Search
  • Follow NativePlanet
Share
» »ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆಯ ಮೇಲೆ ದೇವಾಲಯವನ್ನು ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಗುಡ್ಡವೇ ಗುಡಿಯಾಗಿ ಮಾರ್ಪಾಟಾಗುವುದು ವಿಚಿತ್ರ. ಅದರಲ್ಲಿಯೂ ಗುಡ್ಡದ ಭಾಗವಾದ ಕಲ್ಲನ್ನು ಕೆತ್ತನೆ ಮಾಡಿ ದೇವಿದೇವತೆಗಳ ವಿಗ್ರಹವನ್ನು ಕೆತ್ತನೆ ಮಾಡುವುದು, ಆ ಅದ್ಭುತವಾದ ಕೆತ್ತನೆಗಳಿಂದ ಒಂದು ದೇವಾಲಯವನ್ನಾಗಿ ಮಾರ್ಪಾಟು ಮಾಡುವುದು ಇನ್ನೂ ವಿಶೇಷ. ಭೋಪಾಲ್‍ನ ಪಲ್ಲಿಜಿಲ್ಲಾ ಚಿಟ್ಯಾಲ್ ಮಂಡಲ ನೈನಾಪಾಕ ಎಂಬ ಗ್ರಾಮದ ಶಿವಾಲಯದಲ್ಲಿ ಗುಡ್ಡೆಯ ಮೇಲೆ ಇರುವ ಸರ್ವತೋಭದ್ರ ದೇವಾಲಯಕ್ಕೆ ತನ್ನದೇ ಆದ ವಿಶೇಷತೆಗಳಿವೆ.

ದೇಶದಲ್ಲಿನ ವಿಭಿನ್ನವಾದ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಾಲಯದ ಬಗ್ಗೆ ಸ್ಥಳೀಯರು ವಿಭಿನ್ನವಾದ ಮಹತ್ವದ ಬಗ್ಗೆ ತಿಳಿಸುತ್ತಾರೆ. ಸಾಧಾರಣವಾಗಿ ದೇವಾಲಯದ ನಿರ್ಮಾಣದಲ್ಲಿ ಗರ್ಭಗುಡಿಯನ್ನು ಅದಕ್ಕೆ ಅಂಟಿಕೊಂಡು ಮಂಟಪವನ್ನು ನಿರ್ಮಾಣ ಮಾಡುತ್ತಾರೆ. ತದನಂತರ ಸುತ್ತ ಗೋಡೆಗಳಿಂದ ದೇವಾಲಯದ ಅವರಣವನ್ನು ಏರ್ಪಾಟು ಮಾಡುತ್ತಾರೆ. ಎಲ್ಲೋ ಕೆತ್ತನೆ ಮಾಡಿದ ವಿಗ್ರಹವನ್ನು ತೆಗೆದುಕೊಂಡು ಪ್ರತಿಷ್ಟಾಪನೆ ಮಾಡುತ್ತಾರೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಆದರೆ ಸರ್ವತೋಭದ್ರ ದೇವಾಲಯದಲ್ಲಿ ಮಾತ್ರ ಇದ್ದಕ್ಕೆ ಭಿನ್ನವಾದುದು. ಗುಡ್ಡದ ಮಧ್ಯ ಭಾಗದಲ್ಲಿ ದೇವಾಲಯವಿರುತ್ತದೆ. ಇದು ಕೇವಲ ಗರ್ಭಾಲಯ ಮಾತ್ರವೇ. ಅದಕ್ಕೆ 4 ದಿಕ್ಕುಗಳಿಗೂ ಐದುವರೆ ಅಡಿ ಎತ್ತರದ ದ್ವಾರಗಳು ಇವೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಒಳಗೆ ಮಧ್ಯದಲ್ಲಿ ನಾಲ್ಕುವರೆ ಅಡಿ ಎತ್ತರದ ವಿಗ್ರಹವಿರುತ್ತದೆ. ಇದು ಒಂದು ವಿಗ್ರಹವೇ ಅಲ್ಲ, ಒಂದೇ ಕಲ್ಲಿನ ಮೇಲೆ ನಾಲ್ಕುವರೆ ಅಡಿ ಎತ್ತರದಲ್ಲಿ ದೇವತೆಯ ವಿಗ್ರಹಗಳನ್ನು ಕೆತ್ತನೆ ಮಾಡಿದ್ದಾರೆ. ಒಂದೇ ದ್ವಾರದಿಂದ ಒಂದೇ ದಿಕ್ಕಿಗೆ ದೇವತೆಗಳ ವಿಗ್ರಹಗಳನ್ನು ಕಾಣಿಸುತ್ತದೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಪೂರ್ವ ದ್ವಾರದ ಮೂಖಾಂತರ ಉಗ್ರನರಸಿಂಹಸ್ವಾಮಿ, ದಕ್ಷಿಣದ್ವಾರದಿಂದ ಕಾಳಿಕಾ ಮರ್ಧನ ಭಂಗಿ, ವೇಣುಗೋಪಾಲಸ್ವಾಮಿ, ಪಶ್ಚಿಮ ದಿಕ್ಕಿಗೆ ಬಲರಾಮನು, ಉತ್ತರ ದಿಕ್ಕಿಗೆ ಸೀತಾರಾಮ ಲಕ್ಷ್ಮಣ ರೂಪಗಳು ದರ್ಶನವನ್ನು ನೀಡುತ್ತಾರೆ. ಇದನ್ನು ಸರ್ವತೋಭದ್ರ ನಮೂನೆಯ ದೇವಾಲಯ ಎಂದು ಕೂಡ ಕರೆಯುತ್ತಾರೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಸರ್ವತೋಭದ್ರ ದೇವಾಲಯದ ವಿಗ್ರಹಗಳು ಇಂದಿಗೂ ದೇವತೆಗಳ ವಿಗ್ರಹವನ್ನು ತೆಗೆದುಕೊಂಡು ಪ್ರತಿಷ್ಟಾಪನೆ ಮಾಡಿರುವುದು ಎಂದೇ ಭಕ್ತರು ಹಾಗು ಪ್ರವಾಸಿಗರು ಭಾವಿಸುತ್ತಾರೆ. ಆದರೆ ಕೆಲವು ದಿನಗಳ ಹಿಂದೆ ಪ್ರವಾಸಕ್ಕೆ ಬಂದ ಅಮೆರಿಕಾನ್ ಫ್ರೋಫೆಸರ್ ಫಿಲಿಪ್ ಬಿ ವ್ಯಾಗನರ್. ಪುರಾತತ್ವ ಶಾಖೆಯ ರಿಟೈರ್ ಅಧಿಕಾರಿ ರಂಗಚಾರ್ಯರ ಜೊತೆ ಸೇರಿ ಈ ದೇವಾಲಯವನ್ನು ಪರಿಶೀಲಿಸಿ ಅದರ ವಿಶೇಷತೆಗಳನ್ನು ಗುರುತಿಸಿದರು.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಆ ವಿಗ್ರಹ ಎಲ್ಲಿಂದಲೂ ತೆಗೆದುಕೊಂಡು ಪ್ರತಿಷ್ಟಾಪಿಸಿರುವುದು ಅಲ್ಲವೆಂದು, ದೇವಾಲಯ ನಿಂತಿರುವ ಗುಡ್ಡದ ಭಾಗವನ್ನು ವಿಗ್ರಹವಾಗಿ ಮಾರ್ಪಟು ಮಾಡಿದ್ದಾರೆ ಎಂದು ದೃಢಿಕರಿಸಿದರು. ಇದು ವೈಷ್ಣವ ಸಂಪ್ರದಾಯದ ಪ್ರಕಾರ ಸರ್ವಭದ್ರ ದೇವಾಲಯವಾದ್ದರಿಂದ ಕಾಕತೀಯರ ಕಾಲದ ನಂತರ ನಿರ್ಮಾಣ ಮಾಡಿರಬಹುದು ಎಂದು ಊಹಿಸಲಾಗಿದೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಇಲ್ಲಿನ ಒಂದು ಕಲ್ಲು ಕೆಳಗೆ ಬಿದ್ದಿತ್ತು. ಅದನ್ನು ಅಗೆದು ಪರಿಶೀಲನೆ ಮಾಡಿದರೆ ಆಧಾರಗಳು ಲಭಿಸಬಹುದು ಎಂದು ಯೋಚಿಸಿದರು. ಗುಡ್ಡದ ಮೇಲೆ ಅದರ ಮಧ್ಯ ಭಾಗದಲ್ಲಿ ಎತ್ತರವಾಗಿರುವ ಭಾಗವನ್ನು ಪರಿಶೀಲನೆ ಮಾಡಿದರೆ ಸುಮಾರು ನಾಲ್ಕುವರೆ ಅಡಿ ಎತ್ತರದಲ್ಲಿ 4 ಭಾಗಗಳಲ್ಲಿ ನಾಲ್ಕು ವಿಗ್ರಹಗಳು ಕೆತ್ತನೆ ಮಾಡಿದ್ದಾರೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಅಂದರೆ ಆ ವಿಗ್ರಹಗಳ ಭಾಗವು ನೇರವಾಗಿದ್ದ ಗುಡ್ಡೆಗಳ ಕಲ್ಲಾಗಿತ್ತು. ಒಂದೇ ವಿಗ್ರಹದ ಕಲ್ಲನ್ನೇ ಸಮಾನವಾಗಿ ಕೆತ್ತನೆ ಮಾಡಿ ದೇವಾಲಯವಾಗಿ ಮಾರ್ಪಾಟು ಮಾಡಿದರು. ಹೀಗೆ ಕೆತ್ತನೆ ಮಾಡಿದ ಕಲ್ಲಿನಿಂದಲೇ ಆ ವಿಗ್ರಹದ ಸುತ್ತ ಸುಮಾರು 25 ಅಡಿ ಎತ್ತರದ ಗರ್ಭಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ನಂತರ ಅದರ ಮೇಲೆ ಮತ್ತೊಂದು 30 ಅಡಿ ಎತ್ತರದಲ್ಲಿ ಇಟ್ಟಿಗೆಯಿಂದ ಗೋಪುರವನ್ನು ನಿರ್ಮಾಣ ಮಾಡಿದ್ದಾರೆ. ದೇವಾಲಯ ಇರುವ ಹಾಗೆಯೇ ಮಂಟಪ ಕೂಡ ಇರಬೇಕು ಎಂದೇನಿಲ್ಲ. ಮುಂದೆ ವಿಶಾಲವಾದ ಪ್ರಾಂಗಣವನ್ನು ನಿರ್ಮಾಣ ಮಾಡಿದ್ದಾರೆ. ಹೀಗೆ ಗುಡ್ಡದ ಮೇಲೆ ವಿಗ್ರಹವನ್ನು ಕೆತ್ತನೆ ಮಾಡಿದ ದೇವಾಲಯ ಇಂದಿನವರೆವಿಗೂ ವರದಿಯೇ ಆಗಿಲ್ಲವೆಂದೂ ಪುರಾವಸ್ತು ಶಾಖೆಯವರು ಹೇಳುತ್ತಾರೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಇನ್ನು ವಿಗ್ರಹದ ಮೇಲ್ಭಾಗದಲ್ಲಿ ಸ್ತೂಪಾಕಾರದಲ್ಲಿ ಕಲ್ಲಿನ ಭಾಗವನ್ನು ಬೇರೆ-ಬೇರೆಯಾಗಿ ಏರ್ಪಾಟು ಮಾಡಿದ್ದಾರೆ. ಪೂರ್ವದಲ್ಲಿ ಕಳ್ಳರು ಗುಪ್ತನಿಧಿಗಳ ಹುಡುಕಾಟದಲ್ಲಿ ಆ ಭಾಗವನ್ನು ಪಕ್ಕಕ್ಕೆ ಇಟ್ಟಿರಬಹುದು ಎಂದು ಅನುಮಾನಿಸಲಾಗಿದೆ. ಭೋಪಾಲಪಲ್ಲಿ ಗ್ರಾಮದಲ್ಲಿನ ಜನಕೋಕೇಂದ್ರ ಸಿಬ್ಬಂದಿ ಕ್ರೇನ್ ತಂದು ಅದನ್ನು ಮತ್ತೇ ವಿಗ್ರಹದ ಮೇಲ್ಭಾಗವನ್ನು ಬದಲಾಯಿಸಿದರು.