಟಿ ಕೊಡಲು ಉತ್ತಮವಾದ ಸಮಯ

ಸೌಂದತ್ತಿ ಕೋಟೆಗೆ ಭೇಟಿ ಕೊಡಲು ಉತ್ತಮವಾದ ಸಮಯ

Manjunath Doddamani Gajendragad

ಉಷ್ಣವಲಯದ ಸವನ್ನಾ ರೀತಿಯ ಹವಾಮಾನವನ್ನು ಹೊಂದಿರುವ ಸೌಂದತ್ತಿ ಪ್ರದೇಶವು ಆಹ್ಲಾದಕರವಾದ ಹವಾಮಾನವನ್ನು ವರ್ಷವೀಡೀ ಅನುಭವಿಸುತ್ತದೆ ಆದುದರಿಂದ ಇದು ವರ್ಷವಿಡೀ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಆದರೂ ಬೇಸಿಗೆ ಇಲ್ಲಿ ಬಿಸಿಯಾದ ತಾಪಮಾನವನ್ನು ತಪ್ಪಿಸಬೇಕೆಂದಿದ್ದಲ್ಲಿ ಈ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ಕೊಡುವುದನ್ನು ತಪ್ಪಿಸುವುದು ಒಳಿತು.ಆದುದರಿಂದ ಈ ಸ್ಥಳವನ್ನು ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಸೆಪ್ಟೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳ ಕೊನೆಯವರೆಗೆ . ಈ ಸಮಯದಲ್ಲಿ ಇಲ್ಲಿಯ ಹವಾಮಾನವು ತಂಪಾಗಿದ್ದು ಅನುಕೂಲಕರವಾಗಿರುತ್ತದೆ.

ಈ ಮಂದಿರದ ಹೆಸರು ಕೇಳಿದ್ರೆ ಪಾಕಿಸ್ತಾನವೂ ಹೆದರುತ್ತಂತೆ!

ಸೌಂದತ್ತಿ ಕೋಟೆಯ ಸುತ್ತಮುತ್ತಲಿನ ಪ್ರದೇಶ ಮತ್ತು ಅಲ್ಲಿಯ ಇತಿಹಾಸ

ಸೌಂದತ್ತಿ ಕೋಟೆಯ ಸುತ್ತಮುತ್ತಲಿನ ಪ್ರದೇಶ ಮತ್ತು ಅಲ್ಲಿಯ ಇತಿಹಾಸ

Manjunath Doddamani Gajendragad

ಸೌಂದತ್ತಿ ಕೋಟೆಯು ಒಂದು ಸಣ್ಣ ಬೆಟ್ಟದ ಮೇಲೆ ನೆಲೆಸಿದ್ದು, ಇದನ್ನು 18ನೇ ಶತಮಾನದ ಆರಂಭದಲ್ಲಿ ಜಯಪ್ಪ ದೇಸಾಯಿ ಅವರಿಂದ ನಿರ್ಮಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಆದರೂ ನಂತರ ಈ ಕೋಟೆಯನ್ನು ಮೈಸೂರು ಚಕ್ರಾಧಿಪತ್ಯದ ಹೈದರ್ ಅಲಿ ಯಿಂದ ವಶಪಡಿಸಿಕೊಳ್ಳಲಾಯಿತು. ದೊಡ್ಡ ಕಂದಕದಿಂದ ಸುತ್ತುವರಿದ ಮತ್ತು ಒಂಬತ್ತು-ಬದಿಗಳಿರುವ ಬಹುಭುಜಾಕೃತಿಯ ಆಕಾರದಲ್ಲಿ ನಿರ್ಮಿಸಲಾದ ಈ ಕೋಟೆಯು ಈ ಪ್ರಾಂತ್ಯದ ಅತ್ಯಂತ ಹಳೆಯದಾದ ಮತ್ತು ಬಲಿಷ್ಟವಾದ ಕೋಟೆಗಳಲ್ಲೊಂದಾಗಿದೆ. ಇಂದು, ಈ ಕೋಟೆಯು ಸೌಂದತ್ತಿಯಲ್ಲಿಯ ಪ್ರವಾಸಿ ತಾಣವೆನಿಸಿದೆ ಮತ್ತು ನೂರಾರು ಸ್ಥಳೀಯ ಹಾಗೂ ಇತಿಹಾಸಪ್ರಿಯ ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ಕಾಡಸಿದ್ದೇಶ್ವರ ದೇವಾಲಯವು ಈ ಕೋಟೆಯ ಮಧ್ಯದಲ್ಲಿರುವುದು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ.

ಇತ್ತೀಚೆಗೆ ಹನುಮಂತ ದೇವರಿಗೆ ಸಮರ್ಪಿತವಾದ ಹೊಸತಾದ ದೇವಾಲಯವನ್ನು ಕೋಟೆಯೊಳಗೆ ನಿರ್ಮಿಸಲಾಗಿದೆ. ಸುಂದರವಾದ ಕೆತ್ತನೆಗಳು, ಶ್ಲಾಘನೀಯವಾದ ವಾಸ್ತುಶಿಲ್ಪ, ಬಲವಾದ ಕೊತ್ತಲಗಳು ಮತ್ತು ಕಠಿಣವಾದ ಗೋಡೆಗಳು ಇತ್ಯಾದಿಗಳನ್ನು ಒಳಗೊಂಡಿರುವ ಈ ಕೋಟೆಯು ಇಲ್ಲಿನ ಅತ್ಯಂತ ಸುಂದರವಾದ ಕೋಟೆಯಾಗಿದೆ. ಈ ಕೋಟೆಯ ಮೇಲ್ಪಾಗದಿಂದ ನೀವು ಸೌಂದತ್ತಿಯ ಕೆಳಗೆ ಇರುವ ವಿಶಾಲವಾದ ಪ್ರದೇಶದ ಮನಮೋಹಕ ದೃಶ್ಯವನ್ನು ನೋಡಬಹುದಾಗಿದೆ.

ನೀವು ಸೌಂದಟ್ಟಿ ಕೋಟೆಯನ್ನು ಭೇಟಿ ಕೊಡಲೇ ಬೇಕು ಏಕೆ

ನೀವು ಸೌಂದಟ್ಟಿ ಕೋಟೆಯನ್ನು ಭೇಟಿ ಕೊಡಲೇ ಬೇಕು ಏಕೆ

Manjunath Doddamani Gajendragad

ನೀವು ಬೆಂಗಳೂರಿನ ಸುತ್ತಮುತ್ತ ಅಥವಾ ಕರ್ನಾಟಕದಲ್ಲಿ ಯಾವುದಾದರು ಆಪ್ಭೀಟ್ ವಾರಾಂತ್ಯದ ತಾಣವನ್ನು ನೋಡುತ್ತಿದ್ದಲ್ಲಿ, ನಿವು ಈ ಪ್ರಾಚೀನ ಕೋಟೆಯನ್ನು ಭೇಟಿ ಕೊಡುವುದನ್ನು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿಕೊಳ್ಳಲೇಬೇಕು. ಇದು ಸ್ಥಳೀಯ ಪ್ರವಾಸಿಗರು ಮತ್ತು ಕೆಲವು ಆಪ್ಭೀಟ್ ಪ್ರಯಾಣಿಕರಲ್ಲಿಯೂ ಪ್ರಸಿದ್ದಿಯನ್ನು ಪಡೆದಿದೆ. ನೀವು ಈ ಕೋಟೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಮತ್ತು ಪ್ರವಾಸಿಗರ ಜನಸಂದಣಿಯಿಲ್ಲದೆ ನಿರಾಯಾಸವಾಗಿ ಕೋಟೆಯ ಸೌಂದರ್ಯತೆಯನ್ನು ಅನ್ವೇಷಣೆ ಮಾಡಬಹುದಾಗಿದೆ.