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಈ ದೇವಾಲಯವನ್ನು 1993 ರಲ್ಲಿ ಪುರಾತತ್ವಶಾಖೆಯ ಸಂಚಾಲಕನಾದ ಎನ್. ರಾಮಕೃಷ್ಣರಾವ್ ಮೊದಲಬಾರಿಗೆ ಬೆಳಕಿಗೆ ತಂದರು. ಅಂದಿನವರೆವಿಗೂ ಇದು ಸ್ಥಳೀಯರಿಗೆ ಮಾತ್ರ ಪರಿಚಯವಾಗಿತ್ತು. ತದನಂತರ ಶಾಖೆಯ ಡಿಪ್ಯೂಟಿ ಡೈರೆಕ್ಟರ್ ರಂಗಚಾರ್ಯರ ನೇತೃತ್ವದಲ್ಲಿ ಒಂದು ಸಂಸ್ಥೆಯು ಸಮೀಕ್ಷೆಯನ್ನು ಮಾಡಿತು.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಆದರೆ ಇಂದಿನವರೆವಿಗೂ ಪುರಾವಸ್ತು ಶಾಖೆಯು ಇದನ್ನು ರಕ್ಷಿತ ಕಟ್ಟಡವಾಗಿ ಗುರುತಿಸಲಿಲ್ಲ. ಇದರಿಂದ ಕ್ರಮವಾಗಿ ದೇವಾಲಯವು ದ್ವಂಸವಾಗುತ್ತಾ ಬಂದಿತು. ಮರಗಳು ಹುಟ್ಟಿ ಗೋಪುರವು ಶಿಥಿಲವಾಗುತ್ತಾ ಇದೆ. ಆದರೆ ತಾಜಾವಾಗಿ ಅಮೆರಿಕಾನ್ ಪ್ರೋಫೆಸರ್ ಈ ದೇವಾಲಯ ವಿಶೇಷತೆಗಳನ್ನು ಗುರುತಿಸಿದ ಕಾರಣ ಇದರ ಮೇಲೆ ಕೇಂದ್ರ ಪುರಾವಸ್ತು ಶಾಖೆ ಆಸಕ್ತಿ ಪ್ರದರ್ಶಿಸುತ್ತಿದೆ.

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಕಲ್ಲಿನ ಗುಡ್ಡೆ... ದೇವಾಲಯವಾಗಿ ಮಾರ್ಪಾಟಾಗಿದ್ದು ಹೇಗೆ?

ಇಂಜನಿರಿಂಗ್ ನೈಪುಣ್ಯಪರವಾಗಿ ಇದೊಂದು ಅದ್ಭುತವಾದ ಕಟ್ಟಡವಾಗಿದೆ. ಇದನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸಬೇಕಾದ ಅವಶ್ಯಕತೆ ಇದೆ ಎಂದು ಅಮೆರಿಕನ್ ಪ್ರೋಫೆಸರ್ ಫಿಲಿಪ್ ಬಿ. ವ್ಯಾಗನರ್ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more