ಈ ಕೋಟೆಗೆ ಸಮೀಪದಲ್ಲಿರುವ ಇನ್ನಿತರ ಆಕರ್ಷಣೆಗಳಲ್ಲಿ ದೇವಾಲಯಗಳು, ನೈಸರ್ಗಿಕ ಸ್ಥಳಗಳು ಮತ್ತು ಇನ್ನಿತರ ಐತಿಹಾಸಿಕ ತಾಣಗಳು ಸೇರಿವೆ. ಅವುಗಳಲ್ಲಿ ರೇಣುಕಾ ಸರೋವರ, ಪುರದೇಶ್ವರ ದೇವಾಲಯ, ಅಂಕೇಶ್ವರ ದೇವಾಲಯ ಮತ್ತು ಎಲ್ಲಮ್ಮ ದೇವಾಲಯಗಳೂ ಸೇರಿವೆ. ಆದ್ದರಿಂದ ಇವೆಲ್ಲವನ್ನು ಹೊಂದಿರುವ ಸೌಂದತ್ತಿಯು ವಾರಾಂತ್ಯದಲ್ಲಿ ಭೇಟಿ ಮಾಡಬಹುದಾದ ತಾಣವೆಂದು ನಿಮಗನಿಸುವುದಿಲ್ಲವೆ?

ಸೌಂದಟ್ಟಿ ಕೋಟೆಯನ್ನು ತಲುಪುವುದು ಹೇಗೆ

ಸೌಂದಟ್ಟಿ ಕೋಟೆಯನ್ನು ತಲುಪುವುದು ಹೇಗೆ

Manjunath Doddamani Gajendragad

ವಿಮಾನದ ಮೂಲಕ : ಸೌಂದತ್ತಿಯಲ್ಲಿ ವಿಮಾನ ನಿಲ್ದಾಣವಿಲ್ಲವಾದುದರಿಂದ ನಿವು ಬೆಳಗಾಂ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಪ್ರಯಾಣಿಸಬೇಕಾಗುವುದು ನೀವು ಒಮ್ಮೆ ಈ ನಿಲ್ದಾಣವನ್ನು ತಲುಪಿದ ನಂತರ ನಿವು ಇಲ್ಲಿಂದ ಸೌಂದಟ್ಟಿಗೆ ಬಸ್ಸಿನ ಮೂಲಕ ಅಥವಾ ಬಾಡಿಗೆ ವಾಹನದ ಮೂಲಕ ತಲುಪಬಹುದು. ಬೆಳಗಾಂ ನಿಂದ ಸೌಂದತ್ತಿ ಕೋಟೆಗೆ ಇರುವ ಅಂತರ 95 ಕಿ.ಮೀ.

ರೈಲು ಮೂಲಕ: ಸೌಂದತ್ತಿಗೆ ಹತ್ತಿರವಿರುವ ರೈಲ್ವೇ ನಿಲ್ದಾಣವು ಧಾರವಾಡ ನಿಲ್ದಾಣವಾಗಿದ್ದು ರೈಲ್ವೇ ನಿಲ್ದಾಣದಿಂದ ಕೋಟೆಗೆ ಸುಮಾರು 45 ಕಿ.ಮೀ ಅಂತರವಿದೆ. ನೀವು ಅಲ್ಲಿಂದ ಬಸ್ಸು ಮೂಲಕ ಅಥವಾ ಕ್ಯಾಬ್ ಮೂಲಕ ಸೌಂದಟ್ಟಿಗೆ ತಲುಪಬಹುದಾಗಿದೆ.

ರಸ್ತೆ ಮೂಲಕ : ಸೌಂದತ್ತಿ ಒಂದು ಅಭಿವೃದ್ದಿ ಹೊಂದಿದ ಪಟ್ಟಣವಾಗಿದೆ ಮತ್ತು ಇದು ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿರುವುದರಿಂದ ಕೋಟೆಗೆ ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more